ನವದೆಹಲಿ(ಡಿ.19): ಭಾರತದ ಬಹುತೇಕ ಆಟೋಮೊಬೈಲ್ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿದೆ. ಇದೀಗ ಹೀರೋ ಮೋಟೋಕಾರ್ಪ್ ಬೆಲೆ ಏರಿಕೆ ಕುರಿತು ಅಧೀಕೃತ ಪ್ರಕಟಣೆ ಹೊರಡಿಸಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ, ವಾಹನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೀರೋ ಹೇಳಿದೆ.

ಕರ್ನಾಟಕ ಪೊಲೀಸ್ ಇಲಾಖೆಗೆ ನೂತನ ಹೀರೋ ಗ್ಲಾಮರ್ ಬೈಕ್.

ಉಕ್ಕು, ಅಲ್ಯುಮಿನಿಯಂ, ಪ್ಲಾಸ್ಟಿಕ್‍ಗಳು ಹಾಗೂ ಅಮೂಲ್ಯ ಲೋಹಗಳು ಸೇರಿದಂತೆ ವಿವಿಧ ವಸ್ತು/ಸಾಮಗ್ರಿಗಳ ಬೆಲೆಗಳು ಏರುತ್ತಲೇ ಬಂದಿವೆ. ಲೀಪ್ 2 ಯೋಜನೆ ಅಡಿ ಈಗಾಗಲೇ ನಾವು ಉಳಿತಾಯ ಕಾರ್ಯಕ್ರಮವನ್ನು ಚುರುಕುಗೊಳಿಸಿದ್ದು, ಗ್ರಾಹಕರ ಮೇಲಾಗುವ ಹೊರೆ ಕಡಿಮೆ ಮಾಡಲು ಮತ್ತು ನಮ್ಮ ಲಾಭದ ಪಾಲನ್ನು ರಕ್ಷಿಸಿಕೊಳ್ಳಲು ಬೆಲೆ ಏರಿಕೆಯ ವ್ಯತಿರಿಕ್ತ ಪ್ರಭಾವವನ್ನು ಶಮನಗೊಳಿಸುವುದನ್ನು ಮುಂದುವರಿಸುತ್ತೇವೆ ಎಂದು ಹೀರೋ ಹೇಳಿದೆ.

ಸಾಮಗ್ರಿಗಳ ಬೆಲೆ ಏರಿಕೆಯ ಪರಿಣಾಮವನ್ನು ಭಾಗಶಃ ತುಂಬಲು, ಜನವರಿ 1, 2021 ರಿಂದ ನಾವು ನಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಿದ್ದೇವೆ. ಬೆಲೆ ಏರಿಕೆಯು ವಿವಿಧ ಮಾಡಲ್‍ಗಳಲ್ಲಿ ಬೇರೆ ಬೇರೆಯಾಗಿದ್ದು, ಕಾಲಕ್ರಮೇಣ ನಮ್ಮ ನಿಖರವಾದ ಬೆಲೆ ಏರಿಕೆಯ ಬಗ್ಗೆ ಮಾಹಿತಿ ಒದಗಿಸುತ್ತೇವೆ ಎಂದು ಹೀರೋ ಹೇಳಿದೆ.