Asianet Suvarna News Asianet Suvarna News

Budget 2022:ಬಜೆಟ್ ಅಧಿವೇಶನದ ಮೊದಲೆರಡು ದಿನ ಶೂನ್ಯ, ಪ್ರಶ್ನೋತ್ತರ ಅವಧಿ ಇಲ್ಲ

*ಬಜೆಟ್ ಅಧಿವೇಶನದ ಮೊದಲೆರಡು ದಿನ ಜಂಟಿ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ಭಾಷಣ ಹಾಗೂ ಬಜೆಟ್ ಮಂಡನೆ 
*ಜನವರಿ 31 ಹಾಗೂ ಫೆಬ್ರವರಿ 1ರಂದು ಶೂನ್ಯ ಅವಧಿ ಇಲ್ಲ
*ಫೆಬ್ರವರಿ 1ರಂದು ಬೆಳಗ್ಗೆ 11ಕ್ಕೆ ಕೇಂದ್ರ ಬಜೆಟ್ ಮಂಡಿಸಲಿರೋ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 

No zero question hour during first two days of Budget Session of Parliament
Author
Bangalore, First Published Jan 29, 2022, 6:57 PM IST

Business Desk:ಸಂಸತ್ತಿನ  (Parliament) ಬಜೆಟ್ (Budget) ಅಧಿವೇಶನದ (Session) ಮೊದಲ ಎರಡು ದಿನ ಶೂನ್ಯ ಅವಧಿ (Zero Hour) ಹಾಗೂ ಪ್ರಶ್ನೋತ್ತರ ವೇಳೆ (Question Hour)ಇರೋದಿಲ್ಲ ಎಂದು ಸಂಸತ್ತಿನ (Parliament) ಬುಲೆಟಿನಲ್ಲಿ (Bulletin) ಮಾಹಿತಿ ನೀಡಲಾಗಿದೆ. ಬಜೆಟ್ ಅಧಿವೇಶನದ ಮೊದಲ ಎರಡು ದಿನ ಜಂಟಿ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳ (President)ಭಾಷಣ ಹಾಗೂ 2022ನೇ ಸಾಲಿನ ಕೇಂದ್ರ ಬಜೆಟ್ (Union Budget)ಮಂಡನೆಯಾಗಲಿದೆ. 

'ಜನವರಿ 31 ಹಾಗೂ ಫೆಬ್ರವರಿ 1ರಂದು ಶೂನ್ಯ ಅವಧಿ ಇರೋದಿಲ್ಲ.17ನೇ ಲೋಕಸಭೆಯ  8ನೇ ಅಧಿವೇಶನದ ಮೊದಲ ಎರಡು ದಿನಗಳು ರಾಷ್ಟ್ರಪತಿಗಳ ಭಾಷಣದ ಹಿನ್ನೆಲೆಯಲ್ಲಿ ಶೂನ್ಯ ಅವಧಿ ಇರೋದಿಲ್ಲ ಎಂಬ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಗಿದೆ' ಎಂದು ಜನವರಿ 28ರಂದು ಬಿಡುಗಡೆಯಾದ ಸಂಸತ್ತಿನ ಬುಲೆಟಿನ್ ನಲ್ಲಿ (Bulletin) ತಿಳಿಸಲಾಗಿದೆ. 

Union Budget 2022: ಆದಾಯ ತೆರಿಗೆ ಪ್ರಸಕ್ತ ಸ್ವರೂಪದ ಬಗ್ಗೆ ಶೇ.65 ಜನರಿಗೆ ಅಸಮಾಧಾನ: ಸಮೀಕ್ಷಾ ವರದಿ

ಸಾರ್ವಜನಿಕ ಮಹತ್ವದ ತುರ್ತು ವಿಷಯಗಳನ್ನು ಶೂನ್ಯ ಅವಧಿಯಲ್ಲಿ (Zero Hour) ಪ್ರಶ್ನಿಸಲು ಅಥವಾ ಚರ್ಚಿಸಲು ಫೆಬ್ರವರಿ 2ರಿಂದ ಅವಕಾಶ ನೀಡಲಾಗೋದು ಎಂಬ ಬಗ್ಗೆ ಕೂಡ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಆದ್ರೆ ಫೆಬ್ರವರಿ 2ರಂದು ಅಂದ್ರೆ ಬುಧವಾರ ಶೂನ್ಯ ಅವಧಿಯಲ್ಲಿ (Zero hour) ಸಾರ್ವಜನಿಕ ಮಹತ್ವದ ತುರ್ತು ವಿಷಯಗಳನ್ನು ಮಂಡಿಸೋ ಮುನ್ನ ಫೆಬ್ರವರಿ 1ರಂದು 10:00 ಹಾಗೂ 18:00 ಗಂಟೆಗಳ ನಡುವೆ ಇ-ಪೋರ್ಟಲ್ ಮುಖಾಂತರ ಆನ್ಲೈನ್  ಅರ್ಜಿ ಅಥವಾ ಸಂಸತ್ತಿನ ನೋಟಿಸ್ ಆಫೀಸ್ ಗೆ ಲಿಖಿತ  ಅರ್ಜಿಯನ್ನು ಸಲ್ಲಿಸಬೇಕು ಎಂದು ಬುಲೆಟ್ನಲ್ಲಿ ತಿಳಿಸಲಾಗಿದೆ. 

