Asianet Suvarna News Asianet Suvarna News

Union Budget 2022 : ವಿಶೇಷ ಆರ್ಥಿಕ ವಲಯಗಳ ಕಾಯಿದೆಯ ಬದಲು ಹೊಸ ಕಾಯ್ದೆ

ಸೆಝ್ ಕಾಯ್ದೆಯಲ್ಲಿ ಬದಲಾವಣೆ
ಹೊಸ ಕಾಯ್ದೆಯ ಮೂಲಕ ಸೆಝ್ ಕಾಯ್ದೆಯಲ್ಲಿ ಬದಲಾವಣೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

Union Budget 2022 SEZ Act to be Replaced by New Legislation says FM Nirmala Sitharaman san
Author
Bengaluru, First Published Feb 1, 2022, 4:30 PM IST

ನವದೆಹಲಿ (ಫೆ. 1):"ವಿಶೇಷ ಆರ್ಥಿಕ ವಲಯಗಳ ಕಾಯಿದೆಯನ್ನು (Special Economic Zones Act) ಹೊಸ ಕಾಯ್ದೆಯ ಮೂಲಕ ಬದಲಾಯಿಸಲಾಗುವುದು. ಅದು ರಾಜ್ಯಗಳು ಉದ್ಯಮ ಮತ್ತು ಸೇವಾ ಕೇಂದ್ರಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅನುವು ಮಾಡಿಕೊಡುತ್ತದೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಸಂಸತ್ತಿನಲ್ಲಿ ಮಂಡಿಸಿದ 2022-23ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ(Union Budget 2022) ಹೇಳಿದ್ದಾರೆ. ಲಭ್ಯವಿರುವ ಮೂಲಸೌಕರ್ಯಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಮತ್ತು ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಇದು ಅಸ್ತಿತ್ವದಲ್ಲಿರುವ ಮತ್ತು ಹೊಸ ಎಲ್ಲಾ ದೊಡ್ಡ ಕೈಗಾರಿಕಾ ಎನ್‌ಕ್ಲೇವ್‌ಗಳನ್ನು ಒಳಗೊಳ್ಳುತ್ತದೆ ಎಂದು ಅವರು ಹೇಳಿದರು.

ಈಗ ಅಸ್ತಿತ್ವದಲ್ಲಿರುವ SEZ ಕಾಯ್ದೆಯನ್ನು 2006 ರಲ್ಲಿ ರಫ್ತು ಕೇಂದ್ರಗಳನ್ನು ರಚಿಸುವ ಮತ್ತು ದೇಶದಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಜಾರಿಗೊಳಿಸಲಾಗಿತ್ತು. ಆದರೆ, ಕನಿಷ್ಠ ಪರ್ಯಾಯ ತೆರಿಗೆಯನ್ನು ವಿಧಿಸಿದ ನಂತರ ಮತ್ತು ತೆರಿಗೆ ಪ್ರೋತ್ಸಾಹಕಗಳನ್ನು ತೆಗೆದುಹಾಕಲು ಸನ್‌ ಸೆಟ್ ಷರತ್ತುಗಳನ್ನು ಪರಿಚಯಿಸಿದ ನಂತರ ಈ ವಲಯಗಳು ತಮ್ಮ ಹೊಳಪನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದವು. ಕಸ್ಟಮ್ಸ್ ಗೆ  ಸಂಬಂಧಿಸಿದ ನಿಬಂಧನೆಗಳ ವಿಷಯದಲ್ಲಿ ಈ ವಲಯಗಳನ್ನು ವಿದೇಶಿ ಘಟಕಗಳಾಗಿ ಪರಿಗಣಿಸಲಾಗುತ್ತದೆ.

ಸೆಝ್ ಕಾನೂನಿನ ಅಡಿಯಲ್ಲಿ ಒದಗಿಸಲಾದ ತೆರಿಗೆ ಪ್ರಯೋಜನಗಳನ್ನು ಮುಂದುವರಿಸಲು ಉದ್ಯಮವು ಪದೇ ಪದೇ ಒತ್ತಾಯಿಸುತ್ತಿದೆ. ಸೆಝ್ ಗಳಲ್ಲಿನ ಘಟಕಗಳು ಮೊದಲ ಐದು ವರ್ಷಗಳವರೆಗೆ ರಫ್ತು ಆದಾಯದ ಮೇಲೆ 100 ಪ್ರತಿಶತ ಆದಾಯ ತೆರಿಗೆ ವಿನಾಯಿತಿಯನ್ನು ಅನುಭವಿಸುತ್ತಿದ್ದವು, ಮುಂದಿನ ಐದು ವರ್ಷಗಳವರೆಗೆ 50 ಪ್ರತಿಶತ ಮತ್ತು ಇನ್ನೊಂದು ಐದು ವರ್ಷಗಳವರೆಗೆ  ರಫ್ತು ಲಾಭದ 50 ಪ್ರತಿಶತ ತೆರಿಗೆ ಲಾಭವನ್ನು ಅನುಭವಿಸುತ್ತಿದ್ದವು.
 


