Asianet Suvarna News Asianet Suvarna News

ಹೀರೋ ಎಲೆಕ್ಟ್ರಿಕ್ ಹಿಂದಿಕ್ಕಿ ನಂ.1 ಸ್ಥಾನ ತಲುಪಿದ ಓಲಾ ಎಲೆಕ್ಟ್ರಿಕ್

ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್, ಕೇವಲ 5 ತಿಂಗಳಲ್ಲಿ, ಭಾರತದ ನಂ 1 ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ಆಗಿ ಬೆಳೆದಿದೆ.

Ola Electric gains No.1 status beating Hero electric
Author
Bangalore, First Published May 3, 2022, 6:23 PM IST

ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ವಲಯದ ಬೇಡಿಕೆ ಪಡೆದುಕೊಂಡ ಆರಂಭದಲ್ಲಿ ನಂಬರ್ 1 ಸ್ಥಾನ ಗಳಿಸಿಕೊಂಡಿದ್ದು ಹೀರೋ ಎಲೆಕ್ಟ್ರಿಕ್ (Hero electric). ಓಕಿನಾವಾ (Okinawa) ಮತ್ತು ಆಂಪಿಯರ್ಗಳು (Ampire) ನಂತರದ ಸ್ಥಾನದಲ್ಲಿದ್ದವು. ಆದರೆ ಓಲಾ ಎಲೆಕ್ಟ್ರಿಕ್ (Ola Electric) ಆಗಮನದ ನಂತರ, ಹೀರೋ ಎಲೆಕ್ಟ್ರಿಕ್ಗೆ ಭಾರಿ ಸ್ಪರ್ಧೆ ನೀಡಿದ್ದು, ಕೆಲವೇ ಸಂದರ್ಭದಲ್ಲಿ ಬಹುಬೇಡಿಕೆಯ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾಗಿ ಬೆಳೆದಿತ್ತು. 

ಈಗ ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್, ಕೇವಲ 5 ತಿಂಗಳಲ್ಲಿ, ಭಾರತದ ನಂ 1 ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ಆಗಿ ಬೆಳೆದಿದೆ. 2022ರ ಏಪ್ರಿಲ್ನಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದ ವರದಿ ಇದನ್ನು ದೃಢಪಡಿಸಿದೆ. ಇನ್ನೊಂದೆಡೆ, ಸೆಮಿ-ಕಂಡಕ್ಟರ್ ಚಿಪ್ಗಳ ಭೀಕರ ಕೊರತೆಯ ಕಾರಣದಿಂದ ಹೀರೋ ಎಲೆಕ್ಟ್ರಿಕ್ ಕಂಪನಿ, ಒಂದು ವಾಹನವನ್ನು ಕೂಡ ಡೀಲರ್ಗೆ ತಲುಪಿಸಲು ಸಾಧ್ಯವಾಗಿಲ್ಲ. ಇದರಿಂದ ಇದರ ಕಾಯುವ ಅವಧಿ 60 ದಿನಗಳಿಗೆ ವಿಸ್ತರಣೆಯಾಗಿದೆ.

ಮೇ ತಿಂಗಳಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ಅಂದಾಜಿಸಲಾಗುತ್ತಿದೆ. ಇದು ಕೂಡ ಓಲಾಗೆ ಅನುಕೂಲಕರವಾಗಲಿದೆ. ಇತರ ಎರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರ್ಯಾಂಡ್ಗಳಾದ ಆಂಪಿಯರ್ ಮತ್ತು ಅಥರ್ ಈ ಪಟ್ಟಿಯಲ್ಲಿ ನಂ. 4 ಮತ್ತು 5 ರಲ್ಲಿವೆ.

2022ರ ಏಪ್ರಿಲ್ವರೆಗಿನ ಒಟ್ಟಾರೆ ಮಾರಾಟದಲ್ಲಿ, ಹೀರೋ ಎಲೆಕ್ಟ್ರಿಕ್ 34,714 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡುವ ಮೂಲಕ ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಂದೆಡೆ, ಓಲಾ ಎಲೆಕ್ಟ್ರಿಕ್ ಏಪ್ರಿಲ್ 2022 ರ ಅಂತ್ಯದ ವೇಳೆಗೆ 26,817 ವಾಹನಗಳನ್ನು ಮಾರಾಟ ಮಾಡಿದೆ.

