ನಟಿ ಸ್ವಸ್ತಿಕಾ ಮುಖರ್ಜಿ ಉಬರ್ ಪೆಟ್ ಟ್ಯಾಕ್ಸಿ ಸೇವೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿಯ ಪ್ರಾಣಿದಯಾ ಎನ್‌ಜಿಓ ಮಾಲೀಕರೊಬ್ಬರಿಗೆ ಕೇವಲ 5 ಕಿ.ಮೀ. ಪ್ರಯಾಣಕ್ಕೆ 487 ರೂ. ದುಬಾರಿ ದರ ವಿಧಿಸಿರುವುದನ್ನು ಅವರು ಖಂಡಿಸಿದ್ದಾರೆ.
ಬೆಂಗಳೂರು (ಜ.30): ನಟಿ ಹಾಗೂ ಪ್ರಾಣಿ ಪ್ರೇಮಿ ಸ್ವಸ್ತ್ರಿಕಾ ಮುಖರ್ಜಿ ಗುರುವಾರ ಕ್ಯಾಬ್ ಅಗ್ರಿಗೇಟರ್ ಉಬರ್ ಹಾಗೂ ಅವರ ಪೆಟ್ ಟ್ಯಾಕ್ಸಿ ಸರ್ವೀಸ್ ವಿರುದ್ಧ ಕಿಡಿಕಾರಿದ್ದಾರೆ, ದೆಹಲಿ ಮೂಲದ ಪ್ರಾಣಿದಯಾ ಎನ್‌ಜಿಓ ಮಾಲೀಕರಾಗಿರುವ ಮಹಿಳೆಗೆ ಉಬರ್ ಪೆಟ್ ಟ್ಯಾಕ್ಸಿ ಸರ್ವೀಸ್ ಕೇವಲ 5 ಕಿ.ಮೀ ರೈಡ್‌ಗೆ 487 ರೂಪಾಯಿ ಚಾರ್ಜ್ ಮಾಡಿದೆ. ದುಲಾರ್ ಅಮಾನತ್ ಫೌಂಡೇಶನ್ ನಡೆಸುತ್ತಿರುವ ರಕ್ಷಿತಾ ಸಿಂಗ್, ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದರೂ ಸಹ, ಕೆಲವು ನಾಯಿಮರಿಗಳನ್ನು ಬುಟ್ಟಿಯಲ್ಲಿ ಹೊತ್ತೊಯ್ಯುತ್ತಿದ್ದಕ್ಕಾಗಿ ಚಾಲಕನೊಬ್ಬ ಮೊದಲು ಸವಾರಿ ಮಾಡಲು ನಿರಾಕರಿಸಿದ್ದ ಎಂದು ತಿಳಿಸಿದ್ದಾರೆ.
'ಕರುಣೆ ಎಲ್ಲಿದೆ?' ರಕ್ಷಿತಾ ಸಿಂಗ್ ಅವರ ಪೋಸ್ಟ್‌ಅನ್ನು ಸ್ವಸ್ತಿಕಾ ಮುಖರ್ಜಿ ರೀ ಶೇರ್ ಮಾಡಿಕೊಂಡು ಉಬರ್ ಅನ್ನು ಪ್ರಶ್ನೆ ಮಾಡಿದ್ದಾರೆ. ರಕ್ಷಿತಾ ಸಿಂಗ್ ಸಾಕುತ್ತಿದ್ದ ಶ್ವಾನದ ಮರಿಗಳಲ್ಲಿ ಒಂದು ಅನಾರೋಗ್ಯಕ್ಕೆ ಒಳಗಾದಾಗ ಬಧವಾರ ಈ ಘಟನೆ ನಡೆದಿತ್ತು ಎನ್ನಲಾಗಿದೆ. ನಾಯಿ ಮರಿಯನ್ನು ಪಶುವೈದ್ಯರ ಬಳಿಕ ಕರೆದುಕೊಂಡುಹೋಗಬೇಕಾಗಿತ್ತು. "ಇಂದು ಸಂಜೆ, ಈ ನಾಯಿಮರಿಗಳಲ್ಲಿ ಒಂದು ತುಂಬಾ ಅಸ್ವಸ್ಥಗೊಂಡಿದ್ದರಿಂದ, ನಾನು ಪಶುವೈದ್ಯರ ಬಳಿಗೆ ಕರೆದೊಯ್ಯಲು ಉಬರ್ ಬುಕ್ ಮಾಡಿದೆ. ಚಾಲಕ ಬಂದಾಗ, ನಾನು ಎಚ್ಚರಿಕೆಯಿಂದ ಅವುಗಳ ಆರಾಮದಾಯಕ ಬುಟ್ಟಿಗಳನ್ನು ಹಿಂದಿನ ಸೀಟಿನಲ್ಲಿ ಇರಿಸಿ ಅವನಿಗೆ ಸವಾರಿಗಾಗಿ OTP ನೀಡಿದ್ದೆ" ಎಂದು ಅವರು ಬರೆದಿದ್ದಾರೆ.
