499 ರೂಪಾಯಿ ಕೊಟ್ಟು Ola Electric ಸ್ಕೂಟರ್ ಬುಕ್ ಮಾಡ್ಕೊಳ್ಳಿ!

ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ನೆಗೆಯಲು ಸಜ್ಜಾಗಿರುವ ಓಲಾ ಎಲೆಕ್ಟ್ರಿಕ್, ತನ್ನ ಮುಂಬರುವ ಸ್ಕೂಟರ್‌ಗೆ ಮುಂಗಡ ಬುಕ್ಕಿಂಗ್ ಆರಂಭಿಸಿದೆ. ಗ್ರಾಹಕರು ಕೇವಲ 499 ರೂ. ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬುಕ್ಕಿಂಗ್ ಮಾಡಿಕೊಂಡವರಿಗೆ ಆದ್ಯತೆಯ ಮೇರೆಗೆ ಓಲಾ, ಸ್ಕೂಟರ್‌ಗಳನ್ನು ನೀಡಲಿದೆ. 

Ola Electric has started booking for scooter in advance pay just Rs 499

ಶೀಘ್ರದಲ್ಲೇ ಮಾರುಕಟ್ಟೆಗೆ ಲಾಂಚ್ ಆಗಲಿರುವ ಓಲಾ ಎಲೆಕ್ಟ್ರಿಕ್ ಖರೀದಿಸಲು ಯೋಚಿಸಿದ್ದೀರಾ? ಹಾಗಿದ್ದರೆ ತಡ ಯಾಕೆ 450 ರೂಪಾಯಿ ಕೊಟ್ಟು ಮುಂಗಡ ಬಕ್ಕಿಂಗ್ ಮಾಡಿಕೊಂಡು ಬಿಡಿ.

ಬುಕ್ಕಿಂಗ್ ನೀಡಲಾಗುವ 499 ರೂ. ರಿಫಂಡೇಬಲ್ ಡಿಪಾಸೆಟ್ ಆಗಿದ್ದು, ಸ್ಕೂಟರ್ ಅನ್ನು ಮುಂಗಡ ಕಾಯ್ದರಿಸಿಕೊಳ್ಳಬಹುದಾಗಿದೆ. ಓಲಾ ಎಲೆಕ್ಟ್ರಿಕ್ ಅಧಿಕೃತ ಜಾಲತಾಣಕ್ಕೆ ಹೋಗಿ ಗ್ರಾಹಕರು ಅಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದು. ಕಂಪನಿ ಈ ಘೋಷಣೆ ಮಾಡಿದ   24 ಗಂಟೆಗಳಲ್ಲಿಯೇ ದಾಖಲೆ ಬುಕ್ಕಿಂಗ್ ಆಗಿದ್ದು, ಇದುವೆರೆಗೆ ಸುಮಾರು ಒಂದು ಲಕ್ಷ ಬೈಕ್‌ಗಳು ಬುಕ್ ಆಗಿವೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

1971ರ ಯುದ್ಧದ ಗೆಲುವಿಗೆ 50 ವರ್ಷ; ಖಾಕಿ ಮತ್ತು ಮಿಡ್‌ನೈಟ್ ಗ್ರೇ ಬಣ್ಣಗಳಲ್ಲಿ ಜಾವಾ ಬೈಕ್‌!

ಈಗ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡವರಿಗೆ ಆದ್ಯತೆ ಮೇರೆಗ ಓಲಾ ಸ್ಕೂಟರ್ ಡೆಲಿವರ್ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಇತ್ತೀಚೆಗಷ್ಟೇ, ಓಲಾ ಎಲೆಕ್ಟ್ರಿಕ್ ಗ್ರೂಪ್ ಸಿಇಒ ಮತ್ತು ಚೇರ್ಮನ್ ಭಾವಿಶ್ ಅಗ್ರವಾಲ್ ಅವರು, ಈ ಸ್ಕೂಟರ್ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ಬಿಟ್ಟುಕೊಟ್ಟಿದ್ದರು. ಅಷ್ಟೇ ಅಲ್ಲದೇ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ಕೂಡ ಬಿಡುಗಡೆಯಾಗಿತ್ತು. ಅದರಲ್ಲಿ  ಭಾವಿಶ್ ಅಗ್ರವಾಲ್ ಅವರೇ ಸ್ಕೂಟರ್ ಅನ್ನು ಬೆಂಗಳೂರು ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿತ್ತು.

ತನ್ನ ಸೆಗ್ಮೆಂಟ್‌ನಲ್ಲೇ ಬೆಸ್ಟ್ ಅನ್ನಬಹುದಾದಷ್ಟು ಸ್ಥಳಾವಕಾಶನ್ನು ಓಲಾ ಸ್ಕೂಟರ್ ಸೀಟ್ ಕೆಳಗಡೆ ಹೊಂದಿದೆ. ಮೊಬೈಲ್ ಆಪ್ ಆಧರಿತ ಆಕ್ಸೆಸ್, ಅತಿ ಹೆಚ್ಚು ವ್ಯಾಪ್ತಿಯವರೆಗೆ ಕ್ರಮಿಸಬಹುದಾದ ಕ್ಷಮತೆಯನ್ನು ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿರುವ ಮಾಹಿತಿಗಳನ್ನು ಸಿಇಒ ಅಗ್ರವಾಲ್ ಅವರು ಇತ್ತೀಚೆಗಷ್ಟೇ  ಬಿಟ್ಟುಕೊಟ್ಟಿದ್ದರು.

