Asianet Suvarna News Asianet Suvarna News

ಸ್ಪೋರ್ಟಿ, ಅಗ್ರೆಸ್ಸೀವ್ ಹೋಂಡಾ CB300F ಬೈಕ್ ಬಿಡುಗಡೆ!

ರೋಮಾಂಚಕ ಪಿಕಪ್ ಮತ್ತು ಕಾರ್ಯಕ್ಷಮತೆಗಾಗಿ 293ಸಿಸಿ, 4-ವಾಲ್ವ್ SOHC ಎಂಜಿನ್ ಹೊಂದಿರುವ ನೂತನ ಬೈಕ್ ಹೋಂಡಾ  CB300F ಬಿಡುಗಡೆಯಾಗಿದೆ. 6-ಸ್ಪೀಡ್ ಟ್ರಾನ್ಸ್‌ಮಿಷನ್ , ಅತ್ಯಾಧುನಿಕ ತಂತ್ರಜ್ಞಾನದ ನೂತನ ಬೈಕ್ ವಿವರ ಇಲ್ಲಿವೆ.

Honda Motorcycle Scooter India launch Powerful Sporty Aggressive CB300F bike ckm
Author
Bengaluru, First Published Aug 9, 2022, 12:36 PM IST

ನವದೆಹಲಿ(ಆ.09):  ಹೋಂಡಾ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್ ಇಂಡಿಯಾ ಹೊಸ ಶಕ್ತಿಶಾಲಿ, ಸ್ಪೋರ್ಟಿ & ಆಕ್ರಮಣಕಾರಿ- CB300F ಬೈಕ್ ಬಿಡುಗಡೆ ಮಾಡಿದೆ. ಕಾರ್ಯಕ್ಷಮತೆ ಮತ್ತು ಸರಿಸಾಟಿಯಿಲ್ಲದ ವ್ಯಕ್ತಿತ್ವದ  ಸಂಯೋಜನೆಯಾಗಿ 'ಅಂತರರಾಷ್ಟ್ರೀಯ ಬಿಗ್-ಬೈಕ್' ವಿನ್ಯಾಸದಿಂದ ಸ್ಫೂರ್ತಿ ಪಡೆದ ಬೈಕ್ ಇದಾಗಿದೆ.  ಗ್ರಾಹಕರು ಹತ್ತಿರದ ʻಹೋಂಡಾ ಬಿಗ್‌ವಿಗ್‌ʼ ಶೋರೂಂಗಳ ಮೂಲಕ CB300F ಬೈಕ್ ಬುಕಿಂಗ್ ಮಾಡಿಕೊಳ್ಳಬಹುದು. ಹೊಸ CB300F ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಅವೆಂದರೆ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್.  ಡಿಲಕ್ಸ್ ಮತ್ತು ಡಿಲಕ್ಸ್ ಪ್ರೊ ಎಂಬ ಎರಡು ಆವೃತ್ತಿಗಳಲ್ಲಿ ಬೈಕ್‌ ಲಭ್ಯವಿರುತ್ತದೆ.    ಇದರ ಡೀಲಕ್ಸ್ ಆವೃತ್ತಿಯ ಬೆಲೆ Rs. 2,25,900 ನಿಂದ ಮತ್ತು ಡೀಲಕ್ಸ್‌ ಪ್ರೋ ಆವೃತ್ತಿಯ ಬೆಲೆ Rss. 2,28,900(ಎಕ್ಸ್ ಶೋರೂಂ, ನವದೆಹಲಿ)ನಿಂದ ಆರಂಭವಾಗುತ್ತದೆ.  

