Asianet Suvarna News Asianet Suvarna News

ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!

ದೇಶದ ದ್ವಿಚಕ್ರವಾಹನ ಉತ್ಪಾದನಾ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಯಮಹಾ ಮೋಟಾರ್ ಇಂಡಿಯಾ ಹೊಸ ಸ್ಕೂಟರ್ ಲಾಂಚ್. ಮಾಡಿದೆ. ಏರಾಕ್ಸ್ 155 ಅತ್ಯದ್ಭುತ ಪರ್ಫಾರ್ಮೆನ್ಸ್ ಸ್ಕೂಟರ್ ಆಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಈ ಸ್ಕೂಟರ್ ಗ್ರಾಹಕರಿ ಕೈಗೆ ಸಿಗಲಿದೆ.

Yamaha Aerox 155 Scooter launched to Indian Market
Author
Bengaluru, First Published Sep 22, 2021, 6:30 PM IST

ಹಬ್ಬದ ಸೀಸನ್‌ಗೆ ಯಮಹಾ ಮೋಟಾರ್ ಇಂಡಿಯಾ ಹೊಸ ಸ್ಕೂಟರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ದೇಶಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಭರಾಟೆ ಜೋರಾಗಿದೆ. ಹಾಗಿದ್ದೂ, ಕಂಪನಿ ಸಾಂಪ್ರದಾಯಿಕ ಮತ್ತು ಪವರ್ ಫುಲ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾದ ಯಮಹಾ ಕಂಪನಿ ಹೊಸ ಸ್ಕೂಟರ್- ಏರಾಕ್ಸ್ 155 ಮ್ಯಾಕ್ಸಿ ಸ್ಕೂಟರ್. ಇದೊಂದು ಪ್ರೀಮಿಯಂ ಸ್ಕೂಟರ್ ಆಗಿದ್ದು ದಿಲ್ಲಿಯಲ್ಲಿ ಇದರ ಬೆಲೆ 1.29 ಲಕ್ಷ ರೂ. ಇದೆ(ಶೋರೂಮ್ ಬೆಲೆ).  ಏರಾಕ್ಸ್ 155 ಸ್ಕೂಟರ್, ಆರ್‌ 15ರಿಂದ ಸಾಕಷ್ಟು ಪ್ರೇರಣೆ ಪಡೆದುಕೊಂಡಿದೆ. ಎಂಜಿನ್ ಆಗಲೀ, ವಿನ್ಯಾಸದ ದೃಷ್ಟಿಯಿಂದಾಗಲಿ ಆರ್ 15‌ ನೆರಳು ಎದ್ದು ಕಾಣುತ್ತದೆ. ನಿಮಗೆ ಅತ್ಯುತ್ತಮ ಪರ್ಫಾರ್ಮನ್ಸ್ ಸ್ಕೂಟರ್‌ ನಿರೀಕ್ಷೆಯಲ್ಲಿದ್ದರೆ, ಏರಾಕ್ಸ್ 155 ದಿ ಬೆಸ್ಟ್ ಸ್ಕೂಟರ್ ಆಗಿದೆ. ಕಂಪನಿಯು ಈ ತಿಂಗಳಾಂತ್ಯಕ್ಕೆ ಡೀಲರ್‌ಗಳಿಗೆ ಈ ಸ್ಕೂಟರ್ ರವಾನೆಯಾಗಲಿದೆ. 

