ಬರೋಬ್ಬರಿ 525 ಕಿ.ಮೀ ಮೈಲೇಜ್, 65 ಸಾವಿರ ರೂಪಾಯಿ; ಹೊಸ ಭೀಮ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!
ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 525 ಕಿಲೋಮೀಟರ್ ಮೈಲೇಜ್, ಬೆಲೆ 65,000 ರೂಪಾಯಿಂದ ಆರಂಭ. ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹೆಸರು ಭೀಮ್. ಈ ನೂತನ ಸ್ಕೂಟರ್ ವಿಶೇಷತೆ ಏನು? ಇಲ್ಲಿದೆ ವಿವರ.
ಬೆಂಗಳೂರು(ಮೇ.24): ಭಾರತದಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್, ಗರಿಷ್ಠ ಮೈಲೇಜ್ ಸೇರಿದಂತೆ ಒಂದಕ್ಕಿಂತ ಒಂದು ಭಿನ್ನವಾಗಿದೆ. ಇದೀಗ ಓಝೋಟೆಕ್ ಕಂಪನಿಯು 'ಭೀಮ್’ ಹೆಸರಿನಲ್ಲಿ ಕೈಗೆಟುಕುವ ದರದಲ್ಲಿಹೊಸ ವಿದ್ಯುತ್‌ಚಾಲಿತ (ಇವಿ) ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ಇದರ ಬೆಲೆ 65,990 ರೂಪಾಯಿಂದ ಆರಂಭವಾಗುತ್ತಿದೆ. 10 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಬೈಕ್, ಒಮ್ಮೆ ಚಾರ್ಜ್ ಮಾಡಿದರೆ 525 ಕಿಮೀ.ವರೆಗೆ ಕ್ರಮಿಸಲಿದೆ. ಮೇ.25 ರಿಂದ ಬುಕಿಂಗ್ ಆರಂಭಗೊಳ್ಳುತ್ತಿದೆ.
ಎಲ್ಲಾ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಈ ಎಲೆಕ್ಟ್ರಿಕ್ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಭೀಮ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಲು ರೆಡಿಯಾಗಿದೆ. 7 ವರ್ಷವರೆಗೆ ವಾರಂಟಿ ಇದೆ. ಗ್ರಾಹಕರು ನಿಶ್ಚಿಂತೆಯಿಂದ ವಾಹನ ಖರೀದಿಸಬಹುದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ಪೂರೈಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಘಟಕಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ.
212 ಕಿ.ಮೀ ಮೈಲೇಜ್, ಕೈಗೆಟುಕವ ದರ; ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!
ಟ್ರೆಲ್ಲಿಸ್ ಟ್ಯೂಬ್ಯುಲರ್ ಫ್ರೇಂ ರಚನೆಯು ವಾಹನದ ಬಾಳಿಕೆಯನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ ಐಪಿ67- ರೇಟೆಡ್, ಆಂತರಿಕವಾಗಿ ತಯಾರಾಗಿರುವ 3 ಕೆಡಬ್ಲ್ಯೂ ಮೋಟರ್ ವಿವಿಧ ಭೂಪ್ರದೇಶಗಳಲ್ಲಿ ಸದೃಢವಾಗಿ ನಿರ್ವಹಣೆ ಮಾಡಲು ಸಾಕಷ್ಟು ಟಾರ್ಕ್ ಅನ್ನು ಒದಗಿಸುತ್ತದೆ. ಐಪಿ67-ರೇಟೆಡ್ ಬ್ಯಾಟರಿ ಪ್ಯಾಕ್, ಆಲ್-ಅಲ್ಯೂಮೀನಿಯಂ ಫ್ರೆಶರ್ ಡೈ ಕ್ಯಾಸ್ಟ್ (ಪಿಡಿಸಿ) ಅನ್ನು ಒಳಗೊಂಡಿದ್ದು, ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ (ಬಿಎಂಎಸ್) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಂತ್ರಗಳನ್ನು ಸಂಯೋಜನೆ ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಮಟ್ಟದ ಸುರಕ್ಷತೆಯನ್ನು ನೀಡುತ್ತದೆ.
