ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್‌ಗೆ ರಜೆ, ಬೇಗ ಬೇಗ ನಿಮ್ಮ ಹಣಕಾಸಿನ ಕೆಲಸ ಮುಗಿಸಿಕೊಳ್ಳಿ!
ಸೆಪ್ಟೆಂಬರ್ ತಿಂಗಳು ಹಲವಾರು ಹಬ್ಬಗಳನ್ನು ತರುತ್ತದೆ, ಆದರೆ ಬ್ಯಾಂಕ್ ರಜಾದಿನಗಳ ಬಗ್ಗೆಯೂ ಗಮನವಿರಲಿ. ಈ ಬಾರಿ ಬರೋಬ್ಬರಿ 15 ದಿನ ಬ್ಯಾಂಕ್‌ಗಳು ಬಂದ್ ಆಗಲಿವೆ. ಹಣಕಾಸಿನ ವ್ಯವಹಾರಗಳಿಗೆ ಮೊದಲೇ ಯೋಜನೆ ರೂಪಿಸಿ.
ಬೆಂಗಳೂರು: ಸೆಪ್ಟೆಂಬರ್ ತಿಂಗಳ ತನ್ನ ಜೊತೆ ಹಲವು ರಜೆಗಳ ಜೊತೆಯಲ್ಲಿ ಹಬ್ಬಗಳನ್ನು ಹೊತ್ತು ತರುತ್ತಿದೆ. ಈ ಬಾರಿ ಸಾಲು ಸಾಲು ಹಬ್ಬಗಳಿರೋ ಕಾರಣ ಬ್ಯಾಂಕ್‌ಗಳಿಗೂ ರಜೆ ಇರಲಿದೆ. ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ ಇರಲಿದೆ. ನಿಮ್ಮದೇನಾದರೂ ಹಣಕಾಸಿನ ಕೆಲಸಗಳಿದ್ರೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಉತ್ತಮ. ಕೆಲ ವ್ಯಾಪರಸ್ಥರು ಪ್ರತಿದಿನ ಬ್ಯಾಂಕ್‌ಗೆ ಹೋಗಿ ಹಣಕಾಸಿನ ವ್ಯವಹಾರ ನಡೆಸುತ್ತಿರುತ್ತಾರೆ. ಆದ್ದರಿಂದ ಸೆಪ್ಟೆಂಬರ್ ತಿಂಗಳಲ್ಲಿ ಯಾವೆಲ್ಲಾ ದಿನ ಬ್ಯಾಂಕ್ ಬಂದ್ ಇರುತ್ತೆ ಎಂಬುದರ ಮಾಹಿತಿ ಇಲ್ಲಿದೆ.
ನಮ್ಮ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಸಾರ್ವಜನಿಕ ರಜಾದಿನಗಳಲ್ಲಿ ಮುಚ್ಚಿರುತ್ತವೆ. ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (15 ಆಗಸ್ಟ್) ಮತ್ತು ಗಾಂಧಿ ಜಯಂತಿ (2 ಅಕ್ಟೋಬರ್) ರಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದಲ್ಲದೇ ಹೋಳಿ, ದೀಪಾವಳಿ, ಕ್ರಿಸ್‌ಮಸ್, ಈದ್, ನಾನಕ್ ಜಯಂತಿ, ಗುಡ್ ಫ್ರೈಡೇ ಸೇರಿದಂತೆ ಬಹುತೇಕ ಹಬ್ಬಗಳ ದಿನದಂದು ಮುಚ್ಚಿರುತ್ತವೆ. ಹಾಗಂತ ಎಲ್ಲಾ ಹಬ್ಬಕ್ಕೂ ರಜೆ ಇರಲ್ಲ. ಹಬ್ಬದ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತವೆ. ಇದೆಲ್ಲದರ ಜೊತೆಯಲ್ಲಿ ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸಹ ಬ್ಯಾಂಕ್‌ಗಳು ಮುಚ್ಚಿರುತ್ತವೆ.
