5 ಸಾವಿರ ಪಾವತಿಸಿ ಯೆಜ್ಡಿ ಬೈಕ್ ಬುಕ್ ಮಾಡುವ ಅವಕಾಶ  ಅಡ್ವೆಂಚರ್, ಸ್ಕ್ರ್ಯಾಂಬ್ಲರ್ ಹಾಗೂ ರೋಡ್‌ಸ್ಟರ್ 3 ವೇರಿಯೆಂಟ್ ಬೈಕ್ ದಶಕಗಳ ಹಿಂದೆ ಅಬ್ಬರಿಸಿ ಇದೀಗ ಹೊಸ ತಂತ್ರಜ್ಞಾನ ಅದೇ ಖದರ್‌ನೊಂದಿಗೆ ಬಿಡುಗಡೆ ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿವೆ

ಮುಂಬೈ(ಜ.13):  ಭಾರತದಲ್ಲಿ ಯೆಜ್ಡಿ(Yezdi Motorcycles) ಗತವೈಭವ ಮರುಕಳಿಸಿದೆ. ದಶಕಗಳ ಹಿಂದೆ ಭಾರತದಲ್ಲಿ ಮಿಂಚಿ ಮರೆಯಾದ ಯೆಜ್ಡಿ ಇದೀಗ ಹೊಚ್ಚ ಹೊಸ ರೂಪ, ಹೊಸ ಅವತಾರ, ಹೊಸ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಹಳೆಯ ಹಾಗೂ ಹೊಸ ತಲೆಮಾರು ಸೇರಿದಂತೆ ಎಲ್ಲ ತಲೆಮಾರಿನ ಸವಾರರಿಗೆ ಮತ್ತಷ್ಟು ಹೆಚ್ಚಿನ ಭರವಸೆಗಳನ್ನು ತುಂಬಿದೆ. ಕ್ಲಾಸಿಕ್ ಲೆಜೆಂಡ್ಸ್ ಮೂರು ಹೊಚ್ಚ ಹೊಸ ಯೆಜ್ಡಿ ಬೈಕ್ ಬಿಡುಗಡೆ ಮಾಡಿದೆ. 

ಯೆಜ್ಡಿ ಅಡ್ವೆಂಚರ್, ಯೆಜ್ಡಿ ಸ್ಕ್ರಾಂಬ್ಲರ್ ಹಾಗೂ ಯೆಜ್ಡಿ ರೋಡ್‌ಸ್ಟರ್ ಸ್ಪೋರ್ಟ್(Yezdi Adventure, Scrambler and Roadster) ಎಂಬ ಮೂರು ಭಿನ್ನ ಮಾದರಿಗಳು ಬಿಡುಗಡೆಯಾಗಿದೆ. ನೂತನ ಬೈಕ್ ಬುಕ್ ಮಾಡಲು ಕೇವಲ 5,000 ರೂಪಾಯಿ ಪಾವತಿಸಿದರೆ ಸಾಕು. ಬುಕಿಂಗ್ ಆರಂಭಗೊಂಡಿದ್ದು, ಇದೀಗ ಬೈಕ್ ಪ್ರಿಯರು ಹಳೇ ಖದರ್ ಮರುಕಳಿಸಿದ ಸಂತಸದಲ್ಲಿದ್ದಾರೆ. ಜೊತೆಗೆ ಬುಕಿಂಗ್‌ಗೆ ಮುಗಿಬಿದ್ದಾರೆ. 

Yezdi Bike ಭಾರತದಲ್ಲಿ ಮತ್ತೆ ಯೆಜ್ಡಿ ಯುಗ ಆರಂಭ, 3 ಹೊಸ ಬೈಕ್‌ಗಳೊಂದಿಗೆ ಜ.13ಕ್ಕೆ ಯೆಜ್ಡಿ ಬಿಡುಗಡೆ!

ಆಧುನಿಕ ತಂತ್ರಜ್ಞಾನ ಮತ್ತು ರೆಟ್ರೊ ಸ್ಟೈಲಿಂಗ್ ಸರಣಿಯಿಂದ ತುಂಬಿದ ಹೊಸ ತಲೆಮಾರಿನ ಯೆಜ್ಡಿ ಮೋಟಾರ್‌ಸೈಕಲ್‌ಗಳು(generation of Yezdi motorcycles) ಲಿಕ್ವಿಡ್-ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್, DOHC ಸಿಂಗಲ್ ಸಿಲಿಂಡರ್ ಎಂಜಿನ್ 344cc ಎಂಜಿನ್ ಹೊಂದಿದೆ. ಯೆಜ್ಡಿ ಅಡ್ವೆಂಚರ್ ಬೈಕ್ 2,09,900 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು ಯೆಜ್ಡಿ ಸ್ಕ್ರಾಂಬ್ಲರ್ ಬೈಕ್ 2,04,900 ರೂಪಾಯಿಂದ ಆರಂಭಗೊಳ್ಳುತ್ತಿದೆ. 3ನೇ ಮಾದರಿಯಾಗಿರುವ ಯೆಜ್ಡಿ ರೋಡ್‌ಸ್ಟರ್ 1,98,142 ರೂಪಾಯಿಂದ ಆರಂಭಗೊಳ್ಳುತ್ತಿದೆ. ಇದು ಎಕ್ಸ್ ಶೋ ರೂಂ, ದೆಹಲಿ ಬೆಲೆಗಳಾಗಿವೆ.

