Asianet Suvarna News Asianet Suvarna News

ಆಧಾರ್ ಕಾರ್ಡ್ ಬಳಕೆದಾರರು ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿದ್ರೆ, ಬ್ಯಾಂಕ್ ಖಾತೆಯಲ್ಲಿರುವ ಹಣ ಸೇಫ್!

ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಎಇಪಿಎಸ್ ವ್ಯವಸ್ಥೆಯಲ್ಲಿ ಅನೇಕರು ಹಣ ಕಳೆದುಕೊಂಡಿದ್ದಾರೆ. ಹೀಗಾಗಿ ಆಧಾರ್ ಕಾರ್ಡ್ ಬಳಕೆದಾರರು ಬ್ಯಾಂಕ್ ಖಾತೆಯಲ್ಲಿರುವ ಹಣದ ಸುರಕ್ಷತೆಗೆ mAadhaar app ಡೌನ್ಲೋಡ್ ಮಾಡೋದು ಅಗತ್ಯ. 

Aadhaar card users should update this setting right now to avoid losing money anu
Author
First Published Oct 25, 2023, 4:34 PM IST

Business Desk:ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖ ಗುರುತು ದಾಖಲೆಯಾಗಿದೆ. ಹಣಕಾಸು ಸಂಬಂಧಿ ಕಾರ್ಯಗಳಿಗೂ ಆಧಾರ್ ಕಾರ್ಡ್ ಜೊತೆಗೆ ಸಂಬಂಧವಿರುವ ಕಾರಣ ಇದರ ಸುರಕ್ಷತೆ ಬಗ್ಗೆ ಗಮನ ಹರಿಸೋದು ಇಂದು ಅತ್ಯಗತ್ಯ. ಒಂದು ವೇಳೆ ಆಧಾರ್ ಕಾರ್ಡ್ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನೀವು ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ. ಈಗಾಗಲೇ ಅನೇಕರು ಹಣ ಕಳೆದುಕೊಂಡಿದ್ದಾರೆ ಕೂಡ. ಇಂದು ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಬಹುತೇಕರು ಆನ್ ಲೈನ್ ಹಣದ ವಹಿವಾಟುಗಳನ್ನು ನಡೆಸುತ್ತಿರುವ ಕಾರಣ ವಂಚಕರಿಗೆ ಕೂಡ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕೋದು ಇತ್ತೀಚಿನ ದಿನಗಳಲ್ಲಿ ಸುಲಭವಾಗಿದೆ. ಅದರಲ್ಲೂ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಿಂದ (ಎಇಪಿಎಸ್)  ಅನೇಕರು ಹಣ ಕಳೆದುಕೊಳ್ಳುತ್ತಿದ್ದಾರೆ ಕೂಡ. ಇತ್ತೀಚೆಗೆ ಲಿಂಕ್ಡ್ ಇನ್ ನಲ್ಲಿ ಜ್ಯೋತಿ ರಾಮಲಿಂಗಯ್ಯ ಎಂಬ ಟೆಕ್ ಇಂಜಿನಿಯರ್ ಕೂಡ ಎಇಪಿಎಸ್ ವ್ಯವಸ್ಥೆಯಿಂದ ಹಣ ಕಳೆದುಕೊಂಡಿರುವ ಅನುಭವ ಹಂಚಿಕೊಂಡಿದ್ದಾರೆ. 

