ಫಸ್ಟ್ ಟೈಮ್ ಟ್ಯಾಕ್ಸ್ ಕಟ್ತಿದಿರಾ?: ಇರಲಿ ಎಚ್ಚರ!
ಆದಾಯ ತೆರಿಗೆ ಸಲ್ಲಿಗೆ ಗಡುವು ವಿಸ್ತರಣೆ
ಮೊದಲ ಬಾರಿ ಐಟಿಆರ್ ಸಲ್ಲಿಸುವವರಿಗೆ ಟಿಪ್ಸ್
ಇ- ಫಿಲ್ಲಿಂಗ್ ಪಟ್ಟಿ ಪರಿಶೀಲನೆ ಅಗತ್ಯ
ನಿಮ್ಮ ಬಳಿ ಇರಲಿ ಸರಿಯಾದ ದಾಖಲೆಗಳು
ತೆರಿಗೆ ವಿನಾಯಿತಿ ಕುರಿತು ಸ್ಪಷ್ಟ ಮಾಹಿತಿ ಅಗತ್ಯ
ಬೆಂಗಳೂರು[ಜು.31]: ಆದಾಯ ತೆರಿಗೆ ಪಾವತಿಸಲು ನೀಡಿದ್ದ ಗಡುವಿನ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಜುಲೈ 31 ರಿಂದ ಆಗಸ್ಟ್ 31ರವರೆಗೂ ಐಟಿಆರ್ ಸಲ್ಲಿಕೆಯ ಅವಧಿ ವಿಸ್ತರಣೆಯಾಗಿದ್ದು, ತೆರಿಗೆ ಪಾವತಿದಾರರು ನಿರಾಳವಾಗಿದ್ದಾರೆ.
ಇದೇ ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವವರಿಗೆ ಇದು ದೊಡ್ಡ ಐಟಿಆರ್ ದೊಡ್ಡ ಸಮಸ್ಯೆಯಾಗಿ ಕಾಣಲಿದೆ. ಆದರೆ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದಂತೆ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಐಟಿಆರ್ ಫೈಲ್ ಮಾಡಬಹುದು.
ಇ- ಫಿಲ್ಲಿಂಗ್ ಪಟ್ಟಿ ಪರಿಶೀಲನೆ:
ಒಂದು ವೇಳೆ ನೀವು ಸಂಬಳ ಪಡೆಯುವ ನೌಕರರಾಗಿದ್ದರೆ ಆದಾಯ ಇಲ್ಲ ಎಂದೇ ಅರ್ಥ. ಸುಲಭವಾಗಿ ಪಾವತಿಸಬಹುದು. ಆದಾಯ ತೆರಿಗೆ ಇಲಾಖೆಯ ವೆಬ್ ಪೋರ್ಟಲ್ ಇ- ಫಿಲ್ಲಿಂಗ್ ನಲ್ಲಿ ಇ-ಮೇಲ್ ಐಡಿ, ಪೋನ್ ನಂಬರ್ ನೋಂದಣಿ ಮಾಡಿಕೊಳ್ಳಿ. ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದ ಕೊನೆಯ ನಿಮಿಷಗಳಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ತಡೆಗಟ್ಟಿ.
ಇರಲಿ ಸರಿಯಾದ ದಾಖಲೆಗಳು:
ಸಂಬಳ ಪಡೆಯುವ ನೌಕರರು ಪ್ಯಾನ್ ನಂಬರ್, ಹಾಗೂ ಉದ್ಯೋಗದಾತರು ನೀಡುವ ಫಾರಂ- 16 ಅಗತ್ಯವಿರುತ್ತದೆ. ಫಾರಂ -26 ರಿಂದ ಎಷ್ಟು ಮೊತ್ತದ ತೆರಿಗೆ ಕಟ್ ಆಗಿದೆ. ಬ್ಯಾಂಕಿನ ಹೇಳಿಕೆಯಿಂದ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯ ಮೊತ್ತದ ಲೆಕ್ಕಾಚಾರವನ್ನು ಹೊಂದಿಸಬಹುದಾಗಿದೆ. ಒಂದು ವೇಳೆ ನೀವು ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಹೊಂದಿದ್ದರೆ ಆದರ ಬಗ್ಗೆಯೂ ಹೇಳಿಕೆಯ ಅಗತ್ಯವಿರುತ್ತದೆ.
