ಬ್ಯಾಂಕಿನ ನಿವ್ವಳ ಲಾಭ ಕಳೆದ ವಿತ್ತೀಯ ವರ್ಷದಲ್ಲಿ .507.99 ಕೋಟಿ ಆಗಿತ್ತು. ಪ್ರಸಕ್ತ ವಿತ್ತೀಯ ವರ್ಷದ 4ನೇ ತ್ರೈಮಾಸಿಕದಲ್ಲಿ .353.53 ಕೋಟಿ ನಿವ್ವಳ ಲಾಭವನ್ನು ಗಳಿಸಿದ ಬ್ಯಾಂಕ್‌, ಕಳೆದ ವಿತ್ತೀಯ ವರ್ಷದ 4ನೇ ತ್ರೈಮಾಸಿಕದಲ್ಲಿ .130.20 ಕೋಟಿ ನಿವ್ವಳ ಲಾಭ ಘೋಷಿಸಿತ್ತು. ಇದರಿಂದ ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ದಾಖಲೆಯ ಶೇ.171.53ರ ಬೆಳವಣಿಗೆ ಸಾಧಿಸಿದಂತಾಗಿದೆ.

ಮಂಗಳೂರು(ಮೇ.28): ದೇಶದ ಅಗ್ರಮಾನ್ಯ ಬ್ಯಾಂಕುಗಳಲ್ಲಿ ಒಂದೆಂದು ಪರಿಗಣಿಸಲ್ಪಡುವ ಕರ್ನಾಟಕದ ಹೆಮ್ಮೆಯ ಕರ್ಣಾಟಕ ಬ್ಯಾಂಕ್‌ 2022-23ರ ವಿತ್ತೀಯ ವರ್ಷದಲ್ಲಿ 1,179.68 ಕೋಟಿ ನಿವ್ವಳ ಲಾಭ ಘೋಷಿಸಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಬ್ಯಾಂಕಿನ ಮಂಗಳೂರಿನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ಬ್ಯಾಂಕಿನ 2022-23ರ ಪರಿಶೋಧಿತ ಹಣಕಾಸು ವರದಿ (ಆರ್ಥಿಕ ಫಲಿತಾಂಶ) ಅಂಗೀಕಾರಗೊಂಡು, ಶೇ.50ರ ಡಿವಿಡೆಂಡ್‌ ನೀಡಲು ಶಿಫಾರಸು ಮಾಡಲಾಯಿತು.

ಬ್ಯಾಂಕಿನ ನಿವ್ವಳ ಲಾಭ ಕಳೆದ ವಿತ್ತೀಯ ವರ್ಷದಲ್ಲಿ .507.99 ಕೋಟಿ ಆಗಿತ್ತು. ಪ್ರಸಕ್ತ ವಿತ್ತೀಯ ವರ್ಷದ 4ನೇ ತ್ರೈಮಾಸಿಕದಲ್ಲಿ .353.53 ಕೋಟಿ ನಿವ್ವಳ ಲಾಭವನ್ನು ಗಳಿಸಿದ ಬ್ಯಾಂಕ್‌, ಕಳೆದ ವಿತ್ತೀಯ ವರ್ಷದ 4ನೇ ತ್ರೈಮಾಸಿಕದಲ್ಲಿ .130.20 ಕೋಟಿ ನಿವ್ವಳ ಲಾಭ ಘೋಷಿಸಿತ್ತು. ಇದರಿಂದ ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ ದಾಖಲೆಯ ಶೇ.171.53ರ ಬೆಳವಣಿಗೆ ಸಾಧಿಸಿದಂತಾಗಿದೆ.

ಕರ್ಣಾಟಕ ಬ್ಯಾಂಕ್‌: ಗೃಹ ಸಾಲ ವಿಶೇಷ ಅಭಿಯಾನಕ್ಕೆ ಚಾಲನೆ

ವಿತ್ತೀಯ ವರ್ಷ 2022-23ರಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ(31-03-2023 ಕ್ಕೆ) ಶೇ.7.40 ದರದಲ್ಲಿ ವೃದ್ಧಿಗೊಂಡು .1,47,319.53 ಕೋಟಿ ತಲುಪಿದೆ. ಬ್ಯಾಂಕಿನ ಠೇವಣಿಗಳು ಶೇ.8.68ರ ದರದಲ್ಲಿ ವೃದ್ಧಿಗೊಂಡು .87,367.91 ಕೋಟಿ ಹಾಗೂ ಮುಂಗಡಗಳು ಶೇ.5.58ರ ದರದಲ್ಲಿ ವೃದ್ಧಿಗೊಂಡು .59,951.62 ಕೋಟಿ ತಲುಪಿದೆ.