ಹೊಚ್ಚ ಹೊಸ ಯೆಜ್ಡಿ ಅಡ್ವೆಂಚರ್, ಸ್ಕ್ರಾಂಬ್ಲರ್ ಮತ್ತು ರೋಡ್‌ಸ್ಟರ್ ಸ್ಪೋರ್ಟ್ ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿದ್ದರೂ ಕೆಲ ಸಾಮ್ಯತೆಗಳಿವೆ. ಈ ಮೂಲಕ ಯೆಜ್ಡಿಯ ವೈಶಿಷ್ಠ್ಯತೆಗಳನ್ನು ಸಾಕಾರಗೊಳಿಸಿದೆ. ಹೊಸ ಮಾದರಿಯ ಯೆಜ್ಡಿ ಮೋಟಾರ್‌ಸೈಕಲ್‌ಗಳು ಕ್ಲಾಸಿಕ್ ಲೆಜೆಂಡ್ಸ್ ಡೀಲರ್‌ಶಿಪ್ ನೆಟ್‌ವರ್ಕ್‌ನಲ್ಲಿ ಲಭ್ಯವಿದೆ. ಕ್ಲಾಸಿಕ್ ಲೆಜೆಂಡ್ ಮಹೀಂದ್ರ ಒಡೆತತನ ಸಂಸ್ಥೆಯಾಗಿದೆ. ಇದೇ ಕ್ಲಾಸಿಕ್ ಲೆಜೆಂಡ್ ಭಾರತದಲ್ಲಿ ಜಾವಾ ಬೈಕ್ ಬಿಡುಗಡೆ ಮಾಡಿದೆ. ಇದೀಗ ಯೆಜ್ಡಿ ಸರದಿ.

ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

ಯೆಜ್ಡಿಯಂತಹ ದಂತಕಥೆ ಎನಿಸಿದ ಬೈಕ್‌ಗ ಮರು ಬಿಡುಗಡೆ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಅದರ ಯೆಜ್ಡಿ ಡೈ-ಹಾರ್ಡ್ ಫ್ಯಾನ್ಸ್ ಮನಸ್ಸಿನಲ್ಲಿ ಈಗಲೂ ನೆಲೆನಿಂತಿರುವ ಬೈಕ್. ಆದರೆ ಈ ಬೈಕ್ ಮತ್ತೆ ಭಾರತದ ರಸ್ತೆಗಿಳಿಯಲಿದೆ ಅನ್ನೋದು ಹಲವರು ಊಹಿಸಿರಲಿಲ್ಲ. ನಮಗೂ ಅಸಾಧ್ಯವಾಗಿತ್ತು. ಮೋಟರ್ ಸೈಕ್ಲಿಸ್ಟ್ ಆಗಿರುವ ನನಗೆ ಇದು ಒಂದು ರೀತಿ ಮತ್ಸರದ ಕ್ಷಣವಾಗಿದೆ. ಬ್ರ‍್ಯಾಂಡ್‌ನ ಪಾಲಕರಾಗಿ, ನಾವು ಈ ಹೊಸ ಅವತಾರಗಳಲ್ಲಿ ಯೆಜ್ಡಿ ಮತ್ತು ಯೆಜ್ಡಿ ಸವಾರರ ಸಾರವನ್ನು ಸಂರಕ್ಷಿಸುತ್ತೇವೆ ಮತ್ತು ಸಂಭ್ರಮಿಸುತ್ತೇವೆ ಎಂದು ಖಚಿತಪಡಿಸಿಕೊಂಡಿದ್ದೇವೆ. ಪ್ರತಿಯೊಬ್ಬ ಯೆಜ್ಡಿ ಪ್ರೇಮಿಯೂ ಅದನ್ನು ಅನುಭವಿಸುತ್ತಾನೆ ಎಂಬ ಖಾತ್ರಿ ನನಗಿದೆ. ಇದನ್ನು ಉತ್ಸಾಹ ಮತ್ತು ವೈಭೋಗದ ನಂಬಿಕೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ, ಇಷ್ಟು ಮಾತ್ರವಲ್ಲದೇ ವಿಶಿಷ್ಟ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ, ಈ ಮೋಟಾರ್‌ಸೈಕಲ್ ಮತ್ತು ಮೋಟಾರ್‌ಸೈಕ್ಲಿಂಗ್‌ನೊಂದಿಗೆ ನಿಮ್ಮನ್ನು ಮತ್ತೆ ಪ್ರೀತಿಸುವಂತೆ ಮಾಡುತ್ತದೆ ಎಂದು ಕ್ಲಾಸಿಕ್ ಲೆಜೆಂಡ್ಸ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ ಹೇಳಿದ್ದಾರೆ. 

