Viral News: ಬಾಡಿಗೆದಾರರಿಗೆ ಮನೆ ಮಾಲಿಕ ಹಾಕಿದ ಷರತ್ತು ನೋಡಿ ಜನ ಕಂಗಾಲು
ಬಾಡಿಗೆ ಮನೆ ಹುಡುಕೋದು, ಅಲ್ಲಿ ವಾಸ ಮಾಡೋದು ಸವಾಲಿನ ಕೆಲಸ. ಮನೆ ಮಾಲಿಕ ಚೆನ್ನಾಗಿದ್ರೆ ಲೈಫ್ ಸೂಪರ್. ಅದೇ ಅಪ್ಪಿತಪ್ಪಿ ತಲೆಕೆಟ್ಟ ಮನೆ ಮಾಲಿಕ ಸಿಕ್ಕಿದ್ರೆ ಕಥೆ ಮುಗಿದಂತೆ. ಈಗ ಫೇಸ್ಬುಕ್ ನಲ್ಲಿ ಮನೆ ಮಾಲಿಕನ ಜಾಹೀರಾತು ವೈರಲ್ ಆಗಿದ್ದು, ಜನ ದಂಗಾಗಿದ್ದಾರೆ.

ಕೆಲಸಕ್ಕೆ ಇಲ್ಲವೆ ಶಿಕ್ಷಣಕ್ಕೆ ನಿಮ್ಮೂರಿನಿಂದ ನೀವು ಬೇರೆ ಊರಿಗೆ ಹೋಗುವ ನಿರ್ಧಾರ ಮಾಡಿದ್ಮೇಲೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ. ಮನೆಯಂತೆ ಎಲ್ಲ ಸೌಲಭ್ಯ ನಿಮಗೆ ಸಿಗಲು ಸಾಧ್ಯವಿಲ್ಲ. ಬಾಡಿಗೆ ಮನೆ ಮಾಲೀಕರು ನಿಮ್ಮನ್ನು ಹೂಗುಚ್ಛ ನೀಡಿ ಸ್ವಾಗತ ನೀಡೋದಿಲ್ಲ. ಒಂದಿಷ್ಟು ಷರತ್ತುಗಳನ್ನು ಹಾಕಿ ಮನೆಯನ್ನು ಬಾಡಿಗೆಗೆ ನೀಡುವ ಬಾಡಿಗೆದಾರ ಮನೆಯ ಸ್ಥಿತಿ ಹೇಗಿದೆ, ಅಲ್ಲಿ ಯಾವೆಲ್ಲ ಸಮಸ್ಯೆ ಆಗ್ತಿದೆ ಎಂಬುದನ್ನು ಗಮನಿಸೋದಿಲ್ಲ. ರಿಪೇರಿ ಕೆಲಸಗಳೆಲ್ಲ ನಿಮ್ಮ ಜವಾಬ್ದಾರಿ ಎನ್ನುವ ಜೊತೆಗೆ ತಿಂಗಳು, ತಿಂಗಳು ಬಾಡಿಗೆ ಕೇಳಲು ಹಾಜರಾಗ್ತಾನೆ. ಬಾಡಿಗೆದಾರ ಹಾಗೂ ಮನೆ ಮಾಲಿಕರು ನಡುವೆ ನಡೆಯುವ ಹಗ್ಗ ಜಗ್ಗಾಟ, ಗಲಾಟೆ ಕೇವಲ ಭಾರತದಲ್ಲಿ ಮಾತ್ರವಿಲ್ಲ. ವಿಶ್ವದ ಅನೇಕ ದೇಶಗಳಲ್ಲಿ ನೀವು ಬಾಡಿಗೆದಾರ ಹಾಗೂ ಮಾಲಿಕನ ಮಧ್ಯೆ ಸಮಸ್ಯೆಗಳನ್ನು ನೋಡ್ಬಹುದು.
ಕೆಲವೊಂದು ಮನೆ ಮಾಲೀಕರು (Owner) ವಿಚಿತ್ರವಾಗಿವರ್ತಿಸುತ್ತಾರೆ. ಮನೆಗೆ ಗೆಸ್ಟ್ ಬರಬಾರದು, ಹೆಚ್ಚು ನೀರು ಖಾಲಿಯಾಗಬಾರದು, ಧೂಮಪಾನ – ಮದ್ಯಪಾನ ಮಾಡ್ಬಾರದು, ರಾತ್ರಿ ಇಷ್ಟು ಗಂಟೆಯೊಳಗೆ ಮುಖ್ಯ ಗೇಟ್ ಬಂದ್ ಆಗ್ಬೇಕು ಹೀಗೆ ಅವರದೇ ಒಂದಿಷ್ಟು ನಿಯಮಗಳಿರುತ್ತವೆ. ಈಗ ಮೆಲ್ಬೋರ್ನ್ ಮನೆ ಮಾಲೀಕರೊಬ್ಬರ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ. ಜನರು ಈ ಮನೆ ಮಾಲಿಕ ನೀಡಿದ ಜಾಹೀರಾತು ನೀಡಿ ಬೆರಗಾಗಿದ್ದಾರೆ.
