KTM Adventure ಆಫ್ ರೋಡ್ ರೈಡಿಂಗ್ ಅನುಭ, ಬೆಂಗಳೂರಿನಲ್ಲಿ ಕೆಟಿಎಂ ಅಡ್ವೆಂಚರ್ ಅಕಾಡೆಮಿ ಯಶಸ್ವಿ!

  • ಒಂದೇ ದಿನ, ಆಫ್-ರೋಡಿಂಗ್‌ ಕೌಶಲ್ಯಗಳನ್ನು ನೀಡಲು ಕಾರ್ಯಕ್ರಮ
  • ಬೆಂಗಳೂರಿನ ಕೆಟಿಎಂ ಅಡ್ವೆಂಚರ್ ಗ್ರಾಹಕರು ಭಾಗಿ
  • ಬೈಕ್ ಲಿಫ್ಟಿಂಗ್, ದೂರದ ಪ್ರವಾಸ ಯೋಜನೆಗಳ ಬಗ್ಗೆ ತರಬೇತಿ 
KTM conducts Adventure Academy in Bangalore for trail and off road riding experience ckm

ಬೆಂಗಳೂರು(ಮಾ.15) ವಿಶ್ವದ ನಂ.1 ಮತ್ತು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಮೋಟಾರ್ ಸೈಕಲ್ ಬ್ರಾಂಡ್  ಕೆಟಿಎಂ ಬೆಂಗಳೂರಿನಲ್ಲಿ ಅಡ್ವೆಂಚರ್ ಅಕಾಡೆಮಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಕೆಟಿಎಂ ಅಡ್ವೆಂಚರ್ ಅಕಾಡೆಮಿಯು ಕೆಟಿಎಂ ಅಡ್ವೆಂಚರ್ ಶ್ರೇಣಿಯ ಮಾಲೀಕರಿಗೆ ಅತ್ಯಂತ ಮುಖ್ಯವಾದ ಟ್ರಯಲ್ ರೈಡಿಂಗ್ ಮತ್ತು ಆಫ್-ರೋಡಿಂಗ್‌ ಕೌಶಲ್ಯಗಳನ್ನು ಕಲಿಸುವ ಗುರಿಯನ್ನು ಹೊಂದಿದೆ. ಕ್ಲೋಸ್ಡ್-ಸರ್ಕ್ಯೂಟ್ ಕಾರ್ಯಕ್ರಮವನ್ನು ಕೆಟಿಎಂ ಅಂತರರಾಷ್ಟ್ರೀಯ ಕ್ರೀಡಾಪಟುಗಳ ಮಾರ್ಗದರ್ಶನದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಇದನ್ನು ಕೆಟಿಎಂನ ಮಾಸ್ಟರ್ ತರಬೇತುದಾರರು ನಡೆಸಿಕೊಡುತ್ತಾರೆ. ಒಂದೇ ದಿನದ ತರಬೇತಿ ಕಾರ್ಯಕ್ರಮವನ್ನು ತೆರವುಗೊಳಿಸಲು ಭಾಗಿಗಳಿಗೆ ಕಂಚಿನ ಮಟ್ಟದ ಪ್ರಮಾಣೀಕರಣವನ್ನು ನೀಡಲಾಯಿತು.

ಅಡ್ವೆಂಚರ್‌ ಅಕಾಡೆಮಿಯ ಈ ಆವೃತ್ತಿಯನ್ನು ಕೋಲಾರದ ಬಿಗ್‌ರಾಕ್ ಡರ್ಟ್ ಪಾರ್ಕ್‌ನಲ್ಲಿ ನಡೆಸಲಾಯಿತು. ಒಂದು ರೋಮಾಂಚಕವಾದ, ಪ್ರೀಮಿಯಂ ಮತ್ತು ಬೈಕಿಂಗ್ ಪರ ಅನುಭವವನ್ನು ನೀಡುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೆಟಿಎಂ ಅಡ್ವೆಂಚರ್ ಗ್ರಾಹಕರು ಭಾಗವಹಿಸಿದ್ದು, ಅವರು ತಮ್ಮ ಆಫ್-ರೋಡಿಂಗ್‌ ಕೌಶಲ್ಯಗಳನ್ನು ವರ್ಧಿಸಲು ಮತ್ತು ಅವುಗಳಲ್ಲಿ ಸಾಹಸವನ್ನು ಶೋಧಿಲು ಕೆಟಿಎಂ ಮಾಸ್ಟರ್ ತರಬೇತುದಾರರಾದ ವಿಜೇಂದ್ರ ನೀಲಗಿರಿ ಮತ್ತು ಅವರ ತಜ್ಞರ ತಂಡದ ಮಾರ್ಗದರ್ಶನದಲ್ಲಿ ಅನೇಕ ಅಭ್ಯಾಸಗಳನ್ನು ನಡೆಸಿದರು.

