ಬೆಂಗಳೂರು (ಡಿ. 19): ಸಿಲಿಕಾನ್ ಸಿಟಿ ಐಟಿ, ಬಿಟಿ ಸಿಟಿಯ ಜೊತೆಗೆ ಫ್ಯಾಷನ್ ಟ್ರೆಂಡ್ ಸಿಟಿಯೂ ಹೌದು. ದಿನಕ್ಕೊಂದು ಹೊಸ ಹೊಸ ರೀತಿಯ ಟ್ರೆಂಡ್, ಹೊಸ ಹೊಸ ಫ್ಯಾಷನ್ ಬರುತ್ತಲೇ ಇರುತ್ತದೆ. ಫ್ಯಾಷನ್ ಪ್ರಿಯರಿಗೆ ಹೇಳಿ ಮಾಡಿಸಿದ ನಗರವಿದು. ಫ್ಯಾಷನ್ ಲೋಕದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಅಭಿವೃದ್ಧಿ ಬಗ್ಗೆ ಚರ್ಚಿಸುವಂತಹ 'ಇಂಡಿಯಾ ಫ್ಯಾಷನ್ ಫೋರಮ್ 2019' ಡಿಸಂಬರ್ 18, 19 ರಂದು ನಡೆದಿದೆ. 

ಫ್ಯಾಷನ್ ಲೋಕದಲ್ಲಿ ಮುಂಚೂಣಿಯಲ್ಲಿರುವ ಜವಳಿ ಉದ್ಯಮಿಗಳು ಬೆಂಗಳೂರಿನಲ್ಲಿ 2 ದಿನಗಳ ಕಾಲ ಫ್ಯಾಷನ್ ಫೋರಮ್ ನಡೆಸಿದ್ದಾರೆ. ಲೇಟೆಸ್ಟ್ ಟ್ರೆಂಡ್, ಉಡುಪುಗಳ ಕುರಿತಾದ ಹೊಸ ಅನ್ವೇಷಣೆ, ಸುಸ್ಥಿರ ಉತ್ಪಾದನೆ, ಮಹಿಳೆಯರ ಉಡುಪುಗಳು, ಎಥ್ನಿಕ್ ವೇರ್‌ಗಳು, ಈ ಕುರಿತ ಆ್ಯಪ್‌ಗಳ ಬಗ್ಗೆ ಚರ್ಚೆಯಾಗಿದೆ. 

'ಫ್ಯಾಷನ್ ಲೋಕ ಬದಲಾಗಿದೆ. ಗ್ರಾಹಕರ ಅಭಿರುಚಿ ಬದಲಾಗಿದೆ. ಆನ್ ಲೈನ್ ಶಾಪಿಂಗ್ ಟ್ರೆಂಡ್ ಹೆಚ್ಚಾಗ್ತಾ ಇದೆ. ಜನರು ಬೆಲೆಯ ಬಗ್ಗೆ ಜನರು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ಪ್ಯಾಟರ್ನ್, ಸ್ಟೈಲ್ ನೋಡಿ ತೆಗೆದುಕೊಳ್ಳುತ್ತಾರೆ. ನಾವು ಕೊಡುವ ಪ್ರಾಡಕ್ಟ್ ಇಷ್ಟವಾದರೆ ಬೆಲೆ ಜಾಸ್ತಿಯಾದರೂ ತೆಗೆದುಕೊಳ್ಳುತ್ತಾರೆ. ಜನರ ಆದಾಯವೂ ಹೆಚ್ಚಾಗಿರುವುದು ಇದಕ್ಕೆ ಕಾರಣ' ಎಂದು ಮಿಂತ್ರಾ ಮುಖ್ಯಸ್ಥ ಅಮರ್ ನಾಗಾರಾಮ್ ಹೇಳಿದ್ದಾರೆ. 

ಸಿಲಿಕಾನ್‌ ಸಿಟಿಯಲ್ಲಿ ಇಂಡಿಯನ್ ಫ್ಯಾಷನ್‌ ಫೋರಮ್‌

ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಶಾಪಿಂಗ್ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾ ಅಭಿಪ್ರಾಯಗಳು,  ಈಗಾಗಲೇ ಖರೀದಿಸುವವರ ಅಭಿಪ್ರಾಯಗಳು ನಮ್ಮ ಪ್ರಾಡಕ್ಟ್ ಸೇಲ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಬಗ್ಗೆ ನಾವು ಹೆಚ್ಚು ಗಮನ ವಹಿಸುತ್ತೇವೆ' ಎಂದರು. 

ಪ್ರಸ್ತುತ ಮಾರುಕಟ್ಟೆಯಲ್ಲಿ ಮೆನ್ಸ್‌ವೇರ್ ಶೇ. 42 ರಷ್ಟು ಶೇರ್ ಹೊಂದಿದೆ. ಮಹಿಳಾ ಉಡುಪುಗಳು ಶೇ. 37 ರಷ್ಟು ಶೇರು ಹೊಂದಿದೆ. ಅದೇ ರೀತಿ ಮಕ್ಕಳ ಉಡುಪುಗಳು ಶೇ. 21 ರಷ್ಟು ಶೇರ್ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.