ದೇಶದ 6000 ಮಂದಿ ಬಳಿ 215 ಕೋಟಿ ರೂ. ಗಿಂತ ಅಧಿಕ ಆಸ್ತಿ!

ದೇಶದ 6000 ಮಂದಿ ಬಳಿ .215 ಕೋಟಿಗಿಂತ ಅಧಿಕ ಆಸ್ತಿ| ಕುಬೇರರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂ.12

6000 Indians have ultra high net worth of over Rs 215 crore each

ಮುಂಬೈ[ಮಾ.07]: 215 ಕೋಟಿ ರು. (30 ದಶಲಕ್ಷ ಡಾಲರ್‌)ಗಿಂತ ಅಧಿಕ ಆಸ್ತಿ ಹೊಂದಿರುವ 5,986 ಕುಬೇರರು ಭಾರತದಲ್ಲಿ ಇದ್ದಾರೆ. ಆ ಮೂಲಕ ಈ ವರ್ಗದ ಅತೀ ಹೆಚ್ಚು ಶ್ರೀಮಂತರು ಇರುವ ದೇಶಗಳ ಪೈಕಿ ಭಾರತ 12ನೇ ಸ್ಥಾನದಲ್ಲಿದೆ. ಅಲ್ಲದೇ ಮುಂದಿನ 5 ವರ್ಷದಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ವರದಿಯೊಂದು ಹೇಳಿದೆ.

2.4 ಲಕ್ಷ ಕುಬೇರರನ್ನು ಹೊಂದಿರುವ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದು, 61,587 ಸಿರಿವಂತರು ಇರುವ ಚೀನಾ ಹಾಗೂ 23,078 ಶ್ರೀಮಂತರು ಇರುವ ಜರ್ಮನಿ ಅನಂತರದ ಸ್ಥಾನದಲ್ಲಿದೆ. 2019ರಲ್ಲಿ ಜಾಗತಿಕವಾಗಿ 31,000 ಹೊಸ ಅತೀ ಕುಬೇರರು ಸೃಷ್ಟಿಯಾಗಿದ್ದು, ಒಟ್ಟಾರೆ ಸಂಖ್ಯೆ 5,13,200ಕ್ಕೆ ಏರಿದೆ ಎಂದು ನೈಟ್‌ ಫ್ರಾಂಕ್‌ ವೆಲ್ತ್‌ ರಿಪೋರ್ಟ್‌ ತಿಳಿಸಿದೆ.

ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿನ ಕುಬೇರರ ಸಂಖ್ಯೆ ಶೇ.73ರಷ್ಟುವೇಗವಾಗಿ ಬೆಳೆಯಲಿದ್ದು, ಒಟ್ಟು ಸಂಖ್ಯೆ 10,354ಕ್ಕೆ ಏರಿಕೆಯಾಗಲಿದೆ ಎಂದು ವರದಿ ಅಂದಾಜಿಸಿದೆ. ಅಲ್ಲದೇ ಶೇ.44ರಷ್ಟುಪ್ರಗತಿ ಕಾಣುವ ಮೂಲಕ 2024ರ ವೇಳೆಗೆ ಏಷ್ಯಾ ಎರಡನೇ ಅತೀ ಹೆಚ್ಚು ಕುಬೇರರ ಸಂಖ್ಯೆ ಹೊಂದಿರುವ ಆಸ್ತಿ ಹಬ್‌ ಆಗಲಿದೆ. ಇಷ್ಟುವೇಗದ ಪ್ರಗತಿ ದಾಖಲಿಸಿದರೂ, ಉತ್ತರ ಅಮೆರಿಕದ ಒಟ್ಟು ಕುಬೇರರ ಸಂಖ್ಯೆಗಿಂತ ಶೇ.50ರಷ್ಟುಕಡಿಮೆ ಇರಲಿದೆ. ಇದೇ ಅವಧಿಯಲ್ಲಿ ಉತ್ತರ ಅಮೆರಿಕದ ಕುಬೇರರ ಸಂಖ್ಯೆಯಲ್ಲಿ ಶೇ.22 ರಷ್ಟುಪ್ರಗತಿ ಉಂಟಾಗಲಿದೆ ಎನ್ನುವುದು ವರದಿಯ ಅಂಬೋಣ.

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios