Asianet Suvarna News Asianet Suvarna News

Royal Enfield Scram 411 ನಗರ, ಆಫ್‌ರೋಡ್‌ ಸವಾರಿಗೆ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ADV ಕ್ರಾಸ್ಓವರ್ ಬೈಕ್ ಬಿಡುಗಡೆ!

2016 ರಲ್ಲಿ ಬಿಡುಗಡೆಯಾದ ಹಿಮಾಲಯನ್ (Himalayan) ಜಾಗತಿಕ ಮನ್ನಣೆ ಪಡೆದುಕೊಂಡಿದ್ದು, ವಿಶ್ವದಾದ್ಯಂತ ಹೆಚ್ಚು ಮಾರಾಟವಾಗುವ ಮೋಟಾರ್ಸೈಕಲ್ಗಳಲ್ಲಿ ಒಂದಾಗಿದೆ.  ಇದರ ಮುಂದುವರಿದ ಭಾಗವಾಗಿ ಸ್ಕ್ರಾಮ್ 411  ಮಾರುಕಟ್ಟೆಗೆ ಪರಿಚಯಿಸಲಾಗಿದೆ,.

Royal Enfield launches Scram 411 ADV crossover for Off Road and urban ride with rs 2 03 lakh
Author
Bengaluru, First Published Mar 15, 2022, 7:13 PM IST

ಮಧ್ಯಮ ಗಾತ್ರದ (250cc - 750cc) ಮೋಟಾರ್ಸೈಕಲ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್ಫೀಲ್ಡ್ (Royal Enfield),  ಭಾರತದಲ್ಲಿ ಇಂದು  ಸ್ಕ್ಯಾಮ್ 411 (Scram 411) - ಬ್ರ್ಯಾಂಡ್ನ ಮೊದಲ ಎಡಿವಿ ಕ್ರಾಸ್ಓವರ್ (ADV Cross over) ಅನ್ನು ಅನಾವರಣಗೊಳಿಸಿದೆ. 2,03,085 ರೂ.ಗಳಿಂದ ಆರಂಭವಾಗುವ ಹೊಸ ಸ್ಕ್ರ್ಯಾಮ್ 411 ಸಾಹಸ ಮೋಟಾರ್ಸೈಕಲ್ ಅನ್ನು LS-410 ಎಂಜಿನ್ ಪ್ಲಾಟ್ಫಾರ್ಮ್ ಮತ್ತು ಹ್ಯಾರಿಸ್ ಪರ್ಫಾರ್ಮೆನ್ಸ್ ಚಾಸಿಸ್ನಲ್ಲಿ ನಿರ್ಮಿಸಲಾಗಿದೆ.  2016 ರಲ್ಲಿ ಬಿಡುಗಡೆಯಾದ ಹಿಮಾಲಯನ್ (Himalayan) ಜಾಗತಿಕ ಮನ್ನಣೆ ಪಡೆದುಕೊಂಡಿದ್ದು, ವಿಶ್ವದಾದ್ಯಂತ ಹೆಚ್ಚು ಮಾರಾಟವಾಗುವ ಮೋಟಾರ್ಸೈಕಲ್ಗಳಲ್ಲಿ ಒಂದಾಗಿದೆ.  ಇದರ ಮುಂದುವರಿದ ಭಾಗವಾಗಿ ಸ್ಕ್ರಾಮ್ 411 ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ,