ಆದರೆ, 2022-23 ರ ಬಜೆಟ್ ಅನ್ನು ಮಂಡಿಸುತ್ತಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , "ವಿಶೇಷ ಆರ್ಥಿಕ ವಲಯಗಳ ಕಾಯಿದೆಯನ್ನು ಹೊಸ ಕಾನೂನಿನೊಂದಿಗೆ ಬದಲಾಯಿಸಲಾಗುವುದು ಅದು ರಾಜ್ಯಗಳು ಉದ್ಯಮ ಮತ್ತು ಸೇವಾ ಕೇಂದ್ರಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು. ಸುಲಭ ವ್ಯಾಪಾರವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು SEZ ಗಳ ಕಸ್ಟಮ್ಸ್ ಆಡಳಿತದಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.

Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!
"ನಾವು SEZ ಗಳ ಕಸ್ಟಮ್ಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸುಧಾರಣೆಗಳನ್ನು ಕೈಗೊಳ್ಳುತ್ತೇವೆ ಮತ್ತು ಇದು ಇನ್ನು ಮುಂದೆ ಸಂಪೂರ್ಣ IT ಚಾಲಿತವಾಗಿರುತ್ತದೆ ಮತ್ತು ಹೆಚ್ಚಿನ ಅನುಕೂಲಕ್ಕಾಗಿ ಮತ್ತು ಅಪಾಯ-ಆಧಾರಿತ ತಪಾಸಣೆಗಳೊಂದಿಗೆ ಮಾತ್ರ ಕಸ್ಟಮ್ಸ್ ರಾಷ್ಟ್ರೀಯ ಪೋರ್ಟಲ್‌ನಲ್ಲಿ ಕಾರ್ಯನಿರ್ವಹಿಸುತ್ತದೆ" ಎಂದು ಸಚಿವರು ಹೇಳಿದರು ಈ ಸುಧಾರಣೆ ಸೆಪ್ಟೆಂಬರ್ 30 ರೊಳಗೆ ಜಾರಿಗೆ ಬರಲಿದೆ.

Union Budget 2022: ನಾರಿಗೆ ಶಕ್ತಿ ತುಂಬಿದ ಬಜೆಟ್; ಮಹಿಳಾ ಸಬಲೀಕರಣಕ್ಕೆ ಯಾವೆಲ್ಲ ಕಾರ್ಯಕ್ರಮಗಳು ಘೋಷಣೆಯಾಗಿವೆ?
ಈ ಪ್ರಕಟಣೆಯ ಕುರಿತು ಪ್ರತಿಕ್ರಿಯಿಸಿದ ಶಾರ್ದೂಲ್ ಅಮರಚಂದ್ ಮಂಗಲದಾಸ್ ಮತ್ತು ಕಂಪನಿಯ ಪಾಲುದಾರರಾಗಿರುವ ರಜತ್ ಬೋಸ್,(Rajat Bose, Partner, Shardul Amarchand Mangaldas & Co) ಹೊಸ ಕಾನೂನಿನೊಂದಿಗೆ ಸೆಝ್ ಕಾಯಿದೆಯ ಬದಲಿ ಮಾಡುವ ನಿರ್ಧಾರವು ಪ್ರಾಯೋಗಿಕ ಹೆಜ್ಜೆಯಾಗಿದೆ ಏಕೆಂದರೆ ಇದು ಈ ವಲಯಗಳು ಮತ್ತು ಕಸ್ಟಮ್ಸ್ ಆಡಳಿತವನ್ನು ಸಂಯೋಜಿಸುತ್ತದೆ. "ಹೊಸ ಶಾಸನವು ಉದ್ಯಮದೊಂದಿಗೆ ಪಾಲುದಾರರಾಗಲು ರಾಜ್ಯಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ" ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಮಹೇಶ್ ಜೈಸಿಂಗ್ ಹೇಳಿದ್ದಾರೆ. ಜನವರಿ 27 ರ ಹೊತ್ತಿಗೆ, ಸರ್ಕಾರವು 425 SEZ ಡೆವಲಪರ್‌ಗಳಿಗೆ ಔಪಚಾರಿಕ ಅನುಮೋದನೆಯನ್ನು ನೀಡಿದೆ. ಇದರಲ್ಲಿ 268 ಡಿಸೆಂಬರ್ 31, 2021 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಸೆಪ್ಟೆಂಬರ್ 30, 2021 ರಂತೆ, ಈ ವಲಯಗಳು ರೂ 6,28,565.89 ಕೋಟಿ ಹೂಡಿಕೆಗಳನ್ನು ಆಕರ್ಷಿಸಿವೆ ಮತ್ತು 25,60,286 ವ್ಯಕ್ತಿಗಳಿಗೆ ಉದ್ಯೋಗ ನೀಡಿವೆ.

Follow Us:
Download App:
  • android
  • ios