ರಕ್ಷಿತಾ ಸಿಂಗ್ ನಾಯಿಮರಿಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಹೋಗುತ್ತಿರುವುದು ಚಾಲಕರಿಗೆ ಗೊತ್ತಾದಾಗ, ಈ ಕಾರ್ ಕೇವಲ ಮಾನವ ಪ್ರಯಾಣಿಕರಿಗೆ ಮಾತ್ರ, ಪ್ರಾಣಿಗಳಿಗೆ ಅಲ್ಲ ಎಂದು ಹೇಳಿ, ತಕ್ಷಣವೇ ಕ್ಯಾಬ್‌ನಿಂದ ಇಳಿಯಲು ಕೇಳಿದ್ದ ಎನ್ನಲಾಗಿದೆ.
ನಾನು ನಾಯಿಮರಿಗಳು ಇದ್ದ ಬುಟ್ಟಿಯನ್ನು ಕೆಳಗೆ ಇಳಿಸಿದೆ. ಆದರೆ, ನಾನು ಅವುಗಳನ್ನು ಸುರಕ್ಷಿತವಾಗಿ ಬುಟ್ಟಿಯಲ್ಲೂ ಇಟ್ಟಿದ್ದರೂ, ಚಾಲಕ ಹೀಗೆ ಮಾಡಿದ್ದರಿಂದ ನನಗೆ ಅಚ್ಚರಿಯಾಯಿತು. ಈ ರೀತಿಯ ಸಂದರ್ಭಗಳಲ್ಲಿ ಸಾಕುಪ್ರಾಣಿ ಮಾಲೀಕರಿಗೆ ಉಬರ್ ಸಹಾಯ ಮಾಡುತ್ತದೆ ಎಂದು ನಾನು ಯಾವಾಗಲೂ ಭಾವಿಸಿದ್ದೆ' ಎಂದು ರಕ್ಷಿತಾ ಸಿಂಗ್ ಬರೆದುಕೊಂಡಿದ್ದಾರೆ. ಆ ಬಳಿಕ ಅದೇ ಚಾಲಕ, ನೀವು ಉಬರ್‌ನ ಪೆಟ್ ಟ್ಯಾಕ್ಸಿ ಬುಕ್ ಮಾಡುವಂತೆ ತಿಳಿಸಿದ್ದ. ವೈದ್ಯಕೀಯ ತುರ್ತು ಪರಿಸ್ಥಿತಿ ಆಗಿದ್ದರಿಂದ ಚಾಲಕನ ಮನವೊಲಿಸಲು ಪ್ರಯತ್ನಿಸಿದೆ, ಆದರೆ ಆತ ಒಪ್ಪಿಕೊಳ್ಳಲೇ ಇಲ್ಲ ಎಂದು ಸಿಂಗ್ ಹೇಳಿದ್ದಾರೆ. ಈ ರೀತಿಯ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ರಕ್ಷಿತಾ ಬರೆದುಕೊಂಡಿದ್ದಾರೆ. ಆ ಬಳಿಕ ಉಬರ್‌ನಲ್ಲಿ ಪೆಟ್ ಸ್ಯಾಕ್ಸಿ ಬುಕ್ ಮಾಡಲು ಪ್ರಯತ್ನ ಮಾಡಿದಾಗ, 5 ಕಿಮೀ ದೂರಕ್ಕೆ 487 ರೂಪಾಯಿ ಚಾರ್ಜ್ ಇರುವುದು ತೋರಿಸಿತು. ಸಾಮಾನ್ಯವಾಗಿ ಈ ದೂರಕ್ಕೆ ಉಬರ್ ಪ್ರಯಾಣ 150 ರೂಪಾಯಿ ಆಗಿರುತ್ತದೆ.
ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹೆಚ್ಚಿನ ಪೆಟ್ ಮಾಲೀಕರು ಉಬರ್ ಪ್ರಯಾಣದ ವೇಳೆ ನಮಗೂ ಈ ರೀತಿಯ ಸಮಸ್ಯೆ ಆಗಿದೆ ಎಂದಿದ್ದಾರೆ. ಇನ್ನೂ ಕೆಲವರು ಪೆಟ್ ಸ್ನೇಹಿ ಕ್ಯಾಬ್‌ಗಳು ಲಭ್ಯವಿರುವ ಕಾರಣ, ಇವರುಗಳನ್ನು ಅವನ್ನು ಬಳಸಬಹುದು ಎಂದು ತಿಳಿಸಿದ್ದಾರೆ.
ಆಂಡ್ರಾಯ್ಡ್, ಐಫೋನ್‌ಗಳಲ್ಲಿ ದರ ವ್ಯತ್ಯಾಸ; ಓಲಾ, ಉಬರ್‌ಗೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ!
ನಿಮ್ಮ ಬೇಡಿಕೆಯೇ ಗೊಂದಲವಾಗಿದೆ. ನೀವು ನಿಮ್ಮ ಸ್ವಂತ ವಾಹನವನ್ನು ಯಾಕೆ ಬಳಸಿಕೊಳ್ಳಬಾರದು. ಜನರಿಗೆ ಸಾಕುಪ್ರಾಣಿಗಳೊಂದಿಗೆ ಸಮಸ್ಯೆಗಳಿರಬಹುದು ಮತ್ತು ಉಬರ್‌ನಂತಹ ಸಾಮೂಹಿಕ ಪ್ರಯಾಣದ ವಿಧಾನಗಳು ಕಟ್ಟುನಿಟ್ಟಾಗಿರಬೇಕು ಮತ್ತು ಸಾಕುಪ್ರಾಣಿಗಳಿಲ್ಲದ ನಿಯಮವನ್ನು ಹೊಂದಿರಬೇಕು! ಸಾಕುಪ್ರಾಣಿ ಸ್ನೇಹಿ ಕ್ಯಾಬ್‌ಗಳನ್ನು ಬುಕ್ ಮಾಡಲು ನಿಬಂಧನೆಗಳು ಇರುವುದರಿಂದ, ಬೆಲೆಯನ್ನು ಲೆಕ್ಕಿಸದೆ ನೀವು ಅದನ್ನು ಪಡೆದುಕೊಳ್ಳಬೇಕು ಅಥವಾ ಸ್ಥಳೀಯ ಕ್ಯಾಬ್‌ಗಳನ್ನು ಬುಕ್ ಮಾಡಬೇಕು!" ಎಂದು ಒಬ್ಬ ಯೂಸರ್ ಬರೆದಿದ್ದಾರೆ.
ಇದು ಬೆಂಗಳೂರಿನ 'ಬಿಲಿಯನೇರ್ ಸ್ಟ್ರೀಟ್', 67.5 ಕೋಟಿಗೆ ಸೇಲ್ ಆಗಿದೆ ಇಲ್ಲಿನ ಒಂದು ಸೈಟ್!
ಉಬರ್ ತನ್ನ ಉಬರ್ ಪೆಟ್ ಸರ್ವೀಸ್‌ಅನ್ನು ಕಳೆದ ವರ್ಷ ಆರಂಭಿಸಿದೆ. ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಸಾಗಿಸಲು ಇಷ್ಟಪಡುವ ಚಾಲಕರು ಹಾಗೂ ಅವರ ಕಾರ್‌ಗಳ ಲಿಂಕ್‌ಅನ್ನು ಇದು ಒಳಗೊಂಡಿದೆ. ಈ ಸೇವೆಯು ಗ್ರಾಹಕರು ಉಬರ್ ಸವಾರಿಗಳಲ್ಲಿ ತಮ್ಮೊಂದಿಗೆ ನಾಯಿ ಅಥವಾ ಬೆಕ್ಕನ್ನು ತರಲು ಅನುವು ಮಾಡಿಕೊಡುತ್ತದೆ. ಈ ಸೇವೆ ಬೆಂಗಳೂರು ಸೇರಿದಂತೆ ಆಯ್ದ ನಗರಗಳಲ್ಲಿ ಮಾತ್ರ ಲಭ್ಯವಿದೆ.