ಮಾರುಕಟ್ಟೆಗೆ ಬಂತು ಸ್ಪೋರ್ಟ್ಸ್ ಸ್ಟೈಲಿಶ್ ಟಿವಿಎಸ್ ರೈಡರ್ 125

ಕಂಪನಿಯು ಏರಾಕ್ಸ್ 155 ಮ್ಯಾಕ್ಸಿ ಸ್ಕೂಟರ್‌ ಅನ್ನು ಮೂರು ಬಣ್ಣಗಳಲ್ಲಿ ನೀಡುತ್ತಿದೆ. ರೇಸಿಂಗ್  ಬ್ಲೂ, ಗ್ರೇ ವರ್ಮಿಲನ್ ಮತ್ತು ಎನರ್ಜಿ ಯಮಹಾ ಮೋಟೋಜಿಪಿ ಎಡಿಷನ್‌ಗಳಲ್ಲಿ ಮಾರಾಟಕ್ಕ ಸಿಗಲಿದೆ. ಪ್ರೀಮಿಯಂ ಮತ್ತು ಶಕ್ತಿಶಾಲಿ ಎಂಜಿನ್‌ ಒಳಗೊಂಡಿರುವ ಈ ಯಮಹಾ ಖಂಡಿತವಾಗಿಯೂ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಎಲ್ಲ ಸಾಧ್ಯತೆಗಳಿವೆ. 

ಈ ಸೆಗ್ಮೆಂಟ್‌ನಲ್ಲಿ ಈಗಾಗಲೇ ರಸ್ತೆಗಳಲ್ಲಿರುವ ಸ್ಕೂಟರ್‌ಗಳಿಗೆ ಹೋಲಿಸಿದರೆ, ಯಮಹಾ ಏರಾಕ್ಸ್ 155 ಪೂರ್ಣವಾಗಿ ಭಿನ್ನವಾಗಿದೆ. ಮ್ಯಾಕ್ಸಿ-ಸ್ಕೂಟರ್ ನೇರ ಮತ್ತು ಆಕ್ರಮಣಕಾರಿ ನೋಟದೊಂದಿಗೆ ಅಥ್ಲೆಟಿಕ್ ಪ್ರಮಾಣವನ್ನು ಪಡೆಯುತ್ತದೆ. ಈ ಸ್ಕೂಟರ್ ಅವಳಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ್ದು ಎಲ್‌ಇಡಿ ಪೊಸಿಷನ್ ಲೈಟ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್ ಆಕರ್ಷಕವಾಗಿವೆ. ಸ್ಕೂಟರ್ 14 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ ಮತ್ತು ಫ್ಯಾಟ್ 140 ಸೆಕ್ಷನ್ ರಿಯರ್ ಟೈರ್ ಲುಕ್ ಅನ್ನು ಸಂಪೂರ್ಣಗೊಳಿಸಿದೆ.

ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್ ಚಾಸಿಸ್ ವರ್ಧಿತ ನೇರ ರೇಖೆಯ ಸ್ಥಿರತೆಗಾಗಿ 5 ಮಿಮೀ ಉದ್ದದ ಜಾಡು ಪಡೆಯುತ್ತದೆ. ಇದು ಸ್ಕೂಟರ್‌ನ ನಿರ್ವಹಣಾ ಸಾಮರ್ಥ್ಯವನ್ನು ಉಳಿಸಿಕೊಳ್ಳುವಾಗ ಹೆಚ್ಚು ಮೋಟಾರ್‌ಸೈಕಲ್ ತರಹದ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ. ಸ್ಕೂಟರ್ 26 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್ ಹೊಂದಿದೆ. ಹಾಗೆಯೇ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಎಬಿಎಸ್‌ನೊಂದಿಗೆ ಮುಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್‌ನಿಂದ ಬ್ರೇಕಿಂಗ್ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.

ಹುಂಡೈನ ಆಯ್ದ ಕಾರು ಖರೀದಿ ಮೇಲೆ ಗರಿಷ್ಟ 50000 ರೂ.ವರೆಗೆ ಲಾಭ

ಯಮಹಾ ಏರಾಕ್ಸ್ 155 ಸ್ಕೂಟರ್‌ನಲ್ಲಿ ಕಂಪನಿಯು ವೆರಿಯಬಲ್ ವಾಲ್ವ್ ಆಕ್ಚುವೇಷನ್(ವಿವಿಎ)ನೊದಿಂಗೆ ಸಿವಿಟಿ ಟ್ರಾನ್ಸಿಮಿಷನ್ ಇರುವ 155 ಸಿಸಿ ಎಂಜಿನ್ ಅಳವಡಿಸಿದೆ. ಫೋರ್ ಸ್ಟ್ರೋಕ್ಸ್, 4 ವಾಲ್ವ್ ಮೋಟಾರ್ 8000 ಆರ್‌ಪಿಎಮ್‌ನಲ್ಲಿ  13.7 ಬಿಎಚ್‌ಪಿ ಮತ್ತು ಗರಿಷ್ಠ 6,500 ಆರ್‌ಪಿಎಂನಲ್ಲಿ ಗರಿಷ್ಠ 13.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 

