ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ ಹೀರೋ ವಿಡಾ ಚಾರ್ಚಿಂಗ್ ಸೌಲಭ್ಯ ಆರಂಭ!

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಬಳಕೆ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಕೂಡ ಪ್ರಯತ್ನ ನಡೆಸುತ್ತಿದೆ. ಇದೀಗ ಬಹುಬೇಡಿಕೆ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೆ ಚಾರ್ಜಿಂಗ್ ಸೌಲಭ್ಯ ಹೆಚ್ಚಿಸಲಾಗಿದೆ. ಬೆಂಗಳೂರು ಸೇರದಂತೆ ಪ್ರಮುಖ ನಗರಗಳಲ್ಲಿ ಈ ಸೌಲಭ್ಯ ಒದಗಿಸಲಾಗಿದೆ.
 

VIDA EV scooter Powered by Hero initiated operations of its public charging infrastructure in Bengaluru Delhi and Jaipur ckm

ಬೆಂಗಳೂರು(ಫೆ.27): ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಹಾಗೂ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. ಹಲವು ಸ್ಟಾರ್ಟ್ ಕಂಪನಿಗಳು ಕೈಗೆಟುಕುವ ದರ ಹಾಗೂ ಗರಿಷ್ಠ ಮೈಲೇಜ್ ಇವಿ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇತ್ತ ಹೀರೋ ಬಿಡುಗಡೆ ಮಾಡಿರುವ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಗ್ರಾಹಕರಿಗೆ ಚಾರ್ಜಿಂಗ್ ಸಮಸ್ಯೆ ತಪ್ಪಿಸಲು ಹೀರೋ ಬೆಂಗಳೂರು, ದೆಹಲಿ ಹಾಗೂ ಜೈಪುರದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಅಳವಡಿಸಿದೆ.  ಸಾರ್ವಜನಿಕ ಬಳಕೆಗಾಗಿ ಮೂರು ನಗರಗಳಲ್ಲಿ 50 ಸ್ಥಳಗಳಲ್ಲಿ ಸುಮಾರು 300 ಚಾರ್ಜಿಂಗ್ ಸ್ಟೇಷನ್‌ಗಳನ್ನುಆರಂಭಿಸಿದೆ. ಪ್ರಮುಖ ಸ್ಥಳಗಳಲ್ಲಿ ಚಾರ್ಜಿಂಗ್ ನೆಟ್‌ವರ್ಕ್ ಇದ್ದು, ಗ್ರಾಹಕರಿಗೆ ಇವು ಅನುಕೂಲ ಕಲ್ಪಿಸಿಕೊಡಲಿವೆ. ವಿಡಾ ಫಾಸ್ಟ್ ಚಾರ್ಜಿಂಗ್‌ ನೆಟ್‌ವರ್ಕ್‌ನಿಂದಾಗಿ ನಿಮಿಷಕ್ಕೆ 1.2 ಕಿ.ಮೀವರೆಗಿನ ವೇಗದಲ್ಲಿ ಗ್ರಾಹಕರು ತಮ್ಮ ಸ್ಕೂಟರ್ ಬ್ಯಾಟರಿಯನ್ನು ಚಾರ್ಜ್‌ ಮಾಡಿಕೊಳ್ಳಬಹುದು. ಪ್ರತಿ ಚಾರ್ಜಿಂಗ್ ಸ್ಟೇಷನ್‌ನಲ್ಲೂ ಡಿಸಿ ಮತ್ತು ಎಸಿ ಚಾರ್ಜಿಂಗ್ ಸಾಕೆಟ್‌ಗಳು ಇರಲಿವೆ.