ಮೋಟಾರ್‌ ಸೈಕಲ್‌ ವಿಭಾಗದಲ್ಲಿ ಮೇಲೆ ಸಾಗುತ್ತಿದ್ದಂತೆಯೇ, ಭಾರತದಲ್ಲಿ ದ್ವಿಚಕ್ರ ವಾಹನ ಭೂದೃಶ್ಯವು ದೊಡ್ಡ ಬದಲಾವಣೆಗೆ ಒಳಗಾಗುತ್ತಿದೆ. ಸವಾರರು, ಮಧ್ಯಮ ಗಾತ್ರದ ವಿಭಾಗದಲ್ಲಿ ಮತ್ತು ನಿರ್ದಿಷ್ಟವಾಗಿ ಉನ್ನತ ಭಾಗದಲ್ಲಿ ಕಾರ್ಯಕ್ಷಮತೆ, ಬಹುಮುಖತೆ ಮತ್ತು ಆಧುನಿಕತೆಯ ನಡುವೆ ಉತ್ತಮ ಸಮತೋಲನವನ್ನು ಹುಡುಕುತ್ತಿದ್ದಾರೆ.  ಶಕ್ತಿಶಾಲಿ ಜೀವನಶೈಲಿಯ ಆಕಾಂಕ್ಷೆಯೊಂದಿಗೆ, ಸವಾರರ ಸಮುದಾಯವು ಕಾರ್ಯಕ್ಷಮತೆಯತ್ತ ಹೆಚ್ಚು ಒಲವು ತೋರುತ್ತಿದ್ದು, ದೊಡ್ಡ ಬೈಕ್ ಅನುಭವವನ್ನು ಎದುರುನೋಡುತ್ತಿದೆ. ಇಂದು, ಹೋಂಡಾದ ವಿನೋದಮಯ-ಮೋಟಾರ್‌ಸೈಕಲ್ ಸಾಲಿನಲ್ಲಿ ನಾವು ಹೊಸ ಅಧ್ಯಾಯವನ್ನು ತೆರೆಯುತ್ತಿರುವ ಸಂದರ್ಭದಲ್ಲಿ, ʻಹೊಚ್ಚ ಹೊಸ CB300F -  ಸುಧಾರಿತ ಬಲಾಢ್ಯ ಸ್ಟ್ರೀಟ್‌ಫೈಟರ್‌!ʼ ಅನ್ನು ಪ್ರಸ್ತುತಪಡಿಸಲು ನನಗೆ ಸಂತೋಷವಾಗುತ್ತಿದೆ ಎಂದು ಹೋಂಡಾ ಮೋಟಾರ್‌ಸೈಕಲ್‌ ಮತ್ತು & ಸ್ಕೂಟರ್ ಇಂಡಿಯಾ ಅಧ್ಯಕ್ಷ  ಅತ್ಸುಶಿ ಒಗಾಟಾ ಹೇಳಿದ್ದಾರೆ.

Honda bike ಹೋಂಡಾ ಗೋಲ್ಡ್ ವಿಂಗ್ ಟೂರ್ ಐಷಾರಾಮಿ ಬೈಕ್ ಬಿಡುಗಡೆ, ಬುಕಿಂಗ್ ಆರಂಭ!

ಹೋಂಡಾ ಮೋಟಾರ್‌ಸೈಕಲ್‌ ಮತ್ತು & ಸ್ಕೂಟರ್ ಇಂಡಿಯಾʼದ ಪ್ರೀಮಿಯಂ ಮೋಟಾರ್‌ಸೈಕಲ್‌ ವ್ಯವಹಾರದ ಬಿಝಿನೆಸ್‌ ಆಪರೇಟಿಂಗ್ ಆಫೀಸರ್ ರಾಜಗೋಪಿ ಅವರು,"ಭಾರತದಲ್ಲಿ ರೈಡಿಂಗ್ ಸಂಸ್ಕೃತಿ ಪ್ರಾಮುಖ್ಯತೆ ಪಡೆಯುತ್ತಿದ್ದಂತೆ, ವಿಶೇಷವಾಗಿ ಸ್ಟ್ರೀಟ್‌ಫೈಟರ್‌ ಮೋಟಾರ್‌ಸೈಕಲ್‌ ವರ್ಗವು ಯುವಕರಲ್ಲಿ ಹೆಚ್ಚಿನ ಆಕರ್ಷಣೆಗೆ ಸಾಕ್ಷಿಯಾಗಿದೆ. ಪ್ರಖರ ವಿನ್ಯಾಸ ತತ್ವ ಮತ್ತು ನಿರ್ಭೀತ ಮನೋಭಾವವನ್ನು ಪ್ರತಿನಿಧಿಸುವ ಈ  ವರ್ಗದ ಮೋಟಾರ್‌ಸೈಕಲ್‌ಗಳು, ಸಾಮರ್ಥ್ಯ ಮತ್ತು ಆಕ್ರಮಣಕಾರಿ ನೋಟವನ್ನು ಬಯಸುವ ಗ್ರಾಹಕರನ್ನು ಆಕರ್ಷಿಸುತ್ತಿವೆ. ಅದರ ಪ್ರಖರ ವಿನ್ಯಾಸ, ವೇಗವರ್ಧನೆ ಮತ್ತು ಉದ್ರಿಕ್ತ ನಿಲುಮೆಯು, `CB300F’ನ ಫೈಟರ್ ಮನೋಭಾವ ಮತ್ತು ನಿರ್ಭೀತ ಕಾರ್ಯಕ್ಷಮತೆಯ ಮಾನದಂಡಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇದು ನಿಜವಾಗಿಯೂ ಸುಧಾರಿತ ಬಲಾಢ್ಯ ಸ್ಟ್ರೀಟ್‌ ಫೈಟರ್‌ ಎಂದಿದ್ದಾರೆ.

