Asianet Suvarna News Asianet Suvarna News

ಸರ್ಕಾರಿ ನೌಕರರಿಗೆ ಶುಭ ಸುದ್ದಿ; ಹೊಸ ಮನೆ ಖರೀದಿಗೆ ಕಡಿಮೆ ಬಡ್ಡಿಯಲ್ಲಿ 25ಲಕ್ಷ ರೂ. ಸಾಲ!

ಸ್ವಂತ ಸೂರು ಹೊಂದುವ ಕನಸು ಕಾಣುತ್ತಿರುವ ಕೇಂದ್ರ ಸರ್ಕಾರಿ ನೌಕರರು ಶೇ.7.1 ಬಡ್ಡಿದರದಲ್ಲಿ ಮನೆ ನಿರ್ಮಾಣ ಮುಂಗಡದ (ಎಚ್ ಬಿಎ) ಪ್ರಯೋಜನ ಪಡೆಯಬಹುದು. ಈ ಸೌಲಭ್ಯ 2023ರ ಮಾರ್ಚ್ 31ರ ತನಕ ಇರಲಿದೆ.
 

7th Pay Commission Avail up to Rs 25 lakh at around 7percent interest for buying new home details here
Author
First Published Nov 21, 2022, 4:50 PM IST

ನವದೆಹಲಿ (ನ.21): ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ. ಅವರೀಗ ಕಡಿಮೆ ಬಡ್ಡಿ ಮನೆ ನಿರ್ಮಾಣ ಮುಂಗಡದ (ಎಚ್ ಬಿಎ) ಪ್ರಯೋಜನ ಪಡೆಯಬಹುದು. ಈ ಸೌಲಭ್ಯ 2023ರ ಮಾರ್ಚ್ 31ರ ತನಕ ಇರಲಿದೆ. ಎಚ್ ಬಿಎ ಪ್ರಸ್ತುತ ಬಡ್ಡಿದರ ಶೇ.7.1 ಆಗಿದೆ. ಕಚೇರಿ ಜ್ಞಾಪನಾ ಪತ್ರದ ಮೂಲಕ ಎಚ್ ಬಿಎ ಬಡ್ಡಿದರವನ್ನು ಶೇ.7.1ಕ್ಕೆ ತಗ್ಗಿಸಿರುವ ಮಾಹಿತಿಯನ್ನು ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯ 2022ರ ಏಪ್ರಿಲ್ 1ರಂದು ತಿಳಿಸಿತ್ತು. 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಕೇಂದ್ರ ಸರ್ಕಾರಿ ನೌಕರರಿಗೆ ಎಚ್ ಬಿಎ ನೀಡಲಾಗುತ್ತಿದೆ. ಎಚ್ ಬಿಎ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ವಿವಿಧ ಉದ್ದೇಶಗಳಿಗೆ ಬಡ್ಡಿಸಹಿತ ಮುಂಗಡಗಳನ್ನು ಪಡೆಯಬಹುದು. ಮನೆಯ ವಿಸ್ತರಣೆ, ಹೊಸ ಮನೆ ನಿರ್ಮಾಣ, ಮನೆ ನಿರ್ಮಾಣಕ್ಕೆ ನಿವೇಶನ ಖರೀದಿ, ಈಗಾಗಲೇ ನಿರ್ಮಿಸಿರುವ ಮೆ ಅಥವಾ ಫ್ಲ್ಯಾಟ್ ಖರೀದಿ ಇತ್ಯಾದಿಗಳಿಗೆ ಬಡ್ಡಿಸಹಿತ ಮುಂಗಡ ಪಡೆಯಬಹುದು.ಈ ಸೌಲಭ್ಯದಡಿಯಲ್ಲಿ ಉದ್ಯೋಗಿಗಳು 34 ತಿಂಗಳ ಮೂಲ ವೇತನ ಅಥವಾ ಒಟ್ಟು ವಿಸ್ತರಣೆ ವೆಚ್ಚವಾಗಿ 10ಲಕ್ಷ ರೂ. ತನಕ ಪಡೆಯಬಹುದು. ಒಂದು ವೇಳೆ ಮನೆ ಅಥವಾ ಫ್ಲ್ಯಾಟ್ 25ಲಕ್ಷ ರೂ.ಗಿಂತ ಕಡಿಮೆ ಮೊತ್ತದಾಗಿದ್ರೆ, ಆಗ ಉದ್ಯೋಗಿಗಳು ಕನಿಷ್ಠ ಮೊತ್ತವನ್ನು ಎಚ್ ಬಿಎ ಆಗಿ ಪಡೆಯಲು ಅರ್ಹತೆ ಹೊಂದಿದ್ದಾರೆ. ಸಾಲ ಅಥವಾ ಸರ್ಕಾರ, ಹುಡ್ಕೋ ಅಥವಾ ಖಾಸಗಿ ಮೂಲಗಳಿಂದ ಪಡೆದ ಮುಂಗಡದ ಮರುಪಾವತಿಗೆ ಎಚ್ ಬಿಎ ಬಳಸಬಹುದು. 

