Asianet Suvarna News Asianet Suvarna News

ಗ್ರಾಹಕರಿಗೆ ಬಂಪರ್ ಕೊಡುಗೆ, ಕೇವಲ 64 ಸಾವಿರ ರೂಪಾಯಿಗೆ ಹೋಂಡಾ ಶೈನ್ ಬೈಕ್ ಬಿಡುಗಡೆ!

ದುಬಾರಿ ದುನಿಯಾದಲ್ಲಿ ಯಾವುದೇ ಬೈಕ್ ಬೆಲೆ 1 ಲಕ್ಷ ರೂಪಾಯಿ ಮೇಲಿದೆ. ಇದೀಗ ಹೋಂಡಾ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. ಕೇವಲ 64,900 ರೂಪಾಯಿಗೆ ಹೊಚ್ಚ ಹೊಸ ಹೋಂಡಾ ಶೈನ್ ಬೈಕ್ ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Honda motorcycle India launch most affordable and fuel efficient bike Shine 100 with rs 64900 ckm
Author
First Published Mar 15, 2023, 4:30 PM IST | Last Updated Mar 15, 2023, 4:30 PM IST

ಮುಂ ಬೈ(ಮಾ.15) ಭಾರತದಲ್ಲಿ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಹೋಂಡಾ ಹೊಸ ದಾಖಲೆ ಬರೆದಿದೆ. ಹೋಂಡಾ ಇದೀಗ ಹೊಚ್ಚ ಹೊಸ ಶೈನ್ ಬೈಕ್ ಬಿಡುಗಡೆ ಮಾಡಿದೆ. ಹೊಸ ರೂಪ, ಹೊಸ ವಿನ್ಯಾಸ,ಹೊಸ ಎಂಜಿನ್‌ನೊಂದಿಗೆ ಹೋಂಡಾ ಶೈನ್ ಬೈಕ್ ಬಿಡುಗಡೆಯಾಗಿದೆ. ಈ ಬಾರಿ ಕೈಗೆಟುಕುವ ದರ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಬೈಕ್ ಬಿಡುಗಡೆ ಮಾಡಲಾಗಿದೆ. ಹೋಂಡಾ ಶೈನ್ 100 ಹೊಚ್ಚ ಹೊಸ ಬೈಕ್ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ 100 ಸಿಸಿ ಎಂಜಿನ್ ಹೊಂದಿರುವ ನೂತನ ಹೋಂಡಾ ಶೈನ್ ಬೈಕ್ ಬೆಲೆ ಕೇವಲ 64,900 ರೂಪಾಯಿ ಮಾತ್ರ(ಎಕ್ಸ್ ಶೋ ರೂಂ). ಶೈನ್ 100 ಹೊಚ್ಚ ಹೊಸ ಬೈಕ್ 5 ಬಣ್ಣಗಳಲ್ಲಿ ಲಭ್ಯವಿದೆ.

ನೂತನ ಹೋಂಡಾ ಶೈನ್ ಬೈಕ್ 100ಸಿಸಿ ಒಬಿಡಿ2 ಕಾಂಪ್ಲಿಯಂಟ್ ಪಿಜಿಎಂ-ಎಫ್1 ಎಂಜಿನ್ ಹೊಂದಿದೆ. ಎನಾನ್ಸ್ ಸ್ಮಾರ್ಟ್ ಪವರ್ (ESP)ಬೆಂಬಲದಿಂದ ಬೈಕ್ ಸಾಮರ್ಥ್ಯ ಹೆಚ್ಚಿದೆ.  ದಕ್ಷ ದಹನಶೀಲತೆಯನ್ನು ಗರಿಷ್ಠಗೊಳಿಸಿ ಹಾಗೂ ಸುಗಮ ಪರಿಸರ-ಸ್ನೇಹಿ ಎಂಜಿನ್ ಇದಾಗಿದೆ. ಹೊಸ 100ಸಿಸಿ ಎಂಜಿನ್ ಹಗುರವಾಗಿದ್ದು ದಕ್ಷವಾಗಿದೆ. ಗರಿಷ್ಠ ಕಾರ್ಯಕ್ಷಮತೆ, ಹೆಚ್ಚಿದ ಕೌಶಲ ಸಾಮರ್ಥ್ಯ   ಮತ್ತು ಗ್ರಾಹಕರಿಗೆ ಗರಿಷ್ಠ ಮೌಲ್ಯ ಒದಗಿಸುವ ಉತ್ತಮ ಮೈಲೇಜ್ ನೀಡಿಕೆಯೊಂದಿಗೆ ಅತ್ಯುತ್ತಮ ಆವಿಷ್ಕಾರವಾಗಿದೆ.

ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಆ್ಯಕ್ಟಿವಾ ಪ್ರೀಮಿಯಂ ಎಡಿಶನ್ ಸ್ಕೂಟರ್ ಬಿಡುಗಡೆ!

