Asianet Suvarna News Asianet Suvarna News

ಮಂಗಳೂರು ಏರ್‌ಪೋರ್ಟ್‌ 50 ವರ್ಷ ಅದಾನಿ ತೆಕ್ಕೆಗೆ, ಕೇಂದ್ರ ಸಂಪುಟ ಒಪ್ಪಿಗೆ

ಮಂಗಳೂರು ಏರ್‌ಪೋರ್ಟ್‌ 50 ವರ್ಷ ಅದಾನಿ ತೆಕ್ಕೆಗೆ| ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್

Adani Group gets Cabinet nod to manage Lucknow Ahmedabad and Mangalore airports
Author
Bangalore, First Published Jul 4, 2019, 8:18 AM IST
  • Facebook
  • Twitter
  • Whatsapp

ನವದೆಹಲಿ[ಜು.04]: ಕರ್ನಾಟಕದ ಮಂಗಳೂರು ಸೇರಿ ದೇಶದ ಮೂರು ಪ್ರಮುಖ ವಿಮಾನ ನಿಲ್ದಾಣಗಳನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ ಮಂಗಳೂರು, ಅಹಮದಾಬಾದ್‌ ಹಾಗೂ ಲಖನೌ ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಡಿ ಗುತ್ತಿಗೆ ನೀಡುವ ಪ್ರಸ್ತಾವಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಷಾರಂಭದಲ್ಲಿ ಈ ಮೂರೂ ವಿಮಾನ ನಿಲ್ದಾಣಗಳನ್ನು 50 ವರ್ಷ ನಿರ್ವಹಣೆ ಮಾಡುವ ಗುತ್ತಿಗೆಯನ್ನು ಅದಾನಿ ಕಂಪನಿ ಪಡೆದುಕೊಂಡಿತ್ತು. ಇದಲ್ಲದೆ ಜೈಪುರ, ಗುವಾಹಟಿ, ತಿರುವನಂತಪುರ ವಿಮಾನ ನಿಲ್ದಾಣಗಳ ಗುತ್ತಿಗೆಯನ್ನೂ ಗಳಿಸಿತ್ತು. ಪ್ರತಿ ಪ್ರಯಾಣಿಕನಿಗೆ ವಿಧಿಸಲಾಗುವ ಕನಿಷ್ಠ ಶುಲ್ಕ ಆಧರಿಸಿ ಬಿಡ್ಡರ್‌ಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಆಯ್ಕೆ ಮಾಡಿತ್ತು.

Follow Us:
Download App:
  • android
  • ios