ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್ ಅದಾನಿ ನೇತೃತ್ವದ ಸಂಘಟಿತ ಸಂಸ್ಥೆಯು ಜಂಟಿ ಉದ್ಯಮದಲ್ಲಿ ತನ್ನ ಪಾಲಿನ ಮಾರಾಟದಿಂದ 2.5 - 3 ಬಿಲಿಯನ್‌ ಡಾಲರ್‌ ನಷ್ಟು ಹಣ ನಿರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

ನವದೆಹಲಿ (ನವೆಂಬರ್ 6, 2023): ಅದಾನಿ ಗ್ರೂಪ್ ಬಹುರಾಷ್ಟ್ರೀಯ ಗ್ರಾಹಕ ಸರಕುಗಳ ಕಂಪನಿಗಳೊಂದಿಗೆ ಅದಾನಿ ವಿಲ್ಮರ್‌ನಲ್ಲಿನ ತನ್ನ ಸಂಪೂರ್ಣ ಪಾಲಾದ ಶೇಕಡಾ 43.97 ರಷ್ಟು ಷೇರು ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಒಂದು ತಿಂಗಳೊಳಗೆ ಒಪ್ಪಂದವು ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದೂ ತಿಳಿದುಬಂದಿದೆ.

ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್ ಅದಾನಿ ನೇತೃತ್ವದ ಸಂಘಟಿತ ಸಂಸ್ಥೆಯು ಜಂಟಿ ಉದ್ಯಮದಲ್ಲಿ ತನ್ನ ಪಾಲಿನ ಮಾರಾಟದಿಂದ 2.5 - 3 ಬಿಲಿಯನ್‌ ಡಾಲರ್‌ ನಷ್ಟು ಹಣ ನಿರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಖಾದ್ಯ ತೈಲಗಳ ಜನಪ್ರಿಯ ಫಾರ್ಚೂನ್ ಬ್ರ್ಯಾಂಡ್ ಅನ್ನು ಹೊಂದಿರುವ ಅದಾನಿ ವಿಲ್ಮರ್‌, ಅದಾನಿ ಗ್ರೂಪ್‌ ಮತ್ತು ಸಿಂಗಾಪುರ ಮೂಲದ ವಿಲ್ಮರ್ ಇಂಟರ್ನ್ಯಾಷನಲ್ ನಡುವಿನ ಜಾಯಿಂಟ್ ವೆಂಚರ್ ಅಥವಾ ಜಂಟಿ ಉದ್ಯಮವಾಗಿದೆ. ವಿಲ್ಮರ್ ಈ ಕಂಪನಿಯಲ್ಲಿ 43.87 ಪರ್ಸೆಂಟ್ ಪಾಲನ್ನು ಹೊಂದಿದೆ. ಜಂಟಿ ಉದ್ಯಮವನ್ನು ಜನವರಿ 1999 ರಲ್ಲಿ ಅಂತಿಮಗೊಳಿಸಲಾಯ್ತು ಎಂದು ತಿಳಿದುಬಂದಿದೆ.

ಇದನ್ನು ಓದಿ: ಅಮೆರಿಕದಲ್ಲಿ ಕೆಲಸ ಬಿಟ್ಟು ಭಾರತಕ್ಕೆ ಬಂದ ಈ ಉದ್ಯೋಗಿ: ಈಗ 21,053 ಕೋಟಿ ಮೌಲ್ಯದ ಕಂಪನಿಗೆ ಇವರೇ ಒಡೆಯ!

ಮೂಲಸೌಕರ್ಯದಂತಹ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಅದಾನಿ ಗ್ರೂಪ್‌ ಕೆಲವು ವ್ಯವಹಾರಗಳಿಂದ ನಿರ್ಗಮಿಸಲು ಯೋಜಿಸುತ್ತಿದೆ ಎಂದೂ ಮೂಲಗಳು ಉಲ್ಲೇಖಿಸಿದೆ. ಅದಾನಿ ವಿಲ್ಮರ್‌ನಲ್ಲಿ ಹೂಡಿಕೆ ಹಿಂತೆಗೆದುಕೊಳ್ಳುವ ಯೋಜನೆಗಳು ಆ ಪ್ಲ್ಯಾನ್‌ನ ಭಾಗವಾಗಿದೆ. ಇನ್ನು, ಇದರಿಂದ ಬಂದ ಆದಾಯವು ಇತರ ಹೂಡಿಕೆಗಳಿಗೆ ಹೋಗಬೇಕೆಂದು ನಿರೀಕ್ಷಿಸಲಾಗಿದ್ದು, ಸಾಲವನ್ನು ಪಾವತಿಸಲು ಅಲ್ಲ ಎಂದೂ ತಿಳಿದುಬಂದಿದೆ.

