Asianet Suvarna News Asianet Suvarna News

ಯೆಜ್ಡಿ ರೋಡ್‌ಸ್ಟರ್ ಮತ್ತಷ್ಟು ಆಕರ್ಷಕ, ಹೊಸ ಎರಡು ಬಣ್ಣದಲ್ಲಿ ಲಭ್ಯ!

ಯೆಜ್ಡಿ  ರೋಡ್‌ಸ್ಟರ್ ಈಗ ಎರಡು ಗ್ಲಾಸ್ ಫಿನಿಷ್ ಪೇಂಟ್ ಸ್ಕೀಮ್‌ನ  ಸಂಪೂರ್ಣ ಬ್ಲ್ಯಾಕ್‌    ಥೀಮ್‌ನಲ್ಲಿ ಲಭ್ಯವಿದೆ. ರೋಡ್‌ಸ್ಟರ್ ಬ್ಲ್ಯಾಕ್‌ ಮತ್ತು ರೋಡ್‌ಸ್ಟರ್ ಕ್ರೋಮ್ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.

yezdi roadster launched Inferno Red and Glacial Whit colour option in India ckm
Author
Bengaluru, First Published Aug 25, 2022, 6:43 PM IST

ನವದೆಹಲಿ(ಆ.25) :  ಭಾರತದಲ್ಲಿ ಯೆಜ್ಡಿ ಹೊಸ ಅಧ್ಯಾಯ ಆರಂಭಿಸಿದೆ. ಹಳೆ ಬೈಕ್ ಇದೀಗ ಹೊಸ ರೂಪ, ಹೊಸ ವಿನ್ಯಾಸ, ಮತ್ತಷ್ಟು ದಕ್ಷ ಎಂಜಿನ್‌ನೊಂದಿಗೆ ಭಾರತದಲ್ಲಿ ಸದ್ದು ಮಾಡುತ್ತಿದೆ. ಇದೀಗ ಯೆಜ್ಡಿ ರೋಡ್‌ಸ್ಟರ್‌ ಮತ್ತೆರೆಡು ಬಣ್ಣದಲ್ಲಿ ಲಭ್ಯವಿದೆ. ಕ್ಲಾಸಿಕ್ ಲೈನ್‌  ಮತ್ತು ಆಧುನಿಕ ಸ್ಪರ್ಶಗಳ ಪರಿಪೂರ್ಣ ಮಿಶ್ರಣ ಹೊಂದಿರುವ ವಿಶಿಷ್ಟ ಶೈಲಿಯ ಮೋಟರ್‌ಸೈಕಲ್ ಆಗಿರುವ ಯೆಜ್ಡಿ ರೋಡ್‌ಸ್ಟರ್ (Yezdi Roadster) ಅನ್ನು ಡಾರ್ಕ್ ಮತ್ತು ಕ್ರೋಮ್ ಥೀಮ್‌ಗಳಲ್ಲಿ ಹರಡಿರುವ ಐದು ಮ್ಯಾಟ್ ಫಿನಿಷ್‌ ಬಣ್ಣಗಳ ಆಯ್ಕೆಯೊಂದಿಗೆ ಪರಿಚಯಿಸಿರುವುದು ‘ಯೆಜ್ಡಿ ರೋಡ್‌ಸ್ಟರ್’ನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಯೆಜ್ಡಿ   ಮೂರು ಮಾದರಿಯ ಮೋಟರ್‌ ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ.  ‘ಯೆಜ್ಡಿ ಅಡ್ವೆಂಚರ್‌’, ’ಸ್ಕ್ರ್ಯಾಂಬ್ಲರ್’ ಮತ್ತು ’ರೋಡ್‌ಸ್ಟರ್’ ಹೆಸರಿನಲ್ಲಿ ಈಗಾಗಲೇ ಯೆಜ್ಡಿ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಎರಡು ಆಕರ್ಷಕ ಹೊಸ ಬಣ್ಣಗಳ ಯೆಜ್ಡಿ ರೋಡ್‌ಸ್ಟರ್ ಶ್ರೇಣಿಯನ್ನು ವಿಸ್ತರಿಸಲಾಗಿದೆ. ಈ ಬೈಕ್ ಬೆಲೆ  2,01,142 ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ) ಹೊಂದಿದೆ.

