ನವದೆಹಲಿ[ಜು.17]: ಭಾರತದಲ್ಲಿ ವಿಮಾನಯಾನ ಸಂಸ್ಥೆಗಳು ಭಾರೀ ನಷ್ಟದಲ್ಲಿವೆ ಎಂಬ ಮಾಹಿತಿಗಳ ಬೆನ್ನಲ್ಲೇ, ಎಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳ ಒಟ್ಟಾರೆ ನಷ್ಟಕ್ಕಿಂತ ಸರ್ಕಾರಿ ಒಡೆತನದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ನಷ್ಟವೇ ಹೆಚ್ಚು ಎಂಬ ಮಾಹಿತಿ ಸರ್ಕಾರದ ದಾಖಲೆಗಳಿಂದಲೇ ಜಗಜ್ಜಾಹೀರಾಗಿದೆ.

ಭಾರತದ ವಿಮಾನಯಾನ ಸಂಸ್ಥೆಗಳು 2018-19ನೇ ಸಾಲಿನಲ್ಲಿ ಒಟ್ಟಾರೆ 3254.89 ಕೋಟಿ ರು. ನಿರ್ವಹಣಾ ನಷ್ಟಹೊಂದಿದ್ದರೆ, ಏರ್‌ ಇಂಡಿಯಾ ಒಂದೇ 4330 ಕೋಟಿ ರು. ನಷ್ಟದಲ್ಲಿದೆ ಾಜ್ಯಸಭೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು ಮಾಹಿತಿ ನೀಡಿದರು. ಪೈಲಟ್‌ಗಳ ವೇತನ ಹೆಚ್ಚಳ, ಇಂಧನ ಬೆಲೆ ದುಪ್ಪಟ್ಟು, ನಿಲುಗಡೆ ಘಟಕ ವಿಸ್ತರಣೆ, ಡಾಲರ್‌ ಮೊತ್ತದಲ್ಲಿ ಪಾವತಿಸಬೇಕಾದ ವಿಮಾನದ ಲೀಸ್‌ ಅಥವಾ ಬಾಡಿಗೆ ಕಾರಣಗಳಿಂದ ವಿಮಾನಯಾನ ಸಂಸ್ಥೆಗಳ ನಷ್ಟಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ.

2019ನೇ ಸಾಲಿನ ವಿತ್ತೀಯ ವರ್ಷದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಹಾಗೂ ಬ್ಲೂಡಾರ್ಟ್‌ ಏವಿಯೇಷನ್‌ ಸಂಸ್ಥೆಗಳು ಮಾತ್ರ ಲಾಭದ ಹಾದಿಯಲ್ಲಿವೆ. ಆದರೆ, ಈ ದಾಖಲೆಗಳಲ್ಲಿ ಈಗಾಗಲೇ ನಷ್ಟದ ಸುಳಿಗೆ ಸಿಲುಕಿ ನಲುಗಿರುವ ಜೆಟ್‌ ಏರ್‌ವೇಸ್‌, ಜೆಟ್‌ಲೈಟ್‌ ಹಾಗೂ ಜೂಮ್‌ ಏರ್‌ ವಿಮಾನ ಸಂಸ್ಥೆಗಳನ್ನು ಒಳಗೊಂಡಿಲ್ಲ.

ವಿಮಾನಯಾನ ಸಂಸ್ಥೆ ನಷ್ಟಕ್ಕೊಳಗಾದ ಮೊತ್ತ

ಏರ್‌ ಇಂಡಿಯಾ 4330 ಕೋಟಿ ರು.

ಅಲಯನ್ಸ್‌ ಏರ್‌ 308 ಕೋಟಿ ರು.

ಗೋಏರ್‌ 897 ಕೋಟಿ ರು.

ಸ್ಪೈಸ್‌ ಜೆಟ್‌ 266 ಕೋಟಿ ರು.

ಇಂಡಿಗೋ 149 ಕೋಟಿ ರು.

ಜೂಮ್‌ ಏರ್‌ 1.4 ಕೋಟಿ ರು.

ಏರ್‌ ಏಷ್ಯಾ 703 ಕೋಟಿ ರು.

ವಿಸ್ತಾರ 846 ಕೋಟಿ ರು.

ಟ್ರೂ ಜೆಟ್‌ 41 ಕೋಟಿ ರು.

ಏರ್‌ ಡೆಕ್ಕನ್‌ 28.9 ಕೋಟಿ ರು.

ಸ್ಟಾರ್‌ ಏರ್‌ 14.19 ಕೋಟಿ ರು.

ಏರ್‌ ಹೆರಿಟೇಜ್‌ 35 ಲಕ್ಷ ರು.