Asianet Suvarna News Asianet Suvarna News

212 ಕಿ.ಮೀ ಮೈಲೇಜ್, ಕೈಗೆಟುಕವ ದರ; ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಗರಿಷ್ಠ ಮೈಲೇಜ್, ಇತರ ಇವಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆ. ಇದು ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆ. ಇಂದು ಸಿಂಪಲ್ ಒನ್ ಸ್ಕೂಟರ್ ಬಿಡುಗಡೆಯಾಗಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. 

Simple Energy launch simple one Electric scooter with highest ever mileage range of 212 km single charge ckm
Author
First Published May 23, 2023, 5:50 PM IST

ಬೆಂಗಳೂರು(ಮೇ.23): ಭಾರತದಲ್ಲಿ ಅತ್ಯುತ್ತಮ ಗುಣಮಟ್ಟದ ಹಲವು ಎಲಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಇವುಗಳಲ್ಲಿ ಬಹುತೇಕ ಸ್ಕೂಟರ್ ಮೂಲ ಬೆಂಗಳೂರು. ಇದೀಗ ಉದ್ಯಾನಗರಿಯ ಮತ್ತೊಂದು ಸ್ಟಾರ್ಟ್ಅಪ್ ಕಂಪನಿ ಸಿಂಪಲ್ ಎನರ್ಜಿ ಇತರ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಮೀರಿಸಬಲ್ಲ ಇವಿ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 212 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಸಿಂಪಲ್ ಒನ್ ಸ್ಕೂಟರ್ ಬಿಡುಗಡೆಯಾಗಿದೆ. ಇದು ಭಾರತದಲ್ಲಿ ಲಭ್ಯವಿರುವ ಸ್ಕೂಟರ್ ಪೈಕಿ ಗರಿಷ್ಠ ಮೈಲೇಜ್ ಆಗಿದೆ. ಸಿಂಪಲ್ ಒನ್ ಸ್ಕೂಟರ್ ಆರಂಭಿಕ ಬೆಲೆ 1.45 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಎರಡು ವೇರಿಯೆಂಟ್‌ನಲ್ಲಿ ಸಿಂಪಲ್ ಒನ್ ಸ್ಕೂಟರ್ ಲಭ್ಯವಿದೆ. ಗರಿಷ್ಠ ಬೆಲೆ 1.58 ಲಕ್ಷ ರೂಪಾಯಿ.ಇದರ ಜೊತೆಗೆ 750W ಚಾರ್ಜರ್ ಕೂಡ ಲಭ್ಯವಾಗಲಿದೆ. 2021ರ ಆಗಸ್ಟ್ 15 ರಂದು ಸಿಂಪಲ್ ಒನ್ ಸ್ಕೂಟರ್ ಅನಾವರಣಗೊಂಡಿತ್ತು. ಹಲವು ಪರೀಕ್ಷೆ ಹಾಗೂ ಸುಧಾರಣೆ ಕಂಡ ಸಿಂಪಲ್ ಒನ್ ಇದೀಗ ಬಿಡುಗಡೆಯಾಗಿದೆ.  

Simple ONE ಕೇವಲ 18 ತಿಂಗಳುಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಪ್ರೀಬುಕಿಂಗ್‌ ಪಡೆದುಕೊಂಡು ದಾಖಲೆ ಬರೆದಿದೆ.  ಇದೀಗ ಸಿಂಪಲ್ ಒನ್ ಬುಕಿಂಗ್ ಮಾಡಿದ ಗ್ರಾಹಕರಿಗೆ ಡೆಲಿವರಿ ಆರಂಭಿಸಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಸ್ಕೂಟರ್ ಲಭ್ಯವಾಗಲಿದೆ. ಬಳಿಕ ಹಂತ ಹಂತವಾಗಿ ವಿಸ್ತರಣೆಗೊಳ್ಳಲಿದೆ.  40-50 ನಗರಗಳಲ್ಲಿ 160-180 ರೀಟೇಲ್ ಕಾರ್ಯಾಜಾಲದ ಮೂಲಕ ವಹಿವಾಟು ವಿಸ್ತರಿಸಲಿದೆ.

Simple E car ಸಿಂಪಲ್ ಒನ್ ಸ್ಕೂಟರ್ ರೀತಿ, ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಲಾಂಚ್!