ಇತರ ಆನ್ ಲೈನ್ ಹಣಕಾಸು ಸೇವೆಗಳಂತೆ ಎಇಪಿಎಸ್  ನಲ್ಲಿ ಪ್ರತಿ ವಹಿವಾಟಿಗೂ ಒಟಿಪಿ ಅಗತ್ಯವಿಲ್ಲ. ಹಾಗೆಯೇ ಇತರ ವ್ಯವಸ್ಥೆಗಳಂತೆ ಇದು ಬಹು ಹಂತದ ಪರಿಶೀಲನೆ ಪ್ರಕ್ರಿಯೆಗಳನ್ನು ಒಳಗೊಂಡಿಲ್ಲ. ಆಧಾರ್ ಸಂಖ್ಯೆ ಆಧಾರದಲ್ಲಿ ಈ ವಹಿವಾಟು ನಡೆಸಬಹುದು. ಹೀಗಾಗಿ ಆಧಾರ್ ಸಂಖ್ಯೆ ಬಳಸಿ ವಂಚಕರು ಅಮಾಯಕರ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಯಿದೆ. ಜ್ಯೋತಿ ರಾಮಲಿಂಗಯ್ಯ ಹಂಚಿಕೊಂಡಿರುವ ಮಾಹಿತಿ ಅನ್ವಯ ಎಇಪಿಎಸ್ ವ್ಯವಸ್ಥೆಯಿಂದ ಅವರು 10,000ರೂ. ಕಳೆದುಕೊಂಡಿದ್ದಾರೆ. ವಹಿವಾಟನ್ನು ನಡೆಸಲು ಆಕೆಯ ಆಧಾರ್ ಬಳಸಿರುವ ಬಗ್ಗೆ ಬ್ಯಾಂಕ್ ನಿಂದ ಸಂದೇಶ ಬಂದಿರೋದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ mAadhaar app ಮೂಲಕ ನಿಮ್ಮ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಲಾಕ್ ಅಳವಡಿಸೋದು ಸೂಕ್ತ. ಈ ಮೊಬೈಲ್ ಅಪ್ಲಿಕೇಷನ್ ಅನ್ನು ಆಧಾರ್ ಕಾರ್ಡ್ ಅನ್ನು ಭಾರತದ ನಾಗರಿಕರಿಗೆ ವಿತರಿಸುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಒದಗಿಸಿದೆ. ಈ ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್ ಮಾಹಿತಿಗಳಿಗೆ ಹೆಚ್ಚುವರಿ ಸಂರಕ್ಷಣೆ ಒದಗಿಸಬಹುದು. ಅದರಲ್ಲೂ ನಿಮ್ಮ ಬೆರಳಚ್ಚು ಹಾಗೂ ಐರೀಸ್ ಸ್ಕ್ಯಾನ್ ಒಳಗೊಂಡಿರುವ ಬಯೋಮೆಟ್ರಿಕ್ ಮಾಹಿತಿಗಳಿಗೆ ಹೆಚ್ಚಿನ ಸುರಕ್ಷತೆ ಒದಗಿಸಬಹುದು.

ಈ ಯೋಜನೆಯಲ್ಲಿ ಪ್ರತಿ ತಿಂಗಳು 5 ಸಾವಿರ ಹೂಡಿಕೆ ಮಾಡಿ: 10 ಲಕ್ಷ ರೂ. ಗೂ ಹೆಚ್ಚು ಹಣ ಪಡೆಯಲು ಹೀಗೆ ಮಾಡಿ!

mAadhaar app ಡೌನ್ಲೋಡ್ ಮಾಡೋದು ಹೇಗೆ?
*ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಿಂದ mAadhaar app ಡೌನ್ಲೋಡ್ ಮಾಡಿ.
*ಆ ಬಳಿಕ ಅಪ್ಲಿಕೇಷನ್ ಮೇಲ್ಭಾಗದಲ್ಲಿರುವ "Register My Aadhaar" ಮೇಲೆ ಕ್ಲಿಕ್ ಮಾಡಿ.
*ನಂತರ 4 ಅಂಕೆಗಳ ಪಾಸ್ ವರ್ಡ್ ಅನ್ನು ಸೃಷ್ಟಿಸಿ.
*ಈಗ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕ್ಯಾಪ್ಚ ನಮೂದಿಸುವಂತೆ ನಿಮ್ಮನ್ನು ಕೋರಲಾಗುತ್ತದೆ.
*ಇದಾದ ಬಳಿಕ ನೀವು ಒಟಿಪಿ ಕೋರಬೇಕು. ಇದನ್ನು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಒಟಿಪಿಗಾಗಿ ನೀವು ನಿಮ್ಮ ಮೊಬೈಲ್ ಫೋನ್ ಎಸ್ ಎಂಎಸ್ ಅಪ್ಲಿಕೇಷನ್ ಚೆಕ್ ಮಾಡಬಹುದು.
*ಒಟಿಪಿ ನಮೂದಿಸಿದ ಬಳಿಕ ನಿಮ್ಮ ಆಧಾರ್ ಖಾತೆ ತೆರೆದುಕೊಳ್ಳುತ್ತದೆ. ಆ ಬಳಿಕ ಸ್ಕ್ರಾಲ್ ಡೌನ್ ಮಾಡಿ 'Biometrics Lock' ಮೇಲೆ ಕ್ಲಿಕ್ ಮಾಡಿ.

ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!

*Lock Biometric ಮೇಲೆ ಟ್ಯಾಪ್ ಮಾಡಿ.
*ಆ ಬಳಿಕ ನೀವು ಸೆಕ್ಯುರಿಟಿ ಕ್ಯಾಪ್ಚ ಹಾಗೂ ಒಟಿಪಿ ನಮೂದಿಸುವ ಮೂಲಕ ದೃಢೀಕರಿಸಬೇಕು.
*ಒಮ್ಮೆ ನೀವು ಒಟಿಪಿ ದೃಢೀಕರಿಸಿದ ಬಳಿಕ ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ.

Follow Us:
Download App:
  • android
  • ios