ಡಿಗ್ರಿಗಳೆಲ್ಲಾ ಪೀಸ್ ಆಫ್ ಪೇಪರ್: ರೂಲ್ಸ್ ರಾಯ್ಸ್ ಕಾರಿನ ವಿನ್ಯಾಸಕ ಶಾಲೆಗೆ ಹೋಗಿದ್ದು ಒಂದೇ ವರ್ಷ
ಹೆನ್ರಿ ರಾಯ್ಸ್, ರೋಲ್ಸ್ ರಾಯ್ಸ್ ಸಂಸ್ಥಾಪಕ, ಕೇವಲ ಒಂದು ವರ್ಷ ಶಾಲೆಗೆ ಹೋದರು. ಬಡತನದ ನಡುವೆಯೂ ಕಲಿಕೆಯ ಆಸಕ್ತಿ ಕೈಬಿಡಲಿಲ್ಲ, ಸ್ವಂತ ಪರಿಶ್ರಮದಿಂದ ಯಶಸ್ಸು ಸಾಧಿಸಿದರು.

ಕೆಲವರು ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗ ಗಳಿಸಿ ಲಕ್ಷ ಲಕ್ಷ ದುಡಿದರೆ, ಕೆಲವರು ಎಷ್ಟೇ ಓದಿದರು ಸರಸ್ವತಿ ಒಲಿದರು ಲಕ್ಷ್ಮಿ ಒಲಿಯುವುದಿಲ್ಲ, ಒಳ್ಳೆಯ ಉದ್ಯೋಗ ಸಿಗುವುದಿಲ್ಲ, ಆದರೆ ಇನ್ನು ಕೆಲವರಿಗೆ ಕಲಿಯುವ ವಯಸ್ಸಲ್ಲಿ ವಿದ್ಯೆ ತಲೆಗೆ ಹಿಡಿದಿರುವುದಿಲ್ಲ, ಇಂತಹ ಕೆಲವರು ಶಿಕ್ಷಣ ಹೊರತುಪಡಿಸಿ ಮತ್ತೆಲ್ಲದರಲಿ ಸಕಲಕಲಾವಲ್ಲಭರಾಗಿರ್ತಾರೆ. ಮತ್ತೆ ಕೆಲವರಿಗೆ ಕಲಿಯುವ ಆಸೆ ಇದ್ದರೂ ಶಿಕ್ಷಣವೇ ಸಿಗುವುದಿಲ್ಲ, ಓದಿಸಲು ಜವಾಬ್ದಾರಿ ತೆಗೆದುಕೊಳ್ಳುವವರು ಇರುವುದಿಲ್ಲ. ಅನಿವಾರ್ಯ ಕಾರಣಕ್ಕೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಗುತ್ತದೆ. ಆದರೆ ಕಲಿಯಬೇಕೆನ್ನುವ ಛಲ ಅವರನ್ನು ಮತ್ತೆಲ್ಲಿಗೋ ತಂದು ಮುಟ್ಟಿಸುತ್ತದೆ. ಇಂತಹ ಹಲವು ವ್ಯಕ್ತಿಗಳನ್ನು ನೀವು ನೋಡಿರಬಹುದು. ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತೇವೆ.
ಅಂದಹಾಗೆ ಇದು ಹೆನ್ರಿ ರಾಯ್ಸ್ ಅವರ ಕತೆ. ಜಗದ್ವಿಖ್ಯಾತ ರೋಲ್ಸ್ ರಾಯ್ಸ್ ಕಾರಿನ ಸಹ ಸಂಸ್ಥಾಪಕ ಹಾಗೂ ಪ್ರಮುಖ ಡಿಸೈನರ್. ಆದರೆ ಇವರು ಶಾಲೆಗೆ ಹೋಗಿದ್ದು ಕೇವಲ ಒಂದೇ ಒಂದು ವರ್ಷ, ಇಂಗ್ಲೆಂಡ್‌ನಲ್ಲಿ ಜನಿಸಿದ ಹೆನ್ಸಿ ರೋಯ್ಸ್, ತಮ್ಮ 4ನೇ ವಯಸ್ಸಿನಿಂದಲೇ ಕಲಿಕೆ ಬಿಟ್ಟು ಕೆಲಸ ಮಾಡಲು ಆರಂಭಿಸಿದವರು. ಕೆಲವು ಚಿಲ್ಲರೆ ಹಣ ಸಂಪಾದನೆಗಾಗಿ ಹಕ್ಕಿಗಳನ್ನು ಓಡಿಸುವ ಕೆಲಸ ಶುರು ಮಾಡಿದ ಹೆನ್ರಿಯ ಬಾಲ್ಯ ಬಹಳ ಕಷ್ಟದಿಂದ ಕೂಡಿತ್ತು.ಈ ನಡುವೆ 9ನೇ ವರ್ಷಕ್ಕೆ ಹೆನ್ರಿ ರಾಯ್ಸ್ ತಂದೆ ಹಠಾತ್ ನಿಧನರಾಗುತ್ತಾರೆ. ಹೀಗಾಗಿ ಕುಟುಂಬಕ್ಕೆ ಸಹಾಯ ಮಾಡುವುದಕ್ಕೆ ನ್ಯೂಸ್ ಪೇಪರ್ ಮಾರಾಟ ಮಾಡಲು ಶುರು ಮಾಡಿದ ಹೆನ್ರಿಗೆ ಜೀವನ ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ಹಸಿವು ನೀಗಿಸಲು ಬ್ರೆಡ್ ಪೀಸ್‌ಗಳಷ್ಟೇ ಸಿಮಿತವಾಗಿತ್ತು.
ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಹೆನ್ರಿ ರಾಯ್ಸ್ ಅವರ ಕಲಿಯುವ ಆಸಕ್ತಿ ಮಾತ್ರ ಕ್ಷೀಣಿಸಲೇ ಇಲ್ಲ, ಹಲವು ಕಷ್ಟದ ದಿನಗಳನ್ನು ದಾಟಿ 22ನೇ ವಯಸ್ಸಿಗೆ ಅವರು ತಮ್ಮ ಉದ್ಯಮ ಪಯಣವನ್ನು ಆರಂಭಿಸಿದರು. ಹೊಟ್ಟೆ ಹೊರೆಯುವುದಕ್ಕಾಗಿ ಕುಟುಂಬ ಕಷ್ಟಗಳಿಗೆ ಹೆಗಲು ಕೊಡುವುದಕ್ಕಾಗಿ ಬಾಲ್ಯದಿಂದಲೇ ಒಂದಲ್ಲ, ಒಂದು ಕೆಲಸವನ್ನು ಮಾಡುತ್ತಲೇ ಬಂದ ಹೆನ್ರಿ ಅವರು ಫ್ರೆಂಚ್ ಕಾರನ್ನು ಯಶಸ್ವಿಯಾಗಿ ರಿಪೇರಿ ಮಾಡಿದ ನಂತರ ಅವರಲ್ಲಿ ಆಟೋಮೊಬೈಲ್‌ಗಳ ಮೇಲೆ ಆಸಕ್ತಿ ಹೆಚ್ಚಾಯ್ತು ಇದು ಅವರಿಗೆ ಉತ್ತಮ ವಾಹನವನ್ನು ರಚಿಸುವ ಕನಸು ಕಾಣುವಂತೆ ಮಾಡಿತ್ತು.
ಈ ಮಹತ್ವಾಕಾಂಕ್ಷೆಯೇ ಅವರನ್ನು ಕಾರು ವ್ಯಾಪಾರಿ ಚಾರ್ಲ್ಸ್ ರೋಲ್ಸ್ ಬಳಿ ಕರೆತಂದಿತು. ಅವರು ಇಬ್ಬರು ಒಟ್ಟಾಗಿ ಡಿಸೆಂಬರ್ 1904 ರಲ್ಲಿ ಪ್ರತಿಷ್ಠಿತ ರೋಲ್ಸ್ ರಾಯ್ಸ್ ಅನ್ನು ಸ್ಥಾಪಿಸಿದರು, ಇಂದು ಇದು ವಿಶ್ವದ ಪ್ರಸಿದ್ಧ ಬ್ರ್ಯಾಂಡ್ ಆಗಿದೆ. ಐಷಾರಾಮಿ ಕಾರುಗಳಿಗೆ ಇಂದು ರೋಲ್ಸ್ ರಾಯ್ಸ್ ಸಮನಾರ್ಥಕ ಪದವೆನಿಸಿದ್ದು, ವಿಶ್ವದ ಕೆಲವು ಪ್ರತಿಷ್ಠಿತ ಕಾರುಗಳನ್ನು ಇದು ಉತ್ಪಾದಿಸುತ್ತದೆ. ಹೆನ್ರಿ ರಾಯ್ಸ್ ಅವರು ಈ ರೋಲ್ಸ್ ರಾಯ್ಸ್ ಕಂಪನಿಯಲ್ಲಿ ಈ ಕಾರಿನ ಮುಖ್ಯ ವಿನ್ಯಾಸಕರೂ ಆದರು. ಕೇವಲ ಒಂದು ವರ್ಷವಷ್ಟೇ ಶಾಲೆಗೆ ಹೋಗಿದ್ದ ಹೆನ್ರಿ ಕೆಲಿತಿದ್ದೆಲ್ಲವೂ ಸೆಲ್ಪ್ ಲರ್ನಿಂಗ್‌ನಿಂದಲೇ, ಯಾವುದನ್ನು ಅವರು ಶಾಲೆಗೆ ಹೋಗಿಯೋ ಯಾವುದೋ ಸಂಸ್ಥೆಯಲ್ಲೋ ಕಲಿತಿಲ್ಲ, ಪ್ರತಿಯೊಂದನ್ನು ಸ್ವಂತವಾಗಿ ಕಲಿತರು. ಅವರ ಈ ಯಶಸ್ಸಿನ ಕತೆ ಹಲವರಿಗೆ ಮಾದರಿ.