ತೆರಿಗೆ ವಿನಾಯಿತಿ
ಒಂದು ವೇಳೆ ನೀವು ಭವಿಷ್ಯ ನಿಧಿಯಲ್ಲಿ ಖಾತೆ ಹೊಂದಿದ್ದರೆ, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದರೆ. ಯಾವುದೇ ಆರೋಗ್ಯ ಸಂಬಂಧಿತ ವಿಮೆ ಹೊಂದಿದ್ದರೆ. ಅಥವಾ ಜೀವ ವಿಮೆ ಪಾಲಿಸಿ ಯಲ್ಲಿ ನಿಮ್ಮ ಹೆಸರಿದ್ದರೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.
ಪಿಪಿಎಫ್. ಎನ್ ಎಸ್ ಸಿ, ಯುಎಲ್ ಐಪಿಎಸ್, ಇಎಲ್ ಎಸ್ ಎಸ್, ಎಲ್ ಐಸಿಯಲ್ಲಿ ಹೂಡಿಕೆ ಮಾಡಿರುವ ಎಲ್ಲರೂ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹರು. ಈ ಸೆಕ್ಷನ್ ಅಡಿಯಲ್ಲಿ ಗರಿಷ್ಠ 1.5 ಲಕ್ಷದವರೆಗೂ ಕಡಿತ ಮೊತ್ತವನ್ನು ವಾಪಾಸ್ ಪಡೆದುಕೊಳ್ಳಬಹುದು. ನಿಮ್ಮ ಪೋಷಕರಿಗೆ ಆರೋಗ್ಯ ವಿಮೆ ಪಾಲಿಸಿದ್ದರೆ ಅದರಿಂದಲೂ ತೆರಿಗೆ ವಿನಾಯಿತಿ ದೊರಕಲಿದೆ.
ಆರೋಗ್ಯ ವಿಮೆ ಮೇಲಿನ ಪ್ರೀಮಿಯಂ ಪಾವತಿಗೂ ತೆರಿಗೆಯಿಂದ ವಿನಾಯಿತಿ ದೊರಕಲಿದೆ. 60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಪ್ರೀಮಿಯಂ ಪಾವತಿಗೆ ತೆರಿಗೆ ವಿನಾಯಿತಿಯನ್ನು 50 ಸಾವಿರ ರೂ. ಗೆ ಮಿತಿಗೊಳಿಸಲಾಗಿದೆ. ಪೋಷಕರ ವಯಸ್ಸು 60 ವರ್ಷಕ್ಕಿಂತ ಕೆಳಗಿದ್ದರೆ, 25 ಸಾವಿರ ತೆರಿಗೆ ವಿನಾಯಿತಿ ಇರಲಿದೆ.
ಪರಿಪೂರ್ಣ ತೆರಿಗೆ
ಶೈಕ್ಷಣಿಕ ಸಾಲದ ಮೇಲಿನ ಬಡ್ಡಿಯೂ ಕೂಡಾ ವಿನಾಯಿತಿ ಅಡಿಯಲ್ಲಿ ಬರಲಿದೆ ಆದರೂ ಮೇಲಿನ ಪಟ್ಟಿಯಲ್ಲಿರುವಂತೆ ಹೂಡಿಕೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅಗತ್ಯವಾಗಿರುತ್ತವೆ. ಈ ಎಲ್ಲಾ ಅಂಶಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಆದಾಯ ತೆರಿಗೆ ಪಾವತಿ ಅರ್ಜಿ ನೋಂದಣಿಗೂ ಮುನ್ನಾ ಈ ಎಲ್ಲಾ ಅಂಶಗಳ ಬಗ್ಗೆ ವಿಶೇಷ ಗಮನಹರಿಸುವುದು ಒಳ್ಳೆಯದು.