Upcoming Yamaha Bike ಶೀಘ್ರದಲ್ಲಿ ಯಮಹಾ FZ, FZS ಡಿಲಕ್ಸ್ ಬೈಕ್ ಬಿಡುಗಡೆ, ಬೆಲೆ, ಫೀಚರ್ಸ್ ಬಹಿರಂಗ!
- ಹೊಸ ವರ್ಷದ ಆರಂಭದಲ್ಲೇ ಸಿಹಿ ಸುದ್ದಿ ನೀಡಿದ ಯಮಹಾ
- ಹೊಚ್ಚ ಹೊಸ ಯಮಹಾ FZ, FZS ಡಿಲಕ್ಸ್ ಬೈಕ್ ಬೆಲೆ ಬಹಿರಂಗ
- ಕೈಗೆಟುಕುವ ದರದಲ್ಲಿ ನೂತನ ಬೈಕ್ ಮಾರಕಟ್ಟೆಗೆ ಶೀಘ್ರವೇ ಎಂಟ್ರಿ
ನವದೆಹಲಿ(ಜ.01): ಹೊಸ ವರ್ಷದಲ್ಲಿ(New Year 2022) ಹಲವು ಕಾರು ಬೈಕ್, ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ಈ ವರ್ಷ ಅತ್ಯುತ್ತಮ ಮಾರಾಟ ಹಾಗೂ ವಹಿವಾಟು ನಡೆಸಲು ಆಟೋಮೊಬೈಲ್(Automobile) ಕಂಪನಿಗಳು ಸಜ್ಜಾಗಿದೆ. ಇದೀಗ ಯಮಹಾ ಇಂಡಿಯಾ(Yamaha India) ಅಪ್‌ಡೇಟೆಡ್ ಮಾಡೆಲ್ FZ, FZS ಡಿಲಕ್ಸ್ ಬೈಕ್ ಶೀಘ್ರದಲ್ಲೇ ಮಾಡಲಿದೆ ಎಂದು ಖಚಿತ ಪಡಿಸಿದೆ. ಬಿಡುಗಡೆಗೂ ಮೊದಲು ನೂತನ ಬೈಕ್ ಬೆಲೆ ಬಹಿರಂಗವಾಗಿದೆ.
ಯಮಹಾ FZ, FZS ಡಿಲಕ್ಸ್ ಬೈಕ್ ಬೆಲೆ
ಭಾರತದಲ್ಲಿ ಯಮಹಾ ಅಪ್‌ಡೇಟೆಡ್ ಮಾಡೆಲ್‌ಗಳಾದ FZ, FZ-S ಹಾಗೂ FZ ಡಿಲಕ್ಸ್ ಮಾಡೆಲ್ ಬೈಕ್ ಶೀಘ್ರವೇ ಭಾರತದ ಮಾರುಕಟ್ಟೆ ಬಿಡುಗಡೆಯಾಗಲಿದೆ. ಯಮಹಾ FZ ಬೆಲೆ 1.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು FZ-S ಮಾಡೆಲ್ ಬೈಕ್ ಬೆಲೆ 1.16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು FZ ಡಿಲಕ್ಸ್ ಮಾಡೆಲ್ ಬೆಲೆ 1.19 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!
ಯಮಹಾ 2022 ಬೈಕ್ ಹೊಸ ಬಣ್ಣಗಳಲ್ಲಿ ಲಭ್ಯ
ನೂತನ ಬೈಕ್‌ನಲ್ಲಿ ಮತ್ತೊಂದು ಬದಲಾವಣೆ ಎಂದರೆ ಹಲವು ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. ಯಮಹಾ ಬೇಸ್ ಮಾಡೆಲ್ FZ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು FZS ಬೈಕ್ ಹೆಚ್ಟುವರಿ ನಾಲ್ಕು ಹೊಸ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಟಾಪ್ ಮಾಡೆಲ್ FZS ಡಿಲಕ್ಸ್ ಮಾಡೆಲೆ 3 ಶೇಡ್ ಬಣ್ಣಗಳಲ್ಲೂ ಲಭ್ಯವಿದೆ.