397 ರೂಗೆ 5 ತಿಂಗಳ ಆಫರ್: ಜಿಯೋ, ಏರ್‌ಟೆಲ್, ವಿಐಗೆ ಠಕ್ಕರ್ ಕೊಟ್ಟ ಬಿಎಸ್‌ಎನ್ಎಲ್!
ಸೆಪ್ಟೆಂಬರ್ ಬ್ಯಾಂಕ್ ರಜೆಗಳು
ಸೆಪ್ಟೆಂಬರ್ 1, 2024 - ಭಾನುವಾರ
ಸೆಪ್ಟೆಂಬರ್ 4, 2024 - ಶ್ರೀಮಂತ ಶಂಕರದೇವ್ ತಿರೋಭವ ತಿಥಿ (ಗುವಾಹಟಿ)
ಸೆಪ್ಟೆಂಬರ್ 7, 2024 - ಗಣೇಶ ಚತುರ್ಥಿ
ಸೆಪ್ಟೆಂಬರ್ 8, 2024 - ಭಾನುವಾರ
ಸೆಪ್ಟೆಂಬರ್ 14, 2024 - ಎರಡನೇ ಶನಿವಾರ
ಸೆಪ್ಟೆಂಬರ್ 15, 2024 - ಭಾನುವಾರ
ಸೆಪ್ಟೆಂಬರ್ 16, 2024 - ಬರವಾಫತ್
ಸೆಪ್ಟೆಂಬರ್ 17, 2024 - ಮಿಲಾದ್-ಉನ್-ನಬಿ(ಗ್ಯಾಂಗ್ಟಾಕ್)
ಸೆಪ್ಟೆಂಬರ್ 18, 2024 - ಪಾಂಗ್-ಲಹಬ್ಸೋಲ್ (ಗ್ಯಾಂಗ್ಟಾಕ್)
ಸೆಪ್ಟೆಂಬರ್ 20, 2024 - ಈದ್-ಎ-ಮಿಲಾದ್-ಉಲ್-ನಬಿ (ಜೆಕೆ)
ಸೆಪ್ಟೆಂಬರ್ 21, 2024 - ಶ್ರೀ ನಾರಾಯಣ ಗುರು ಸಮಾಧಿ ದಿನ
ಸೆಪ್ಟೆಂಬರ್ 22, 2024 - ಭಾನುವಾರ
ಸೆಪ್ಟೆಂಬರ್ 23, 2024 - ಮಹಾರಾಜ ಹರಿ ಸಿಂಗ್ (JK) ಜನ್ಮ ವಾರ್ಷಿಕೋತ್ಸವ
ಸೆಪ್ಟೆಂಬರ್ 28, 2024 - ನಾಲ್ಕನೇ ಶನಿವಾರ
ಸೆಪ್ಟೆಂಬರ್ 29, 2024 - ಭಾನುವಾರ
ಸೆಪ್ಟೆಂಬರ್ ತಿಂಗಳಲ್ಲಿ 15 ದಿನ ರಜೆಗಳಿದ್ದರೂ ಗ್ರಾಹಕರು ಆನ್‌ಲೈನ್ ಮೂಲಕ ವ್ಯವಹಾರ ನಡೆಸಬಹುದು. ಹಣ ಬೇಕಿದ್ದರೆ ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳಬಹುದು. ಹಾಗಾಗಿ ಕ್ಯಾಶ್ ಸಮಸ್ಯೆ ಉಂಟಾಗಲ್ಲ. ರಜೆದಿನಗಳಲ್ಲಿಯೂ ಆನ್‌ಲೈನ್ ವ್ಯವಹಾರ ನಡೆಸಬಹುದು. ಎಟಿಎಂಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ; ₹1 ಕೋಟಿ ಗಳಿಸುವುದು ಹೇಗೆ? ಸ್ಮಾರ್ಟ್ ಸಲಹೆಗಳಿವು