ಬರುತ್ತಿದೆ ಮೇಡ್ ಇನ್ ಇಂಡಿಯಾ KTM ಎಲೆಕ್ಟ್ರಿಕ್ ಬೈಕ್, ಇ ಡ್ಯೂಕ್ ಖಚಿತಪಡಿಸಿದ ಕಂಪನಿ!

ಕೆಟಿಎಂ ಅಡ್ವೆಂಚರ್ ಅಕಾಡೆಮಿಯನ್ನು ಭಾರತೀಯ ಸವಾರರ ಸಮುದಾಯದಲ್ಲಿ ಸಾಹಸಪೂರ್ಣ ಸವಾರಿಯ ಸಂಸ್ಕೃತಿಯನ್ನು ಹರಡುವ ಉದ್ದೇಶದಿಂದ ಯೋಜಿಸಲಾಗಿದೆ. ಈ  ಕಾರ್ಯಕ್ರಮವು ಅನುಭವಿ ಸವಾರರಿಗೆ ಅತ್ಯುತ್ತಮ ಆಫ್-ರೋಡಿಂಗ್‌ ಅಭ್ಯಾಸಗಳನ್ನು ನೀಡಿದರೆ ಅನನುಭವಿ ಸವಾರರು ಟಾರ್ಮಾಕ್‌ನಿಂದ ಹೊರತುಪಡಿಸಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ತಮ್ಮ ಮೊದಲ ಹೆಜ್ಜೆಯನ್ನಿಡುವ ಅವಕಾಶ ಪಡೆಯುತ್ತಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಗ್ರಾಹಕರಿಗೆ ಬೈಕ್ ಹೊಂದಾಣಿಕೆಯ ನಿಯಂತ್ರಣಗಳು, ಬೈಕ್ ಲಿಫ್ಟಿಂಗ್, ಭಂಗಿಗಳು, ದೂರದ ಪ್ರವಾಸ ಯೋಜನೆಗಳ ಬಗ್ಗೆ ತರಬೇತಿ ನೀಡಲಾಯಿತು ಮತ್ತು ಅವರು ಸ್ಲಾಲೋಮ್, ಹಿಲ್ ರಿಕವರಿ, ಫಿಗರ್ 8, ಪವರ್ ಟರ್ನ್‌ಗಳು ಮುಂತಾದ ಅನೇಕ ಅಭ್ಯಾಸಗಳ ಮೂಲಕ ತಮ್ಮ ಸವಾರಿ ಕೌಶಲ್ಯವನ್ನು ಸುಧಾರಿಸಿಕೊಂಡರು.

ಮುಂದಿನ ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ಇರುವ ಪ್ರಮುಖ ನಗರಗಳಲ್ಲಿ ಅಡ್ವೆಂಚರ್‌ ದಿನಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ.

KTM 390 ಅಡ್ವೆಂಚರ್ ಬೈಕ್ ಮಾರಾಟದಲ್ಲಿ ದಾಖಲೆ, 1,000 ಗಡಿ ದಾಟಿದ ಮೊದಲ ನಗರ ಬೆಂಗಳೂರು!

ಅಡ್ವೆಂಚರ್ ದಿನಗಳು ಪ್ರಸಿದ್ಧ ಮಾಸ್ಟರ್ ತರಬೇತುದಾರರು ಮತ್ತು ಪ್ರಮಾಣೀಕೃತ ಆಫ್-ರೋಡ್ ತಜ್ಞರ ಮಾಸ್ಟರ್ ಕ್ಲಾಸ್ ಅನ್ನು ಸಹ ಒಳಗೊಂಡಿರುತ್ತವೆ. ಮಾಸ್ಟರ್ ತರಬೇತುದಾರರು ಟ್ರೇಲ್‌ಗಳು ಮತ್ತು ಟಾರ್ಮಾಕ್‌ಗಳಿಗಾಗಿ ಸುಸ್ಥಾಪಿತ ಸವಾರರು ಮತ್ತು ತಜ್ಞರಾಗಿದ್ದಾರೆ. ಅವರು ಈ ಆಸ್ತಿಯ ಹಿಂದಿನ ಚಾಲನಾ ಶಕ್ತಿಯಾಗಲಿದ್ದಾರೆ ಮತ್ತು ಕೆಟಿಎಂ ತಜ್ಞರ ತಂಡಕ್ಕೆ ತರಬೇತಿ ನೀಡುವ, ಈ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮತ್ತು ತಮ್ಮ ಕೌಶಲ್ಯಗಳನ್ನು ಹಂಚಿಕೊಳ್ಳಲು ಮಾಲೀಕರೊಂದಿಗೆ ಸೇರಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.  ಕೆಟಿಎಮ್ ಬಿಗ್ ರಾಕ್ ಡರ್ಟ್ ಪಾರ್ಕ್‌ನ ಮುಖ್ಯ ತರಬೇತುದಾರರಾದ ನೀಲೇಶ್ ಧುಮಾಲ್, ಸ್ಕೂಲ್ ಆಫ್ ಡರ್ಟ್‌ನ ಸ್ಥಾಪಕರು ಮತ್ತು ಬೋಧಕರಾದ ಔಸೆಫ್ ಚಾಕೊ, ಪಿಪಿ ಅಡ್ವೆಂಚರ್ ರೈಡ್ಸ್‌ನ ಸ್ಥಾಪಕರು ತರಬೇತುದಾರರಾದ ಫಿಲಿಪ್ ಗೀಲ್ ಹ್ಯಾಂಡ್ ಮತ್ತು  21 ಎಂಡುರೊ ಪಾರ್ಕ್‌ನಲ್ಲಿ ತರಬೇತುದಾರರಾಗಿರುವ ವರದ್ ಮೋರೆಯಂಥ ಪ್ರಮುಖ ಹೆಸರುಗಳನ್ನು ಮಾಸ್ಟರ್ ತರಬೇತುದಾರರಾಗಿ ಆಯ್ಕೆ ಮಾಡಿದೆ.

