1 ಗಂಟೆ ಕೆಲಸ 1 ಕೋಟಿ ರೂ ವೇತನ, ಗೂಗಲ್ ಎಂಜಿನಿಯರ್ ಉದ್ಯೋಗದ ಮೇಲೆ ಎಲ್ಲರ ಕಣ್ಣು!
ಕನಿಷ್ಠ 8 ಗಂಟೆ, 9 ಗಂಟೆ ಕೆಲಸ ಸಾಮಾನ್ಯ. ಹೆಚ್ಚುವರಿ ಅರ್ಧ ಗಂಟೆ ವಿಶ್ರಾಂತಿ ಪಡೆದರೂ ಸಂಬಳ ಕಟ್. ಆದರೆ ಇಲ್ಲೊಬ್ಬ ಗೂಗಲ್ ಎಂಜಿನೀಯರ್‌ಗೆ ಪ್ರತಿ ದಿನ ಕೇವಲ 1 ಗಂಟೆ ಮಾತ್ರ ಕೆಲಸ. ಇನ್ನು ವಾರ್ಷಿಕ 1.24 ಕೋಟಿ ರೂ ಸ್ಯಾಲರಿ. ಇಷ್ಟೇ ಅಲ್ಲ ಬೋನಸ್, ಭತ್ಯೆ ಸೇರಿದಂತೆ ಇತರ ಸೌಲಭ್ಯ ಕೂಡ ಇದೆ. ಈ ಕೆಲಸಕ್ಕೆ ಅರ್ಜಿ ಹಾಕುವ ಪ್ಲಾನ್ ಇದೆಯಾ?

ನ್ಯೂಯಾರ್ಕ್(ಆ.22) ತಿಂಗಳ ಸ್ಯಾಲರಿ ಪಡೆಯಲು ಪ್ರತಿ ದಿನ ಕನಿಷ್ಠ 8 ರಿಂದ 9 ಗಂಟೆ ಕೆಲಸ ಕಡ್ಡಾಯ. ಇದರಲ್ಲಿ ಹೆಚ್ಚು ವ್ಯತ್ಯಾಸಗಳಾದರೆ ವೇತನ ಕಡಿತಗೊಳ್ಳಲಿದೆ. ತಕ್ಕ ಸಮಯಕ್ಕೆ ಕೆಲಸಕ್ಕೆ ಹಾಜರಾತಿ ಕಡ್ಡಾಯವಾಗಿದೆ. ಇಲ್ಲೊಬ್ಬ ಗೂಗಲ್ ಎಂಜಿನೀಯರ್ ಪ್ರತಿ ದಿನ ಕೇವಲ 1 ಗಂಟೆ ಮಾತ್ರ ಕೆಲಸ ಮಾಡುತ್ತಾನೆ. ಈತ ವಾರ್ಷಿಕವಾಗಿ 1.24 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾನೆ. ಇದೀಗ ಈತನ ಕೆಲಸದ ಮೇಲೆ ಎಂಜಿನೀಯರ್‌ಗಳ ಕಣ್ಣು ಬಿದ್ದಿದೆ. ಕೊಂಚ ಕಡಿಮೆ ವೇತನದಲ್ಲಿ ಇದೇ ಕೆಲಸಕ್ಕೆ ಅರ್ಜಿ ಹಾಕಲು ಹಲವರು ತಯಾರಿ ನಡೆಸುತ್ತಿದ್ದಾರೆ.
20 ವರ್ಷದ ಟೆಕ್ಕಿ ಡೆವೋನ ಈ ಅದೃಷ್ಟವಂತ. ಇದೇ ರೀತಿಯ ಕೆಲಸಕ್ಕೆ ಎಲ್ಲರು ಹಾತೊರೆಯುತ್ತಿರುತ್ತಾರೆ. ಕಾರಣ ಈತ ಮಾಡುವುದು ಕೇವಲ 1 ಗಂಟೆ ಮಾತ್ರ ಕೆಲಸ ಮಾಡುತ್ತಾನೆ. ಅಂದರೆ ತಿಂಗಳಿಗೆ 24 ರಿಂದ 28 ಗಂಟೆ ಮಾತ್ರ ಕೆಲಸ. ಇಷ್ಟಕ್ಕೆ 1.24 ಕೋಟಿ ರೂಪಾಯಿ ವಾರ್ಷಿಕ ವೇತನ ಪಡೆಯುತ್ತಿದ್ದಾನೆ. 1 ಗಂಟೆ ಕೆಲಸ ಮುಗಿಸಿ ಈತ ತಿರುಗಾಡುತ್ತಾನೆ. ಬೀಚ್, ಪಾರ್ಕ್ ಸೇರಿದಂತೆ ಹಲವೆಡೆ ತಿರುಗಾಡುತ್ತಾ ಸಮಯ ಕಳೆಯುತ್ತಾನೆ.