Simple ONE ಈಗ, ನಿಶ್ಚಲ ಮತ್ತು ರಿಮೋವೇಬಲ್ (ಕೈಯೆಲ್ಲೆತ್ತಿಕೊಂಡು ಹೋಗಬಹುದಾದ) ಬ್ಯಾಟರಿ ಹೊಂದಿದೆ.  ಐಡಿಸಿಯಲ್ಲಿ 212 ಕಿಲೋಮೀಟ್‌ಗಳ ಅಮೋಘ ಮೈಲೇಜ್ ರೇಂಜ್ ಒದಗಿಸುವ ಮೂಲಕ ಭಾರತದಲ್ಲೇ ಅತಿ ದೀರ್ಘ ಶ್ರೇಣಿಯ E2W ಆಗಿರಲಿದೆ. ವಿದ್ಯುತ್ E2W ಕ್ಷೇತ್ರದ ಈ ಹೊಸ ಮತ್ತು ತಾಜಾ ಕೊಡುಗೆಯು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿದ್ದು(ಭಾರತ ಸರ್ಕಾರದ ಆತ್ಮನಿರ್ಭರದ ಕನಸಿಗೆ ಅನುಗುಣವಾಗಿ), 214 ಐಪಿ ಪೋರ್ಟ್‌ಫೋಲಿಯೋ ಹೊಂದಿದೆ. ಮೇಲಾಗಿ, Simple ONE ಈ ವರ್ಗದಲ್ಲೇ ಅತಿವೇಗದ E2W ಆಗಿದ್ದು, ಕೇವಲ 2.77 ಸೆಕೆಂಡುಗಳಲ್ಲಿ 0-40 kmph ವೇಗ ಪಡೆದುಕೊಳ್ಳುತ್ತದೆ. Simple ONEಅನ್ನು ಇನ್ನಷ್ಟು ವಿಶಿಷ್ಟವನ್ನಾಗಿ ಮಾಡಿರುವ ಮತ್ತೊಂದು ಅಂಶವೆಂದರೆ, ಇದು, ಐಐಟಿ-ಇಂದೋರ್ ನೊಂದಿಗೆ ಸಹಯೋಗಾತ್ಮಕವಾಗಿ ಅಭಿವೃದ್ಧಿಪಡಿಸಲಾದ ಥರ್ಮಲ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತಿರುವುದರಿಂದ, ಯಾವುದೇ ಥರ್ಮಲ್ ರನ್ನವೇ(ಶಾಖಸ್ಥಿತಿ)ಗಳನ್ನು ನಿವಾರಿಸಲು ನೆರವಾಗುತ್ತದೆ. 

ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಇಂದು ಅತ್ಯಂತ ಅವಿಸ್ಮರಣೀಯ ದಿನವಾಗಿದೆ. ಈ ಶುಭದಿನವು ಬಹಳ ವರ್ಷಗಳವರೆಗೆ ನಮ್ಮ ನೆನಪಿನಲ್ಲಿರುತ್ತದೆ. ಇದು ನಾವೆಲ್ಲರೂ ಹೆಮ್ಮೆ ಪಡುವಂತಹ ಮೈಲಿಗಲ್ಲನ್ನು ಪ್ರತಿನಿಧಿಸಿ,ನಮ್ಮ ಗುರಿಗಳ ಯಶಸ್ವೀ ಸಾಧನೆಗೆ ಕಾರಣವಾದ ನಮ್ಮ ಸಂಘಟಿತ ಶ್ರಮಗಳನ್ನು ನೆನಪಿಸುತ್ತದೆ ಎಂದು ಸಿಂಪಲ್ ಎನರ್ಜಿಯ ಸ್ಥಾಪಕ ಮತ್ತು ಸಿಇಒ ಸುಹಾಸ್ ರಾಜ್‌ಕುಮಾರ್ ಹೇಳಿದ್ದಾರೆ.  ನಮ್ಮ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಹೂಡಿಕೆದಾರರೂ ಒಳಗೊಂಡಂತೆ ಎಲ್ಲಾ ಭಾಗೀದಾರರ ಅಚಲ ಬೆಂಬಲ ಇಲ್ಲದೆ ಇದ್ದಿದ್ದರೆ ಇದು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ಸ್ಪರ್ಧಾತ್ಮಕವಾಗಿರುವ ಭಾರತೀಯ ಆಟೋ ಕ್ಷೇತ್ರದಲ್ಲಿ ನಮ್ಮ ಪಯಣವನ್ನು ಆರಂಭಿಸುವುದಕ್ಕೆ ನಮಗೆ ಅತ್ಯಂತ ಉತ್ಸಾಹವೆನಿಸುತ್ತಿದೆ ಮತ್ತು ಉದ್ಯಮದಿಂದ ನಾವು ಪಡೆದುಕೊಳ್ಳುವ ಅಂತರ್ದೃಷ್ಟಿಗಳು ಮತ್ತು ಕಲಿಕೆಯ ಮೂಲಕ ನಾವು ನಮ್ಮನ್ನು ಇನ್ನಷ್ಟು ವಿಕಸನಗೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸುತ್ತೇವೆ. ಮುಂದುವರಿದು, ತಮ್ಮ Simple ONEಅನ್ನು ಮನೆಗೆ ತೆಗೆದುಕೊಂಡು ಹೋಗಲು ಸಮಾಧಾನದಿಂದ ಕಾಯುತ್ತಿರುವ ನಮ್ಮ ಗ್ರಾಹಕರಿಗೆ ಕ್ಷಿಪ್ರವಾಗಿ ಡೆಲಿವರಿ ಮಾಡುವುದೇ ನಮ್ಮ ಅತಿದೊಡ್ಡ ಆದ್ಯತೆಯಾಗಿರುತ್ತದೆ ಎಂದು ಸುಹಾಸ್ ಹೇಳಿದ್ದಾರೆ.

