Economic Survey 2022:ಪ್ರಸಕ್ತ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 9.2 ನಿರೀಕ್ಷೆ
*2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
*2023ನೇ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ ಶೇ.8-8.5 ಪ್ರಗತಿ ದಾಖಲಿಸೋ ನಿರೀಕ್ಷೆ
*2022ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಪ್ರಗತಿ ದರ 3.9%
* ಕೈಗಾರಿಕಾ ಕ್ಷೇತ್ರದ ಪ್ರಗತಿ ದರ 11.8%
*ಸೇವಾ ವಲಯ ಪ್ರಗತಿ ದರ ಶೇ.8.2
Business Desk: 2022-23ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಸೋಮವಾರ (ಜ.31) ಪ್ರಾರಂಭಗೊಂಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಸಮೀಕ್ಷೆಯು 2022ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ. 9.2 ಪ್ರಗತಿ ದಾಖಲಿಸೋ ನಿರೀಕ್ಷೆ ವ್ಯಕ್ತಪಡಿಸಿದೆ.
2023ನೇ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ ಶೇ.8-8.5 ಪ್ರಗತಿ ದಾಖಲಿಸೋ ನಿರೀಕ್ಷೆಯನ್ನು ಸಮೀಕ್ಷೆ ವ್ಯಕ್ತಪಡಿಸಿದೆ. 2022ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ದರ 3.9% ಹಾಗೂ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ದರ 11.8% ಆಗಿರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಇನ್ನು ಸೇವಾ ವಲಯ 2022ನೇ ಸಾಲಿನಲ್ಲಿ ಶೇ.8.2ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದೆ. ವಿಶ್ವಬ್ಯಾಂಕ್ ಪ್ರಕಾರ ಭಾರತವು ಸುಮಾರು ಶೇಕಡ 8.7ರಷ್ಟು ಜಿಡಿಪಿ ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ.
Budget Session 11 ಕೋಟಿ ರೈತರಿಗೆ PM ಕಿಸಾನ್, ಜೀವ ಉಳಿಸಿಲು ಲಸಿಕೆ, ಅಭಿವೃದ್ಧಿ ಭಾರತ ಅಭಿನಂದಿಸಿದ ರಾಷ್ಟ್ರಪತಿ!
ಬಂಡವಾಳ ವೆಚ್ಚವನ್ನು ನಿಭಾಯಿಸುವಷ್ಟು ಆರ್ಥಿಕ ಸಾಧ್ಯತೆಗಳನ್ನು ಭಾರತ ಹೊಂದಿದೆ ಎಂದು ಸಮೀಕ್ಷೆ ತಿಳಿಸಿದೆ. ಆರ್ಥಿಕ ಸಮೀಕ್ಷೆಯನ್ನು ಬಜೆಟ್ ಮಂಡನೆಯ ಹಿಂದಿನ ದಿನ ಮಂಡಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಸಮಗ್ರ ಅಂಕಿಅಂಶಗಳು ಇರಲಿವೆ. ದೇಶದ ಆರ್ಥಿಕ ಸ್ಥಿತಿ, ಮುಂದಿರೋ ಸವಾಲುಗಳು ಹಾಗೂ ಅವುಗಳ ಪರಿಹಾರದ ಕುರಿತು ಕೂಡ ವಿವರಣೆ ಇರಲಿದೆ.
ಆರ್ಥಿಕ ಸಮೀಕ್ಷೆಯನ್ನು ಯಾರು ರಚಿಸುತ್ತಾರೆ?
ಆರ್ಥಿಕ ಸಮೀಕ್ಷೆಯನ್ನು ಸಾಮಾನ್ಯವಾಗಿ ಮುಖ್ಯ ಆರ್ಥಿಕ ಸಲಹೆಗಾರರು ರಚನೆ ಮಾಡುತ್ತಾರೆ. ಈ ಬಾರಿ ಆರ್ಥಿಕ ಸಮೀಕ್ಷೆ ಮಂಡನೆಗೆ ಒಂದು ದಿನವಿರೋವಾಗ ಹೊಸ ಮುಖ್ಯ ಆರ್ಥಿಕ ಸಲಹೆಗಾರರನ್ನು ಸರ್ಕಾರ ನೇಮಿಸಿದೆ. ಡಿ. ವಿ.ಅನಂತ ನಾಗೇಶ್ವರನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈ ಹಿಂದಿನ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವಧಿ ಡಿಸೆಂಬರ್ 31ರಂದು ಕೊನೆಗೊಂಡಿತ್ತು.
2021-22ರ ಆರ್ಥಿಕ ಸಮೀಕ್ಷೆಯು ಕೇವಲ ಒಂದು ಸಂಪುಟದಲ್ಲಿ ಪ್ರಕಟವಾಗಲಿದೆ. ಸಾಮಾನ್ಯವಾಗಿ ಆರ್ಥಿಕ ಸಮೀಕ್ಷೆ ಎರಡು ಸಂಪುಟಗಳನ್ನು ಹೊಂದಿರುತ್ತದೆ. ಆರ್ಥಿಕ ಸಮೀಕ್ಷೆ ಮೊದಲ ಸಂಪುಟದಲ್ಲಿ ಅಂಕಿಅಂಶಗಳಿದ್ರೆ, ಎರಡನೇ ಸಂಪುಟದಲ್ಲಿ ನೀತಿ ನಿರೂಪಣೆ ಹಾಗೂ ಸಲಹೆಗಳಿರುತ್ತವೆ.
ಪ್ರತಿ ವರ್ಷ ಆರ್ಥಿಕ ಸಮೀಕ್ಷೆ ಒಂದು ಥೀಮ್ ಹೊಂದಿರುತ್ತದೆ. 2021ನೇ ಸಾಲಿನ ಆರ್ಥಿಕ ಸಮೀಕ್ಷೆ ಜೀವನ ಹಾಗೂ ಜೀವನೋಪಾಯದ ಉಳಿವು ಎಂಬ ಥೀಮ್ ಹೊಂದಿತ್ತು. 2017-18ರಲ್ಲಿ ಮಹಿಳಾ ಸಬಲೀಕರಣದ ವಿಷಯ ಥೀಮ್ ಆಗಿತ್ತು.
Union Budget 2022: ಉದ್ಯೋಗ ಸೃಷ್ಟಿಗೆ ನೆರವು, ಗ್ರಾಮಗಳಿಗೆ ಭಾರೀ ಕೊಡುಗೆ?
ಭಾರತದಲ್ಲಿ ಆರ್ಥಿಕ ಸಮೀಕ್ಷೆಯನ್ನು 1950-51ರಲ್ಲಿ ಮೊದಲ ಬಾರಿಗೆ ಮಂಡಿಸಲಾಗಿತ್ತು. 1964ರ ತನಕ ಕೇಂದ್ರ ಬಜೆಟ್ ಜೊತೆಗೆ ಲೋಕಸಭೆಯಲ್ಲಿ ಮಂಡಿಸಲಾಗುತ್ತಿತ್ತು. 1964ನೇ ಸಾಲಿನಿಂದ ಪ್ರತಿ ವರ್ಷ ಕೇಂದ್ರ ಬಜೆಟ್ ಮಂಡನೆ ಹಿಂದಿನ ದಿನ ಆರ್ಥಿಕ ಸಮೀಕ್ಷೆ ಮಂಡಿಸಲಾಗುತ್ತಿದೆ. ಕಳೆದ ವರ್ಷ ಮಾತ್ರ ಕೆಂದ್ರ ಬಜೆಟ್ ಗೆ ಎರಡು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆ ಮಂಡಿಸಲಾಗಿತ್ತು.