ಓಲಾ ಸ್ಕೂಟರ್‌ಗೆ ಭರ್ಜರಿ ಆಫರ್, ಕೇವಲ 49,999 ರೂಪಾಯಿಗೆ S1 ಇವಿ!
ದೂರುಗಳಿಂದ ಹಿನ್ನಡೆ ಅನುಭವಿಸಿದ ಓಲಾ ಇದೀಗ ಗ್ರಾಹಕರಿಗೆ ಅತೀ ದೊಡ್ಡ ಆಫರ್ ನೀಡಿದೆ. ಓಲಾ S1 ಸ್ಕೂಟರ್ ಇದೀಗ ಕೇವಲ 49,999 ರೂಪಾಯಿಗೆ ಲಭ್ಯವಿದೆ. ಇದು ಸೀಮಿತ ಅವಧಿ ಆಫರ್
ಬೆಂಗಳೂರು(ಅ.02) ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಓಲಾ ಎಲೆಕ್ಟ್ರಿಕ್ ಕೂಡ ಮುಂಚೂಣಿಯಲ್ಲಿದೆ. ಆದರೆ ಓಲಾ ಬಗ್ಗೆ ಹಲವು ಗ್ರಾಹಕರು ದೂರುಗಳನ್ನು ನೀಡಿದ್ದಾರೆ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಆಗಿರುವ ಹಿನ್ನಡೆ ಸರಿಪಡಿಸಲು ಇದೀಗ ಓಲಾ ಹಿಂದೆಂದು ಕಂಡು ಕೇಳರಿಯದ ಡಿಸ್ಕೌಂಟ್ ಆಫರ್ ನೀಡಿದೆ. ಸಾಮಾನ್ಯವಾಗಿ ಓಲಾ ಇವಿ ಸ್ಕೂಟರ್ ಆರಂಭಿಕ ಬೆಲೆ 74,999 ರೂಪಾಯಿ(ಎಕ್ಸ್ ಶೋ ರೂಂ). ಆದರೆ ಇದೀಗ ಓಲಾ ಇವಿ ಅತೀ ದೊಡ್ಡ ಡಿಸ್ಕೌಂಟ್ ಆಫರ್ ಮೂಲಕ ಕೇವಲ 49,999 ರೂಪಾಯಿಗೆ ಸ್ಕೂಟರ್ ನೀಡುತ್ತಿದೆ. ಇದು ಸೀಮಿತ ಅವಧಿಯ ಆಫರ್.
ಓಲಾ ಎಲೆಕ್ಟ್ರಿಕ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದು ಬಾಸ್ ಬಿಗ್ಗೆಸ್ಟ್ ಓಲಾ ಸೇಲ್ ಎಂದು ಹೇಳಿಕೊಂಡಿದೆ. ಸೀಮಿತ ಅವಧಿ ಆಫರ್ ಕೇವಲ ಒಂದು ದಿನ ಮಾತ್ರ. ಇಂದು ಬುಕ್ ಮಾಡುವ ಗ್ರಾಹಕರಿಗೆ ಓಲಾ ಎಸ್1 ಸ್ಕೂಟರ್ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಅಂದರೆ ಕೇವಲ 49,999 ರೂಪಾಯಿಗೆ ಓಲಾ ಎಸ್1 ಸ್ಕೂಟರ್ ಮನೆ ಸೇರಲಿದೆ.
ಮೊಬೈಲ್ ಬೆಲೆಯಲ್ಲಿ 250 ಕಿ.ಮಿ ಮೈಲೇಜ್ ರೇಂಜ್ ಓಲಾ ಸ್ಕೂಟರ್ ಲಭ್ಯ!
ಓಲಾ ಬಾಸ್ ಡಿಸ್ಕೌಂಟ್ ಆಫರ್ ಪ್ರಕಾರ, ಓಲಾದ ಎಲ್ಲಾ ಎಸ್1 ರೇಂಜ್ ಸ್ಕೂಟರ್‌ಗೆ 10,000 ರೂಪಾಯಿ ವರೆಗೆ ಬಾಸ್ ಡಿಸ್ಕೌಂಟ್ ಆಫರ್ ಲಭ್ಯವಿದೆ. ಹೆಚ್ಚುವರಿಯಾಗಿ 21,000 ರೂಪಾಯಿ ಆಫರ್ ಕೂಡ ಘೋಷಿಸಲಾಗಿದೆ. ಈ ಪೈಕಿ ಎಕ್ಸ್‌ಚೇಂಜ್ ಬೋನಸ್ 5,000 ರೂಪಾಯಿ, 6,000 ರೂಪಾಯಿ ಮೌಲ್ಯದ ಒಎಸ್ ಫೀಚರ್, 7,000 ರೂಪಾಯಿ ಮೌಲ್ಯದ 8 ವರ್ಷದ ಬ್ಯಾಟರಿ ವಾರೆಂಟಿ, 3,000 ರೂಪಾಯಿ ಮೌಲ್ಯದ ಹೈಪರ್‌ಚಾರ್ಜ್ ಕ್ರೆಡಿಟ್ಸ್ ಸೇರಿದಂತೆ ಕೆಲ ಪ್ರಮುಖ ಡೀಲ್ ಒಳಗೊಂಡಿದೆ.
