ಬೆಂಗಳೂರಿನಲ್ಲಿ ವಿಡ ಎಲೆಕ್ಟ್ರಿಕ್ ಸ್ಕೂಟರ್ ಮೊದಲ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭ!

ವಿಡ ಎಲೆಕ್ಟ್ರಿಕ್ ಸ್ಕೂಟರ್ 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ- ವೀಡ ವಿ1 ಪ್ಲಸ್  1,45,000 ರೂಪಾಯಿ(ಎಕ್ಸ್ ಶೋ ರೂಂ), ವಿಡ ವಿ1 ಬೆಲೆ 1,59,000 ರೂಪಾಯಿ(ಎಕ್ಸ್ ಶೋ ರೂಂ) ಹೊಂದಿದೆ. ಇದೀಗ ಈ ಸ್ಕೂಟರ್ ರೈಡಿಂಗ್, ಚಾರ್ಜಿಂಗ್, ಮೈಲೇಜ್ ಹೇಗಿದೆ ಅಂತಾ ಖುದ್ದು ಅನುಭವಿಸಬೇಕಾ? ಬೆಂಗಳೂರಿನ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ ಸಾಧ್ಯವಿದೆ.

VIDA Powered by Hero opens its first Experience Center Bengaluru to help customers for real feel ckm

ಬೆಂಗಳೂರು(ನ.15) ವಿಶ್ವದ ಅತ್ಯಂತ ದೊಡ್ಡ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಉತ್ಪಾದಕ ಹೀರೊ ಮೊಟೊಕಾರ್ಪ್ ವಿಸ್ತರಿಸುತ್ತಿರುವ ಮೊಬಿಲಿಟಿ ಬ್ರಾಂಡ್ ವೀಡ ಗ್ರಾಹಕರಿಗೆ ಹೊಸ ಸೇವೆ ಆರಂಭಿಸಿದೆ. ಇದೀಗ ವಿಡ ತನ್ನ ಮೊದಲ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಿಸಿದೆ.  ಬ್ರಾಂಡ್‌ನ ತಂತ್ರಜ್ಞಾನ ಪ್ರಥಮ ವಿಧಾನಕ್ಕೆ ಮರುಬದ್ಧತೆಯನ್ನು ದೃಢೀಕರಿಸುವ ಆವಿಷ್ಕಾರಕ ಮತ್ತು ಉತ್ಸಾಹಕರ ಅನುಭವ ನೀಡುವ ಎಕ್ಸ್ಪೀರಿಯೆನ್ಸ್ ಸೆಂಟರ್ ಗ್ರಾಹಕರಿಗೆ ತಲ್ಲೀನಗೊಳಿಸುವ ಮತ್ತು ಸಂಪೂರ್ಣ ವಿಭಿನ್ನಗೊಳಿಸಿದ ಅನುಭವ ನೀಡುತ್ತದೆ. ಈ ಮೊದಲ ಎಕ್ಸ್ಪೀರಿಯೆನ್ಸ್ ಸೆಂಟರ್ ಬೆಂಗಳೂರಿನ ಹೃದಯಭಾಗವಾದ ವಿಠಲ್ ಮಲ್ಯ ರಸ್ತೆಯಲ್ಲಿದ್ದು ಗ್ರಾಹಕರು ಬ್ರಾಂಡ್ ಅನ್ನು ಪರಿಚಯ ಮಾಡಿಕೊಳ್ಳಲು, ಉತ್ಪನ್ನದ ಅನುಭವ ಪಡೆಯಲು ಮತ್ತು ತಮ್ಮನ್ನು ವೀಡದ “ಆತಂಕರಹಿತ ಇವಿ ಇಕೊಸಿಸ್ಟಂ”ನಲ್ಲಿ ತಲ್ಲೀನಗೊಳಿಸಿಕೊಳ್ಳಲು ಶಕ್ತರಾಗುತ್ತಾರೆ. ಈ ಸಂದರ್ಭಕ್ಕೆ ವಿಡ ಇಂದಿನಿಂದ ವೀಡ ವಿ1ರ ಗ್ರಾಹಕರ ಟೆಸ್ಟ್-ರೈಡ್‌ಗಳನ್ನು ಕೂಡಾ ಪ್ರಾರಂಭಿಸಿದೆ. 