ಲಿಕ್ವಿಡಿಟಿ ಬಫರ್ ಅನ್ನು ರಚಿಸಲು ಗುಂಪು ಮುಖ್ಯವಲ್ಲದ ಸ್ವತ್ತುಗಳಿಂದ ನಿರ್ಗಮಿಸುವ ವರದಿಗಳು ಕಳೆದ ಕೆಲವು ತಿಂಗಳುಗಳಿಂದ ಬರುತ್ತಲೇ ಇದೆ. ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಬಂದ ಬಳಿಕ ಅದಾನಿ ಗ್ರೂಪ್‌ ಹೂಡಿಕೆದಾರರಿಗೆ 150 ಬಿಲಿಯನ್‌ ಡಾಲರ್‌ನಷ್ಟು ನಷ್ಟವಾದ ನಂತರ ಈ ವರದಿ ಪ್ರಾಮುಖ್ಯತೆ ಪಡೆದುಕೊಂಡಿದೆ. 

ಇದನ್ನು ಓದಿ: ನಿಮ್ಮ ಯಾವುದೇ ಕಾರನ್ನು ಸ್ಮಾರ್ಟ್‌ ಕಾರು ಮಾಡುತ್ತೆ ಜಿಯೋದ ಈ ಸಾಧನ: 58% ಡಿಸ್ಕೌಂಟ್‌ ಕೂಡ ಇದೆ!

ಅದಾನಿ ವಿಲ್ಮರ್‌ ಫಾರ್ಚೂನ್‌ ಬ್ರ್ಯಾಂಡ್‌ ಹೊರತಾಗಿ, ಗೋಧಿ ಹಿಟ್ಟು, ಅಕ್ಕಿ, ಬೇಳೆಕಾಳುಗಳು ಮತ್ತು ಸಕ್ಕರೆ ಸೇರಿದಂತೆ ಇತರ ಅಡಿಗೆ ಸರಕುಗಳನ್ನು ಸಹ ನೀಡುತ್ತದೆ. ದೇಶದಲ್ಲಿ ಅತಿ ಹೆಚ್ಚು-ಬೆಳೆಯುತ್ತಿರುವ ಪ್ಯಾಕೇಜ್ಡ್ ಫುಡ್ ಕಂಪನಿಗಳಲ್ಲಿ ಒಂದಾಗಿದೆ ಎಂದು ಈ ವೆಬ್‌ಸೈಟ್‌ ಹೇಳುತ್ತದೆ. ಇದು ಅತಿದೊಡ್ಡ ಲಾರಿಕ್ ಕೊಬ್ಬಿನ ತಯಾರಕ ಮತ್ತು ಭಾರತದಲ್ಲಿ ಹರಳೆಣ್ಣೆಯ ಅತಿದೊಡ್ಡ ತಯಾರಕ. ಅದಾನಿ ವಿಲ್ಮರ್‌ ಹರಳೆಣ್ಣೆ ಮತ್ತು ತನ್ನ ಉತ್ಪನ್ನಗಳ ಅತಿದೊಡ್ಡ ರಫ್ತುದಾರರಾಗಿದ್ದಾರೆ.

ಅದಾನಿ ವಿಲ್ಮರ್‌ ಕಂಪನಿಯು ಭಾರತದಲ್ಲಿ 10 ರಾಜ್ಯಗಳಲ್ಲಿ 23 ಸ್ಥಾವರಗಳನ್ನು ಹೊಂದಿದೆ.

ಇದನ್ನೂ ಓದಿ: ಆಧಾರ್ ಕಾರ್ಡ್‌ನಲ್ಲಿ ಈ ಮಾಹಿತಿಗಳನ್ನು ಒಮ್ಮೆ ಮಾತ್ರ ಬದಲಾಯಿಸ್ಬೋದು: ಹೆಸರು ಎಷ್ಟು ಬಾರಿ ಚೇಂಜ್ ಮಾಡ್ಬೋದು ಗೊತ್ತಾ?