ಶಕ್ತಿಶಾಲಿ ಮತ್ತು ಆಕ್ರಮಣಕಾರಿ ಕಾರ್ಯನಿರ್ವಹಣೆ
CB300F 293ಸಿಸಿ ಆಯಿಲ್-ಕೂಲ್ಡ್ 4-ವಾಲ್ವ್ SOHC ಎಂಜಿನ್, ಶಕ್ತಿಯುತ ಸವಾರಿ ಅನುಭವವನ್ನು ಒದಗಿಸುವುದರ ಜೊತೆಗೆ, ಆಕ್ರಮಣಕಾರಿ ಆದರೆ ತೊಂದರೆ-ಮುಕ್ತ ನಗರ ಸವಾರಿ ಹಾಗೂ ದೂರದ ಪ್ರವಾಸಕ್ಕೆ ಅನುವು ಮಾಡಿಕೊಡುತ್ತದೆ.  ಸುಮಾರು 10 ಹೊಸ ಪೇಟೆಂಟ್ ಅನ್ವಯಿಕೆಗಳೊಂದಿಗೆ, CB300F ವಿನ್ಯಾಸ ಮತ್ತು ತಂತ್ರಜ್ಞಾನ ಎರಡರ ದೃಷ್ಟಿಯಿಂದ ಕ್ರಾಂತಿಕಾರಿ ನಾವೀನ್ಯತೆಯನ್ನು ಹೊಂದಿದ್ದು, ಇತರ ಉತ್ಪನ್ನಗಳಿಗಿಂತ ಭಿನ್ನವೆನಿಸಿದೆ.

ಆಧುನಿಕ ತಂತ್ರಜ್ಞಾನ ಮತ್ತು ಉತ್ಕೃಷ್ಟ ನಿರ್ವಹಣೆ
ವಿವಿಧ ಭೂಪ್ರದೇಶಗಳೊಂದಿಗೆ ಬರುವ ವ್ಯಾಪಕ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಲಾದ ಹೋಂಡಾದ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC) ಗರಿಷ್ಠ ಎಳೆಯುವಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಜಾರುವ ಪರಿಸ್ಥಿತಿಗಳಲ್ಲಿ ಸ್ಥಿರತೆಯನ್ನು ನೀಡುತ್ತದೆ. ಸವಾರಿಯ ಪ್ರತಿಯೊಂದು ಅಂಶವೂ ನಿಯಂತ್ರಣದಲ್ಲಿರುವಂತೆ `ಹೊಚ್ಚ ಹೊಸ CB300F’ ಖಚಿತಪಡಿಸುತ್ತದೆ. ಡ್ಯುಯಲ್ ಚಾನೆಲ್ ABS ಸುರಕ್ಷತೆಯೊಂದಿಗೆ ಕಾರ್ಯಕ್ಷಮತೆಯನ್ನು  ಸಂಯೋಜಿಸಿದರೆ, ಇದರ ʻಅಸಿಸ್ಟ್‌ & ಸ್ಲಿಪ್ಪರ್‌ ಕ್ಲಚ್‌ʼ ಕಡಿಮೆ ಆಯಾಸ ಮತ್ತು ವರ್ಧಿತ ಆರಾಮವನ್ನು ಖಚಿತಪಡಿಸುತ್ತದೆ.   ಗೋಲ್ಡನ್  ಯುಎಸ್‌ಡಿ ಫ್ರಂಟ್ ಫೋರ್ಕ್‌ಗಳು ಸುಲಭವಾದ ಚಾಲನಾದಾಯಕತೆ ಜೊತೆಗೆ ಅತ್ಯುತ್ತಮ ಕುಶನಿಂಗ್  ಒದಗಿಸುತ್ತವೆ. ಇದರ ಮುಂಭಾಗದ (276 ಮಿಮೀ) ಮತ್ತು ಹಿಂಭಾಗದ (220 ಮಿಮೀ) ಡಿಸ್ಕ್‌ ಬ್ರೇಕ್‌ಗಳು ಸಾಟಿಯಿಲ್ಲದ ಬ್ರೇಕಿಂಗ್ ಶಕ್ತಿಯನ್ನು ನೀಡುತ್ತವೆ.