ಈ ಎಕ್ಸ್ಪೀರಿಯೆನ್ಸ್ ಸೆಂಟರ್ ಬ್ರಾಂಡ್ ಮತ್ತು ಉತ್ಪನ್ನದ ವಲಯವಾಗಿ ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಇದು ವೀಡ ಸಮುದಾಯಗಳ ಹೃದಯವಾಗಿದ್ದು ಕಾರ್ಯಕ್ರಮಗಳು, ಬ್ರಾಂಡ್ ಸಭೆಗಳು ಮತ್ತು ಸಮುದಾಯದ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಅತ್ಯಂತ ಕಸ್ಟಮೈಸ್ ಮಾಡಬಲ್ಲ ಬಿಲ್ಟ್-ಟು-ಲಾಸ್ಟ್ ವೀಡ ವಿ೧ ಅನುಕೂಲಕರವಾದ ನಿವಾರಿಸಬಲ್ಲ ಬ್ಯಾಟರಿಗಳು ಮತ್ತು ಥ್ರೀ-ವೇ ಚಾರ್ಜಿಂಗ್ ಆಯ್ಕೆಗಳನ್ನು ನೀಡುತ್ತಿದ್ದು ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ- ವೀಡ ವಿ1 ಪ್ಲಸ್  1,45,000 ರೂಪಾಯಿ(ಎಕ್ಸ್ ಶೋ ರೂಂ), ವಿಡ ವಿ1 ಬೆಲೆ 1,59,000 ರೂಪಾಯಿ(ಎಕ್ಸ್ ಶೋ ರೂಂ) ಹೊಂದಿದೆ.   ಇದರಲ್ಲಿ ಎಲ್ಲ ಸಂಪರ್ಕಿತ ಫೀಚರ್‌ಗಳು ಮತ್ತು ಚಾರ್ಜಿಂಗ್ ಸೇವೆ ಒಳಗೊಂಡಿರುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಮೇಲುಗೈ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ವೀಡ ವಿ1 ಕಾರ್ಯಕ್ಷಮತೆ(3.2 ಸೆಕೆಂಡುಗಳಲ್ಲಿ 0-40), ನೋ ಕಾಂಪ್ರೊಮೈಸ್ ರೇಂಜ್(163 ಕಿ.ಮೀ ಮೈಲೇಜ್) ಮತ್ತು ಟಾಪ್ ಸ್ಪೀಡ್ ಗಂಟೆಗೆ 80 ಕಿ.ಮೀ.ಗಳ ಈ ವರ್ಗದ ಅತ್ಯುತ್ತಮ ಸಂಯೋಜನೆಯೊಂದಿಗೆ ಬಂದಿದೆ.

ವೀಡ ವಿ1 ಉದ್ಯಮದ ಮುಂಚೂಣಿಯ ಫೀಚರ್‌ಗಳಾದ ಕಸ್ಟಮ್ ಮೋಡ್(೧೦೦+ ಸಂಯೋಜನೆಗಳು), ಕ್ರೂಸ್ ಕಂಟ್ರೋಲ್, ಬೂಸ್ಟ್ ಮೋಡ್, ಟು-ವೇ ಥ್ರಾಟಲ್, ಕೀಲೆಸ್ ಅಕ್ಸೆಸ್ , ಟಿಎಫ್‌ಟಿ ಟಚ್ ಸ್ಕ್ರೀನ್ ಒಳಗೊಂಡಿದೆ. ವೀಡ ವಿ1ಮಾಡ್ಯುಲರ್, ಸ್ಕೇಲಬಲ್ ಮತ್ತು ಫ್ಲೆಕ್ಸಿಬಲ್ ಆಗಿರುವ ಇಂಟೆಲಿಜೆಂಟ್ ಪ್ಲಾಟ್‌ಫಾರಂ ಆಗಿದ್ದು ಕಲಿಕೆ ಮತ್ತು ಚಲನೆಯಲ್ಲಿ ಅಳವಡಿಕೆಯನ್ನು ಸಾಧ್ಯವಾಗುತ್ತದೆ.  