ಈ ಹೊಸ ಮೋಟರ್‌ಸೈಕಲ್‌ಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಲು ಜಾವಾ ಯೆಜ್ಡಿ ಮೋಟರ್‌ಸೈಕಲ್ಸ್‌, ಯೆಜ್ಡಿ ರೋಡ್‌ಸ್ಟರ್ ಶ್ರೇಣಿಯಲ್ಲಿ ಎರಡು ಹೊಸ ಬಣ್ಣಗಳನ್ನು ಇಂದು ಪರಿಚಯಿಸಿದೆ. ಇನ್‌ಫೆರ್ನೊ ರೆಡ್ ಮತ್ತು ಗ್ಲೇಷಿಯಲ್ ವೈಟ್ – ರೋಡ್‌ಸ್ಟರ್‌ನಲ್ಲಿ ಲಭ್ಯವಿರುವ ಎರಡು ಹೊಸ ಬಣ್ಣದ ವಿಧಾನಗಳಾಗಿವೆ. ಈ ಎರಡೂ ವರ್ಣಗಳು ಇಂಧನ ಟ್ಯಾಂಕ್‌ನಲ್ಲಿ ಗ್ಲಾಸ್ ಫಿನಿಷ್‌ ಮತ್ತು ಮೋಟರ್‌ಸೈಕಲ್‌ನ ಉದ್ದಕ್ಕೂ ಹೊಳಪಿನ ಅಬ್ಸಿಡಿಯನ್ ಬ್ಲ್ಯಾಕ್ ಥೀಮ್‌ನೊಂದಿಗೆ ಬರುತ್ತವೆ. ಎರಡೂ ಹೊಸ ಬಣ್ಣಗಳು ಸವಾರರಲ್ಲಿ ಅಮಿತ ಉತ್ಸಾಹ ಮೂಡಿಸಲಿವೆ. ಜೊತೆಗೆ ವಿಭಿನ್ನ ವ್ಯಕ್ತಿತ್ವದ ಸವಾರರನ್ನು ಆಕರ್ಷಿಸಲು ಸ್ಫೂರ್ತಿದಾಯಕ ಆಕರ್ಷಕ ವಿನ್ಯಾಸವನ್ನೂ ಒಳಗೊಂಡಿವೆ.

Yezdi Returns ಯೆಜ್ಡಿ ಖರೀದಿಗೆ ಮುಗಿಬಿದ್ದ ಜನ, ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿದ ಐಕಾನಿಕ್ ಬೈಕ್

ಹೊಸ ಅವತಾರದಲ್ಲಿ ಇರುವ  ನವೀನ ‘ಯೆಜ್ಡಿ ರೋಡ್‌ಸ್ಟರ್’ ಜೋಡಿಯನ್ನು ‘ಫೈರ್ ಆ್ಯಂಡ್‌ ಐಸ್’ ಎಂದು ನಾಮಕರಣ ಮಾಡಲಾಗಿದೆ. ಬೈಕ್‌ ಸವಾರರ ಮನಸ್ಸು ಗೆಲ್ಲಲು ಈ ಮೋಟರ್‌ಸೈಕಲ್‌ಗಳು ಈಗ ಸಿದ್ಧವಾಗಿವೆ. ಈ ಅತ್ಯಾಕರ್ಷಕ ಗಮನ ಸೆಳೆಯುವ ಮೋಟರ್‌ಸೈಕಲ್‌ಗಳು ಪ್ರಕೃತಿಯ ಸಶಕ್ತ ಶಕ್ತಿಗಳಿಗೆ ಬ್ರ್ಯಾಂಡ್‌ ಸಲ್ಲಿಸುವ  ಗೌರವ ಸೂಚಕವಾಗಿವೆ. ರೋಡ್‌ಸ್ಟರ್‌ನಲ್ಲಿ ಅಂತರ್ಗತವಾಗಿರುವ ಉತ್ಸಾಹ ಮತ್ತು ವೇಗದ ಭರವಸೆಯನ್ನು ಇವು ನೀಡುತ್ತವೆ. 