;
ಇದರ ಜೊತೆಗೆ ಮತ್ತೊಂದು ವಿಶೇಷ ಆಫರ್ ಕೂಡ ಓಲಾ ಘೋಷಿಸಿದೆ. ನೀವು ಯಾರಿಗಾದರೂ ಓಲಾ ಸ್ಕೂಟರ್ ಖರೀದಿಸಲು ಸೂಚಿಸಿದರೆ(ರೆಫರ್) ರೆಫರಲ್ ರೀತಿಯಲ್ಲೂ ಸೌಲಭ್ಯ ಪಡೆಯಬಹುದು. ನೀವು ಸೂಚಿಸಿದ ವ್ಯಕ್ತಿ ಓಲಾ ಖರೀದಿಸುವಲ್ಲಿ ಯಶಸ್ವಿಯಾದರೆ ಆತನಿಗೆ 3,000 ರೂಪಾಯಿ ಡಿಸ್ಕೌಂಟ್ ಹಾಗೂ ಸೂಚಿಸಿದ ವ್ಯಕ್ತಿಯ ಖರೀದಿ ವೇಳೆ 2,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಇಷ್ಟೇ ಅಲ್ಲ ಹೀಗೆ ಟಾಪ್ 100 ರೆಫರ್ ಮಾಡಿದವರು 11,11,111 ರೂಪಾಯಿ ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಓಲಾ ಎಸ್1 ಸ್ಕೂಟರ್ ಮಾರಾಟಕ್ಕೆ ಮುಂದಾಗಿದೆ. ಕೇವಲ ಒಂದು ದಿನದ ಆಫರ್ ಇಾಗಿದ್ದು, ಖರೀದಿಸುವ ಪ್ಲಾನ್ ಇದ್ದರೆ ತಕ್ಷಣವೇ ಬುಕ್ ಮಾಡಿಕೊಳ್ಳಬಹುದು. ಈ ಮೂಲಕ ಓಲಾ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಮಾರಾಟ ಹೆಚ್ಚಿಸಲು ಭಾರಿ ಪ್ಲಾನ್ ಮಾಡಿದೆ. ಸಾಮಾನ್ಯವಾಗಿ ಭಾರತದಲ್ಲಿ ಲಭ್ಯವಿರುವ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷದ ಆಸುಪಾಸು. ಆದರೆ ಇದೇ ಮೊದಲ ಬಾರಿಗೆ ಓಲಾ ಭಾರಿ ಡಿಸ್ಕೌಂಟ್ ನೀಡುತ್ತಿದೆ.
ಪ್ರಿಯ ಕನ್ನಡಿಗರೆ ಡಬ್ಬಾ ಓಲಾದಿಂದ ನಿಮ್ಮ ಜೀವನ ಗೋಳು, ಸ್ಕೂಟರ್ ಖರೀದಿಸದಂತೆ ಗ್ರಾಹಕನ ಮನವಿ!
ಇತ್ತೀಚೆಗೆ ಓಲಾ ಸ್ಕೂಟರ್ ಹಲವರ ಅಸಮಾಧಾನಕ್ಕೆ ಕಾರಣಾಗಿತ್ತು. ಓಲಾ ಸರ್ವೀಸ್ ಸೇರಿದಂತೆ ಎದುರಾಗುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರವಿಲ್ಲದೆ ಗ್ರಾಹಕರು ಕಂಗಾಲಾಗಿದ್ದರು. ಹೀಗಾಗಿ ಓಲಾ ವಿರುದ್ದ ಹಲವು ರೂಪದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಅತೀರೇಖದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಗ್ರಾಹಕ ಓಲಾ ಯಾರೂ ಖರೀದಿಸಬೇಡಿ, ಓಲಾ ಖರೀದಿಸಿದವನ ಬಾಳು ಗೋಳು ಎಂದು ಬೋರ್ಡ್ ಅಂಟಿಸಿ ತಿರುಗಾಡುತ್ತಿದ್ದ ಫೋಟೋ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಟೀಕೆ, ಅಸಮಾಧಾನಗಳಿಗೆ ಒಲಾ ಸಿಇಒ ಭವಿಷ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದರು. ಹೆಚ್ಚುವರಿ ಸರ್ವೀಸ್ ಕೇಂದ್ರಗಳನ್ನು ಸ್ಥಾಪಿಸುತ್ತಿರುವುದಾಗಿ ಭರವಸೆ ನೀಡಿದ್ದರು.
ಸೂಚನೆ: ಓಲಾ ಆಫರ್ ಹಾಗೂ ಡಿಸ್ಕೌಂಟ್ ಕುರಿತು ಹತ್ತಿರದ ಅಧಿಕೃತ ಡೀಲರ್ ಬಳಿ ಸಂಪರ್ಕಿಸಿ