ಬ್ಯಾಂಕಿನ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯ ಠೇವಣಿಗಳು 31 ಮಾಚ್‌ರ್‍ 2023ರ ಅಂತ್ಯಕ್ಕೆ ಒಟ್ಟು ಠೇವಣಿಗಳ ಶೇ.32.97ರಷ್ಟು ತಲುಪಿದೆ. ಬ್ಯಾಂಕಿನ ಪ್ರಾವಿಶನ್‌ ಕವರೇಜ್‌ ರೇಶಿಯೋ ಶೇ.80.76ಕ್ಕೆ ತಲುಪಿ ಹೊಸ ಏರುಗತಿ ಕಂಡಿದೆ. ಇದು ಹಿಂದಿನ ವರ್ಷ ಅಂದರೆ 31 ಮಾಚ್‌ರ್‍ 2022ಕ್ಕೆ ಶೇ.73.47 ಆಗಿತ್ತು.

31-03-2023ಕ್ಕೆ ಬಂಡವಾಳ ಪರ್ಯಾಪ್ತತಾ ಅನುಪಾತ ಶೇ.17.45ಕ್ಕೆ ತಲುಪಿ ಹೊಸ ದಾಖಲೆ ಸೃಷ್ಟಿಸಿದೆ. ಇದು 31 ಮಾಚ್‌ರ್‍ 2022ರ ಅಂತ್ಯಕ್ಕೆ ಶೇ.15.66ರಷ್ಟಿತ್ತು. ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ತಹಬಂದಿಯಲ್ಲಿದ್ದು, ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು 31 ಮಾಚ್‌ರ್‍ 2023ರ ಅಂತ್ಯಕ್ಕೆ .2,292.91 ಕೋಟಿಗಳಾಗಿದ್ದು, ಶೇ.3.74ರಷ್ಟಿವೆ. ಇದು 31 ಮಾರ್ಚ್‌ 2022ರ ಅಂತ್ಯಕ್ಕೆ .2,250.82 ಕೋಟಿಗಳಾಗಿದ್ದು, ಶೇ.3.90ರಷ್ಟಿದ್ದವು. ಅದರಂತೆಯೇ ಬ್ಯಾಂಕಿನ ನಿವ್ವಳ ಅನುತ್ಪಾದಕ ಸ್ವತ್ತುಗಳು 31 ಮಾಚ್‌ರ್‍ 2023ರ ಅಂತ್ಯಕ್ಕೆ .1,021.27 ಕೋಟಿಗಳಾಗಿದ್ದು, ಶೇ.1.70ರಷ್ಟಿವೆ. ಇದು 31 ಮಾಚ್‌ರ್‍ 2022ರ ಅಂತ್ಯಕ್ಕೆ .1,376.97 ಕೋಟಿಗಳಾಗಿದ್ದು, ಶೇ. 2.42ರಷ್ಟಿತ್ತು. ಆದ್ಯತಾ ರಂಗಕ್ಕೆ ನೀಡಿದ ಮುಂಗಡಗಳು ಬ್ಯಾಂಕಿನ ಒಟ್ಟು ಮುಂಗಡದ ಶೇ.41.47ರಷ್ಟಿದೆ. ಇದು ಆರ್‌ಬಿಐ ನಿರ್ದೇಶಿತ ಗುರಿ ಕನಿಷ್ಠ ಶೇ. 40 ಕ್ಕಿಂತ ಅಧಿಕವಾಗಿಯೇ ಇದೆ.

ಹೊಸ ಮೈಲಿಗಲ್ಲು:

ಬ್ಯಾಂಕಿನ ಆರ್ಥಿಕ ಫಲಿತಾಂಶವನ್ನು ಘೋಷಿಸಿ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಬ್ಯಾಂಕಿನ ಮಧ್ಯಂತರ ಮ್ಯಾನೇಜಿಂಗ್‌ ಡೈರೆಕ್ಟರ್‌ ಹಾಗೂ ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಶೇಖರ್‌ ರಾವ್‌ ಅವರು, ಶತಮಾನದ ಸಂಭ್ರಮಾಚರಣೆಯೊಂದಿಗೆ ಬ್ಯಾಂಕ್‌ ತನ್ನ ಗ್ರಾಹಕರ ಅಚಲವಾದ ನಂಬಿಕೆ ಹಾಗೂ ವಿಶ್ವಾಸದೊಂದಿಗೆ 2023ರ ಆರ್ಥಿಕ ವರ್ಷದ ಸುದೃಢವಾದ ಫಲಿತಾಂಶ ನೀಡಿರುವುದು ಅತ್ಯಂತ ಸಂತಸ ತಂದಿದೆ. ಈ ಫಲಿತಾಂಶದೊಂದಿಗೆ ಬ್ಯಾಂಕು ಹೊಸ ಮೈಲುಗಲ್ಲು ಸೃಷ್ಟಿಸಿದಂತಾಗಿದೆ ಎಂದಿದ್ದಾರೆ.