.ಇದು ರಾಯಲ್ ಎನ್ಫೀಲ್ಡ್ ಹಿಮಾಲಯನ್ ಮಾದರಿಯದ್ದೇ ಬೈಕ್ ಆಗಿದೆಯಾದರೂ, ಇದು ಕೇವಲ ಆಫ್ರೋಡಿಂಗ್ ಮಾತ್ರವಲ್ಲದೆ, ನಗರಗಳಲ್ಲಿ, ಟ್ರಾಫಿಕ್ಗಳಲ್ಲಿ ಕೂಡ ರೈಡ್ ಮಾಡಲು ಸೂಕ್ತವಾಗಿದೆ.
ಹೊಸ Scram 411 ಇಂದಿನಿಂದಲೇ ಭಾರತದಲ್ಲಿ ಟೆಸ್ಟ್ ರೈಡ್ಗಳು ಮತ್ತು ಬುಕಿಂಗ್ಗಳಿಗೆ ಲಭ್ಯವಿದೆ.  ಈ ಮೋಟಾರ್ಸೈಕಲ್ ಯುರೋಪ್ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶದ ದೇಶಗಳಲ್ಲಿ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದ್ದು, ನಂತರ ಉತ್ತರ ಅಮೇರಿಕಾ ಮತ್ತು ಲ್ಯಾಟಿನ್ ಅಮೇರಿಕಾದಲ್ಲಿಯೂ ಬಿಡುಗಡೆಯಾಗಲಿದೆ.

2 ನಿಮಿಷದಲ್ಲಿ 120 ಬೈಕ್ ಮಾರಾಟ, ರಾಯಲ್ ಎನ್‌ಫೀಲ್ಡ್ ಹೊಸ ದಾಖಲೆ

ಹೊಸ ವಾಹನದ ಕುರಿತು ಮಾತನಾಡಿದ ಐಷರ್ ಮೋಟಾರ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಲಾಲ್, ಸ್ಕ್ರಾಮ್ 411 ನ ನಗರ ಜೀವನ ವಾರಾಂತ್ಯದ ವಿಹಾರಕ್ಕೆ ಸೂಕ್ತವಾಗಿದೆ. ಈ ಸಂಪೂರ್ಣ ಗ್ಯಾಮಟ್ ಅನ್ನು ಸಲೀಸಾಗಿ ನ್ಯಾವಿಗೇಟ್ ಮಾಡಬಹುದಾದ ಮೋಟಾರ್ಸೈಕಲ್ ಅನ್ನು ನಿರ್ಮಿಸಲು ನಾವು ಬಯಸಿದ್ದೆವು. ಇದು ಎಲ್ಲಾ ವಿಭಾಗಕ್ಕೆ ಹೊಂದಿಕೊಳ್ಳುವಂತಹ ಮೋಟಾರ್ಸೈಕಲ್ ಆಗಿದೆ” ಎಂದರು.
ರಾಯಲ್ ಎನ್ಫೀಲ್ಡ್ನ ಕಾರ್ಯನಿರ್ವಾಹಕ ನಿರ್ದೇಶಕ ಬಿ ಗೋವಿಂದರಾಜನ್ ಮಾತನಾಡಿದ, “ಹಿಮಾಲಯನ್ಗೆ ದೊರೆತ ಅತ್ಯುತ್ತಮ ಪ್ರತಿಕ್ರಿಯೆ ಅದನ್ನು ಹೆಚ್ಚು ಯುವ, ಆಧುನಿಕವಾಗಿ ಮರುರೂಪಿಸಲು ನಮಗೆ ಸ್ಫೂರ್ತಿ ನೀಡಿತು. ಸ್ಕ್ರಾಮ್ 411 ಅನ್ನು ಜಾಗತಿಕ ಸವಾರರಿಗಾಗಿ ನಿರ್ಮಿಸಲಾಗಿದೆ ಮತ್ತು ವಿಶ್ವ ದರ್ಜೆಯ ಎಂಜಿನಿಯರಿಂಗ್ನೊಂದಿಗೆ ತಯಾರಿಸಲಾಗುತ್ತದೆ. ಪ್ರಪಂಚದಾದ್ಯಂತದ ಯುವ ಸವಾರರು ಹೊಸ Scram 411 ಅನ್ನು ಇಷ್ಟಪಡುತ್ತಾರೆ ಎಂದು ನಮಗೆ ವಿಶ್ವಾಸವಿದೆ” ಎಂದರು.