 ಈ ವಿಭಾಗಕ್ಕೆ ಹೊಚ್ಚಹೊಸ ವಿಧಾನ ತರುವ ವೀಡ ವಿನೂತನ ಬಗೆಯ ಗ್ರಾಹಕರ ಪ್ರಸ್ತಾವನೆಗಳು ಮತ್ತು ಸೇವೆಗಳನ್ನು ಒದಗಿಸುತ್ತಿದ್ದು ಅದರಲ್ಲಿ ಗ್ರೀನ್ ಇಎಂಐ, ದಕ್ಷ ಹಾಗೂ ತಡೆರಹಿತ ಫೈನಾನ್ಸಿಂಗ್ ಪ್ಲಾಟ್‌ಫಾರಂ ಅನ್ನು ಈ ವರ್ಗದ ಅತ್ಯುತ್ತಮ ಬಡ್ಡಿದರಗಳೊಂದಿಗೆ ನೀಡುತ್ತದೆ. ಬೈ-ಬ್ಯಾಕ್ ಸ್ಕೀಂ ಉದ್ಯಮದ ಪ್ರಥಮ ಬೈ-ಬ್ಯಾಕ್ ಅಶ್ಯೂರೆನ್ಸ್ನೊಂದಿಗೆ ತಂದಿದ್ದು ವಾಹನದ ಮಾಲೀಕತ್ವದ ೧೬ರಿಂದ ೧೮ ತಿಂಗಳ ನಡುವೆ ಶೇ.೭೦ರಷ್ಟು ಬೆಲೆಗೆ ವಾಹನದ ಬೈಬ್ಯಾಕ್ ಮೌಲ್ಯ ನೀಡುತ್ತದೆ. ಮೂರು ದಿನಗಳವರೆಗೆ ಟೆಸ್ಟ್-ರೈಡ್ ನೀಡುತ್ತದೆ ಇದರಿಂದ ಗ್ರಾಹಕರಿಗೆ ಖರೀದಿಸುವ ಮುನ್ನ ಸಂಪೂರ್ಣ ಮನಃಶ್ಯಾಂತಿ ನೀಡುತ್ತದೆ. ವೀಡ ಉದ್ಯಮದ ಪ್ರಥಮ ಉಪಕ್ರಮ-ರಿಪೇರ್-ಆನ್-ಸೈಟ್ ನೀಡುತ್ತಿದ್ದು ಇದರಲ್ಲಿ ಕಸ್ಟಮರ್ ಎಕ್ಸಿಕ್ಯೂಟಿವ್‌ಗಳು ಎಲ್ಲಿಯೇ ಆಗಲಿ, ಯಾವುದೇ ಸಮಯದಲ್ಲಿ ಸೇವೆಯನ್ನು ಪೂರೈಸಲು ಲಭ್ಯವಿರುತ್ತಾರೆ.

 

Hero Optima CX ಕೈಕೆಟುಕವ ದರದ ಹೀರೋ ಆಪ್ಟಿಮಾ CX ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆ!