ಸಮಗ್ರ ಚಾರ್ಜಿಂಗ್‌ ಪಯಣಕ್ಕೆ 'ಮೈ ವಿಡಾ' ಮೊಬೈಲ್ ಆ್ಯಪ್ ಅನ್ನು ಗ್ರಾಹಕರು ಬಳಸಬಹುದು. ತಮ್ಮ ಸಮೀಪದ ಚಾರ್ಜಿಂಗ್ ಸ್ಟೇಷನ್ ಕಂಡುಕೊಳ್ಳಲು, ಚಾರ್ಜಿಂಗ್ ಸ್ಲಾಟ್ ರಿಸರ್ವ್‌ ಮಾಡಲು ಮತ್ತು ಆಪ್‌ನಿಂದ ಸ್ಟೇಷನ್‌ಗೆ ನ್ಯಾವಿಗೇಟ್ ಮಾಡಲು ಇದು ಸಹಾಯ ಮಾಡುತ್ತದೆ. ಇಡೀ ಪಾವತಿ ಪ್ರಕ್ರಿಯೆಯನ್ನು ಆಪ್ ಮೂಲಕ ನಿರ್ವಹಿಸಬಹುದಾಗಿದೆ. ಚಿಂತೆ ರಹಿತ ಇವಿ ವ್ಯವಸ್ಥೆ" ನಿರ್ಮಿಸುವ ಕುರಿತು ವಿಡಾ ಹೊಂದಿರುವ ಸಿದ್ಧಾಂತಕ್ಕೆ ಅನುಗುಣವಾಗಿ ಚಾರ್ಜಿಂಗ್‌ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಮತ್ತು ಜೈಪುರದಲ್ಲಿ ಎಕ್ಸ್‌ಪೀರಿಯನ್ಸ್‌ ಸೆಂಟರ್‌ಗಳನ್ನು ವಿಡಾ ಹೊಂದಿದೆ. ಪಾಪ್‌ ಅಪ್‌ ಸೆಂಟರ್‌ಗಳ ದೆಹಲಿ-ಎನ್‌ಸಿಆರ್‌ನಲ್ಲಿ ಇದ್ದು, ಇಲ್ಲಿ ಗ್ರಾಹಕರು ವಿದಾ ವಿ1 ಟೆಸ್ಟ್‌ ಡ್ರೈವ್ ಮಾಡಬಹುದು.

ಬೆಂಗಳೂರಿನಲ್ಲಿ ವಿಡ ಎಲೆಕ್ಟ್ರಿಕ್ ಸ್ಕೂಟರ್ ಮೊದಲ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭ!

 ವಿಡಾ ವಿಶ್ವದರ್ಜೆ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಎಲ್ಲ ಮೂರು ನಗರಗಳಲ್ಲಿ ವಿದಾ ವಿ1 ಡೆಲಿವರಿಗಳಿಗೂ ಮೊದಲೇ ಮಾಡಿದ್ದೇವೆ. "ಚಿಂತೆ ರಹಿತ ಇವಿ ವ್ಯವಸ್ಥೆ" ಕಲ್ಪಿಸುವ ನಮ್ಮ ಬ್ರ್ಯಾಂಡ್ ಭರವಸೆಗೆ ಅನುಗುಣವಾಗಿ, ಇವಿಗಳಿಗೆ ಗ್ರಾಹಕರು ಸರಾಗವಾಗಿ ಮತ್ತು ಕಿರಿಕಿರಿ ರಹಿತವಾಗಿ ಬದಲಾಗಲು ಅನುವು ಮಾಡುತ್ತಿದ್ದೇವೆ. ಸುಸ್ಥಿರತೆಯನ್ನೇ ಮುಖ್ಯ ಧ್ಯೇಯವನ್ನಾಗಿಟ್ಟುಕೊಂಡು ಮತ್ತು ತಂತ್ರಜ್ಞಾನವೇ ಪ್ರಥಮ ಎಂಬ ತತ್ವದಲ್ಲಿ ವಿದಾ ವರ್ಲ್ಡ್ ಅನ್ನು ನಾವು ಅಭಿವೃದ್ಧಿಪಡಿಸಿದ್ದೇವೆ . ವಿದಾ ವ್ಯವಸ್ಥೆ, ಉತ್ಪನ್ನ, ಸೇವೆಗಳು ಮತ್ತು ಚಾರ್ಜಿಂಗ್ ಮೂಲಸೌಕರ್ಯದ ಗ್ರಾಹಕ ಅನುಭವವು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿದೆ ಎಂದು ನಾವು ಆತ್ಮವಿಶ್ವಾಸ ಹೊಂದಿದ್ದೇವೆ. ಇತರ ನಗರಗಳಿಗೂ ನಮ್ಮ ವ್ಯವಸ್ಥೆಯನ್ನು ವಿಸ್ತರಿಸಲು ನಾವು ಈಗ ಯೋಜಿಸುತ್ತಿದ್ದೇವೆ ಎಂದು  ಹೀರೋ ಮೋಟೋಕಾರ್ಪ್‌ ವ್ಯವಾಹರ ಮುಖ್ಯಸ್ಥ ಡಾ.ಸ್ವದೇಶ್ ಶ್ರೀವಾಸ್ತವ  ಹೇಳಿದ್ದಾರೆ. 

