Business Tricks : ಬ್ಯುಸಿನೆಸ್ ನಲ್ಲಿ ಮಾಡುವ ಸಣ್ಣ ಬದಲಾವಣೆಯೊಂದು ಸದ್ದಿಲ್ಲದೆ ಗಳಿಕೆ ಹೆಚ್ಚಿಸುತ್ತೆ. ಜೊತೆಗೆ ಜಾಹೀರಾತಿಲ್ದೆ ಎಲ್ಲರ ಮನೆ ಮಾತಾಗುತ್ತೆ. ಅದಕ್ಕೆ ಈ ಕೆಫೆ ಉತ್ತಮ ನಿದರ್ಶನ.
ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಕೆಫೆಯೊಂದರ ಲೆಕ್ಕಾಚಾರವನ್ನು ಬಳಕೆದಾರರೊಬ್ಬರು ಬರೆದಿದ್ದಾರೆ. ಪ್ರಥಮ್ ಹೆಸರಿನ ಎಕ್ಸ್ ಖಾತೆಯಲ್ಲಿ ಕೆಫೆ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಥಮ್, ತಾವು ತಂಗಿದ್ದ ಹೊಟೇಲ್ ಪಕ್ಕದಲ್ಲಿರುವ ಕೆಫೆಗೆ ಹೋಗಿದ್ರಂತೆ. ಆ ಕೆಫೆಯಲ್ಲಿ ವಿಶೇಷ ಆಫರ್ ಒಂದಿದೆ. ಹುಡುಗಿಯರು ನಿಮ್ಮ ಮುಂದೆ, ನಿಮ್ಮಿಷ್ಟದ ಹಾಡಿಗೆ ಡಾನ್ಸ್ ಮಾಡ್ತಾರೆ. ನೀವದಕ್ಕೆ ಟಿಪ್ಸ್ ನೀಡ್ಬೇಕು. ನೀವು ಟಿಪ್ಸ್ ನೀಡಿದ್ರೆ ಮಾತ್ರ ಡಾನ್ಸ್.
ಟಿಪ್ಸ್ ನಲ್ಲೇ ಲಕ್ಷಾಂತರ ಸಂಪಾದನೆ !
ಪ್ರಥಮ್ ಪ್ರಕಾರ, ಹುಡುಗಿಯರು ಡಾನ್ಸ್ ಆಫರ್ ನೀಡಿದಾಗ ಬೇಡ ಎನ್ನುವ ಕಸ್ಟಮರ್ಸ್ ಸಂಖ್ಯೆ ಕಡಿಮೆ. ಹಾಗೇನೇ ಟಿಪ್ಸ್ ಅಂತ ಈಗ ಯಾರೂ 10, 20 ರೂಪಾಯಿ ನೀಡೋದಿಲ್ಲ. ಬಹುತೇಕ ಕಸ್ಟಮರ್ಸ್ 100 ಇಲ್ಲ ಅದಕ್ಕಿಂತ ಹೆಚ್ಚಿನ ಹಣವನ್ನೇ ಟಿಪ್ಸ್ ನೀಡ್ತಾರೆ. ನೂರು ರೂಪಾಯಿ ಅಂತೆ ದಿನಕ್ಕೆ ನೂರು ಜನ ಟಿಪ್ಸ್ ನೀಡಿದ್ರೂ ಕೆಫೆ ಒಂದು ದಿನಕ್ಕೆ 10 ಸಾವಿರ ಗಳಿಸುತ್ತೆ. ಇದೇ ಲೆಕ್ಕಾಚಾರದಲ್ಲಿ ಹೋದ್ರೆ ತಿಂಗಳಿಗೆ ಕೆಫೆ ಆದಾಯ ಬರೀ ಡಾನ್ಸ್ – ಟಿಪ್ಸ್ ನಿಂದ 3 ಲಕ್ಷ.
ಪುಕ್ಕಟ್ಟೆ ಪ್ರಚಾರ
ಇಷ್ಟು ಮಾತ್ರ ಅಲ್ಲ, ಈ ಕೆಫೆಗೆ ಪುಕ್ಕಟ್ಟೆ ಪ್ರಚಾರ ಸಿಗ್ತಿದೆ ಅನ್ನೋದು ಪ್ರಥಮ್ ಮಾತು. ಟೇಬಲ್ ಮುಂದೆ ಬಂದು ಡಾನ್ಸ್ ಮಾಡುವವರ ವಿಡಿಯೋ ಮಾಡುವ ಕಸ್ಟಮರ್ಸ್ ಅದನ್ನು ಖುಷಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಜೊತೆಗೆ ಕೆಫೆ ಹೆಸರನ್ನು ಟ್ಯಾಗ್ ಮಾಡ್ತಾರೆ. ಇದ್ರಿಂದ ಯಾವುದೇ ಖರ್ಚು ಮಾಡ್ದೆ ಕೆಫೆ ಸೋಶಿಯಲ್ ಮೀಡಿಯಾ ಮೂಲಕವೇ ಪ್ರಸಿದ್ಧಿ, ದುಡ್ಡು ಎರಡನ್ನೂ ಮಾಡ್ತಿದೆ.
ಯಾವ್ದು ಕೆಫೆ ?
ಪ್ರಥಮ್ , ತಾವು ಹೋಗಿದ್ದ ಕೆಫೆ ಯಾವ್ದು ಅಂತ ಸೋಶಿಯಲ್ ಮೀಡಿಯಾದಲ್ಲಿ ಹೇಳಿಲ್ಲ. ಆದ್ರೆ ಹೆಣ್ಣೂರು ಮುಖ್ಯ ರಸ್ತೆಯಲ್ಲಿರುವ ಕೆಫೆ ನುವಿಯೊ ಬಗ್ಗೆ ಅವರು ಹೇಳ್ತಿದ್ದಾರೆ ಅನ್ನೋದು ಬೆಂಗಳೂರಿಗರ ಅಭಿಪ್ರಾಯ. ಕೆಲ ವರ್ಷಗಳಿಂದ ಈ ಕೆಫೆಯಲ್ಲಿ ಡಾನ್ಸ್ ಪ್ಲಸ್ ಟಿಪ್ಸ್ ಪ್ರಸಿದ್ಧಿ ಪಡೆದಿದೆ.