ಆರ್ 15 ಎಂಜಿನ್‌ಗೆ ಹೋಲಿಸಿದರೆ ಏರಾಕ್ಸ್ 155 ಸ್ಕೂಟರ್ ಎಂಜಿನ್ 4 ಬಿಎಚ್‌ಪಿ ಕಡಿಮೆ ಶಕ್ತಿಯನ್ನು ಉತ್ಪಾದಿಸುತ್ತದೆ. ಹೆಚ್ಚಿನ ಸಂಕೋಚನ ಅನುಪಾತವನ್ನು ಸಾಧಿಸಲು ಎಂಜಿನ್ ಹೊಸ ಸಿಲಿಂಡರ್ ಹೆಡ್ ಮತ್ತು ಕಾಂಪ್ಯಾ

ಕ್ಟ್ ದಹನ ಚೇಂಬರ್ ಅನ್ನು ಪಡೆಯುತ್ತದೆ, ದಹನ ದಕ್ಷತೆಯನ್ನು ಹೆಚ್ಚಿಸುತ್ತದೆ. ಕಡಿಮೆ ಘರ್ಷಣೆಗಾಗಿ ಡಯಾಸಿಲ್ ಲೇಪನದೊಂದಿಗೆ ಅದೇ ಹಗುರವಾದ ಖೋಟಾ ಪಿಸ್ಟನ್ ಅನ್ನು ಮೋಟಾರ್ ಬಳಸುತ್ತದೆ.
 

Yamaha Aerox 155 Scooter launched to Indian Market

ಸ್ಮಾರ್ಟ್ ಮೋಟಾರ್ ಜನರೇಟರ್ ಸಿಸ್ಟಮ್, ಆಟೋಮೆಟಿಕ್ ಸ್ಟಾರ್ಟ್ ಮತ್ತು ಸ್ಟಾಪ್ ಸಿಸ್ಟಮ್ ಅನ್ನು ನೀವು ಈ ಹೊಸ ಏರಾಕ್ಸ್ 155 ಸ್ಕೂಟರ್‌ನಲ್ಲಿ ಕಾಣಬಹುದು. ಸ್ಪೀಡೋಮೀಟರ್ ಪ್ರದರ್ಶಿಸುವ  ಎಂಐಡಿ ಯುನಿಟ್ ಒಳಗೊಂಡಿರುವ ಎಲ್‌ಸಿಡಿ ಇನ್ಸುಟ್ರುಮೆಂಟ್‌, ವೈ ಕನೆಕ್ಟ್ ಆಪ್ ಫೋನ್ ನೋಟಿಫಿಕೇಷನ್, ಮೇಂಟೆನನ್ಸ್ ಶಿಫಾರಸುಗಳು, ರೆವ್ಸ್ ಡ್ಯಾಶ್‌ಬೋರ್ಡ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಈ ಸ್ಕೂಟರ್‌ಗಳಲ್ಲಿ ಕಾಣಬಹುದು.

ಮಿಡ್‌ಸೈಜ್ SUV ಆಸ್ಟರ್ ಪರಿಚಯಿಸಿದ ಎಂಜಿ ಹೆಕ್ಟರ್!

ಟು ಲೇವಲ್ ಸೀಟರ್, ಆಪ್ಷನಲ್ ಯುಎಸ್‌ಬಿ ಚಾರ್ಜರ್ ಕೂಡ ಈ ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್‌ನಲ್ಲಿ ನೋಡಬಹುದಾಗಿದೆ. ಕಂಪನಿಯು ಈ ಸ್ಕೂಟರ್‌ಗೆ 24.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಅನ್ನು ಸೀಟ್‌ ಕೆಳಗಡೆ ಒದಗಿಸಿದೆ. 

Follow Us:
Download App:
  • android
  • ios