Asianet Suvarna News Asianet Suvarna News

Union Budget 2023: ನವಭಾರತದ ಪಾಲಿಗೆ ದಾಖಲೆಯ ಬಜೆಟ್‌: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಎಲ್ಲರಿಗೂ ಬೆಂಬಲ ಮತ್ತು ಅವಕಾಶಗಳನ್ನು ವಿಸ್ತರಿಸುವ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ನವಭಾರತದ ಮಟ್ಟಿಗೆ ಇದು ನಿಜವಾಗಿಯೂ ದಾಖಲೆಯ ಬಜೆಟ್‌ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಐಟಿ-ಬಿಟಿ ಇಲಾಖೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

A record budget for Navbharat Says Union Minister Rajeev Chandrasekhar gvd
Author
First Published Feb 2, 2023, 5:03 AM IST

ಬೆಂಗಳೂರು (ಫೆ.02): ಆಧುನಿಕ ಕ್ಯಾಪೆಕ್ಸ್‌, ಡಿಜಿಟಲೀಕರಣ, ಆಧುನಿಕ ನಗರಗಳಲ್ಲಿ ಹೂಡಿಕೆಗಳನ್ನು ವಿಸ್ತರಿಸುವ ಮತ್ತು ಯುವಕರಿಗೆ ಕೌಶಲ್ಯ, ಮಧ್ಯಮ ವರ್ಗದವರಿಗೆ ತೆರಿಗೆ ಕಡಿತ ಹಾಗೂ ಎಲ್ಲರಿಗೂ ಬೆಂಬಲ ಮತ್ತು ಅವಕಾಶಗಳನ್ನು ವಿಸ್ತರಿಸುವ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ನವಭಾರತದ ಮಟ್ಟಿಗೆ ಇದು ನಿಜವಾಗಿಯೂ ದಾಖಲೆಯ ಬಜೆಟ್‌ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ, ಐಟಿ-ಬಿಟಿ ಇಲಾಖೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ಹೆಚ್ಚಿನ ದೇಶಗಳು ಎರಡು ವರ್ಷಗಳ ಕೋವಿಡ್‌ ಸಾಂಕ್ರಾಮಿಕ ಮತ್ತು ಯೂರೋಪಿಯನ್‌ ಯುದ್ಧದ ಪರಿಣಾಮಗಳಿಂದ ಹೊರಬರಲು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತವು ಬಲವಾದ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಮಧ್ಯಮ ವರ್ಗಕ್ಕೆ ತೆರಿಗೆ ಕಡಿತವನ್ನು ನೀಡುತ್ತಿದೆ. ಅಲ್ಲದೆ, ರೈತರು ಮತ್ತು ಎಂಎಸ್‌ಎಂಇಗಳಿಗೆ ಹೆಚ್ಚಿನ ಸಾಲಗಳನ್ನು ನೀಡುತ್ತಿದೆ. ಭಾರತ ಮತ್ತು ಭಾರತೀಯರು ಎದುರಿಸಿದ ಈ ಬಿಕ್ಕಟ್ಟಿನಿಂದ ಎಲ್ಲರನ್ನೂ ಚಾಣಾಕ್ಷತನದಿಂದ ಮುಕ್ತಗೊಳಿಸಿದ್ದಕ್ಕಾಗಿ ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Budget 2023: ದೇಶದ ಭವಿಷ್ಯಕ್ಕೆ ಆದ್ಯತೆ ನೀಡಿರುವ ನಿರ್ಮಲ ಬಜೆಟ್‌: ವಿಜಯರಾಜೇಶ್‌