ಇನ್ನು LED ಟೈಲ್‌ಲೈಟ್ಸ್, ಕಲರ್ಡ್ ಅಲೋಯ್ ವ್ಹೀಲ್, ಡ್ಯುಯೆಲ್ ಟೋನ್ ಸೀಟ್, LED ಫ್ಲಾಶರ್ಸ್ ಫೀಚರ್ಸ್ ಲಭ್ಯವಿದೆ. ಬೇಸ್ ಮಾಡೆಲ್ ಬೈಕ್‌ಗೆ ಹೆಚ್ಚುವರಿ ಫೀಚರ್ಸ್ ಸೇರಿಸಿಲ್ಲ. ಈ ಬೈಕ್‌ನಲ್ಲಿ ಈಗಾಗಲೇ LED ಹೆಡ್‌ಲೈಟ್ಸ್, ಇನ್ಸ್‌ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಎಂಜಿನ್ ಸೇರಿದಂತೆ ಹಲವು ಫೀಚರ್ಸ್ ಈಗಾಗಲೇ ನೀಡಲಾಗಿದೆ. ಟಾಪ್ ಮಾಡೆಲ್ ಯಮಹಾ FZ ಡಿಲಕ್ಸ್ ಬೈಕ್‌ನಲ್ಲಿ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಬ್ಲೂಟೂಥ್ ಸೇರಿದಂತೆ ಕೆಲ ಫೀಚರ್ಸ್ ಹೆಚ್ಚುವರಿಯಾಗಿ ನೀಡಲಾಗಿದೆ.
ಯಮಹಾದಿಂದ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್
ಯಮಹಾ ಬೈಕ್ 149ಸಿಸಿ , 2 ವೇಲ್ವ್, ಸಿಂಗಲ್ ಸಿಲಿಂಡರ್, 12.2 bhp ಪವರ್ ಹಾಗೂ13.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಡಿಸ್ಕ್ ಬ್ರೇಕ್ ಸೇರಿದಂತೆ ಸುರಕ್ಷತಾ ಫೀಚರ್ಸ್ ಲಭ್ಯವಿದೆ.
ಭಾರತದಲ್ಲಿ ಯಮಹಾ ಬೈಕ್:
ಯಮಹಾ ಕಂಪನಿ 1955ರಿಂದ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಯಮಹಾ ಬೈಕ್ ಮೋಡಿದ ಮಾಡಿ ಇಂದಿಗೂ ಯಾರೂ ಮರೆತಿಲ್ಲ. ಅದರಲ್ಲೂ RX ಬೈಕ್ ಸ್ಥಗಿತಗೊಂಡು ವರ್ಷಗಳೇ ಉರುಳಿದರೂ ಕ್ರೇಜ್ ಇನ್ನೂ ಹಾಗೇ ಇದೆ. ಈಗಲೂ RX ಸೆಕೆಂಡ್ ಹ್ಯಾಂಡ್ ಬೈಕ್ ಬೆಲೆ ದುಬಾಯಾಗಿದೆ. ಅಷ್ಟರಮಟ್ಟಿದೆ ಯಮಹಾ ಭಾರತದಲ್ಲಿ ಜನರನ್ನು ಮೋಡಿ ಮಾಡಿದೆ. ಭಾರತದಲ್ಲಿ ಸ್ಪೋರ್ಟ್ಸ್ ಬೈಕ್, ಸ್ಕೂಟರ್ ಬೈಕ್ ಮೂಲಕ ಈಗಲೂ ಯಮಹಾ ತನ್ನದೇ ಆದ ಸ್ಥಾನ ಸಂಪಾದಿಸಿದೆ. ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಯಹಮಾ ಅತ್ಯುತ್ತಮ ದಾಖಲೆಯನ್ನು ಬರೆದಿದೆ.
ಜಪಾನ್ ಆಟೋಮೊಬೈಲ್ ಕಂಪನಿ 1955ರಲ್ಲಿ ಬೈಕ್ ಉತ್ಪಾದನೆ ಆರಂಭಿಸಿತು. ಮೊದಲಿಗೆ 125ಸಿಸಿ ಬೈಕ್ ಉತ್ಪಾದನೆ ಮಾಡಿತ್ತು ಇದೀಗ ಹೈಯರ್ ರೇಂಜ್, ಹೈಯರ್ ಸಿಸಿ ಬೈಕ್ ಉತ್ಪಾದನೆಯನ್ನೂ ಮಾಡುತ್ತಿದೆ. ಈ ಮೂಲಕ ವಿಶ್ವದಲ್ಲೇ ಅತೀ ದೊಡ್ಡ ಮೋಟಾರ್‌ಸೈಕಲ್ ಕಂಪನಿಯಾಗಿ ಬೆಳೆದಿದೆ. ಭಾರತದಲ್ಲಿ ಅತೀ ದೊಡ್ಡ ಮೋಟಾರುಸೈಕಲ್ ಕಂಪನಿಯಾಗಿದೆ.