ಕೆಟಿಎಂ ಭಾರತದ ಬೈಕಿಂಗ್ ಉತ್ಸಾಹಿಗಳ ಅತ್ಯಂತ ಪ್ರೀತಿಪಾತ್ರ ಯುರೋಪಿಯನ್ ಮೋಟಾರ್ ಸೈಕ್ಲಿಂಗ್ ಬ್ರಾಂಡ್ ಆಗಿದ್ದು ನಾವು ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ ಬೈಕಿಂಗ್ ಪರ ಅನುಭವಗಳನ್ನು ಒದಗಿಸಬಯಸುತ್ತೇವೆ. ಕೆಟಿಎಂ 390 ಅಡ್ವೆಂಚರ್ ಮತ್ತು ಕೆಟಿಎಂ 250 ಅಡ್ವೆಂಚರ್ ಅವುಗಳನ್ನು ಪರಿಚಯಿಸಿದ ನಂತರ ಅದ್ಭುತ ಪ್ರತಿಕ್ರಿಯೆಯನ್ನು ಕಂಡಿದೆ ಮತ್ತು ಬೈಕಿಂಗ್ ಉತ್ಸಾಹಿಗಳಿಗೆ ನಿಜವಾಗಿಯೂ ಸಮರ್ಥ ಮತ್ತು ಬಹುಮುಖ ಅಡ್ವೆಂಚರ್‌ ಟೂರರ್ ಅನ್ನು ನೀಡುವ ಭರವಸೆ ನೀಡುತ್ತವೆ. ಗ್ರಾಹಕರು ಕೆಟಿಎಂ ಅಡ್ವೆಂಚರ್ ಅನ್ನು ಖರೀದಿಸಿದಾಗ, ಅವರು ಅತ್ಯುತ್ತಮ ಯಂತ್ರವನ್ನು ಮಾತ್ರವಲ್ಲದೆ, ಕೆಟಿಎಂನ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಪ್ರಕಾರ ಪ್ರಮಾಣೀಕೃತ ಆಫ್-ರೋಡ್ ತಜ್ಞರಿಂದ ವಿಶೇಷವಾಗಿ  ಸಂಸ್ಕರಿಸಲಾದ ವಿಶೇಷ ಅಡ್ವೆಂಚರ್‌ ಸವಾರಿ ಕಾರ್ಯಕ್ರಮಗಳಿಗೂ ಪ್ರವೇಶ ಪಡೆಯುತ್ತಾರೆ.  ಕೆಟಿಎಂ ಅಡ್ವೆಂಚರ್ ಅಕಾಡೆಮಿಯನ್ನು ಘೋಷಿಸಲು ನಮಗೆ ಸಂತೋಷವೆನಿಸುತ್ತಿದ್ದು ಇದು ನಮ್ಮ ಎಲ್ಲಾ ಮಾಲೀಕರಿಗೆ ಟ್ರಯಲ್ ಮತ್ತು ಆಫ್-ರೋಡ್ ರೈಡಿಂಗ್‌ನ ಅಗತ್ಯ ತಂತ್ರಗಳನ್ನು ಕಲಿಯಲು ಅವಕಾಶ ನೀಡುತ್ತದೆ ಹಾಗೂ ಅವರ ಕೆಟಿಎಂ ಅಡ್ವೆಂಚರ್ ಬೈಕ್‌ಗಳಿಂದ ಹೆಚ್ಚಿನದನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಬಜಾಜ್ ಆಟೋ ಲಿಮಿಟೆಡ್  ಅಧ್ಯಕ್ಷ ಸುಮೀತ್ ನಾರಂಗ್ ಹೇಳಿದರು.

Latest Videos
Follow Us:
Download App:
  • android
  • ios