ಎಚ್ ಬಿಎ ಪಡೆಯಲು ಕೆಲವೊಂದು ನಿಯಮಗಳಿವೆ ಕೂಡ. ಜಮೀನು ಅಥವಾ ಮನೆ ನಿರ್ಮಾಣದ ವೆಚ್ಚ, ಗ್ರಾಮೀಣ ಪ್ರದೇಶದಲ್ಲಿ ಮನೆ ವಿಸ್ತರಣೆ ಒಟ್ಟು ವೆಚ್ಚದ ಶೇ.80ರಷ್ಟನ್ನು ಮಾತ್ರ ಮುಂಗಡವಾಗಿ ನೀಡಲಾಗುತ್ತದೆ. ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಎಚ್ ಬಿಎಗೆ ಅರ್ಹತೆ ಪಡೆಯಲು ಕೇಂದ್ರ ಸರ್ಕಾರಿ ನೌಕರರು ನಿರಂತರ ಸೇವೆ ಸಲ್ಲಿಸಬೇಕಾದ ಅವಧಿಯನ್ನು 10 ವರ್ಷಗಳಿಂದ ಐದು ವರ್ಷಗಳಿಗೆ ಇಳಿಕೆ ಮಾಡಲಾಗಿದೆ. 
ಇನ್ನು ಈಗಾಗಲೇ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಈಗಾಗಲೇ ಗೃಹ ಸಾಲ ಪಡೆವರು ಕೂಡ ಈ ಯೋಜನೆಯ ಪಡೆಯಬಹುದು ಎಂದು ಏಳನೇ ವೇತನ ಆಯೋಗ ತಿಳಿಸಿದೆ. ಒಂದು ವೇಳೆ ಪತಿ ಹಾಗೂ ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ ಎಚ್ ಬಿಎ ಅವರಿಬ್ಬರಿಗೂ ಪ್ರತ್ಯೇಕವಾಗಿ ಅನ್ವಯಿಸಲಿದೆ. 

ಈ ಪಿಂಚಣಿದಾರರು ನವೆಂಬರ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿಲ್ಲ!

ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಅನ್ವಯ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮೂಲವೇತನದ 34 ಪಟ್ಟು ಅಥವಾ 25ಲಕ್ಷ ರೂ. ಅಥವಾ ಮನೆಯ ಅಂದಾಜು ಮೌಲ್ಯ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತದ ಎಚ್ ಬಿಎ ಪಡೆಯಲು ಅರ್ಹತೆ ಹೊಂದಿರುತ್ತಾರೆ. 

ಇ ಕಾಮರ್ಸ್‌ ತಾಣದಲ್ಲಿ ನಕಲಿ ರಿವ್ಯೂಗೆ ಕಡಿವಾಣಕ್ಕೆ ಕಾನೂನು

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ ಈ ವರ್ಷ ಇಲ್ಲಿಯ ತನಕ ಒಟ್ಟು ನಾಲ್ಕು ಬಾರಿ ರೆಪೋ ದರ ಏರಿಕೆ ಮಾಡಿದೆ. ಈ ವರ್ಷ ಮೇನಿಂದ ಇಲ್ಲಿಯ ತನಕ ಸತತ ನಾಲ್ಕು ಬಾರಿ ಒಂದರ ಹಿಂದೆ ಒಂದರಂತೆ ಆರ್ ಬಿಐ  ರೆಪೋ ದರವನ್ನು ಒಟ್ಟು 190 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಹೀಗಾಗಿ ಬ್ಯಾಂಕ್ ಗಳು ಕೂಡ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಬಡ್ಡಿದರ ಭಾರೀ ಏರಿಕೆ ದಾಖಲಿಸಿದೆ. ಹೀಗಾಗಿ ಗೃಹಸಾಲ ಪಡೆದವರ ಮೇಲಿನ ಬಡ್ಡಿ ಹೊರೆ ಹೆಚ್ಚಿದೆ.  ಬ್ಯಾಂಕುಗಳಿಗೆ ಹೋಲಿಸಿದ್ರೆ  ಎಚ್ ಬಿಎ ಬಡ್ಡಿದರ ಕಡಿಮೆ ಇದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಬಹುದು. 


 

Follow Us:
Download App:
  • android
  • ios