ಗರಿಷ್ಠ ಗೇರ್ ಅನುಪಾತಗಳೊಂದಿಗೆ ಇದರ 6-ಸ್ಪೀಡ್ ಟ್ರಾನ್ಸ್‌ಮಿಷನ್ ತಡೆರಹಿತ ಸವಾರಿಯನ್ನು ನೀಡುತ್ತದೆ. ಇದರಿಂದಾಗಿ ನಗರದ ಸವಾರಿಯ ಸಮಯದಲ್ಲಿ ಆಗಾಗ್ಗೆ ಗೇರ್ ಶಿಫ್ಟಿಂಗ್ ಅಗತ್ಯವನ್ನು ತೊಡೆದುಹಾಕುತ್ತದೆ. ಹೆಚ್ಚುವರಿ 6ನೇ ಗೇರ್, ಹೆದ್ದಾರಿಗಳಲ್ಲಿ ಹೆಚ್ಚುವರಿ ಉತ್ಸಾಹವನ್ನು ಸೇರ್ಪಡೆಗೊಳಿಸುತ್ತದೆ. ʻCB300Fʼನ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ವಿಂಕರ್ಸ್‌ ಉತ್ತಮ ಗೋಚರತೆಯನ್ನು ಒದಗಿಸಿದರೆ, ಇದರ ಸಂಪೂರ್ಣ ಡಿಜಿಟಲ್‌ ಇನ್ಸ್‌ಟ್ರ್ಯೂಮೆಂಟ್‌ ಪ್ಯಾನಲ್ ಸವಾರನಿಗೆ ನಿಖರವಾದ ಮಾಹಿತಿಯನ್ನು ಖಚಿತಪಡಿಸುತ್ತದೆ. ರಸ್ತೆಯ ಮೇಲೆ ಕಣ್ಣಿಡುತ್ತಲೇ ಸವಾರಿ ಕುರಿತ ವೈವಿಧ್ಯಮಯ ಮಾಹಿತಿಯನ್ನು ಪಡೆಯಲು ಬಯಸುವ ಸಂದರ್ಭದಲ್ಲಿ ಇದು ಹೆಚ್ಚು ಅನುಕೂಲಕಾರಿಯಾಗಿದೆ.

 

Number Plate 70 ಸಾವಿರ ರೂ ಆ್ಯಕ್ಟಿವಾ ಸ್ಕೂಟರ್ ಫ್ಯಾನ್ಸಿ ನಂಬರ್‌ಗಾಗಿ ಮಾಲೀಕನಿಂದ 15.14 ಲಕ್ಷ ರೂ ಖರ್ಚು!

ಈ ಶಕ್ತಿಶಾಲಿ ಬೈಕ್‌ ಅನ್ನು ಪಳಗಿಸಲು ಸಮಾನ ಪ್ರತಿಸ್ಪಂದನಾತ್ಮಕ ಹ್ಯಾಂಡ್ಲಿಂಗ್ ಡೈನಾಮಿಕ್ಸ್‌ ಜೊತೆಗೆ, 150 ಎಂಎಂ ಅಗಲದ ಹಿಂಭಾಗದ ಟೈರ್ ಅನ್ನು CB300F ಹೊಂದಿದೆ.  5-ಹಂತದ ಹೊಂದಾಣಿಕೆ ಮಾಡಬಹುದಾದ ರಿಯರ್ ಮೊನೊ ಶಾಕ್ ಸಸ್ಪೆನ್ಷನ್‌ ಜೊತೆಗೆ ಇದನ್ನು ಸಜ್ಜುಗೊಳಿಸಲಾಗಿದೆ.  ಹೀಗಾಗಿ, ಉತ್ತಮ ರಸ್ತೆ ಹಿಡಿತವನ್ನು  ಕಾಪಾಡುವುದರ ಜೊತೆಗೆ ಇದು ಕಾರ್ನರಿಂಗ್ ಸಂದರ್ಭಗಳಲ್ಲಿ ಸ್ಥಿರತೆಯನ್ನು ಹೆಚ್ಚಿಸುತ್ತದೆ.  ಇದಲ್ಲದೆ, ರಸ್ತೆಯ ಉಬ್ಬು-ತಗ್ಗುಗಳಿಗೆ  ಸ್ಪಷ್ಟ ಪ್ರತಿಕ್ರಿಯೆಗಾಗಿ ʻಫೈಟರ್ʼ ಅನ್ನು ಮುನ್ನಡೆಸಲು ಇದರ ʻಟೇಪರ್ಡ್ ಹ್ಯಾಂಡಲ್‌ಬಾರ್ಗಳುʼ ನೆರವಾಗುತ್ತವೆ.