ಪ್ರೋಗ್ರಾಮ್ಡ್ ಫ್ಯುಯೆಲ್ ಇಂಜೆಕ್ಷನ್ (ಪಿಜಿಎಂ-ಎಫ್ಐ): 
ಸತತವಾಗಿ ಗರಿಷ್ಠ ಇಂಧನ ಮತ್ತು ಗಾಳಿ ಮಿಶ್ರಣವನ್ನು  ಪೂರೈಸಲು ವ್ಯವಸ್ಥೆಯು ಆನ್ಬೋರ್ಡ್ ಸೆನ್ಸರ್ಗಳನ್ನು ಬಳಸುತ್ತದೆ. ಇದು ಸ್ಥಿರವಾದ ಶಕ್ತಿ ಉತ್ಪಾದನೆ, ಉನ್ನತ ಇಂಧನ ದಕ್ಷತೆ ಮತ್ತು ಕಡಿಮೆ ಹೊಗೆಯುಗುಳುವಿಕೆಗೆ (ಎಮಿಶನ್) ನೆರವಾಗುತ್ತದೆ.

ಸ್ವಯಂಚಾಲಿತ ಚೋಕ್ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವ ಸೊಲೆನಾಯ್ಡ್ ವಾಲ್ವ್ ಸಮೃದ್ಧ ಜಲ ಇಂಧನ ಮಿಶ್ರಣವನ್ನು ಖಾತರಿಪಡಿಸುತ್ತದೆ ಮತ್ತು ಯಾವುದೇ ಸಮಯದಲ್ಲಿ ಒನ್ ಟೈಮ್ ಸ್ಟಾರ್ಟ್ನ ಅನುಕೂಲವನ್ನು ಕಲ್ಪಿಸುತ್ತದೆ.

ರೈಡರ್ ಮತ್ತು ಪಿಲಿಯನ್ ರೈಡರ್ಗೆ ಸಾಕಷ್ಟು ಸ್ಥಳಾವಕಾಶ ಒದಗಿಸಿ ದೂರದ ಪ್ರಯಾಣಕ್ಕೆ ಆರಾಮವಿರುತ್ತದೆ. ಕುಟುಂಬವಾಗಲಿ ಉಪಯೋಗ-ಆಧಾರಿತ ರೈಡ್ಗಳೇ ಆಗಲಿ, ಶೈನ್ 100ರ  ಆಸನ ನಿಲುವು ಸರಿಸಾಟಿಯಿಲ್ಲದ ಆರಾಮವನ್ನು ಖಾತರಿಪಡಿಸುತ್ತದೆ ಮತ್ತು ಬಳಲಿಕೆ ಮುಕ್ತ ದೈನಿಕ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ.  ಶೈನ್ 100 ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಟ್ಯಾಂಕ್  ಮತ್ತು ಕಿರಿದಾದ ಲೆಗ್ ಓಪನಿಂಗ್ ಆಂಗಲ್ ಹೊಂದಿದ್ದು ರೈಡರ್ಗೆ ಅತ್ಯುತ್ತಮ ಮೊಣಕಾಲು ಹಿಡಿತ ಒದಗಿಸುತ್ತದೆ.

ಸ್ಪೋರ್ಟಿ, ಅಗ್ರೆಸ್ಸೀವ್ ಹೋಂಡಾ CB300F ಬೈಕ್ ಬಿಡುಗಡೆ!

 ಶೈನ್ 100 ಹೆಚ್ಚು ಭಾರಗಳೊಂದಿಗೂ ಇಳಿಜಾರುಗಳನ್ನು ಸರಾಗವಾಗಿ ಏರಲು ನೆರವಾಗುತ್ತದೆ. ಉದ್ದದ ಚಕ್ರದಬೇಸ್ (1245 ಎಂಎಂ) ಮತ್ತು  ಹೈ ಗ್ರೌಂಡ್ ಕ್ಲಿಯರೆನ್ಸ್  (168ಎಂಎಂ) ಅಧಿಕ ವೇಗದಲ್ಲಿ ಮತ್ತು ಕೆಟ್ಟ ರಸ್ತೆ ಪರಿಸ್ಥಿತಿಗಳಲ್ಲಿಯೂ ಸ್ಥಿರತೆಯನ್ನು ಒದಗಿಸಿ ರೈಡರ್ ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುತ್ತದೆ

ಎಚ್ಎಂಎಸ್ಐ ಶೈನ್ 100ರ ಮೇಲೆ ಒಂದು  ವಿಶೇಷ 6-ವರ್ಷ ವಾರಂಟಿ ಪ್ಯಾಕೇಜ್  (3 ವರ್ಷಗಳ ಸ್ಟಾಂಡರ್ಡ್ + 3 ವರ್ಷಗಳ ಐಚ್ಛಿಕ ವಿಸ್ತರಿತ ವಾರಂಟಿ) ಕೂಡ ನೀಡುತ್ತದೆ. 

Latest Videos
Follow Us:
Download App:
  • android
  • ios