ಭಾರತೀಯ ದ್ವಿಚಕ್ರವಾಹನಗಳ ಮಾರುಕಟ್ಟೆಯಲ್ಲಿ ಏಪ್ರಿಲಿಯಾ ಪ್ರೀಮಿಯಂ ಸ್ಕೂಟರ್‌ಗಳು ಗಮನ ಸೆಳೆಯುತ್ತಿವೆ. ಈಗಾಗಲೇ ಪಿಯಾಜಿಯೊ ಕಂಪನಿ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ ಸ್ಟೈಲ್ಡ್ ಸ್ಕೂಟರ್ ಬಿಡುಗಡೆಯನ್ನು ಖಚಿತಪಡಿಸಿದ್ದು, ಇದೀಗ ಕಂಪನಿ ಪ್ರಿ ಬುಕ್ಕಿಂಗ್ ಆರಂಭಿಸಿದೆ.

ಏಪ್ರಿಲಿಯಾ ಪ್ರಿಯರು ಕೇವಲ 5,000 ರೂಪಾಯಿ ಕೊಟ್ಟು ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ ಸ್ಟೈಲ್ಡ್ ಸ್ಕೂಟರ್ ಅನ್ನು ಮುಂಗಡ ಬುಕ್ ಮಾಡಿಕೊಳ್ಳಬಹುದು. ಕಂಪನಿ ಇತ್ತೀಚೆಗಷ್ಟೇ ಮಹಾರಾಷ್ಟ್ರದ ಬಾರಾಮತಿಯಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಕಂಪನಿಯ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬಳಕೆದಾರರು 5000 ರೂ. ಟೋಕನ್ ಹಣವಾಗಿ ನೀಡಿ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಕಳೆದ ದಶಕದಲ್ಲೇ ಮ್ಯಾಕ್ಸಿ ಸ್ಟೈಲ್ಡ್ ಸ್ಕೂಟರ್‌ಗಳ ಸೆಗ್ಮೆಂಟ್‌ನಲ್ಲಿ ಏಪ್ರಿಲ್ಯ ಎಸ್‌ಎಕ್ಸ್‌ಆರ್ 160 ಮೊದಲನೆಯದ್ದಾಗಿದೆ. 

2021 ಕೆಟಿಎಂ 125 ಡ್ಯೂಕ್ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಗ್ಲಾಸೀ ರೆಡ್, ಮ್ಯಾಟ್ ಬ್ಲ್ಯೂ, ಗ್ಲಾಸೀ ವೈಟ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಮಾರಾಟಕ್ಕೆ ದೊರೆಯಲಿದೆ ಎಂದು ಪಿಯಾಜಿಯೋ ಇಂಡಿಯಾ ಖಚಿತಪಡಿಸಿದೆ.

160 ಸಿಸಿ ಸಿಂಗಲ್ ಸಿಲೆಂಡರ್, ಮೂರು ವಾಲ್ವ್, ಫ್ಯೂಯೆಲ್ ಇಂಜೆಕ್ಟ್ ಎಂಜಿನ್ ಅನ್ನು ಈ ಏಪ್ರಿಲಿಯಾ ಎಸ್‌ಎಕ್ಸ್‌ಆರ್ ಒಳಗೊಂಡಿದೆ. ಸ್ಕೂಟರ್‌ಗೆ ಅಳವಡಿಸಲಾಗಿರುವ ಅವಳಿ ಎಲ್ಇಡಿ ಹೆಡ್‌ಲೈಟ್ಸ್ ದೊಡ್ಡದಾಗಿದ್ದು, ಹೆಚ್ಚು ಆಕರ್ಷಕವಾಗಿವೆ. ಎಲ್ಇಡಿ ಟೇಲ್‌ಲೈಟ್ಸ್, ಡಿಜಿಟಲ್ ಇನ್ಸುಟ್ರುಮೆಂಟಲ್ ಕನ್ಸೋಲ್, ಮೊಬೈಲ್ ಕನೆಕ್ಟಿವಿಟಿ ಆಯ್ಕೆ ಹಾಗೂ ಇನ್ನಿತರ ಫೀಚರ್‌ಗಳು ಗಮನ ಸೆಳೆಯುತತ್ತದೆ.

ವರ್ಷಾಂತ್ಯದ ಆಫರ್‌: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!

ಈಗಾಗಲೇ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ತನ್ನ ಸ್ಟ್ಯಾಂಡರ್ಡ್ ಸ್ಕೂಟರ್‌ಗಳಿಗಿಂತಲೂ ಮ್ಯಾಕ್ಸ್ ಸ್ಟೈಲ್ ಈ ಹೊಸ ಏಪ್ರಿಲಿಯಾ ಎಸ್‌ಎಕ್ಸ್ಆರ್ 160 ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ. ಉದ್ದನೆಯ  ಮತ್ತು ಗುಣಮಟ್ಟದ ಸೀಟ್ ಸ್ಕೂಟರ್ ಚಾಲಕರಿಗೆ ಮತ್ತು ಹಿಂದೆ ಕುಳಿತವರಿಗೂ ಹೆಚ್ಚಿನ ಆರಾಮದಾಯಕವಾಗಿದೆ. ಹೊಂದಾಣಿಕೆ ಮಾಡಬಲ್ಲ ರಿಯರ್ ಸಸ್ಪೆನ್ಸನ್, ಎಬಿಎಸ್‌ನೊಂದಿಗೆ ಬರುವ ಡಿಸ್ಕ್ ಬ್ರೇಕ್, ಅಲಾಯ್ ವ್ಹೀಲ್‌ಗಳು ಗಮನ ಸೆಳೆಯುತ್ತವೆ. ಈ ಹೊಸ ಏಪ್ರಿಲಿಯಾ ಎಸ್‌ಆರ್‌ಎಕ್ಸ್ 160 ಬೆಲೆ ಅಂದಾಜು ಎಕ್ಸ್ ಶೋರೂಮ್ ಬೆಲೆ 1.30 ಲಕ್ಷ ರೂಪಾಯಿ ಇರಬಹುದು. ಈಗಾಗಲೇ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಕಂಪನಿಗಳ 150 ಸಿಸಿ ಮತ್ತು ಪ್ರೀಮಿಯಂ ಸ್ಕೂಟರ್‌ಗಳಿಗೆ ಹೆಚ್ಚಿನ ಸ್ಪರ್ಧೆಯನ್ನು ಈ ಏಪ್ರಿಲಿಯಾ ಎಸ್ಆರ್‌ಎಕ್ಸ್ 160  ನೀಡಬಹುದು ಎಂದು ಅಂದಾಜಿಸಲಾಗಿದೆ. 

Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!

2020 ಆಟೋ ಎಕ್ಸೋಪೋದಲ್ಲಿ ಮೊದಲ ಬಾರಿಗೆ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರನ್ನು ಅನಾವರಣಗೊಳಿಸಲಾಗಿತ್ತು. ಇಟಲಿಯ ಕಂಪನಿ ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಈ ಸ್ಕೂಟರ್ ವಿನ್ಯಾಸ ಮಾಡಿದೆ.