ಕರ್ನಾಟಕ ಬ್ಯಾಂಕ್‌ನಿಂದ ಕಸ್ಟಮ್ಸ್‌ ತೆರಿಗೆ ಪಾವತಿಗೆ ಅಸ್ತು

ವಿತ್ತೀಯ ವರ್ಷ 2022-23 ರಲ್ಲಿ ನಾವು ಎಲ್ಲ ಪ್ರಮುಖ ಕಾರ್ಯಕ್ಷಮತೆ (ಕ್ರಿಯಾ) ಸೂಚಿಗಳಲ್ಲಿ ಗುರುತರವಾದ ಪ್ರಗತಿ ಸಾಧಿಸಿದ್ದು, ಪ್ರಮುಖವಾಗಿ ಮುಂಗಡ ಸಾಲ ವಿತರಣೆ, ನೆಟ್‌ ಇಂಟರೆಸ್ಟ್‌ ಮಾರ್ಜಿನ್‌ ವಿಸ್ತರಣೆ, ಕಾಸಾದಲ್ಲಿ ನಿರಂತರತೆ ಕಾಪಾಡಿಕೊಂಡದ್ದು ನಮಗೆ ಉತ್ಪಾದಕತೆಯ ಮಾಪನಗಳನ್ನು ಮುನ್ನಡೆಸಲು ಮತ್ತು ಅಭಿವೃದ್ಧಿ ಪಥದಲ್ಲಿ ನಮ್ಮ ದೃಷ್ಟಿಕೋನ ಸಾಕಾರಗೊಳಿಸಲು ಸಹಕಾರಿಯಾಗಿದೆ. ಇದರಿಂದಾಗಿ ರಿಟರ್ನ್‌ ಆನ್‌ ಅಸೆಟ್‌ 2022ರಲ್ಲಿ ಶೇ. 0.56 ಇದ್ದದ್ದು 2023ರಲ್ಲಿ ಶೇ. 1.21ಗೆ ವೃದ್ಧಿಯಾಗಿರುವುದು ಸಂತಸದ ವಿಷಯ ಎಂದರು.

ಬ್ಯಾಂಕ್‌ ಇತ್ತೀಚಿನ ವರ್ಷದಲ್ಲಿ ಕೈಗೊಂಡ ಅನೇಕ ಡಿಜಿಟಲ್‌ ಉಪಕ್ರಮಗಳು ಬ್ಯಾಂಕಿನ ಪ್ರಗತಿಯ ಪಯಣಕ್ಕೆ ಸಹಕಾರಿಯಾಗಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಾಲ, ಹಾಗೂ ಇತರ ಸಾಲಗಳನ್ನು ನೀಡುವಲ್ಲಿ ನಾವು ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು ಉತ್ತಮ ಮುಂಗಡಗಳನ್ನು ನಾವು ಸಾಧಿಸುವಲ್ಲಿ ಅನುಕೂಲವಾಗಿದೆ. ನಾವು ನೀಡುವ ಗೃಹಸಾಲ, ಆಭರಣಗಳ ಮೇಲಿನ ಸಾಲ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೀಡುವ ಸಾಲ ನಮ್ಮ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಯನ್ನು ಅನುಲಕ್ಷಿಸಿದೆ. ಗ್ರಾಹಕರ ಸರ್ವರೀತಿಯ ಬ್ಯಾಂಕಿಂಗ್‌ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ, ಶೇರುದಾರರ ಆಶೋತ್ತರಗಳಿಗೆ ಪೂರಕವಾಗಿ ಬ್ಯಾಂಕ್‌ ಪ್ರಗತಿಯ ಪಯಣ ಮುಂದುವರಿಸಲಿದ್ದು, ಶತಮಾನೋತ್ಸವ ವರ್ಷವನ್ನು ಫಲಪ್ರದವಾಗಿ ಪೂರೈಸಲಿದ್ದೇವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.