ನಮ್ಮ ಸಮುದಾಯಕ್ಕೆ ಸವಾರರನ್ನು ಆಕರ್ಷಿಸುವ ವಿಷಯದಲ್ಲಿ ಯೆಜ್ಡಿ ರೋಡ್‌ಸ್ಟರ್ ನಮಗೆ ಅದ್ಭುತ ಯಶಸ್ಸು ನೀಡಿದೆ. ಇದನ್ನು ಮಾರುಕಟ್ಟೆಗೆ ಪರಿಚಯಿಸಿದ ದಿನದಿಂದಲೇ ನಮ್ಮ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಇದು ಒಂದಾಗಿದೆ. ಈಗಾಗಲೇ ದೇಶದಾದ್ಯಂತ ಅದರ ಸವಾರರಿಗೆ ಎಣಿಕೆಗೆ ನಿಲುಕದಷ್ಟು ಸಾಹಸಗಳನ್ನು ಮತ್ತು ಅನುಭವಗಳನ್ನು ನೀಡಿದೆ. ಮೋಟರ್‌ಸೈಕಲ್‌ನ ನಿಜವಾದ ನಿಷ್ಠೆ ಮತ್ತು ನಂಬಿಕೆಯ ಪಾತ್ರಕ್ಕೆ ಇದು ಹೇಳಿಮಾಡಿಸಿದಂತಿದೆ. ಹೊಸ ಇನ್‌ಫೆರ್ನೊ ರೆಡ್ ಮತ್ತು ಗ್ಲೇಷಿಯಲ್ ವೈಟ್ ಬಣ್ಣಗಳು ನಮ್ಮ ರೋಡ್‌ಸ್ಟರ್ ಶ್ರೇಣಿಗೆ ಹೊಸ ಉತ್ಸಾಹ ತುಂಬಿವೆ.   ಮೋಟರ್‌ಸೈಕಲ್‌  ಇನ್ನಷ್ಟು ಎದ್ದು ಕಾಣುವಂತೆ ಈ ಬಣ್ಣಗಳು ನೆರವಾಗಲಿವೆ.  ಜೊತೆಗೆ ಹೆಚ್ಚೆಚ್ಚು ಸವಾರರನ್ನು ತನ್ನತ್ತ ಆಕರ್ಷಿಸಲಿದೆ ಎಂದು  ಕ್ಲಾಸಿಕ್ ಲೆಜೆಂಡ್ಸ್‌ನ ಸಿಇಒ ಆಶಿಶ್ ಸಿಂಗ್ ಜೋಶಿ ಹೇಳಿದ್ದಾರೆ.

‘ಈ ಮೋಟರ್‌ಸೈಕಲ್ ನೀಡುವ ಅಂತಿಮ 'ರೋಡ್‌ಸ್ಟರ್' ಅನುಭವವು ಬದಲಾಗದೆ ಹಾಗೆಯೇ ಉಳಿದಿದೆ. ಯೆಜ್ಡಿ ರೋಡ್‌ಸ್ಟರ್, ಉತ್ಕೃಷ್ಟ ಬಗೆಯ 'ರೋಡ್‌ಸ್ಟರ್' ಮೋಟರ್‌ಸೈಕಲ್‌ನ ಪರಿಪೂರ್ಣ ಅಭಿವ್ಯಕ್ತಿಯಾಗಿದೆ. ಅದರ ಹೊರ ಮೈ, ಅತ್ಯುತ್ತಮ ಪ್ರಮಾಣಿತ ರೂಪ ಮತ್ತು ಸಶಕ್ತ ಎಂಜಿನ್ನಿನ ನೆರವಿನಿಂದ ನಗರದಲ್ಲಿನ ಸಂಚಾರ ಅಥವಾ ಹೆದ್ದಾರಿಗಳಲ್ಲಿನ ದೂರ ಪ್ರಯಾಣಕ್ಕೆ ನೆರವಾಗುವ ರೀತಿಯಲ್ಲಿ ಸಮರ್ಥ ಸ್ವರೂಪದ ಚಾಸಿಸ್‌ ಅಳವಡಿಸಲಾಗಿದೆ’ ಎಂದೂ ಜೋಶಿ ಹೇಳಿದ್ದಾರೆ.

 

Yezdi Is Back ಭಾರತದಲ್ಲಿ ಯೆಜ್ಡಿ ಗತವೈಭವ ಆರಂಭ, ಹೊಚ್ಚ ಹೊಸ 3 ಬೈಕ್ ಬಿಡುಗಡೆ!

