ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಬೈಕ್ ಶೀಘ್ರದಲ್ಲೇ ಬಿಡುಗಡೆ!
ರಾಯಲ್ ಎನ್‌ಫೀಲ್ಡ್ ಮತ್ತೊಂದು ಬೈಕ್‌ನೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದೆ. ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ 650 ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ತಮಿಳುನಾಡು ಘಟಕದಲ್ಲಿ ಈ ಬೈಕ್ ಉತ್ಪಾದನೆಯಾಗಲಿದೆ. ಹತ್ತು ಹಲವು ವಿಶೇಷತೆಗಳೊಂದಿಗೆ ನೂತನ ಬೈಕ್ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ನವದೆಹಲಿ(ಮಾ.01): ಭಾರತದಲ್ಲಿ ಬಹುಬೇಡಿಕೆಯ ರಾಯಲ್ ಎನ್‌ಫೀಲ್ಡ್ ಇದೀಗ ಮತ್ತೊಂದು ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಭಾರತದಲ್ಲಿ ಶಾಟ್‌ಗನ್ 650 ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ.ಟೆಸ್ಟ್ ರೈಡ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿರುವ ಶಾಟ್‌ಗನ್ 650 ಇದೀಗ ಚೆನ್ನೈನ ಉತ್ಪಾದನೆ ಘಟಕದಲ್ಲಿ ಅಂತಿಮ ರೂಪ ಪಡೆದುಕೊಳ್ಳುತ್ತಿದೆ.ಅತ್ಯಂತ ಆಕರ್ಷಕ ಬೈಕ್ ಇದಾಗಿದೆ. ಗರಿಷ್ಠ ಪರ್ಫಾಮೆನ್ಸ್ ನೀಡುವ ಈ ಬೈಕ್, ಮೊದಲ ನೋಟದಲ್ಲಿ ಆಕರ್ಷಿಸಿಬಲ್ಲ ವಿನ್ಯಾಸ ಹೊಂದಿದೆ. ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೋರ್ 650 ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ 3.59 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೀಗಾಗಿ ಹೊಚ್ಚ ಹೊಸ ಶಾಟ್‌ಗನ್ 650 ಬೈಕ್ ಬೆಲೆ ಸರಿಸುಮೂರು 3 ರಿಂದ 4 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇರುವ ಸಾಧ್ಯತೆ ಇದೆ.
ಕಳೆದ ವರ್ಷ EICMA ಈವೆಂಟ್‌ನಲ್ಲಿ ಇದೇ ಶಾಟ್‌ಗನ್ 650 ಕಾನ್ಸೆಪ್ಟ್ ಬೈಕ್ ಪರಿಚಯಿಸಲಾಗಿತ್ತು. ಇದೀಗ ಅಂತಿಮ ಹಂತದಲ್ಲಿರುವ ಶಾಟ್‌ಗನ್ 650 ನವೆಂಬರ್ ತಿಂಗಳಲ್ಲಿ ವಿಶ್ವದ ಇತರ ಭಾಗಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ನೂತನ ಶಾಟ್‌ಗನ್ 650 ಬೈಕ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಇನ್ನು ಡಿಸ್ಕ್ ಬ್ರೇಕ್ ಗಾತ್ರ ಹೆಚ್ಚಿಸಲಾಗಿದೆ. ಈ ಮೂಲಕ ಬೈಕ್ ಸುರಕ್ಷತೆ ಹಾಗೂ ಬ್ರೇಕಿಂಗ್ ಕುರಿತು ಹೆಚ್ಚಿನ ಗಮನಕೇಂದ್ರೀಕರಿಸಲಾಗಿದೆ.
Royal Enfield Hunter 350: ಬೇರೆ ಬೈಕುಗಳಿಗಿಂತ ಹಗುರ, ಕಡಿಮೆ ಎತ್ತರದ ಸ್ಟೈಲಿಷ್ ಬೈಕು
ಶಾಟ್‌ಗನ್ 650 ಬೈಕ್ ಡ್ಯುಯೆಲ್ ಎಕ್ಸ್‌ಹಾಸ್ಟ್ ಯುನಿಟ್ ಹೊಂದಿದೆ.ಇನ್ನು 648 cc ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದರಿಂದ ಈ ಬೈಕ್ 47 PS ಪವರ್ ಹಾಗೂ 52 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ ಸ್ಲಿಪ್ಪರ್ ಕ್ಲಚ್ ಹೊಂದಿದೆ.