ಯೆಜ್ಡಿ ಬ್ರಾಂಡ್ ಕಥೆಗಳು ಮತ್ತು ಭಾವನೆಗಳಿಗೆ ಸಂಬಂಧಿಸಿದೆ. ಅದು ಅದನ್ನು ಜೀವಂತವಾಗಿರಿಸಿದೆ ಮತ್ತು ಭವಿಷ್ಯಕ್ಕಾಗಿ ನಾವು ನಿರ್ಮಿಸಲು ಬಯಸುವುದು ಇದನ್ನೇ. ಹೊಸ ಯೆಜ್ಡಿ ಮೋಟಾರ್‌ಸೈಕಲ್‌ಗಳು ಕೇವಲ ಮೋಟಾರ್‌ಸೈಕಲ್‌ಗಳಲ್ಲ, ಆದರೆ ಜೀವನ ವಿಧಾನವಾಗಿದೆ. ಸವಾರರು ಅಲ್ಲಿಗೆ ಹೋಗಲು, ಹೆಚ್ಚಿನ ನೆನಪುಗಳನ್ನು ಸೃಷ್ಟಿಸಲು ಮತ್ತು ಹಾಗೆ ಮಾಡುವಾಗ ಸಾಟಿಯಿಲ್ಲದ ಮೋಜು ಮಾಡಲು ಅವು ಒಂದು ಮಾಧ್ಯಮವಾಗಿದೆ. ಇದು ಎಂದಿಗೂ ಮುಗಿಯದ ಸಾಹಸವಾಗಿದ್ದು ಅದು ಮುಂದಿನ ಹಂತಕ್ಕೆ ಒಯ್ಯುತ್ತದೆ ಎಂದು ಕ್ಲಾಸಿಕ್ ಲೆಜೆಂಡ್ಸ್ ಸಹ ಸಂಸ್ಥಾಪಕ ಬೊಮನ್ ಇರಾನಿ ಹೇಳಿದ್ದಾರೆ. 

1971ರ ಯುದ್ಧದ ಗೆಲುವಿಗೆ 50 ವರ್ಷ; ಖಾಕಿ ಮತ್ತು ಮಿಡ್‌ನೈಟ್ ಗ್ರೇ ಬಣ್ಣಗಳಲ್ಲಿ ಜಾವಾ ಬೈಕ್‌!

ಹೊಸ ಯೆಜ್ಡಿ ಮೋಟಾರ್‌ಸೈಕಲ್ (ಗಳು) ಅನ್ನು ಅಭಿವೃದ್ಧಿಪಡಿಸುವಾಗ ನಮಗೆ ಇರುವ ದೊಡ್ಡ ಸವಾಲೆಂದರೆ ಅದರ ಚೈತನ್ಯಸ್ಫೂರ್ತಿಯನ್ನು ಹಾಗೆಯೇ ಉಳಿಸುವುದು. ಕಳೆದ ಕೆಲವು ದಶಕಗಳಲ್ಲಿ ಮೋಟಾರ್‌ಸೈಕಲ್ ಸವಾರರು ವಿಕಸನಗೊಂಡಿದ್ದಾರೆ ಮತ್ತು ಹೆಚ್ಚು ಕೇಂದ್ರೀಕೃತ ವಿಧಾನವನ್ನು ಅನುಸರಿಸುತ್ತಿದ್ದಾರೆ ಎಂದು ನಮಗೆ ತಿಳಿದಿತ್ತು. ನೀವು ಈಗ ನೋಡುತ್ತಿರುವುದು ಶ್ರೇಣಿಗಳಾದ್ಯಂತ ಸವಾರಿ ಅವಶ್ಯಕತೆಗಳಿಗಾಗಿ ಮೂರು ಮೋಟಾರ್‌ಸೈಕಲ್‌ಗಳನ್ನು 'ನಿರ್ದಿಷ್ಟ ಉದ್ದೇಶದಿಂದ ನಿರ್ಮಿಸಲಾಗಿದೆ'. ನಾವು ಯಾವಾಗಲೂ ದೇಶದಲ್ಲಿ ಮಾಡರ್ನ್ ಕ್ಲಾಸಿಕ್ ವಿಭಾಗವನ್ನು ಮರು ವ್ಯಾಖ್ಯಾನಿಸುತ್ತಿದ್ದೇವೆ ಮತ್ತು ಮತ್ತಷ್ಟು ಮುಂದಕ್ಕೆ ಹೋಗಿದ್ದೇವೆ ಮತ್ತು ಅದನ್ನೇ ಸದಾ ಮಾಡುತ್ತಾ ಬಂದಿದ್ದೇವೆ ಎಂದು ಕ್ಲಾಸಿಕ್ ಲೆಜೆಂಡ್ಸ್ ಸಿಇಒ ಆಶಿಶ್ ಜೋಶಿ ಹೇಳಿದ್ದಾರೆ.