ಒಕಿನಾವಾದಿಂದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾರ್ಚ್ 24ಕ್ಕೆ ನೂತನ ಒಖಿ 90 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಬೆಲೆ  1 ರಿಂದ 1.20 ಲಕ್ಷ ರೂಪಾಯಿ ಅಂದಾಜು

ನವದೆಹಲಿ(ಮಾ.23): ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಭಾರತ ಕ್ರಾಂತಿ ಮಾಡಿದೆ. 30ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಹಲವು ಸ್ಕೂಟರ್‌ಗಾಗಿ ಗ್ರಾಹಕರು ಬುಕಿಂಗ್ ಮಾಡಿ ಕಾಯುತ್ತಿದ್ದಾರೆ. ಇದರ ನಡುವೆ ಒಕಿನಾವ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಹೊಚ್ಚ ಹೊಸ ಒಖಿ 90 ಎಲೆಕ್ಟ್ರಿಕ್ ಸ್ಕೂಟರ್ ಮಾರ್ಚ್ 24 ರಂದು ಬಿಡುಗಡೆಯಾಗಲಿದೆ.

ಒಖಿ90 ಎಲೆಕ್ಟ್ರಿಕ್ ಸ್ಕೂಟರ್ ಓಲಾ ಹಾಗೂ ಸಿಂಪಲ್ ಒನ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150ಕ್ಕಿಂತ ಹೆಚ್ಚು ಕಿಲೋಮೀಟರ್ ಮೈಲೇಜ್ ಸಿಗಲಿದೆ ಅನ್ನೋದು ಕಂಪನಿ ಮಾತು. ಇನ್ನು ಇದರ ಬೆಲೆ 1 ಲಕ್ಷ ರೂಪಾಯಿಯಿಂದ 1.20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ನೂತನ ಸ್ಕೂಟರ್ ಗರಿಷ್ಠ ವೇಗ 90 ಕಿ.ಮೀ ಪ್ರತಿ ಗಂಟೆಗೆ. ರೇರ್ ವೀಲ್ ಹಬ್ ಡಿಸಿ ಮೌಂಟೆಡೆ ಮೋಟಾರ್ ಬಳಕೆ ಮಾಡಲಾಗಿದೆ. ಹೀಗಾಗಿ ಇಂಧನ ಸ್ಕೂಟರ್‌ಗಿಂತಲೂ ಹೆಚ್ಚಿನ ಪವರ್ ಸಿಗಲಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೆನೆಕ್ಟಿವಿಟಿ ಫೀಚರ್ಸ್ ಸೇರಿದಂತೆ ಹಲವು ಫೀಚರ್ಸ್ ನೂತನ ಸ್ಕೂಟರ್‌ನಲ್ಲಿದೆ.

ವಿ ಖರೀದಿಗೆ ಮುಗಿಬಿದ್ದ ಜನ, 2021ರಲ್ಲಿ ದಾಖಲೆ ಬರೆದ ಒಕಿನಾವಾ!

ಅಥರ್‌ 450ಎಕ್ಸ್‌ ಸ್ಕೂಟರ್‌ 
ಹೀರೋ ಮೋಟೋಕಾಪ್‌ರ್‍ನ ಮುಖ್ಯಸ್ಥ ಪವನ್‌ ಮಂಜುಲ್‌ ಅವರಿಗೆ ಅಥರ್‌ 450ಎಕ್ಸ್‌ ಸ್ಕೂಟರ್‌ ನೀಡುವ ಮೂಲಕ ಅಥರ್‌ 450 ಎಕ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ವಿತರಣೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ನವದೆಹಲಿಯಲ್ಲಿ ಈ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಡೆಲಿವರಿಗೆ ಚಾಲನೆ ಸಿಕ್ಕಿದೆ. ಅಥರ್‌ ಎನರ್ಜಿ ಸಂಸ್ಥಾಪಕ ತರುಣ್‌ ಮೆಹ್ತಾ ಸ್ಕೂಟರ್‌ ವಿತರಿಸಿ ಮಾತನಾಡುತ್ತಾ, ‘ಈ ಮೂಲಕ ಆಥರ್‌ 450ಎಕ್ಸ್‌ ಸ್ಕೂಟರ್‌ ವಿತರಣೆಯನ್ನು ಕಿಕ್‌ಸ್ಟಾರ್ಟ್‌ ಮಾಡಲಾಗಿದೆ. ಶೀಘ್ರದಲ್ಲಿ ದೇಶದೆಲ್ಲೆಡೆ ಈ ಬೈಕ್‌ ಲಭ್ಯವಾಗಲಿದೆ’ ಎಂದರು. ಹೀರೋ ಮಾಟೋಕಾಪ್‌ರ್‍, ಅಥರ್‌ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಶೇ.35ರಷ್ಟುಷೇರು ಹೊಂದಿದೆ.

 ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ ಪೂರೈಕೆ ಆರಂಭ 
ಸೆಮಿಕಂಡಕ್ಟರ್‌ ಕೊರತೆ ಹಿನ್ನೆಲೆ ವಿಳಂಬವಾಗಿದ್ದ ಓಲಾ ಎಲೆಕ್ಟ್ರಿಕ್‌ನ ಇ- ಸ್ಕೂಟರ್‌ಗಳನ್ನು ಗ್ರಾಹಕರಿಗೆ ಪೂರೈಸಲು ಆರಂಭಿಸಲಾಗಿದೆ ಎಂದು ಓಲಾ ಮುಖ್ಯಸ್ಥ ಭವೀಶ್‌ ಅಗರ್‌ವಾಲ್‌ ಶುಕ್ರವಾರ ತಿಳಿಸಿದ್ದಾರೆ. 2021ರ ಆಗಸ್ಟ್‌ ನಂತರದಲ್ಲಿ ಗ್ರಾಹಕರು ಖರೀದಿಸಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ಗಳಾದ ಎಸ್‌1(99,999 ರೂ.) ಮತ್ತು ಎಸ್‌2 (1,29,999ರು.) ಗಳನ್ನು ಸೆಮಿಕಂಡಕ್ಟರ್‌ಗಳ ಅಲಭ್ಯತೆಯಿಂದಾಗಿ ಪೂರೈಕೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಮಸ್ಯೆ ಪರಿಹಾರವಾದ ಬೆನ್ನಲ್ಲೇ ಸ್ಕೂಟರ್‌ ಪೂರೈಕೆಗೆ ಕಂಪನಿ ಮುಂದಾಗಿದ್ದು, ಈಗಾಗಲೇ ಕಂಪನಿಯಿಂದ ವಾಹನಗಳು ಪ್ಯಾಕ್‌ ಆಗಿ ಆರ್‌ಟಿಒ ಪ್ರಕಿಯೆಗೊಳಪಟ್ಟಿವೆ. ಪೂರೈಕೆ ಆರಂಭವಾಗಿದ್ದು ಶೀಘ್ರದಲ್ಲೇ ಗ್ರಾಹಕರ ಮನೆ ಬಾಗಿಲು ತಲುಪಲಿವೆ ಎಂದು ಅಗರ್‌ವಾಲ್‌ ಟ್ವೀಟ್‌ ಮಾಡಿದ್ದಾರೆ.

ಒಂದೇ ಕ್ಲಿಕ್; ಬೆಂಗಳೂರಿನಲ್ಲಿ ಮನೆಬಾಗಿಲಿಗೆ ಬರಲಿದೆ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಘಟಕಕ್ಕೆ ಮೇಯರ್‌ ಚಾಲನೆ
ಸದಾ ಹೊಸತನದತ್ತ ಹೆಜ್ಜೆ ಇಡುತ್ತಿರುವ ಮಂಗಳೂರಿನ ಪಾಂಡೇಶ್ವರದ ಫೋರಂ ಮಾಲ್‌, ಪ್ರಪ್ರಥಮವಾಗಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಘಟಕ ಆರಂಭಿಸಿದೆ. ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಪ್ರೇಮಾನಂದ ಶೆಟ್ಟಿಈ ಘಟಕಕ್ಕೆ ಚಾಲನೆ ನೀಡಿದರು. ‘ಸ್ಟಾಟಿಕ್‌’ ಕಂಪನಿಯ ಈ ಘಟಕ ಮಂಗಳೂರಿನ ಮಾಲ್‌ಗಳಲ್ಲೇ ಪ್ರಥಮ ಹಾಗೂ ಏಕೈಕ ಚಾರ್ಜಿಂಗ್‌ ವ್ಯವಸ್ಥೆಯಾಗಿದೆ. ಇಲ್ಲಿ ಒಟ್ಟು 2 ಚಾರ್ಜಿಂಗ್‌ ಘಟಕಗಳಿದ್ದು, ಎಲ್ಲ ಬಗೆಯ ಎಲೆಕ್ಟ್ರಿಕ್‌ ವಾಹನಗಳನ್ನು ಚಾಜ್‌ರ್‍ ಮಾಡಬಹುದಾಗಿದೆ. ಈ ಸ್ಪೀಡ್‌ ಚಾರ್ಜಿಂಗ್‌ ವ್ಯವಸ್ಥೆಯಲ್ಲಿ ಬ್ಯಾಟರಿಗಳಿಗೆ ಅನುಗುಣವಾಗಿ 2-4 ಗಂಟೆಯೊಳಗೆ ಚಾಜ್‌ರ್‍ ಮಾಡಬಹುದು.