ಬಲಾಢ್ಯ ಸ್ಟ್ರೀಟ್ ಫೈಟರ್ ವಿನ್ಯಾಸ
`CB300F’ನ ಪುರುಷನೋಟ ಮತ್ತು ಟೋನ್ಡ್‌ ಟ್ಯಾಂಕ್‌, ಬೈಕ್‌ನ ಆಕರ್ಷಣೆಯನ್ನು ಹಲವು ಪಟ್ಟು ಹೆಚ್ಚಿಸುತ್ತವೆ.  ಅಂತರರಾಷ್ಟ್ರೀಯ ಸ್ಟ್ರೀಟ್‌ಫೈಟರ್ ಬೈಕ್‌ನ ಚರಿಷ್ಮಾವನ್ನು ನೀಡುವ ಜೊತೆಗೆ ಬಲಾಢ್ಯ ಶಕ್ತಿಯನ್ನು ಇವು ಒಟ್ಟುಗೂಡಿಸುತ್ತವೆ. ಇಂತಹ ಕೆತ್ತಿದ ನೋಟಕ್ಕೆ ಪೂರಕವಾಗಿ, ಮುಂದಕ್ಕೆ ಬಾಗಿದ ಭಂಗಿಯು ಪರಿಪೂರ್ಣ ಆಕ್ರಮಣಶೀಲತೆಯ ಕಂಪನವನ್ನು ಒದಗಿಸುತ್ತದೆ. ಇದರೊಂದಿಗೆ ಸ್ಪ್ಲಿಟ್ ಸೀಟ್, ಕಾಂಪ್ಯಾಕ್ಟ್ ಮಫ್ಲರ್ ಮತ್ತು ವಿ-ಆಕಾರದ ಸ್ಟೈಲಿಶ್ ಅಲಾಯ್‌ ಚಕ್ರಗಳು `CB300F’ ನ ವ್ಯಕ್ತಿತ್ವಕ್ಕೆ ಸ್ಪೋರ್ಟಿ ಮೋಡಿಯನ್ನು ತರುತ್ತವೆ.

ಸಾಕಷ್ಟು ಶಕ್ತಿಶಾಲಿ ಅಂಶಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ʻCB300Fʼ ಇಂದಿನ ಅತ್ಯುನ್ನತ ಸವಾರನ ಎಲ್ಲಾ ನಿರೀಕ್ಷೆಗಳನ್ನು ಪೂರೈಸುತ್ತದೆ. ಅದು ಆಕ್ರಮಣಕಾರಿ ರಸ್ತೆ ಉಪಸ್ಥಿತಿಯಾಗಿರಬಹುದು, ಅಥವಾ ಮಧ್ಯಮ ಗಾತ್ರದ ಸ್ಟ್ರೀಟ್‌ ಸ್ಪೋರ್ಟ್ಸ್ ವಿಭಾಗದಲ್ಲಿ ಒದಗಿಸಲಾಗುವ ಶಕ್ತಿಶಾಲಿ 'ಅತ್ಯಾಧುನಿಕ ಸ್ಟ್ರೀಟ್ ಫೈಟರ್' ವ್ಯಕ್ತಿತ್ವವೇ ಆಗಿರಬಹುದು, ಎಲ್ಲವನ್ನೂ ಇದು ಒಳಗೊಂಡಿದೆ.
 

Follow Us:
Download App:
  • android
  • ios