Okhi 90 Electric ಓಲಾಗೆ ಪ್ರತಿಸ್ಪರ್ಧಿ ಒಕಿನಾವಾ ಒಖಿ90 ಎಲೆಕ್ಟ್ರಿಕ್ ಸ್ಕೂಟರ್ ನಾಳೆ ಬಿಡುಗಡೆ!

Simple ONE, ಭಾರತೀಯರಿಗೆ ನಮ್ಮ ಪ್ರಾರಂಭಿಕ ಕೊಡುಗೆಯಾಗಿದ್ದು ಖಂಡಿತವಾಗಿಯೂ ನಮಗೆ ಅತ್ಯಂತ ಭಾವನಾತ್ಮಕವಾದ ಕ್ಷಣವಾಗಿದೆ. Simple ONE, ಕೌತುಕಮಯವಾದ ಅಂಶಗಳು, ಸರಿಸಾಟಿಯಿಲ್ಲದ ಕಾರ್ಯಕ್ಷಮತೆ, ವಿಸ್ತರಿತ ಶ್ರೇಣಿ, ಹಾಗೂ ಅತ್ಯುತ್ಕೃಷ್ಟ ಆರಾಮ ಮಟ್ಟಗಳ ಸಂಯೋಜನೆಯಿಂದ ಸಜ್ಜುಗೊಂಡಿದೆ ಎಂದು ಸಿಂಪಲ್ ಎನರ್ಜಿಯ ಸಹ ಸಂಸ್ಥಾಪಕ ಶ್ರೇಷ್ಠ್ ಮಿಶ್ರ ಹೇಳಿದ್ದಾರೆ. 

ಬೆಂಗಳೂರಿನ ಈ ಸ್ಟಾರ್ಟ್-ಅಪ್, ತಮಿಳುನಾಡಿನ ಶೂಲಗಿರಿಯಲ್ಲಿ Simple Vision 1.0,ಎಂಬ ತನ್ನ ಹೊಸ ಉತ್ಪಾದನಾ ಕಾರ್ಖಾನೆಯನ್ನು ಉದ್ಘಾಟಿಸಿ ವಾರ್ಷಿಕ  ಸರಿಸುಮಾರು 5 ಲಕ್ಷ ಯೂನಿಟ್‌ಗಳ ಸಾಮರ್ಥ್ಯವನ್ನು ಅನುಷ್ಠಾನಗೊಳಿಸಿದೆ. ಸರತಿಯಲ್ಲಿ ಇನ್ನೂ ಅನೇಕ ಉತ್ಪನ್ನಗಳಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ತನ್ನ ಹೃದ್ಭಾಗದಲ್ಲಿ ಇರಿಸಿಕೊಳ್ಳುತ್ತಾ, ಸಿಂಪಲ್ ಎನರ್ಜಿ, ಹಸಿರು ಸಂಚಾರಕ್ಕೆ ಜಾಗತಿಕ ಪರಿವರ್ತನೆಯಲ್ಲಿ ಮುನ್ನೆಲೆಯಲ್ಲಿರುವ ಗುರಿ ಹೊಂದಿದೆ.

Follow Us:
Download App:
  • android
  • ios