ಹೀರೋ ಎಲೆಕ್ಟ್ರಿಕ್ನ ಸಿಇಒ ಸೊಹಿಂದರ್ ಗಿಲ್, ಕಂಪನಿಯು ಸರಬರಾಜುಗಳ ಕೊರತೆಯನ್ನು ಎದುರಿಸುತ್ತಲೇ ಇದ್ದರೂ, ಉತ್ಪಾದನೆಯ ಮೇಲೆ ಪರಿಣಾಮ ಬೀರದಂತೆ ಪರ್ಯಾಯ ಮೂಲಗಳನ್ನು ಆಶ್ರಯಿಸಿದೆ. ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಯು ಈ ಸಮಯವನ್ನು ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಓಲಾ ಸ್ಕೂಟರ್ ಬಗ್ಗೆ ಅಸಮಾಧಾನ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಲೀಕ

ಓಲಾ ಎಲೆಕ್ಟ್ರಿಕ್ನ ಮಾರಾಟವು 2021ರ ಡಿಸೆಂಬರ್ ಇಂದ ಮೇಲ್ಮುಖವಾಗಿದೆ. ಕಳೆದ 5 ತಿಂಗಳುಗಳಲ್ಲಿ, ಹೀರೋ ಎಲೆಕ್ಟ್ರಿಕ್ನ ಮಾರಾಟವನ್ನು ಮೀರಿಸುವಲ್ಲಿ ಇದು ಮೊದಲ ಬಾರಿಗೆ ಯಶಸ್ವಿಯಾಗಿದೆ. ಕಂಪನಿಯು ಪೂರೈಕೆ ಸಮಸ್ಯೆಗಳಿಂದ ಹಿಡಿದು ಬಿಡಿಭಾಗಗಳ ಕೊರತೆಯಿಂದ ಗ್ರಾಹಕರ ದೂರುಗಳವರೆಗೆ ಹಲವು ಸಮಸ್ಯೆಗಳ ನಡುವೆಯೂ ಈ ಮೈಲಿಗಲ್ಲು ಸಾಧಿಸಲಾಗಿದೆ. 

Ola Electric ಪ್ರಸ್ತು Ola S1 Pro ಮಾದರಿಯನ್ನು ಮಾತ್ರ ನೀಡುತ್ತಿದೆ. ಇದು ಕಪ್ಪು, ಬಿಳಿ, ಬೂದು, ಕಡು ನೀಲಿ, ಗಾಢ ಬೂದು, ಕೆಂಪು, ನೀಲಿ, ಹಳದಿ ಮತ್ತು ಗುಲಾಬಿ ಸೇರಿದಂತೆ ಒಟ್ಟು 10 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. 

ಇದನ್ನೂ ಓದಿ: ಇ-ವಾಹನ ಸ್ಫೋಟ: ಬ್ಯಾಟರಿ ಸ್ಫೋಟಕ್ಕೆ ತಾಪಮಾನ ಏರಿಕೆ ಕಾರಣ, ಗಡ್ಕರಿ ತೀವ್ರ ಆತಂಕ

S1 Pro 8.5 kW ಪೀಕ್ ಪವರ್ ಮತ್ತು 58 Nm ಟಾರ್ಕ್ ಅನ್ನು ನೀಡುವ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು ಕೇವಲ 0 ಸೆಕೆಂಡುಗಳಲ್ಲಿ 115 ಕಿಮೀ  ಹಾಗೂ 3 ಸೆಕೆಂಡುಗಳಲ್ಲಿ 40 ಕಿಮೀ ಹೆಚ್ಚಿಸುತ್ತದೆ. ಇದು ಹೈಪರ್, ಸ್ಪೋರ್ಟ್ ಮತ್ತು ನಾರ್ಮಲ್ ಮೂರು ರೈಡಿಂಗ್ ಮೋಡ್ಗಳೊಂದಿಗೆ ಬರುತ್ತದೆ ಮತ್ತು 181 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. 

ಸ್ಕೂಟರ್ನ ವೈಶಿಷ್ಟ್ಯಗಳು - ಕೀಲೆಸ್ ಆಪರೇಷನ್, ರಿಮೋಟ್ ಬೂಟ್ ಲಾಕ್, ಕರೆ ಅಲರ್ಟ್, ಇನ್ಫೋಟೈನ್ಮೆಂಟ್ ಸಿಸ್ಟಂ, ಬಿಲ್ಟ್ ಇನ್ ಸ್ಪೀಕರ್ಗಳು ಮತ್ತು ಬ್ಲೂಟೂತ್, ವೈ-ಫೈ, ಆನ್-ಬೋರ್ಡ್ ನ್ಯಾವಿಗೇಷನ್, ಸಾಮೀಪ್ಯ ಲಾಕ್, ರಿವರ್ಸ್ ಮೋಡ್, ಇತ್ಯಾದಿಗಳ ಜೊತೆಗೆ ಕಳ್ಳತನ ತಡೆಯುವ ಎಚ್ಚರಿಕೆಯ ಅಲಾರ್ಮ್.

Follow Us:
Download App:
  • android
  • ios