ಪವರ್‌ಟ್ರೇನ್ ವಿಷಯದಲ್ಲಿ, ಯೆಜ್ಡಿ ರೋಡ್‌ಸ್ಟರ್ ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್, ಡಿಒಎಚ್‌ಸಿ  ಸಿಂಗಲ್ ಸಿಲಿಂಡರ್ 334ಸಿಸಿ ಎಂಜಿನ್‌ನಿಂದ ಚಾಲಿತವಾಗಿದೆ, ಇದು 29.7ಪಿಎಸ್‌ @ 7300ಆರ್‌ಪಿಎಂ ಮತ್ತು ಗರಿಷ್ಠ ಟಾರ್ಕ್ 29ಎನ್‌ಎಂ @ 6500 ಆರ್‌ಪಿಎಂ ನೀಡುತ್ತದೆ. ಇದು ನಗರದ ಒಳಗಿನ ಹಾಗೂ ಹೆದ್ದಾರಿಗಳಲ್ಲಿ ಮುನ್ನುಗ್ಗುವ ಕಾರ್ಯಕ್ಷಮತೆಗೆ ನೆರವಾಗುತ್ತದೆ. ಎಂಜಿನ್ ಅನ್ನು 6 ಬಗೆಯ  ಸ್ಪೀಡ್‌ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದು ವೇಗವನ್ನು ಸುಲಲಿತವಾಗಿ ಬದಲಿಸಲು ಪ್ರಮಾಣಿತ ನೆರವು ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರುತ್ತದೆ.

ಈ ಮೋಟರ್‌ಸೈಕಲ್, ಡ್ಯುಯಲ್  ಕ್ರ್ಯಾಡಲ್ ಚಾಸಿಸ್‌ ಒಳಗೊಂಡಿದೆ. ನೇರ ಅಥವಾ ಅಂಕುಡೊಂಕಾದ ರಸ್ತೆಗಳಲ್ಲಿ ಸುಲಲಿತ ಸವಾರಿಗೆ ಸ್ಥಿರತೆ ನೀಡುವುದಕ್ಕೆ ನೆರವಾಗುವ ರೀತಿಯಲ್ಲಿ ಇದರ ವಿನ್ಯಾಸ ಮಾಡಲಾಗಿದೆ.  ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್  ಬಗೆಯಲ್ಲಿ ಬ್ರೇಕಿಂಗ್ ನಿರ್ವಹಿಸಬಹುದಾಗಿದೆ.  ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಸಜ್ಜುಗೊಳಿಸಲಾಗಿದೆ.  ಫ್ಲೋಟಿಂಗ್ ಕ್ಯಾಲಿಪರ್‌ಗಳ ಮೂಲಕ ಬ್ರೇಕಿಂಗ್ ಅನುಭವವನ್ನು ಸಂಪೂರ್ಣವಾಗಿ ಸಂತಸದ ರೀತಿಯಲ್ಲಿ ನೀಡುತ್ತದೆ.

ರಸ್ತೆ ಮೇಲಿನ ರೋಡ್‌ಸ್ಟರ್‌ನ ಸವಾರಿಯ ನಂಬಿಕೆಗೆ   ಆರಾಮದಾಯಕ ಸ್ಪ್ಲಿಟ್ ಸೀಟ್‌ಗಳು, ಕಾಂಪ್ಯಾಕ್ಟ್ ಹೆಡ್‌ಲ್ಯಾಂಪ್ ಮತ್ತು ಒಟ್ಟಾರೆ ವಿನ್ಯಾಸಕ್ಕೆ ದೃಢತೆ  ನೀಡಲು ಎಂಜಿನ್‌ ಅನ್ನು ದೃಢವಾಗಿ  ಜೋಡಿಸಲಾಗಿದೆ. ಮಿಶ್ರ ಲೋಹದ ಚಕ್ರಗಳು, ಜೊತೆಗೆ ದಪ್ಪ ಗಾತ್ರದ ಟೈರ್‌ಗಳು, ಚಕ್ರಗಳ ಚೌಕಟ್ಟು ಆಕರ್ಷಕ ನೋಟಕ್ಕೆ ಹೊಸ ಮೆರುಗು ನೀಡುತ್ತವೆ. ಗರಿಷ್ಠ ಸ್ಪಷ್ಟತೆಯ ಪ್ರದರ್ಶಕ ಹೊಂದಿರುವ ಡಿಜಿಟಲ್ ಸ್ಪೀಡೊಮೀಟರ್‌, ಸವಾರರಿಗೆ ಮೋಟರ್‌ಸೈಕಲ್‌ನ ಪ್ರಮುಖ ಮಾಹಿತಿ ಒದಗಿಸುತ್ತದೆ.   ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು ಒಟ್ಟಾರೆಯಾಗಿ ಉತ್ತಮ ಬೆಳಕು ನೀಡುತ್ತವೆ.

