ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷದಲ್ಲಿ ಎಲ್ಲಾ ಸೋಲ್ಡೌಟ್, ಯಾವ ಬೈಕಿದು?
ದೇಶದ ಮೊದಲ ಎಐ ಆಧರಿತ ಮೋಟಾರ್‌ಸೈಕಲ್ ಎಂಬ ಹೆಗ್ಗಳಿಕೆ ಹೊಂದಿರುವ ರಿವೋಲ್ಟ್ ಮೋಟಾರ್ ಕಂಪನಿಯ ಆರ್‌ವಿ400 ಎಲೆಕ್ಟ್ರಿಕ್ ಬೈಕ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಂಪನಿಯು ಬುಕ್ಕಿಂಗ್ ಆರಂಭಿಸಿದ ಕೆಲವೇ ನಿಮಷಗಳಲ್ಲಿ ಎಲ್ಲ ಬೈಕು ಸೋಲ್ಡೌಟ್ ಆಗಿವೆ. ಕಳೆದ ತಿಂಗಳವು ಬುಕ್ಕಿಂಗ್ ಆರಂಭಿಸಿದಾಗಲೂ ಇದೇ ರೀತಿಯ ಪ್ರತಿಕ್ರಿಯೆ ದೊರಕಿತ್ತು.
ಲೇಟಾಗ್ ಬಂದ್ರೂ ಲೆಟೆಸ್ಟ್ ಎನ್ನುವ ಹಾಗೆ ಬುಕ್ಕಿಂಗ್ ಓಪನ್ ಮಾಡಿದ ಕೆಲವೇ ಕ್ಷಣಗಳಲ್ಲಿ ಎಲ್ಲ ಬೈಕುಗಳು ಬಕ್ಕಿಂಗ್ ಆದವು! ಹೌದು. ನೀವು ಓದುತ್ತಿರುವುದು ಸರಿಯಾಗೇ ಇದೆ. ಕಳೆದ ವರ್ಷವಷ್ಟೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ, ದೇಶದ ಮೊದಲ ಕೃತಕ ಬುದ್ಧಿಮತ್ತೆ(ಎಐ) ಸಕ್ರಿಯವಾಗಿರುವ RV400 ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬೆಂಗಳೂರು ಬೀದಿಯಲ್ಲಿ ‘ಓಲಾ ಎಲೆಕ್ಟ್ರಿಕ್ ಸ್ಕೂಟರ್’, ಸವಾರಿ ಮಾಡಿದ್ದು ಯಾರು?
ರಿವೋಲ್ಟ್ ಕಂಪನಿಯು ತನ್ನ ಆರ್‌ವಿ 400 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬುಕ್ಕಿಂಗ್ ಆರಂಭಿಸಿತ್ತು. ಆದರೆ, ಬುಕ್ಕಿಂಗ್ ಆರಂಭಿಸಿದ ಕೆಲವೇ ನಿಮಷಗಳಲ್ಲಿ ಆರ್‌ವಿ 400 ಪೂರ್ತಿಯಾಗಿ ಸೋಲ್ಡೌಟ್ ಆಗಿದೆ! ಸದ್ಯ ನೀವು ಆರ್‌ವಿ400 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪಡೆಯಬೇಕು ಎಂದರೆ ನಾಲ್ಕು ತಿಗಂಳವರೆಗೆ ಕಾಯಬೇಕು. ಅಂದರೆ, ಈ ವೇಟಿಂಗ್ ಪಿರಿಯಡ್ ನಾಲ್ಕು ತಿಂಗಳವರೆಗೂ ಇದೆ ಎಂದು ರಿವೋಲ್ಟ್ ಕಂಪನಿ ಹೇಳಿಕೊಂಡಿದೆ. ಈ ವೇಟಿಂಗ್ ಪಿರಿಯಡ್ ಅನ್ನು ಕಡಿಮೆ ಮಾಡಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿ ಪ್ರಯತ್ನಿಸುತ್ತಿದೆ.
ಕಂಪನಿಯು ದೆಹಲಿ, ಮುಂಬೈ, ಪುಣೆ, ಚೆನ್ನೈ, ಅಹ್ಮದಾಬಾದ್ ಮತ್ತು ಹೈದರಾಬಾದ್ ನಗರಗಳಲ್ಲಿ ಆರ್‌ವಿ400 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ ಮುಂಗಡ ಬಕ್ಕಿಂಗ್ ತೆರೆದಿತ್ತು. ಕಳೆದ ತಿಂಗಳವೂ ಈ ಮೋಟಾರ್‌ಸೈಕಲ್ ಮಾರಾಟಕ್ಕೆ ಭಾರೀ ಪ್ರತಿಕ್ರಿಯೆ ಸಿಕ್ಕಿತ್ತು. ಕಳೆದ ತಿಂಗಳು ಕೂಡ ಬುಕ್ಕಿಂಗ ಆರಂಭಿಸಿದ ಎರಡು ಗಂಟೆಯಲ್ಲೇ ಕಂಪನಿಯು 50 ಕೋಟಿ ರೂ. ಮೌಲ್ಯದ ರಿವೋಲ್ಟ್ ಆರ್‌ವಿ400 ಎಲೆಕ್ಟ್ರಿಕ್ ಬೈಕುಗಳನ್ನು ಮಾರಾಟ ಮಾಡಿತ್ತು. ಈಗಲೂ ಅದೇ ರೀತಿಯ ರೆಸ್ಪಾನ್ಸ್ ಸಿಕ್ಕಿದೆ.