ಶಾಟ್‌ಗನ್ 650 ಬೈಕ್ ಇತ್ತೀಚೆಗೆ ಭಾರದದಲ್ಲಿ ಟೆಸ್ಟಿಂಗ್ ವೇಳೆ ಪತ್ತೆಯಾಗಿದೆ. ಶಾಟ್‌ಗನ್ ರೆಟ್ರೋ ಥೀಮ್ ಮೂಲಕ ಆಕರ್ಷಕ ಲುಕ್ ಹೊಂದಿದೆ. ಇದರ ಹೆಡ್‌ಲೈಟ್ ರೌಂಡ್ ಶೇಪ್ ಹೊಂದಿದೆ. ಸ್ಪ್ಲಿಟ್ ಸೀಟ್ ಹೊಂದಿದೆ. ಸ್ಪೀಡೋಮೀಟರ್, ಟ್ರಿಪ್ ಮೀಟರ್, ಒಡೋ ಮೀಟರ್ ಡಿಜಿಟಲ್ ಇನ್ಸೆಟ್ ಗಾತ್ರ ಹೆಚ್ಚಾಗಿದೆ. ಫ್ಯೂಯೆಲ್ ರೀಡಿಂಗ್ ಸೇರಿದಂತೆ ಇತರ ಫೀಚರ್ಸ್ ಇದರಲ್ಲಿ ಕಾಣಬಹುದು. USD ಫ್ರಂಟ್ ಫೋರ್ಕ್ಸ್, ಟ್ವಿನ್ ರೇರ್ ಶಾಕ್ಸ್ ಹೊಂದಿದೆ.
ಎಬಿಎಸ್ ಬ್ರೇಕ್, ಮೌಂಟೆಡ್ ಅಲೋಯ್ ವ್ಹೀಲ್ಸ್ ಹೊಂದಿದೆ. ಟೈಯರ್ ಗಾತ್ರ ಮುಂಭಾಗ 19 ಇಂಚು ಹಾಗೂ ರೇರ್ ಟೈಯರ್ 16 ಇಂಚು ಹೊಂದಿರುವ ಸಾಧ್ಯತೆ ಇದೆ. ಸೂಪರ್ ಮಿಟಿಯೋರ್ 650 ಬೈಕ್‌ನಲ್ಲಿ ಇದೇ ಗಾತ್ರದ ಟೈಯರ್ ಬಳಸಲಾಗಿದೆ.
ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಅತ್ಯಾಕರ್ಷಕ MS ಕಸ್ಟಮ್ಸ್ ಬೈಕ್ ಅನಾವರಣ!
ಸೂಪರ್ ಮಿಟಿಯೋರ್
ಸೂಪರ್ ಮಿಟಿಯೋರ್ 650 ಹಾಗೂ ಸೂಪರ್ ಮಿಟಿಯೋರ್ 650 ಟೂರರ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಈ ಬೈಕ್ ಲಭ್ಯವಿದೆ. ಏರ್ ಕೂಲ್ಡ್, 4 ಸ್ಟ್ರೋಕ್ಸ್ ಪ್ಯಾರಲಲ್ ಟ್ವಿನ್ ಎಂಜಿನ್ ಇದರಲ್ಲಿದೆ. 7250 ಆರ್‌ಪಿಎಂನಲ್ಲಿ 34.6 ಕಿ ವ್ಯಾ ಪವರ್ ಉತ್ಪಾದಿಸುತ್ತದೆ. 52.3 ಎನ್‌ಎಂ ಟಾರ್ಕ್ ಇದೆ. 6 ಸ್ಪೀಡ್ ಗೇರ್‌ಗಳಿರುತ್ತವೆ. ಎಲೆಕ್ಟ್ರಿಕ್ ಫ್ಯುಯೆಲ್ ಇಂಜಕ್ಷನ್ ಇದೆ. ವ್ಹೀಲ್ ಬೇಸ್ 1500 ಎಂಎಂ ಇದ್ದರೆ, ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಇದೆ. ಸೀಟ್ ಹೈಟ್ 740 ಎಂಎಂ, ಬೈಕ್‌ನ ತೂಕ 241 ಕೆಜಿಗಳು. ಟ್ರಿಪ್ಪರ್ ನ್ಯಾವಿಗೇಶನ್ ಮತ್ತೊಂದು ವಿಶೇಷತೆ.