ಯೆಜ್ಡಿಯ ಮೂರು ಉದ್ದೇಶಿತ ಹೊಸ ಮಾದರಿಗಳಲ್ಲಿ, ರೋಡ್‌ಸ್ಟರ್ ಮೋಟರ್‌ಸೈಕಲ್ ಕೂಡ ಒಂದಾಗಿದೆ. ಅದು ಯೆಜ್ಡಿಯ ರೋಮಾಂಚನಕಾರಿ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಪ್ರತಿ ದಿನದ ಸವಾರಿಯು ವಿಶೇಷ ಅನುಭವ ನೀಡುವ ಬಗೆಯಲ್ಲಿ ಇದರ ವಿನ್ಯಾಸ ರೂಪಿಸಲಾಗಿದೆ. ರಸ್ತೆ ಮೇಲಿನ  ಅದರ ಸಂಪೂರ್ಣ  ಉಪಸ್ಥಿತಿ, ಸದೃಢ ಸ್ವರೂಪದ ಚಲನೆ ಮತ್ತು ಅಸಾಧಾರಣ ಕಾರ್ಯಕ್ಷಮತೆಯೊಂದಿಗೆ ದೈನಂದಿನ ಸವಾರಿಗೆ ತುಂಬ ಉಪಯುಕ್ತವಾಗಿರುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ರೋಡ್‌ಸ್ಟರ್, ಯೆಜ್ಡಿಯ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲಿದೆ. ಅದು ಇಡೀ ವಿಶ್ವವನ್ನು ಪ್ರದಕ್ಷಣೆ ಹಾಕುವ ಮತ್ತು  ಖಂಡಾಂತರ ಸಾಹಸಗಳಲ್ಲಿ ಭಾಗವಹಿಸಲು ಸೂಕ್ತ ಆಯ್ಕೆಯ ಮೋಟರ್‌ಸೈಕಲ್ ಆಗಿ ರೂಪಿಸಿದೆ.  ಸರಳತೆ, ವಿಶ್ವಾಸಾರ್ಹತೆ ಮತ್ತು ದೃಢತೆಯು ಸಾಹಸ ಮನೋಭಾವದ ಸವಾರರ ಸಾಹಸಚರ್ಯೆಯಲ್ಲಿ ಪರಿಪೂರ್ಣ ಪಾಲುದಾರನನ್ನಾಗಿ ಮಾಡಲಿದೆ.

ಯೆಜ್ಡಿ ರೋಡ್‌ಸ್ಟರ್, ಅದೇ ಮೊದಲಿನ ಉತ್ಸಾಹದೊಂದಿಗೆ ರೂಪುಗೊಂಡಿದೆ. ಉಮ್ಲಿಂಗ್-ಲಾ, ಥಾರ್ ಮರುಭೂಮಿ ಮತ್ತು ಈಶಾನ್ಯ ಭಾರತದ ಅನ್ವೇಷಿಸದ ಪ್ರದೇಶಗಳು ಒಳಗೊಂಡಂತೆ ಭಾರತದಲ್ಲಿನ ಪ್ರತಿಯೊಂದು ಸವಾಲಿನ ತಾಣಗಳಿಗೆ ಪ್ರಯಾಣಿಸಿದೆ. ರೋಡ್‌ಸ್ಟಾರ್‌ನ ಈ ಮೊದಲಿನ ಮೋಟರ್‌ಸೈಕಲ್‌ಗಳಂತೆ ಇದು ಕೂಡ ತನ್ನ  ಸವಾರರ ಸವಾರಿಯನ್ನು ಪುಳಕಗೊಳಿಸಲು ಸನ್ನದ್ಧಗೊಂಡಿದೆ

Follow Us:
Download App:
  • android
  • ios