ಹೊಸ ತೆರಿಗೆ ಪದ್ಧತಿ ಆಕರ್ಷಕ, ಸರಳ: ಸರ್ಕಾರವು ಹೊಸ ಆದಾಯ ತೆರಿಗೆ ಪದ್ಧತಿಯನ್ನು ತೆರಿಗೆದಾರರಿಗೆ ಹೆಚ್ಚು ಆಕರ್ಷಕವಾಗಿಸಿದೆ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಅದರ ರಚನೆಯಲ್ಲಿ ’ಗಣನೀಯ ಬದಲಾವಣೆ’ ತಂದಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಬುಧವಾರ ಬಜೆಟ್‌ ಮಂಡನೆ ನಂತರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2020-21ರಲ್ಲಿ ಪರಿಚಯಿಸಲಾಗಿದ್ದ ಹೊಸ ಐಚ್ಛಿಕ ತೆರಿಗೆ ಪದ್ಧತಿಯಲ್ಲಿ 2023-24ರಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ದೇಶವು ಇಂದು ಸುಲಭವಾಗಿ ಅನುಸರಿಸಲು ಅನುಕೂಲವಾಗುವ ಸರಳೀಕೃತ ನೇರ ತೆರಿಗೆ ಪದ್ಧತಿಗೆ ಕಾಯುತ್ತಿದೆ’ ಎಂದರು.

‘ವೈಯಕ್ತಿಕ ಆದಾಯ ತೆರಿಗೆಯು ಬಜೆಟ್‌ನಲ್ಲಿ ಗಣನೀಯ ಬದಲಾವಣೆಗಳನ್ನು ಪಡೆದುಕೊಂಡಿದೆ. ಇದು ಮಧ್ಯಮ ವರ್ಗದವರಿಗೆ ಪ್ರಯೋಜನ ನೀಡುತ್ತದೆ. ಹೊಸ ತೆರಿಗೆ ವ್ಯವಸ್ಥೆಯು ಈಗ ಹೆಚ್ಚಿನ ವೇಗ ಹೊಂದಿದೆ. ಇದರಿಂದಾಗಿ ಜನರು ಈಗ ಹಳೆಯ ತೆರಿಗೆ ಪದ್ಧತಿಗಿಂತ ಹೊಸ ತೆರಿಗೆ ಪದ್ಧತಿಗೆ ಹಿಂಜರಿಕೆ ಇಲ್ಲದೇ ಸೇರಿಕೊಳ್ಳಬಹುದು’ ಎಂದರು. ‘ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳ ಪ್ರಕಾರ, ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ 7 ಲಕ್ಷ ರು.ವರೆಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಆದರೆ ಎಚ್‌ಆರ್‌ಎ ಮತ್ತು ಇತರ ಬಂಡವಾಳಗಳನ್ನು ಉಲ್ಲೇಖಿಸಿದರೆ ತೆರಿಗೆ ವಿನಾಯಿತಿ ಮತ್ತು ಕಡಿತಗಳನ್ನು ಒದಗಿಸುವ ಹಳೆಯ ತೆರಿಗೆ ಪದ್ಧತಿಯಲ್ಲಿ ಮುಂದುವರಿಯುವವರಿಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!

ಹಳೆಯ ತೆರಿಗೆ ಪದ್ಧತಿಯಡಿ 5 ಲಕ್ಷ ರು.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ. ‘ಹೊಸ ತೆರಿಗೆ ಪದ್ಧತಿಯನ್ನು ಸಾಕಷ್ಟುಆಕರ್ಷಕವಾಗಿಸಲು ಸರ್ಕಾರ ಬಯಸುತ್ತದೆ ಮತ್ತು ಅನುಸರಣೆ ತೆರಿಗೆದಾರರ ಮೇಲೆ ಹೊರೆಯಾಗಬಾರದು ಎಂಬ ಉದ್ದೇಶವಿದೆ. ಆದರೆ ಹಳೆಯ ತೆರಿಗೆ ಪದ್ಧತಿ ಹೆಚ್ಚು ಪ್ರಯೋಜನಕಾರಿ ಎಂದು ಭಾವಿಸಿದರೆ, ತೆರಿಗೆದಾರರು ಅದರಲ್ಲೇ ಮುಂದುವರಿಯಬಹುದು’ ಎಂದು ಅವರು ಹೇಳಿದರು.

Follow Us:
Download App:
  • android
  • ios