 ಇವಿ ವಿಭಾಗವನ್ನು ರೂಪಿಸಲು ನಮ್ಮ ಧ್ಯೇಯವನ್ನು ವಿಸ್ತರಿಸುವ ಮತ್ತು ಅದರ ವ್ಯಾಪ್ತಿ ಬೆಳೆಸುವ ಮೂಲಕ ನಾವು ಮೊದಲ ವೀಡ ಎಕ್ಸ್ಪೀರಿಯೆನ್ಸ್ ಸೆಂಟರ್ ಪ್ರಾರಂಭಿಸಲು ಬಹಳ ಉತ್ಸುಕರಾಗಿದ್ದೇವೆ. ಈ ಎಕ್ಸ್ಪೀರಿಯೆನ್ಸ್ ಸೆಂಟರ್ ಕುತೂಹಲ, ಅರ್ಥಪೂರ್ಣತೆ ಮತ್ತು ಜನರನ್ನು ಸಂರ್ಪ ಹೊಂದುವ ಅನುಭವಗಳನ್ನು ಸೃಷ್ಟಿಸುವ ನಮ್ಮ ಗುರಿಯ ಅಭಿವ್ಯಕ್ತಿಯಾಗಿದೆ. ಈ ಎಕ್ಸ್ಪೀರಿಯೆನ್ಸ್ ಸೆಂಟರ್ ವೀಡದಲ್ಲಿ ನಾವು ಸೃಷ್ಟಿಸಿರುವ `ಆತಂಕ ರಹಿತ ಇವಿ ಇಕೊಸಿಸ್ಟಂ’ನ ಒಳನೋಟ ನೀಡುತ್ತದೆ. ಈ ಕೇಂದ್ರವು ನಮ್ಮ ಆಮ್ನಿಚಾನೆಲ್ ಅಪ್ರೋಚ್‌ನ ಹಲವು ಭೌತಿಕ ಸಂಪತ್ತುಗಳಲ್ಲಿ ಒಂದಾಗಿದೆ. ನಮ್ಮ ತಂತ್ರಜ್ಞಾನ ಸರಣಿ ಮತ್ತು ಭೌತಿಕ ಸಂಪತ್ತುಗಳನ್ನು ರೀಟೇಲ್ ಸ್ಥಳಕ್ಕೆ ಬರೀ ಪ್ರವೇಶ ಪಡೆಯುವುದರಿಂದ ಅವರು ದೊಡ್ಡ ಕಥೆಯ ಭಾಗವಾಗುವ ತಾಣಕ್ಕೆ ಎತ್ತರಿಸಲು ನಿರ್ಮಿಸಲಾಗಿದೆ. ಇದು ನಾವು ಈ ವಲಯದಲ್ಲಿ ನೀಡುತ್ತಿರುವ ವಿನೂತನ ಅನುಭವವಾಗಿದೆ ಎಂದು ಹೀರೊ ಮೊಟೊಕಾರ್ಪ್ ಬಿಸಿನೆಸ್ ಯೂನಿಟ್‌ನ ಮುಖ್ಯಸ್ಥ ಡಾ.ಸ್ವದೇಶ್ ಶ್ರೀವಾಸ್ತವ ಹೇಳಿದ್ದಾರೆ.

 ಈ ಎಕ್ಸ್ಪೀರಿಯೆನ್ಸ್ ಸೆಂಟರ್ ವೀಡ ವಿಶ್ವಕ್ಕೆ ಪ್ರವೇಶಿಸಲು ಭೌತಿಕ ಹೆಬ್ಬಾಗಿಲಾಗಿದ್ದು ಅದು ಜಾಗತಿಕ, ಹೊಸ ತಲೆಮಾರಿನ, ವಿಶ್ವಾಸಾರ್ಹ ಮತ್ತು ಪ್ರಗತಿಶೀಲವಾಗಿದೆ. ಕೇಂದ್ರದಲ್ಲಿ ಈ ಬ್ರಾಂಡ್‌ನ ತತ್ವವು ಗ್ರಾಹಕರ ಮಾಲೀಕತ್ವ ಮತ್ತು ಬಳಕೆದಾರತ್ವವನ್ನು ಸರಳ ಮತ್ತು ಆತಂಕರಹಿತ ಆಗಿಸುವುದಾಗಿದೆ. ಈ ಎಕ್ಸ್ಪೀರಿಯೆನ್ಸ್ ಸೆಂಟರ್ ಗ್ರಾಹಕರಿಗೆ ಉತ್ಪನ್ನವನ್ನು ಸ್ಪರ್ಶಿಸಿ, ಅನುಭವ ಪಡೆಯಲು ಮತ್ತು ಆವಿಷ್ಕರಿಸಲು ಅವಕಾಶ ನೀಡುತ್ತದೆ, ಅದು ಗ್ರಾಹಕರ ವರ್ತನೆ ಮತ್ತು ಪರಿಸರದ ಆಳವಾದ ಅರ್ಥೈಸಿಕೊಳ್ಳುವಿಕೆಯ ಬೆಂಬಲ ಪಡೆದಿದೆ.

Latest Videos
Follow Us:
Download App:
  • android
  • ios