ರಾಯಲ್ ಎನ್ಫೀಲ್ಡ್ನ ವಿನ್ಯಾಸದ ಮುಖ್ಯಸ್ಥ ಮಾರ್ಕ್ ವೆಲ್ಸ್ ಮಾತನಾಡಿ, “ನಾವು Scram 411 ನಲ್ಲಿ ತಯಾರಿ ಪ್ರಾರಂಭಿಸಿದಾಗ, ವಿನ್ಯಾಸ ಮತ್ತು ಉದ್ದೇಶದಲ್ಲಿ ವಿಭಿನ್ನವಾಗಿರುವ ಮೋಟಾರ್ಸೈಕಲ್  ತಯಾರಿಸುವುದು ನಮ್ಮ ಉದ್ದೇಶವಾಗಿತ್ತು. ಸ್ಕ್ರಾಮ್ 411 ನಗರ ಪರಿಸರಕ್ಕೆ ಅಂತಿಮ ADV ಕ್ರಾಸ್ಒವರ್ ಆಗಿದೆ” ಎಂದರು.

ಹೊಸ ವರ್ಷದಲ್ಲಿ ಬೈಕ್ ಪ್ರಿಯರಿಗೆ ಶಾಕ್, ಕ್ಲಾಸಿಕ್ 350, ಮೆಟಿಯೋರ್ ಬೆಲೆ ಹೆಚ್ಚಳ

ಇದು 411 ಸಿಸಿ ಇಂಜಿನ್, ಫ್ಯುಯಲ್ ಇಂಜೆಕ್ಟೆಟ್,  4 ಸ್ಟ್ರೋಕ್, ಎಸ್ಓಎಚ್ಸಿ, ಏಜ್-ಕೂಲ್ಡ್ ಸಿಲಿಂಡರ್ ಇಂಜಿನ್ ಹೊಂದಿದ್ದು,  ಈ ಇಂಜಿನ್ 6500rpm ನಲ್ಲಿ 24.3bhp ಯ ಗರಿಷ್ಠ ಪವರ್ ಮತ್ತು 4000-4500 rpm ನಲ್ಲಿ 32Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ, ಮೋಟಾರ್ಸೈಕಲ್ ಕನಿಷ್ಠ ಗೇರ್ ಶಿಫ್ಟ್ಗಳೊಂದಿಗೆ ದೀರ್ಘ ನಗರ ಪ್ರಯಾಣದ ಮೇಲೆ ನಿರ್ವಹಿಸಲು ಸುಲಭವಾಗಿದೆ. 

ಈ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ನೊಂದಿಗೆ, ಸ್ಕ್ರಾಮ್ 411 ಸವಾರರಿಗೆ ಮತ್ತು ಪಿಲಿಯನ್ ಸವಾರರಿಗೆ ಸುಗಮ ಮತ್ತು ಆರಾಮದಾಯಕ ಸವಾರಿಯ ಭರವಸೆ ನೀಡುತ್ತದೆ. 41 ಎಂಎಂ ಫೋರ್ಕ್ಗಳು ಮತ್ತು 190 ಎಂಎಂ ಟ್ರಾವೆಲ್ನೊಂದಿಗೆ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಶನ್, ಮೊನೊಶಾಕ್ ಲಿಂಕ್, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ಗಳು ಡ್ಯುಯಲ್-ಚಾನೆಲ್ ಎಬಿಎಸ್ಹೊಂದಿದ್ದು, ಆತ್ಮವಿಶ್ವಾಸದ ಬ್ರೇಕಿಂಗ್ ನೀಡುತ್ತದೆ.19-ಇಂಚಿನ, ಡ್ಯುಯಲ್ ಪರ್ಪಸ್ ಫ್ರಂಟ್ ಟೈರ್, 17-ಇಂಚಿನ ಹಿಂಬದಿಯ ಟೈರ್ಗಳು ಎಲ್ಲಾ ರೀತಿಯ ರಸ್ತೆಗಳು, ಹೊಂಡ ಗುಂಡಿಗಳಲ್ಲಿ ಕೂಡ ಸುಲಭವಾಗಿ ಚಲಾಯಿಸಲು ನೆರವಾಗುತ್ತದೆ. 