ಗೂಗಲ್ ಕ್ರೋಮ್, ಮೊಝಿಲ್ಲಾಗೆ ಸಡ್ಡು: ಸರ್ಕಾರದಿಂದ ಹೊಸ ವೆಬ್ ಬ್ರೌಸರ್!
ಡೆವೋನ್ ಗೂಗಲ್ ಕಂಪನಿಯಲ್ಲಿ ಕೋಡಿಂಗ್ ವಿಭಾಗದಲ್ಲಿ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಕೋಡಿಂಗ್‌ನ್ನು 1 ಗಂಟೆಯಲ್ಲಿ ಮುಗಿಸಿ ಇಡೀ ದಿನ ಹಾಯಾಗಿರುತ್ತಾನೆ. ಇತ್ತ ಕಂಪನಿ ಹೆಚ್ಚು ದುಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಕಾರಣ ಕೋಡಿಂಗ್ ಎಂಜಿನೀಯರ್ಸ್ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹಾರುತ್ತಾರೆ. ಇದರಿಂದ ಕಂಪನಿಗೆ ತೀವ್ರ ಹೊಡೆತ ಬೀಳುತ್ತದೆ. ಈ ಎಲ್ಲಾ ಸಮಸ್ಸೆ ತಪ್ಪಿಸಲು ಗೂಗಲ್ ಕೂಡ ಎಂಜಿನೀಯರ್ಸ್‌ಗಳನ್ನು ತಮ್ಮ ಕಂಪನಿಯಲ್ಲೇ ಉಳಿಸಿಕೊಳ್ಳಲು ಹೊಸ ಹೊಸ ಪ್ರಯೋಗ ಮಾಡುತ್ತಿದೆ.
ನಾನು ತ್ವರಿತವಾಗಿ ಕೆಲಸ ಮಾಡುವ, ಕಠಿಣ ಕೆಲಸ ಮಾಡುವ ವ್ಯಕ್ತಿಯಲ್ಲ. ಹೀಗಿದ್ದರೆ ನಾನು ಇನ್ಯಾವುದೋ ಸ್ಟಾರ್ಟ್ ಅಪ್ ಕಂಪನಿಯಲ್ಲಿರುತ್ತಿದ್ದೆ. ಅತೀ ಹೆಚ್ಚು ಹೊತ್ತು ಕೆಲಸ ಮಾಡುವ ಒತ್ತಡಕ್ಕೆ ಸಿಲುಕುವುದಿಲ್ಲ ಎಂದು ಡೆವೋನ್ ಹೇಳಿದ್ದಾರೆ. ಇದೀಗ ಈತನ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಲವು ಕೋಡಿಂಗ್ ಎಂಜಿನೀಯರ್ಸ್ ಇದೇ ಕೆಲಸಕ್ಕೆ ಅರ್ಜಿ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ.
ಇಂಜಿನಿಯರಿಂಗ್ ಓದಿಲ್ಲ, ಆದ್ರೆ ಪುಣೆಯ ವಿದ್ಯಾರ್ಥಿಗೆ ಸಿಕ್ತು ಗೂಗಲ್ ನಿಂದ 50 ಲಕ್ಷ ರೂ ವೇತನದ ಉದ್ಯೋಗ!
ಗಂಟೆ ಒಂದೇ ಇರಲಿ, ವೇತನ ಬೇಕಾದರೆ ಕಡಿಮೆ ಮಾಡಿ. ನಾವು ಸಿದ್ಧರಿದ್ದೇವೆ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ನನ್ನ ಕನಸಿಕ ಉದ್ಯೋಗ. ಈ ಉದ್ಯೋಗಕ್ಕಾಗಿ ನಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ. ನನ್ನ ಶ್ರಮ ನೋಡಿ ಈ ಕೆಲಸ ಕೊಡಿ ಎಂದು ಇನ್ನೂ ಕೆಲಸವರು ಕಮೆಂಟ್ ಮಾಡಿದ್ದಾರೆ.