Asianet Suvarna News Asianet Suvarna News

ಭಾರತದಲ್ಲಿ ಸುಜುಕಿ ಇಂಟ್ರುಡರ್ 150 ಕ್ರೂಸರ್ ಮಾರಾಟ ಸ್ಥಗಿತ: ಇಲ್ಲಿದೆ ಕಾರಣ

ಸುಜುಕಿ ಅವೆಂಜರ್ 155 ರ ಕೊನೆಯದಾಗಿ ಲಭ್ಯವಿರುವ ಬೆಲೆ ರೂ 1,28,900 ಇದ್ದು ಎಕ್ಸ್ ಶೋ ರೂಂ ದರ ದೆಹಲಿ ಹೋಲಿಸಿದರೆ, ಬಜಾಜ್ ಅವೆಂಜರ್ 160 ರೂ 1.12 ಲಕ್ಷದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. 

Suzuki Intruder 150 cruiser discontinued in India as Zero Units Sold In 2022 mnj
Author
Bengaluru, First Published Jun 16, 2022, 6:33 PM IST

Auto Desk: 2017ರಲ್ಲಿ ರೋಡಿಗಿಳಿದ ಸುಜು಼ಕಿ ಇಂಟ್ರುಡರ್‌ ವಿಶಿಷ್ಟ ಅನುಭವವ ಹಾಗೂ ವಿಭಿನ್ನ ಲುಕ್‌ನಿಂದಾಗಿ  ರೈಡರ್ಸಗಳ ಮನಸನ್ನು  ಗೆದ್ದಿತ್ತು. ಆದರೆ ಸದ್ಯ ವ್ಯಾಪರದ ದೃಷ್ಟಿಕೋನದಿಂದ ನೋಡಿದರೆ ಇಂಟ್ರುಡರ್ 150 ಕ್ರೂಸರ್ ಅಷ್ಟೊಂದು ಬೈಕ್‌ಗಳು ಮಾರಾಟವಾಗುತ್ತಿಲ್ಲ. ಡಿಸೆಂಬರ್‌ 2021 ರಿಂದ ಮೇ 2022ರ ವರೆಗೆ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಸುಜು಼ಕಿ ಇಂಟ್ರುಡರ್‌ 150CCಪ್ರೊಡಕ್ಷನ್‌ ನಿಲ್ಲಿಸಲು ಮುಂದಾಗಿದೆ. 

ಈ ಬೈಕನ್ನು ಸ್ಥಗಿತಗೊಳಿಸಲು ಹಲವಾರು ಕಾರಣಗಳನ್ನು ನಾವಿಲ್ಲಿ ಕಾಣಬಹುದು, ಬೈಕ್ ವಿನ್ಯಾಸ ನೋಡುವುದಾದರೆ,  ಬೈಕಿನ ದೇಹ ಅನೇಕ ಉತ್ಸಾಹಿಗಳಿಗೆ ಇಷ್ಟವಾಗಿದ್ದು ನೋಡಲು ತುಂಬಾ ಆಕರ್ಷಕವಾಗಿದೆ ಆದರೆ ಇದು 155CC ಇಂಜಿನ್ ಇದ್ದ ಕಾರಣ ಬೈಕಿನ ತೂಕ ಜಾಸ್ತಿಯಾಗಿದೆ.  ಸಣ್ಣ ಗಾತ್ರದ ಎಂಜಿನ ಮರೆಮಾಡಲು ಫೈರಿಂಗ್‌ ನೀಡಿದ್ದಾರೆ. 

ತ್ರಿಕೋನ ಆಕಾರದಲ್ಲಿರುವ ಅದರ ಹೆಡ್ ಲೈಟ್‌ ನೋಡುಗರಿಗೆ ವಿಚಿತ್ರ ಭಾವನೆಯನ್ನು ತೋರುತ್ತದೆ. ಹಿಂಭಾಗದ ಸೀಟು ದೊಡ್ಡದಾಗಿದ್ದು ಕುಳಿತುಕೊಳ್ಳಲು ಬಹಳ ಆರಾಮದಾಯಾಕವಾಗಿದೆ. ಆದರೆ ತುಂಬಾ ಉದ್ದವಾದ ಬೈಕ್‌ ವಿನ್ಯಾಸ ವಿರೋಧಾಭಾಸಗಳಿಗೆ ಕಾರಣವಾಗಿದೆ. 