ಹೊಸ ಮೋಟಾರ್ಸೈಕಲ್ ಡಿಜಿಟಲ್-ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು ಅದು ಡಿಜಿಟಲ್ ಪರದೆಯ ಮೇಲೆ ಅಗತ್ಯ ಮಾಹಿತಿಗೆ ಒದಗಿಸುತ್ತದೆ. ಆಫ್-ಸೆಟ್ ಓಲ್ಡ್-ಸ್ಕೂಲ್, ಅನಲಾಗ್ ಸ್ಪೀಡೋಮೀಟರ್ ಕೂಡ ಇದರಲ್ಲಿ ಕಾಣಬಹುದು. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಟೋ ಮೀಟರ್, ಟ್ರಿಪ್ಪಲ್ ಮೀಟರ್, ಸರ್ವಿಸ್ ಮೆಮೋರಿಯನ್ನು ಕೂಡ ಒಳಗೊಂಡಿದೆ. ಸ್ಕ್ಯಾಮ್ 411 ಗ್ರ್ಯಾಫೈಟ್ ಹಳದಿ, ಗ್ರ್ಯಾಫೈಟ್ ರೆಡ್ ಮತ್ತು ಗ್ರ್ಯಾಫೈಟ್ ನೀಲಿ ಬಣ್ಣಗಳಲ್ಲಿ  ಲಭ್ಯವಿದೆ. ನೀಲಿ ಹಾಗೂ ಕಪ್ಪು ಬಣ್ಣದ ಬೈಕ್ಗಳಲ್ಲಿ ರಾಯಲ್ ಎನ್ಫೀಲ್ಡ್ ಸ್ಟ್ರೈಪ್ಗಳು ಮತ್ತು ವಿಭಿನ್ನ ಬಣ್ಣದ ಟ್ಯಾಂಕ್ಗಳನ್ನು ನೀಡಲಾಗಿದೆ. ವೈಟ್ ಫ್ಲೇಮ್ ಮತ್ತು ಸಿಲ್ವರ್ ಸ್ಪಿರಿಟ್ ಎಂಬ ಎರಡು ಬಣ್ಣಗಳಲ್ಲಿ ಟಾಪ್-ಎಂಡ್ ವೇರಿಯಂಟ್ಗಳು ಡ್ಯುಯಲ್ ಟ್ಯಾಂಕ್ ಬಣ್ಣಗಳನ್ನು ಹೊಂದಿವೆ.

ಗ್ರಾಹಕರು ರಾಯಲ್ ಎನ್ಫೀಲ್ಡ್ ಅಪ್ಲಿಕೇಶನ್ ಮೂಲಕ ಅಥವಾ ಕಂಪನಿಯ ವೆಬ್ಸೈಟ್ www.royalenfield.com ನಲ್ಲಿ ಅಥವಾ ಹತ್ತಿರದ ರಾಯಲ್ ಎನ್ಫೀಲ್ಡ್ ಸ್ಟೋರ್ನಲ್ಲಿ ತಮ್ಮ ಸ್ಕ್ರಾಮ್ 411 ಟೆಸ್ಟ್ ರೈಡ್ ಅಥವಾ ಖರೀದಿಗೆ ಬುಕ್ ಮಾಡಬಹುದು. ಇದರ ಬೆಲೆ 2,03,085 ರೂ.ಗಳಿಂದ ಆರಂಭವಾಗುತ್ತವೆ.  ಸ್ಕೈಲೈನ್ ಬ್ಲೂ ಮತ್ತು ಬ್ಲೇಜಿಂಗ್ ಬ್ಲ್ಯಾಕ್ ಬೈಕ್ಗಳಿವೆ 2,04,921 ರೂ. ಮತ್ತು ಸಿಲ್ವರ್ ಸ್ಪಿರಿಟ್ ಮತ್ತು ವೈಟ್ ಫ್ಲೇಮ್ ಮೋಟಾರ್ ಸೈಕಲ್ಗಳಿಗೆ 2,08,593 ರೂ.ಗಳಿವೆ.
 

Follow Us:
Download App:
  • android
  • ios