ಸಂಸತ್ತಿನ ನಿಯಮಗಳು ಹಾಗೂ ಪ್ರಕ್ರಿಯೆಗಳ ಪ್ರಕಾರ ಪ್ರತಿದಿನ 60 ನಿಮಿಷಗಳ ಕಾಲ ಶೂನ್ಯ ಹಾಗೂ ಪ್ರಶ್ನೋತ್ತರ  ಕಲಾಪ ನಡೆಸಬೇಕು. ಲೋಕಸಭೆಯಲ್ಲಿ ದಿನದ ಕಲಾಪಗಳ  ಪ್ರಾರಂಭದಲ್ಲಿ ಅಂದ್ರೆ ಬೆಳಗ್ಗೆ 11ರಿಂದ ಮಧ್ಯಾಹ್ನದ ತನಕ  ಪ್ರಶ್ನೋತ್ತರ ಅವಧಿ ಇರಿಸಲಾಗುತ್ತದೆ. ಅದರ ನಂತರ ಶೂನ್ಯ ಅವಧಿ ನಡೆಯುತ್ತದೆ. ರಾಜ್ಯಸಭೆಯಲ್ಲಿ ಶೂನ್ಯ ಅವಧಿ ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಆ ಬಳಿಕ ಮಧ್ಯಾಹ್ನ ಪ್ರಶ್ನೋತ್ತರ ಅವಧಿ ನಡೆಯುತ್ತದೆ. 

ಸಂಸತ್ತಿನ ಕೇಂದ್ರ ಬಜೆಟ್ ಅಧಿವೇಶನ ಜನವರಿ 31ರಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಮೊದಲ ಎರಡು ದಿನ ರಾಷ್ಟ್ರಪತಿಗಳು ಎರಡು ಸದನಗಳ ಜಂಟಿ ಅಧಿವೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಜನವರಿ 31ರ ಮಧ್ಯಾಹ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಫೆಬ್ರವರಿ 1ರಂದು ಬೆಳಗ್ಗೆ 11ಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸುತ್ತಾರೆ. ಈ ಬಾರಿಯ ಬಜೆಟ್ ಕಾಗದರಹಿತವಾಗಿರಲಿದೆ. ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ಮತ್ತು ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ.

Budget 2022 Expectations: ಈ ಬಾರಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವಾಗುತ್ತಾ? ಸಮೀಕ್ಷೆ ಏನ್ ಹೇಳುತ್ತೆ?

ಕೋವಿಡ್ -19 (COVID-19) ಪರಿಹಾರದಿಂದ ಹಿಡಿದು ಆದಾಯ ತೆರಿಗೆ (Income Tax) ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಮಿತಿ (Limit) ಹೆಚ್ಚಳದ ತನಕ ಮಧ್ಯಮ ವರ್ಗದ ಜನರು 2022ನೇ ಕೇಂದ್ರ ಬಜೆಟ್ ನಲ್ಲಿ (Central Budget)ವಿತ್ತ ಸಚಿವರು ಅನೇಕ ಕ್ರಮಗಳನ್ನು ಘೋಷಿಸಬಹುದೆಂಬ ನಿರೀಕ್ಷೆ ಹೊಂದಿದ್ದಾರೆ. ವೇತನ (Salary) ಪಡೆಯುತ್ತಿರೋ ಉದ್ಯೋಗಿಗಳು ಕೂಡ ಬಜೆಟ್ ನಲ್ಲಿ ಸರ್ಕಾರ ವರ್ಕ್ ಫ್ರಂ ಹೋಮ್ ( Work From Home) ಭತ್ಯೆ  (Allowance) ಘೋಷಿಸೋ ಜೊತೆಗೆ ಕೊರೋನಾ ಕಾರಣದಿಂದ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸಲು ವ್ಯಯಿಸಿದ ವೆಚ್ಚಗಳಿಗೆ (Expenses) ತೆರಿಗೆ ವಿನಾಯ್ತಿ (Tax relief)ನೀಡಬಹುದೆಂಬ ನಿರೀಕ್ಷೆ ಹೊಂದಿದ್ದಾರೆ. ಸರ್ಕಾರ 50,000 ರೂ. ವರ್ಕ್ ಫ್ರಂ ಹೋಮ್ ಭತ್ಯೆ ಹಾಗೂ ಒಂದು ಲಕ್ಷ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction)ಘೋಷಿಸಬಹುದೆಂಬ ನಿರೀಕ್ಷೆ ಕೂಡ ಇದೆ. 


 

Follow Us:
Download App:
  • android
  • ios