ಈ ಮನೆ ಮಾಲಿಕ, ಬಾಡಿಗೆದಾರ (Tenant) ರ ಕಣ್ಣಿಗೆ ಮಣ್ಣೆರಚಿದ್ದಾನೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ರತನ್ ಟಾಟಾಗೆ ಮಾಯಾ ಟಾಟಾ ಉತ್ತರಾಧಿಕಾರಿ?, ಟಾಟಾ ಸಮೂಹಕ್ಕೆ ಮಹಿಳಾ ಅಧಿಪತ್ಯ ಸಾಧ್ಯತೆ
ಜಾಹೀರಾತಿ (Advertisement) ನಲ್ಲಿ ಏನಿದೆ? : ಹಿಂದೆ ಮನೆ ಖಾಲಿ ಇದೆ ಎನ್ನುವ ಬೋರ್ಡ್ ಗಳು ಮನೆ ಮುಂದೆ ನೇತಾಡುತ್ತಿದ್ದವು. ಆದ್ರೆ ಕಾಲ ಬದಲಾಗಿದೆ. ಡಿಜಿಟಲ್ ಯುಗದಲ್ಲಿ ಜನರು ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಅದಕ್ಕೆಂದೇ ಮೀಸಲಿರುವ ವೆಬ್ಸೈಟ್ ಗಳಲ್ಲಿ ಮನೆ ಖಾಲಿ ಇರುವ ಬಗ್ಗೆ ಜಾಹೀರಾತನ್ನು ಹಾಕ್ತಾರೆ. ಈ ಮೆಲ್ಬೋರ್ನ್ ವ್ಯಕ್ತಿ ಕೂಡ ಫೇಸ್ಬುಕ್ ನಲ್ಲಿ ಜಾಹೀರಾತನ್ನು ಹಾಕಿದ್ದಾನೆ.
ಮನೆ ಬಾಡಿಗೆ 270 ಡಾಲರ್. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ 24,438 ರೂಪಾಯಿ. ಪ್ರಾಪರ್ಟಿ ರೈಲು ನಿಲ್ದಾಣಕ್ಕೆ ಹತ್ತಿರವಾಗಿದೆ. ಇದಲ್ಲದೆ ಬಾಡಿಗೆದಾರರಿಗೆ ಇಂಟರ್ನೆಟ್ ಸೌಲಭ್ಯ ಸೇರಿದಂತೆ ಕೆಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಫೇಸ್‌ಬುಕ್‌ನ ಹೌಸ್‌ಮೇಟ್ ಗುಂಪಿನಲ್ಲಿ ರೂಮ್ ಮತ್ತು ಮನೆಯ ಫೋಟೋವನ್ನು ಮನೆ ಮಾಲೀಕ ಪೋಸ್ಟ್ ಮಾಡಿದ್ದಾನೆ. ಕೋಣೆಯನ್ನು ಹಂಚಿಕೊಳ್ಳಬಹುದಾದಣೆ ಮಹಿಳಾ ಬಾಡಿಗೆದಾರರ ಅಗತ್ಯವಿದೆ ಎಂದು ಜಾಹೀರಾತು ನೀಡಲಾಗಿದೆ. ಈ ಮನೆಯ ಪ್ರತಿ ಕೋಣೆಯಲ್ಲಿ ಇಬ್ಬರು ಉಳಿದುಕೊಳ್ಳುತ್ತಾರೆ. ಒಟ್ಟು ಮನೆಯಲ್ಲಿ 3 ಜನರು ಉಳಿದುಕೊಳ್ಳಬಹುದು. ಇದೊಂದು ರೀತಿಯಲ್ಲಿ ಪಿಜಿ ಎನ್ನಬಹುದು. ಇಲ್ಲಿ ಉಳಿದುಕೊಳ್ಳುವ ಬಾಡಿಗೆದಾರರು ವಾರಕ್ಕೆ 22,438 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಜಾಹೀರಾತಿನಲ್ಲಿ ಬೆಡ್ ರೂಮಿನ ಫೋಟೋ ಹಾಕಲಾಗಿದೆ. ಒಂದು ಬೆಡ್ ನಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಬೆಡ್ ಇದೆ. ಆದ್ರೆ ಎರಡು ಬೆಡ್ ಮಧ್ಯೆ ಒಂದು ಮೇಜನ್ನು ಮಾತ್ರ ಇಡಲಾಗಿದೆ.
1 ಗಂಟೆ ಕೆಲಸ 1 ಕೋಟಿ ರೂ ವೇತನ, ಗೂಗಲ್ ಎಂಜಿನಿಯರ್ ಉದ್ಯೋಗದ ಮೇಲೆ ಎಲ್ಲರ ಕಣ್ಣು!
ಮನೆಯನ್ನು ಬಾಡಿಗೆಗೆ ಪಡೆಯುವವರು ಈ ಷರತ್ತು ಪಾಲನೆ ಮಾಡ್ಬೇಕು : ಜಾಹೀರಾತಿನ ಪ್ರಕಾರ, ಈ ಮನೆಗೆ ಬಾಡಿಗೆಗೆ ಬರುವ ಮಹಿಳೆ, ಯಾವುದೇ ಅತಿಥಿಗಳನ್ನು ಮನೆಗೆ ಆಹ್ವಾನಿಸುವಂತಿಲ್ಲ. ಹಾಗೆಯೇ ಮನೆಯಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ.
ಕೋಪಗೊಂಡ ಬಳಕೆದಾರರು : ಫೇಸ್ಬುಕ್ ನಲ್ಲಿ ಪೋಸ್ಟ್ ಆಗಿರುವ ಈ ಜಾಹೀರಾತು ನೋಡಿದ ಬಳಕೆದಾರರು ಕೋಪಗೊಂಡಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವಂತಿದೆ. ಇಲ್ಲಿ ಬರೀ ಬೆಡ್ ಮೇಲೆ ಮಲಗಲು ವಾರಕ್ಕೆ 22, 438 ರೂಪಾಯಿ ಪಡೆಯಲಾಗ್ತಿದೆ ಎಂದು ಆರೋಪಿಸಿದ್ದಾರೆ.