ಇದನ್ನೂ ಓದಿ: 3 ತಿಂಗಳಿಗೆ ಮುರಿದು ಬಿತ್ತು ಓಲಾ ಸ್ಕೂಟರ್ ಸೈಡ್ ಸ್ಟ್ಯಾಂಡ್, Viral Video!

ಉತ್ಸಾಹಿ ಯುವಕರಿಗೆ ಮತ್ತೊಂದು ಚಿಂತೆ ಎಂದರೆ ಬೈಕಿನಲ್ಲಿ ಪ್ಲಾಸ್ಟಿಕ ಹಾಗೂ ಫೈಬರ್‌ ಪ್ಯಾನಲ್‌ಗಳ ಬಳಕೆ ಜಾಸ್ತಿಯಾಗಿದ್ದು, ಬೈಕ್‌ ಜೋರಾಗಿ ಹೋಗುವಾಗ ಕೆಲ ಭಾಗಗಳು ಸಡಿಲಗೊಳ್ಳಬಹುದು ಮತ್ತು ಶಬ್ದ ಮಾಡಬಹುದು. ಅಲ್ಲದೇ ಕೆಲ ಸಮಯದ ಬಳಿಕ ಪ್ಯಾನಲ್‌ಗಳು ಹೊಳಪು ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಬೈಕ್‌ ಪ್ರಿಯರು ಇಂಟ್ರುಡರ್‌ 155 ಆಯ್ಕೆ ಮಾಡಲು ಹಿಂಜರಿಯುತ್ತಿದ್ದಾರೆ. 

ಇನ್ನೊಂದು ಕಡೆ ಇಂಟ್ರುಡರ್‌ 155ಗಿಂತ ಯೋಗ್ಯವಾದ, ಕೈಗೆಟುಕುವ ಬೆಲೆಯಲ್ಲಿ ಬಜಾಜ್ ಅವೆಂಜರ ಲಭ್ಯವಿದ್ದು, ಜನರು ಇಂಟ್ರೂಡರ್ 155 ಮೊರೆ ಹೊಗದಿರಲು ಮತ್ತೊಂದು ಅಂಶವಾಗಿದೆ. ಅವೆಂಜರ್ ಬೇರ್ ಬೋನ್ಸ್ ರಚನೆಯನ್ನು ಹೊಂದಿದ್ದು, ಇದು ಬೈಕ್‌ಗೆ ಹೆಚ್ಚು ಒರಟಾದ ನೋಟ ಮತ್ತು ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿHero Bike ಹೊಸ ಅವತಾರದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ಬಿಡುಗಡೆ!