ಅಲ್ಯೂಮೀನಿಯಂ ಬಾಡಿ ಹೊಂದಿರುವ ಬೈಕ್, ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಂ (ಬಿಎಂಎಸ್) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಂತ್ರ ಸಂಯೋಜನೆ ಮಾಡುತ್ತದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಸುರಕ್ಷತೆ ನೀಡುತ್ತದೆ. ಬ್ಲೂಟೂತ್ ಸಂಪರ್ಕ ಮತ್ತು ಮೊಬೈಲ್ ಆ್ಯಪ್ ನಿಂದ ಸುಸಜ್ಜಿತವಾಗಿರುವ ಭೀಮ್, ಒಂದು ಸ್ಮಾರ್ಟ್ ದ್ವಿಚಕ್ರ ವಾಹನವಾಗಿದ್ದು, ನಿಮ್ಮ ಸವಾರಿಯ ಅನುಭವವನ್ನು ಹೆಚ್ಚಿಸುತ್ತದೆ. ಡ್ಯಾಶ್ ಬೋರ್ಡ್ ನಲ್ಲಿ ಜಿಪಿಎಸ್ ಸ್ಪೀಡ್, ಟ್ರಿಪ್ ಮೀಟರ್, ಜಿಪಿಎಸ್ ನ್ಯಾವಿಗೇಶನ್, ಡಾಕ್ಯುಮೆಂಟ್ ಮತ್ತು ಮೀಡಿಯಾ ವೀವರ್, ಟ್ರಾವೆಲ್ ಹಿಸ್ಟರಿ ಮತ್ತು ಇನ್ನಿತರ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿದೆ.
ಫೇಮ್-2 ತಿದ್ದುಪಡಿಗಳನ್ವಯ ಭೀಮ್ ನ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಗ್ರಾಹಕರು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಪಡೆಯಲಿದ್ದಾರೆ. ಭೀಮ್ 6 ವೇರಿಯೆಂಟ್ ಗಳಲ್ಲಿ ಲಭ್ಯವಿದ್ದು, ಇದರ ಬೆಂಗಳೂರಿನ ಎಕ್ಸ್ –ಶೋರೂಂ ಬೆಲೆ 65,990 ರೂಪಾಯಿಗಳಿಂದ 1,99,990 ರೂಪಾಯಿಗಳವರೆಗೆ ಇದೆ.
ಗಿನ್ನಿಸ್ ದಾಖಲೆ ನಿರ್ಮಿಸಿದ ವಿಡಾ ಹೀರೋ ಎಲೆಕ್ಟ್ರಿಕ್ ಸ್ಕೂಟರ್!
ಮೋಟರ್ ಮತ್ತು ಜವಳಿ ಉತ್ಪನ್ನಗಳ ಉತ್ಪಾದನೆಯಲ್ಲಿ ಖ್ಯಾತಿ ಗಳಿಸಿರುವ ಕೊಯಮತ್ತೂರು ಮೂಲದ ಕಂಪನಿ ನಮ್ಮದಾಗಿದೆ. ಆವಿಷ್ಕಾರದ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ Ozotec ಅನ್ನು ಆರಂಭಿಸಿದ್ದೇವೆ ಎಂದು Ozotec ನ ಸಂಸ್ಥಾಪಕ & ಸಿಇಒ ಭರತನ್ ಹೇಳಿದ್ದಾರೆ. ನಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಫಿಲೋ ಅನ್ನು ಎರಡು ವರ್ಷಗಳ ಹಿಂದೆ ತಮಿಳುನಾಡಿನ ಐದು ಜಿಲ್ಲೆಗಳಲ್ಲಿ ಮಾರಾಟ ಮಾಡಿದ್ದು, 6,000 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದೇವೆ. ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿ ವೇಳೆ, ಇವಿ ಉತ್ಪಾದಕರನ್ನು ಅನೇಕ ಗ್ರಾಹಕರು ಎದುರುನೋಡುತ್ತಿರುವುದನ್ನು ಗಮನಿಸಿದ್ದೇವೆ. ತಾಂತ್ರಿಕ ವೈಶಿಷ್ಟ್ಯತೆಗಳ ಮೇಲೆ ಹೆಚ್ಚು ಗಮನಹರಿಸಿರುವಾಗ, ಬ್ಯಾಟರಿ, ಮೋಟರ್ ಮತ್ತು ಚಾಸಿ್ ಗಳಂತಹ ಮುಖ್ಯ ಘಟಕಗಳಿಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ನಾವು ಅರಿತಿದ್ದೇವೆ ಎಂದರು.