ಹೇಗಿದೆ ಈ ರಿವೋಲ್ಟ್ ಆರ್‌ವಿ400 ಬೈಕ್
ರಿವೋಲ್ಟ್ ಕಂಪನಿಯ ಈ ಆರ್‌ವಿ400 ಎಲೆಕ್ಟ್ರಿಕ್ ಮೋಟಾರ್ ಸೈಕಲ್ 3 ಕಿಲೋ ವ್ಯಾಟ್ (ಮಿಡ್ ಡ್ರೈವ್) ಮೋಟಾರ್‌ನೊಂದಿಗೆ ಬರುತ್ತದೆ. 72 ವೋಲ್ಟ್ ಪವರ್ ಆಧರಿತವಾಗಿರುವ ಈ ಮೋಟಾರ್‌ಸೈಕಲ್‌ನಲ್ಲಿ ಕಂಪನಿಯು 3.24ಕೆಡಬ್ಲ್ಯೂಎಚ್ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಿದೆ.
ಈ ರಿವೋಲ್ಟ್ ಆರ್‌ವಿ400 ಮೋಟಾರ್ ಸೈಕಲ್ ಗರಿಷ್ಠ ಪ್ರತಿ ಗಂಟೆಗೆ 85 ಕಿಲೋ ಮೀಟರ್ ಓಡುತ್ತದೆ. ಈ ಮಾಟರ್ ಸೈಕಲ್ ಅನ್ನು ನೀವು MyRevolt ಆಪ್ ಮೂಲಕ ನಿರ್ವಹಣೆ ಮಾಡಬಹುದು. ಬೈಕ್ ಲೊಕೆಟರ್, ಜಿಯೋ ಫೆನ್ಸಿಂಗ್, ಕಸ್ಟಮೈಸ್ಡ್ ಸೌಂಡ್ಸ್ ಅನ್ನು ನೀವು ಆಪ್‌ನ ಸ್ಕ್ರೀನ್ ಮೇಲೆ ಟ್ಯಾಪ್ ಮಾಡುವ ಮೂಲಕ ಬದಲಿಸಿಬಹುದು.
ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ವರ್ಷಕ್ಕೆ 25 ಕೋಟಿ ರೂ. ಸಬ್ಸಿಡಿ
ಇಷ್ಟು ಮಾತ್ರವಲ್ಲದೇ, ಈ ಆಪ್ ಮೂಲಕ ಮೋಟಾರ್‌ಸೈಕಲ್ ಅನ್ನು ಸಂಪೂರ್ಣವಾಗಿ ಪರೀಕ್ಷಿಸ ಮಾಡಬಹುದು, ಬ್ಯಾಟರಿ ಸ್ಟೇಟಸ್, ರೈಡ್ಸ್ ಮತ್ತು ಗಾಡಿ ಓಡಿರುವ ಕಿಲೋ ಮೀಟರ್ ಬಗ್ಗೆ ಮಾಹಿತಿಯನ್ನು ಓದಗಿಸುತ್ತದೆ. ಬ್ಯಾಟರಿಗಳನ್ನ ಬದಲಿಸಲು ನಿಮಗೆ ಹತ್ತಿರದ ರಿವೋಲ್ಟ್ ಸ್ಟೇಷನ್‌ಗಳನ್ನು ಪತ್ತೆ ಹಚ್ಚುತ್ತದೆ.
ಇತ್ತೀಚೆಗಷ್ಟೇ ರಿವೋಲ್ಟ್ ಕಂಪನಿಯು ಈ ಮೋಟಾರ್ ಸೈಕಲ್‌ಗೆ ವಿಒಎಲ್‌ಟಿ ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ವಿಒಎಲ್‌ಟಿ ಎಂದರೆ, ವೆಹಿಕಲ್ ಆನ್‌ಲೈನ್ ಟ್ರ್ಯಾಕಿಂಗ್ ಎಂದರ್ಥ. ಗ್ರಾಹಕರು ಬುಕ್ಕಿಂಗ್ ಮಾಡಿದ ಕ್ಷಣದಿಂದ ಹಿಡಿದು ಡೆಲಿವರಿಯಾಗೋಯವರೆಗೆ ತಮ್ಮ ಮೋಟಾರ್ ಸೈಕಲ್ ಸ್ಟೇಟಸ್ ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಈ ಸೇವೆಯನ್ನು ಬಹುತೇಕ ಇ ಕಾಮರ್ಸ್ ತಾಣಗಳು ಬಹಳ ವರ್ಷಗಳಿಂದ ನೀಡುತ್ತ ಬಂದಿವೆ. ಆದರೆ, ಆಟೋಮೊಬೈಲ್ ಕ್ಷೇತ್ರದಲ್ಲಿ ಈ ವ್ಯವಸ್ಥೆಯನ್ನು ರಿವೋಲ್ಟ್ ಕಂಪನಿ ಮೊದಲ ಬಾರಿಗೆ ಪರಿಚಯಿಸಿದೆ. ಆ ಮೂಲಕ ತಮ್ಮ ಗ್ರಾಹಕರಿಗೆ ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ಕಲ್ಪಿಸುವುದೇ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಮಾರುಕಟ್ಟೆಗೆ ಹಿಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಮೋಟಾರ್ ಸೈಕಲ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಮತ್ತು ಇವುಗಳಿಗೆ ಗ್ರಾಹಕರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ಕೂಡ ಸಿಗುತ್ತದೆ. ಜೊತೆಗೆ ಸರಕಾರಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ.
1971ರ ಯುದ್ಧದ ಗೆಲುವಿಗೆ 50 ವರ್ಷ; ಖಾಕಿ ಮತ್ತು ಮಿಡ್‌ನೈಟ್ ಗ್ರೇ ಬಣ್ಣಗಳಲ್ಲಿ ಜಾವಾ ಬೈಕ್!