ಬಳಕೆದಾರರ ಫಿಡ್ಬ್ಯಾಕ್ ಆಧಾರದ ಮೇಲೆ, ಅವೆಂಜರ್ ಇಂಟ್ರುಡರ್‌ಗಿಂತ ಉತ್ತಮ ನಿಯಂತ್ರಣ ಮತ್ತು ನಿರ್ವಹಣೆಯನ್ನು ಹೊಂದಿದೆ ಎಂಬುದಕ್ಕೆ ಮೊದಲಿನಿಂದಲು ಸಾಕ್ಷಿಗಳಿವೆ. ಈ ಬೈಕುಗಳನ್ನು ದೊಡ್ಡ ದೊಡ್ಡ ನಗರ ಪರಿಸರದಲ್ಲಿ ಬಳಸಿದಾಗ ಇದು ವಿಶೇಷವಾಗಿ ಸತ್ಯವಾಗಿದೆ ಎಂದು ಕೇಳುಗರ ಅನಿಸಿಕೆ. ಇನ್ನು ಹೆದ್ದಾರಿಗಳಲ್ಲಿ ಪ್ರಯಾಣಿಸಲು ಮತ್ತು ರೈಡರ್ಸ್‌ಗೆ ಅದರ ವಾಯುಬಲ ವೈಜ್ಞಾನಿಕ ವಿನ್ಯಾಸದ ಕಾರಣದಿಂದ ಇಂಟ್ರುಡರ್‌ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ಹೆಚ್ಚಿನ ಬೆಲೆ: ಸುಜುಕಿ ಅವೆಂಜರ್ 155 ರ ಕೊನೆಯದಾಗಿ ಲಭ್ಯವಿರುವ ಬೆಲೆ ರೂ 1,28,900 ಇದ್ದು ಎಕ್ಸ್ ಶೋ ರೂಂ ದರ ದೆಹಲಿ ಹೋಲಿಸಿದರೆ, ಬಜಾಜ್ ಅವೆಂಜರ್ 160 ರೂ 1.12 ಲಕ್ಷದ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಬಳಕೆದಾರರು ತಮ್ಮ ಬಜೆಟ್ ಸ್ವಲ್ಪ ಜಾಸ್ತಿ ಮಾಡಿ ರೂ 10 ಸಾವಿರ ಹೆಚ್ಚಿಸಿದರೆ, ಅವರು 1.38 ಲಕ್ಷ ರೂಪಾಯಿಯಲ್ಲಿ ಲಭ್ಯವಿರುವ ಅವೆಂಜರ್ 220CC ಮಾದರಿಯ ಬೈಕ್‌ ಗೆ ಹೋಗಬಹುದು. 

ಇಂಟ್ರೂಡರ್ 155 ಸ್ಥಗಿತಗೊಳಿಸುವುದರೊಂದಿಗೆ, ಇದು ಇಂಟ್ರೂಡರ್ 250CCಯ ಸಾಧ್ಯತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುತ್ತದೆ. ಇದು  2019 ರಲ್ಲಿ ನೋಂದಾಯಿಸಲಾಗಿದ್ದು ಮತ್ತು 2021 ರಲ್ಲಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿತ್ತು. ಇದು ಜಿಕ್ಸರ್ 250 ನಿಂದ ಅದರ ಹೆಚ್ಚಿನ ಹಾರ್ಡ್‌ವೇರ್  ಪಡೆಯುವ ಸಾಧ್ಯತೆಗಳಿದ್ದವು. 

ಇದನ್ನೂ ಓದಿ: ಹೀರೋ ಎಲೆಕ್ಟ್ರಿಕ್ ಹಿಂದಿಕ್ಕಿ ನಂ.1 ಸ್ಥಾನ ತಲುಪಿದ ಓಲಾ ಎಲೆಕ್ಟ್ರಿಕ್

ಪ್ರವೇಶ ಮಟ್ಟದ ಕ್ರೂಸರ್‌ಗಳು ಇತರ ಬೈಕ್‌ಗಳಂತೆ ಜನಪ್ರಿಯವಾಗಿಲ್ಲ, ಆದರೆ ಈ ವಿಭಾಗವು ಬಜಾಜ್‌ಗೆ ಸ್ಥಿರವಾದ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಮೇ 2022 ರಲ್ಲಿ ಅವೆಂಜರ್ ಸ್ಟ್ರೀಟ್ 160CC ಬೈಕ್ 1,824 ಘಟಕ ಮಾರಾಟವಾಗಿದ್ದವು. ಹೀಗಾಗಿ ಸುಜುಕಿ ಇನ್‌ಟ್ರುಡರ್ 155 ಬೈಕ್‌ನಲ್ಲಿನ ಅಂತರ್ಗತ ಸಮಸ್ಯೆಗಳಿಂದಾಗಿ  ಶೂನ್ಯ ಮಾರಾಟ ಕಂಡಿದೆ ಹೊರತು ಮಾರುಕಟ್ಟೆಯ ಅಸ್ಥಿರತೆಯಿಂದಲ್ಲ. 

Follow Us:
Download App:
  • android
  • ios