* ಮಾರ್ಚ್31, 2020ಕ್ಕೆ ಅನ್ವಯವಾಗುವಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನಷ್ಟದ ವಿವರ ನೀಡಿದ CAG * 90 ಕಂಪೆನಿಗಳ ನಿವ್ವಳ ಸಂಪತ್ತು ಸಂಪೂರ್ಣ ನಷ್ಟ*2019-20ನೇ ಸಾಲಿನಲ್ಲಿ 13 ಕಂಪೆನಿಗಳಷ್ಟೇ 1,713 ಕೋಟಿ ರೂ. ಲಾಭ ಗಳಿಸಿವೆ

ನವದೆಹಲಿ (ಡಿ.22): ಸುಮಾರು 188 ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಹಾಗೂ ನಿಗಮಗಳು ಮಾರ್ಚ್31, 2020ಕ್ಕೆ ಅನ್ವಯವಾಗುವಂತೆ ಒಟ್ಟು 1.75 ಲಕ್ಷ ಕೋಟಿ ರೂ. ಸಂಚಿತ ನಷ್ಟ (accumulated losses) ಅನುಭವಿಸಿವೆ ಎಂದು ಕೇಂದ್ರ ಸರ್ಕಾರದ ಲೆಕ್ಕಪರಿಶೋಧಕರ (central government auditor) ವರದಿ ತಿಳಿಸಿದೆ. ಇವುಗಳಲ್ಲಿ 90 ಕಂಪನಿಗಳ ನಿವ್ವಳ ಸಂಪತ್ತು ಸಂಪೂರ್ಣವಾಗಿ ನಾಶವಾಗಿದೆ ಎಂದು ಸಿಎಜಿ (CAG) ತಿಳಿಸಿದ್ದಾರೆ. ಅಲ್ಲದೆ, ಈ ಕಂಪೆನಿಗಳ ಒಟ್ಟು ನಿವ್ವಳ ಸಂಪತ್ತು -1.16 ಲಕ್ಷ ಕೋಟಿ ರೂ. ಆಗಿದೆ. ಈ 90 ಕಂಪೆನಿಗಳಲ್ಲಿ ಕೇವಲ 13 ಕಂಪೆನಿಗಳಷ್ಟೇ 2019-20ನೇ ಸಾಲಿನಲ್ಲಿ 1,713 ಕೋಟಿ ರೂ. ಲಾಭ ಗಳಿಸಿವೆ. 

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ (Indian Oil Corporation) ಪ್ರಗತಿಯನ್ನು 'ಯುಕ್ತವಲ್ಲ ಅಭಿವೃದ್ಧಿ' (undue enrichment)ಎಂದು ಲೆಕ್ಕಪರಿಶೋಧಕರು ವ್ಯಾಖ್ಯಾನಿಸಿದ್ದಾರೆ. ಇದಕ್ಕೆ ವಿವರಣೆ ನೀಡಿರೋ ಅವರು ' IOC ಕಾನೂನು ಉಲ್ಲಂಘಿಸಿ ಗ್ರಾಹಕರಿಂದ 262.6 ಕೋಟಿ ರೂ. ವ್ಯವಹಾರಿಕ ತೆರಿಗೆ ಸಂಗ್ರಹಿಸಿತ್ತು. ಆದ್ರೆ ಇದು ರಾಜ್ಯ ಸರ್ಕಾರದೊಂದಿಗಿನ ಕಾನೂನು ಪ್ರಕರಣವೊಂದನ್ನು 262.6 ಕೋಟಿ ರೂ. ಬದಲು 65.6 ಕೋಟಿ ರೂ. ದಂಡ ಪಾವತಿಸೋ ಮೂಲಕ ಪರಿಹರಿಸಿಕೊಂಡಿದೆ. ಇದ್ರಿಂದ 197 ಕೋಟಿ ರೂ. ಲಾಭ ಗಳಿಸಿದೆ ಎಂದು ಲೆಕ್ಕಪರಿಶೋಧಕರು ತಿಳಿಸಿದ್ದಾರೆ.

Import Duty On Palm Oil:ತಗ್ಗಲಿದೆ ಅಡುಗೆ ಎಣ್ಣೆ ಬೆಲೆ; ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ

ಸರ್ಕಾರಿ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ನಿಗಮದ (ONGC)ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಲೆಕ್ಕಪರಿಶೋಧಕರು ಅತ್ಯಧಿಕ ಒತ್ತಡದ ಅನಿಲ ಜ್ವಾಲೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. 2012-13 -2019-20 ತನಕದ ಆರ್ಥಿಕ ವರ್ಷಗಳಲ್ಲಿ 1,021 ಕೋಟಿ ರೂ. ಮೌಲ್ಯದ ಅಧಿಕ ಒತ್ತಡದ ಅನಿಲ ಬೆಂಕಿಗಾಹುತಿಯಾಗಿದೆ ಎಂದು ಲೆಕ್ಕಪರಿಶೋಧಕರ ವರದಿ ತಿಳಿಸಿದೆ. ಮುಂಬೈನ ಹೈ ಫೀಲ್ಡ್ ನಲ್ಲಿ ವಿದ್ಯುತ್ ಸ್ಥಗಿತ, ಗ್ಯಾಸ್ ಕಂಪ್ರೆಸರ್ ಅಲಭ್ಯತೆ ಮುಂತಾದ ಕಾರಣಗಳಿಂದ ಅಧಿಕ ಒತ್ತಡದ ಅನಿಲ ಬೆಂಕಿಗಾಹುತಿಯಾಗಿದ್ದು, ಅದರ ಒಟ್ಟು ಮೌಲ್ಯ 816 ಕೋಟಿ ರೂ. ಆಗಿದೆ ಎಂದು ಲೆಕ್ಕಪರಿಶೋಧಕರು ತಿಳಿಸಿದ್ದಾರೆ.

ಇನ್ನುಏರ್ ಇಂಡಿಯಾ(Air India) ಕೂಡ ಅನಗತ್ಯವಾಗಿ 43.8 ಕೋಟಿ ರೂ. ದಂಡ ಕಟ್ಟುವಂತಹ ಪರಿಸ್ಥಿತಿಯನ್ನು ಸೃಷ್ಟಿಕೊಂಡ ಬಗ್ಗೆ ಸಿಎಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಏರ್‌ ಇಂಡಿಯಾವನ್ನು (Air India) ಟಾಟಾ ಸಮೂಹಕ್ಕೆ ಮಾರಾಟ ಮಾಡಿದೆ. ಏರ್‌ ಇಂಡಿಯಾ (Air India) ಮಾರಾಟ ಪ್ರಕ್ರಿಯೆ ಸಂಬಂಧ ಟಾಟಾ ಸಮೂಹದ (Tata Group)ಜೊತೆಗೆ ಕೇಂದ್ರ ಸರ್ಕಾರ ಅಕ್ಟೋಬರ್ 25ರಂದು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅನ್ವಯ ಏರ್‌ ಇಂಡಿಯಾದ ಶೇ.100ರಷ್ಟು ಪಾಲು ಟಾಟಾ ಸಮೂಹಕ್ಕೆ ಹೋಗಲಿದೆ. ಅದಕ್ಕೆ ಬದಲಿಯಾಗಿ ಟಾಟಾ ಸಮೂಹ ಏರ್‌ ಇಂಡಿಯಾದ 15,300 ಕೋಟಿ ರೂ. ಸಾಲ ತೀರಿಸಲಿದೆ ಮತ್ತು ಸರ್ಕಾರಕ್ಕೆ 2700 ಕೋಟಿ ರೂ. ನಗದು ಹಣ ಪಾವತಿ ಮಾಡಲಿದೆ. ಅ.11ರಂದು ಏರ್‌ ಇಂಡಿಯಾದ ಶೇ.100ರಷ್ಟು ಷೇರುಗಳನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡುವುದಾಗಿ ಸರ್ಕಾರ ಹೇಳಿತ್ತು. 

Tokenization:ಗಡುವು ವಿಸ್ತರಣೆ ಕೋರಿ RBIಗೆ ಆನ್ಲೈನ್ ವರ್ತಕರ ಮನವಿ

ಸಾಲದ ಸುಳಿಯಲ್ಲಿ ಒದ್ದಾಡುತ್ತಿದ್ದ ಏರ್ ಇಂಡಿಯಾ ಸಂಸ್ಥೆಯ ನಿರ್ವಹಣೆ ಸರ್ಕಾರಕ್ಕೆ ತೀವ್ರ ತಲೆನೋವಾಗಿತ್ತು. ಪ್ರತಿ ವರ್ಷ ಸಾಲದ ಹೊರೆ ಹೆಚ್ಚಾಗುತ್ತಲೇ ಹೋಗಿತ್ತು. ಸದ್ಯ ಏರ್ ಇಂಡಿಯಾ ಮೇಲೆ ಬರೋಬ್ಬರಿ 61,562 ಸಾವಿರ ಕೋಟಿ ರೂಪಾಯಿ ಸಾಲ ಇದೆ. 2018ರಿಂದ ಏರ್ ಇಂಡಿಯಾ ಮಾರಾಟಕ್ಕೆ ಕೇಂದ್ರ ಸರ್ಕಾರ ತಯಾರಿ ಮಾಡಿತ್ತು. ಆದರೆ ಭಾರಿ ವಿರೋಧದಿಂದ ಪ್ರಸ್ತಾವನೆಯನ್ನು ಕೈಬಿಟ್ಟಿತು.