ಕಸ್ಟಮ್ ಮೋಡ್ (100+ ಸಂಯೋಜನೆಗಳು), ಕ್ರೂಸ್ ಕಂಟ್ರೋಲ್, ಬೂಸ್ಟ್ ಮೋಡ್, ಟು ವೇ ಥ್ರೋಟಲ್‌, ಕೀ ರಹಿತ ಆಕ್ಸೆಸ್ ಮತ್ತು ಓವರ್ ದಿ ಏರ್ ಸಕ್ರಿಯಗೊಂಡಿರುವ 7 ಇಂಚು ಟಿಎಫ್‌ಟಿ ಟಚ್ ಸ್ಕ್ರೀನ್‌ ರೀತಿಯ ಉದ್ಯಮದಲ್ಲೇ ಮುಂಚೂಣಿಯಲ್ಲಿರುವ ವೈಶಿಷ್ಟ್ಯಗಳನ್ನು ವಿದಾ ವಿ1 ಒದಗಿಸುತ್ತದೆ. ವಿದಾ ವಿ1 ಮಾಡ್ಯುಲರ್, ಸ್ಕೇಲಬಲ್ ಮತ್ತು ಫ್ಲೆಕ್ಸಿಬಲ್ ಆಗಿರುವ ಇಂಟಲಿಜೆಂಟ್ ಪ್ಲಾಟ್‌ಫಾರಂ ಅನ್ನು ಆಧರಿಸಿದ್ದು, ಪ್ರಯಾಣಿಸುತ್ತಿರುವಾಗಲೇ ಕಲಿಯುವ ಮತ್ತು ಅಳವಡಿಸಿಕೊಳ್ಳುವ ಸೌಲಭ್ಯವನ್ನು ಹೊಂದಿಎ. ವಿದಾ ವಿ1 ಸವಾರರ ಜೊತೆಗೆ ಕಲಿಯುತ್ತದೆ.

ಈ ವಿಭಾಗಕ್ಕೆ ಹೊಸ ಅಪ್ರೋಚ್ ಅನ್ನು ಪರಿಚಯಿಸುತ್ತಿರುವ ವಿದಾ ಮೊಟ್ಟ ಮೊದಲ ಗ್ರಾಹಕರ ಪ್ರೊಪೊಸಿಶನ್‌ಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ಗ್ರೀನ್ ಇಎಂಐ, ದಕ್ಷ ಮತ್ತು ಸರಾಗ ಹಣಕಾಸು ವೇದಿಕೆ ಇದ್ದು, ವರ್ಗದಲ್ಲೇ ಉತ್ತಮ ಬಡ್ಡಿ ದರಗಳನ್ನು ಒದಗಿಸುತ್ತದೆ. ಉದ್ಯಮದಲ್ಲೇ ಪ್ರಥಮ ಬೈ ಬ್ಯಾಕ್ ಸ್ಕೀಮ್ ಇದ್ದು, ವಾಹನದ ಮಾಲೀಕತ್ವದ 16 ಮತ್ತು 18ನೇ ತಿಂಗಳುಗಳ ಮಧ್ಯೆ 70% ಖರೀದಿ ಮೌಲ್ಯದ ಬೈ ಬ್ಯಾಕ್ ಅನ್ನು ಒದಗಿಸುತ್ತದೆ. ಮೂರು ದಿನಗಳವರೆಗೆ ಟೆಸ್ಟ್‌ ರೈಡ್‌ ಒದಗಿಸಲಾಗುತ್ತಿದೆ. ಇದರಿಂದಾಗಿ, ವಾಹನ ಖರೀದಿಗೂ ಮೊದಲು ಗ್ರಾಹಕರು ಮನಃಶಾಂತಿಯನ್ನು ಹೊಂದಬಹುದು. ಉದ್ಯಮದಲ್ಲೇ ಪ್ರಥಮ ಉಪಕ್ರಮವಾಗಿರುವ ರಿಪೇರ್ ಆನ್ ಸೈಟ್ ಅನ್ನೂ ವಿದಾ ಒದಗಿಸುತ್ತದೆ. ಯಾವುದೇ ಸಮಯದಲ್ಲಿ, ಎಲ್ಲಾದರೂ ಸರ್ವೀಸ್‌ಗಳಿಗೆ ಗ್ರಾಹಕ ಎಕ್ಸೆಕ್ಯೂಟಿವ್‌ಗಳು ಲಭ್ಯವಿರುತ್ತಾರೆ.

Hero VIDA scooter ಹೀರೋದಿಂದ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ!

Latest Videos
Follow Us:
Download App:
  • android
  • ios