 

 


ಇಷ್ಟಾಗಿಯೂ ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟಿದೆ ಎಂಬುದು ಇನ್ನೂ ನಿಖರವಾಗಿ  ಗೊತ್ತಾಗಿಲ್ಲ. ಮುಂಬರುವ ದಿನಗಳಲ್ಲಿ ಈ ಸ್ಕೂಟರ್ ಬೆಲೆ ಎಷ್ಟಾಗಬಹುದು ಎಂಬುದನ್ನು ಬಹಿರಂಗೊಳಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಹಾಗಾಗಿ, ನಾವು ಇನ್ನೂ ಕೆಲವು ದಿನಗಳವರೆಗೆ ಬೆಲೆ ಬಗ್ಗೆ ತಿಳಿದುಕೊಳ್ಳಲು ಕಾಯಬೇಕಾಗುತ್ತದೆ.

ಶೀಘ್ರವೇ ಭಾರತೀಯ ರಸ್ತೆಗಳಿಗೆ ಇಳಿಯಲು ಸಿದ್ಧವಾಗಿರುವ ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಲೈಟನಿಂಗ್, ಫ್ರಂಟ್ ಡಿಸ್ಕ್ ಬ್ರೇಕ್, ಸ್ಮಾರ್ಟ್‌ಫೋನ್ ಕನೆಕ್ಟಿವಿಡಿ, ಸಂಪೂರ್ಣ ಡಿಜಿಟಲ್ ಇನ್ಸುಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಅನೇಕ ಆಕರ್ಷಕ ಫೀಚರ್‌ಗಳಿಂದ ಗಮನ ಸೆಳೆಯುತ್ತದೆ.

ಈ ಸ್ಕೂಟರ್ ಬೆಲೆ ಅಂದಾಜು ಒಂದು ಲಕ್ಷ ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗೆಯೇ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್,  ಎಥೇರ್ 450ಎಕ್ಸ್, ಟಿವಿಎಸ್‌ನ ಐಕ್ಯೂಬ್ ಸೇರಿದಂತೆ ಹಲವು ಸ್ಕೂಟರ್‌ಗಳಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ವರ್ಷಕ್ಕೆ 25 ಕೋಟಿ ರೂ. ಸಬ್ಸಿಡಿ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ ಸಿಇಒ
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಓಲಾ ಈಗಾಗಲೇ, ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನಾ ಘಟಕವನ್ನು ತಮಿಳುನಾಡಲು ಆರಂಭಿಸುತ್ತದೆ. ಮೊದಲ ಹಂತದ ಉತ್ಪಾದನಾ ಘಟಕ ಬಹುತೇಕ ಪೂರ್ತಿಗೊಂಡಿದ್ದು, ಶೀಘ್ರವೇ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. 

ಇದರ ನಡುವೆ, ದೇಶದ ಬಹುದೊಡ್ಡ ಸಾರಿಗೆ ವೇದಿಕೆಯಾಗಿರುವ ಓಲಾ, ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನ   ಟೀಸರ್ ಅನ್ನು ಅನಾವರಣ ಮಾಡಿದೆ. ವಿಶೇಷ ಎಂದರೆ, ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಭಾವಿಷ್ ಅಗ್ರವಾಲ್ ಅವರು ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರುವೇಷದಲ್ಲಿ ಓಲಾ ಸ್ಕೂಟರ್ ಅನ್ನು ಭಾವಿಷ್ ಅಗ್ರವಾಲ್ ಅವರು ಬೆಂಗಳೂರು ರಸ್ತೆಗಳಲ್ಲಿ ಓಡಿಸುತ್ತಿರುವುದನ್ನು ನೀವು ಕಾಣಬಹುದು.

56 ಸೆಕೆಂಡ್‌ನ ಈ ಟೀಸರ್ ಅನ್ನು ಅಗ್ರವಾಲ್ ಅವರು ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಈ ಟೀಸರ್‌ನಲ್ಲಿ ಕಂಪನಿ ಓಲಾ ಉತ್ಪಾದಿಸಲಿರುವ ಎಲೆಕ್ಟ್ರಿಕ್ ಸ್ಕೂಟರ್‌ನ ವಿಶೇಷತೆಗಳನ್ನೂ ಹಂಚಿಕೊಳ್ಳಲಾಗಿದೆ. 

ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷದಲ್ಲಿ ಎಲ್ಲಾ ಸೋಲ್ಡೌಟ್, ಯಾವ ಬೈಕಿದು?

Latest Videos
Follow Us:
Download App:
  • android
  • ios