Asianet Suvarna News Asianet Suvarna News

ಹಬ್ಬದ ಸೀಸನ್‌ಗೆ ಕೈಗೆಟುಕುವ ದರ ಹೋಂಡಾ ಶೈನ್ ಸೆಲೆಬ್ರೇಷನ್ ಮಾಡೆಲ್ ಬೈಕ್ ಬಿಡುಗಡೆ!

ಸಾಲು ಸಾಲು ಹಬ್ಬಗಳ ಹಿನ್ನಲೆಯಲ್ಲಿ ಹೋಂಡಾ ಮೋಟಾರ್‌ಸೈಕಲ್ ಸೆಲೆಬ್ರೇಷನ್ ಮಾಡೆಲ್ ಬೈಕ್ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ,, ಕೈಗೆಟುಕುವ ದರದಲ್ಲಿ ಬೈಕ್ ಬಿಡುಗಡೆ ಮಾಡಲಾಗಿದೆ.

Honda motorcycle launch Shine celebration edition for Festival season ckm
Author
Bengaluru, First Published Aug 25, 2022, 8:17 PM IST

ನವದೆಹಲಿ(ಆ.25): ಹೋಂಡಾ ಶೈನ್  ಬೈಕ್ ಭಾರತದಲ್ಲಿ ಈಗಾಗಲೇ ಹೊಸ ದಾಖಲೆ ಬರೆದಿದೆ. 125 ಸಿಸಿ ಬೈಕ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ.  ಇದೀಗ ಹೊಸ ಅವತಾರದಲ್ಲಿ ಹೋಂಡಾ ಶೈನ್ ಬಿಡುಗಡೆಯಾಗಿದೆ.  ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾವು, ಇಂದು ಹೊಸ ಶೈನ್ ಸೆಲೆಬ್ರೇಷನ್ ಆವೃತ್ತಿ  ಬಿಡುಗಡೆ ಮಾಡಿದೆ. ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿರುವ ಹಾಗೂ ಎಕ್ಸಿಕ್ಯೂಟಿವ್ ಮೋಟಾರ್‌ಸೈಕಲ್ ವಿಭಾಗದ ಬೆಸ್ಟ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಹೋಂಡಾ ಶೈನ್, ಭಾರತೀಯ ದ್ವಿಚಕ್ರ ವಾಹನ ವಲಯ ಪ್ರವೇಶಿಸಿದ ದಿನದಿಂದಲೂ  ನಗರ ಮತ್ತು ಗ್ರಾಮೀಣ ಮಾರುಕಟ್ಟೆ ರಾಜನಾಗಿ ಬೀಗುತ್ತಿದ್ದು, ಅದರ ಜನಪ್ರಿಯತೆ ಉತ್ತುಂಗ ಸ್ಥಾನಕ್ಕೆ ಅಸಾಧಾರಣ ಏರಿಕೆ ಕಂಡಿರುವುದೇ ಸಾಕ್ಷಿಯಾಗಿದೆ. ಹೋಂಡಾ ಶೈನ್ ಸೆಲೆಬ್ರೇಶನ್ ಆವೃತ್ತಿಯು 2 ಹೊಸ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ - ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಮ್ಯಾಟ್ ಸ್ಯಾಂಗ್ರಿಯಾ ರೆಡ್ ಮೆಟಾಲಿಕ್. ಇವೆರಡೂ ಸಹ ಡ್ರಮ್ ಮತ್ತು ಡಿಸ್ಕ್ ಎರಡರಲ್ಲೂ ಲಭ್ಯವಿದೆ.  78,878 ರೂಪಾಯಿ (ಎಕ್ಸ್-ಶೋರೂಂ) ಅತ್ಯಾಕರ್ಷಕ ಬೆಲೆಗೆ ಲಭ್ಯವಿವೆ.

ಮುಂಬರುವ ಹಬ್ಬದ ಸೀಸನ್ ಗೆ ಭಾರತೀಯರು ಉತ್ಸಾಹದಿಂದ ಸಿದ್ಧತೆ ನಡೆಸುತ್ತಿರುವಾಗ, ಎಚ್ಎಂಎಸ್ಐನಲ್ಲಿ ನಾವು ಈ ಉತ್ಸಾಹ, ಸಂಭ್ರಮ, ಸಡಗರವನ್ನು ದೇಶದ ನಾನಾ ಭಾಗಗಳಲ್ಲಿರುವ ನಮ್ಮ ಗೌರವಾನ್ವಿತ ಗ್ರಾಹಕರಿಗೆ ಮತ್ತಷ್ಟು ಹೆಚ್ಚಿಸಲು ಬಯಸುತ್ತೇವೆ. 'ಅತ್ಯಂತ ಆಕರ್ಷಕ ವಿನ್ಯಾಸದೊಂದಿಗೆ ರಸ್ತೆಯ ರಾಜನಾಗಿ ಎಕ್ಸಿಕ್ಯೂಟಿವ್ ಮೋಟಾರ್‌ಸೈಕಲ್' ಎಂದೇ ಜನಪ್ರಿಯವಾಗಿರುವ ಹೋಂಡಾ ಶೈನ್, ಲಕ್ಷಾಂತರ ಭಾರತೀಯರ ಹೃನ್ಮನ ತಣಿಸುವುದನ್ನು ಮುಂದುವರಿಸಿದೆ, ದ್ವಿಚಕ್ರ ವಾಹನ ಸವಾರರ ಆನಂದ ಇಮ್ಮಡಿಗೊಳಿಸುತ್ತಿದೆ. ಇದೀಗ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಆಲ್ ನ್ಯೂ ಹೋಂಡಾ ಶೈನ್ ಸೆಲೆಬ್ರೇಷನ್  ಆವೃತ್ತಿಯು ಗ್ರಾಹಕರಿಗೆ ಹೆಚ್ಚಿನ ಆನಂದ ತರುವ ಜತೆಗೆ, ಹಬ್ಬದ ಸಂಭ್ರಮವನ್ನು ಪ್ರಕಾಶಮಾನಗೊಳಿಸಲಿದೆ" ಎಂಬ ವಿಶ್ವಾಸ ತಮಗಿದೆ ಎಂದು   ವ್ಯವಸ್ಥಾಪಕ ನಿರ್ದೇಶಕ ಅಟ್ಸುಶಿ ಒಗಾಟಾ ಹೇಳಿದ್ದಾರೆ.

ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಆ್ಯಕ್ಟಿವಾ ಪ್ರೀಮಿಯಂ ಎಡಿಶನ್ ಸ್ಕೂಟರ್ ಬಿಡುಗಡೆ!

ಎಲ್ಲಾ ಹೊಸ ಅವತಾರಗಳಲ್ಲೂ ಭಾರತದ ಅತ್ಯಂತ ಪ್ರೀತಿ ಪಾತ್ರವಾದ 125 ಸಿಸಿ  ಮೋಟಾರ್ ಸೈಕಲ್:
ಹೊಸ ಶೈನ್ ಸೆಲೆಬ್ರೇಶನ್ ಆವೃತ್ತಿಯು ಆಕರ್ಷಕ ಗೋಲ್ಡನ್ ಥೀಮ್‌ನೊಂದಿಗೆ ಹೊಸ ತಾಜಾ ನೋಟ ತರುತ್ತದೆ. ಇದರಲ್ಲಿರುವ ತಾಜಾ ಸ್ಟ್ರೈಪ್ಸ್ ಆಗಿರಲಿ, ಗೋಲ್ಡನ್ ವಿಂಗ್‌ಮಾರ್ಕ್ ಎಂಬ್ಲೆಮ್ ಆಗಿರಲಿ ಅಥವಾ ಪೆಟ್ರೋಲ್ ಟ್ಯಾಂಕ್ ಮೇಲಿರುವ ಸೆಲೆಬ್ರೇಷನ್ ಎಡಿಷನ್ ಲೋಗೊ ಆಗಿರಲಿ, ಹೊಸ ಆವೃತ್ತಿಯು ಹಲವಾರು ಆಕರ್ಷಕ ಮೌಲ್ಯಗಳ ಸೇರ್ಪಡೆಗಳೊಂದಿಗೆ ಹೆಚ್ಚು ಪ್ರೀಮಿಯಂ ಶೈಲಿಯನ್ನು ತರುತ್ತದೆ.

ಹೊಸ ರೂಪದ ಕಂದು ಬಣ್ಣದ ಆಸನವು(ಸೀಟ್) ಸವಾರರಿಗೆ ಅತ್ಯಾಧುನಿಕತೆಯ ಅನುಭವ ನೀಡುವ ಜತೆಗೆ, ಹೆಮ್ಮೆ ಮೂಡಿಸುತ್ತದೆ.  ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮಫ್ಲರ್ ಕವರ್, ಅದರ ಬದಿಯ ಕವರ್‌ಗಳಲ್ಲಿ ಸ್ವರ್ಣ ಲೇಪನ ಮತ್ತು ಮುಂಭಾಗ ಹೊಸದಾಗಿ ಮಾಡಿರುವ ಸ್ವರ್ಣಲೇಪಿತ ಅಲಂಕಾರವು ಹಬ್ಬದ ಸಂಭ್ರಮಾಚರಣೆಯ ಗ್ರಾಹಕರ ಸ್ಫೂರ್ತಿಗೆ ಮಾಡಿರುವ ಅದ್ಭುತ ಮಿಶ್ರಣವಾಗಿದೆ.

 

ಸ್ಪೋರ್ಟಿ, ಅಗ್ರೆಸ್ಸೀವ್ ಹೋಂಡಾ CB300F ಬೈಕ್ ಬಿಡುಗಡೆ!

Follow Us:
Download App:
  • android
  • ios