ಗುರುಗ್ರಾಂ(ಜ.07): ಭಾರತದಲ್ಲಿ ಮಾರಾಟವಾಗುತ್ತಿರುವ ಸ್ಕೂಟರ್ ಪೈಕಿ  ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿರುವ ಆ್ಯಕ್ಟಿವಾ ಸ್ಕೂಟರ್ ಬ್ರ್ಯಾಂಡ್, ದೇಶದ ದ್ವಿಚಕ್ರ ವಾಹನ ತಯಾರಿಕಾ ಉದ್ದಿಮೆಯಲ್ಲಿ 2.5 ಕೋಟಿ ಗ್ರಾಹಕರನ್ನು ಹೊಂದಿದ ಮೊದಲ ಮತ್ತು  ಏಕೈಕ ಸ್ಕೂಟರ್ ಬ್ರ್ಯಾಂಡ್ ಎನ್ನುವ  ಹೆಗ್ಗಳಿಕೆಗೆ ಪಾತ್ರವಾಗಿದೆ.

20ನೇ ವರ್ಷದ ಸಂಭ್ರಮದಲ್ಲಿ ಹೊಂಡಾ ಆ್ಯಕ್ಟೀವಾ; ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ!.

ಎಲ್ಲಕ್ಕಿಂತ ಮುಖ್ಯವಾಗಿ, 20 ವರ್ಷಗಳ ಹಿಂದೆ ಭಾರತದಲ್ಲಿ ಸ್ಕೂಟರ್ ಮಾರುಕಟ್ಟೆಯು ತ್ವರಿತವಾಗಿ ಕುಸಿಯುತ್ತಿದ್ದಾಗ, ಹೋಂಡಾ ತನ್ನ ಮೊದಲ ದ್ವಿಚಕ್ರ ವಾಹನ 102ಸಿಸಿ ಆ್ಯಕ್ಟಿವಾದೊಂದಿಗೆ 2001ರಲ್ಲಿ ಏಕಾಂಗಿಯಾಗಿ ಪ್ರವೇಶಿಸಿತ್ತು. ಬಳಿಕ ಇತಿಹಾಸ ಸೃಷ್ಟಿಯಾಗಿದೆ. ವರ್ಷಗಳು ಕಳೆದಂತೆ, ಹೋಂಡಾದ ಆ್ಯಕ್ಟಿವಾ ಬ್ರ್ಯಾಂಡ್, ತನ್ನ ಇತ್ತೀಚಿನ ಬಿಎಸ್6 ಹೊಸ ಅವತಾರದವರೆಗೆ ತನ್ನ ಹಾದಿಯಲ್ಲಿ ಹಲವಾರು ಹೊಸ ಮೈಲುಗಲ್ಲುಗಳನ್ನು ಸೃಷ್ಟಿಸುತ್ತಲೇ ಬಂದಿದೆ. ಆ್ಯಕ್ಟಿವಾದ ಸುದೀರ್ಘ ಪಯಣವು ಭಾರತದ 2.5 ಕೋಟಿ ಕುಟುಂಬಗಳಿಗೆ ಸಂತಸ ಹಂಚಿದ್ದು, ದೇಶದಲ್ಲಿ ಕ್ರಿಯಾಶೀಲತೆಗೂ ಕಾರಣವಾಗಿದೆ.

ಹೊಂಡಾ ಆ್ಯಕ್ಟೀವಾ 6G ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!.

ಆ್ಯಕ್ಟಿವಾ ಬಗೆಗಿನ ಪ್ರೀತಿ ಮತ್ತು ಅಭಿಮಾನವು ಪ್ರತಿಯೊಂದು ತಲೆಮಾರಿನಿಂದ ತಲೆಮಾರಿಗೆ ಹೆಚ್ಚುತ್ತಲೇ ಸಾಗಿದೆ. 2001ರಲ್ಲಿ ಆ್ಯಕ್ಟಿವಾ ಪರಿಚಯಿಸಿದ 3 ವರ್ಷಗಳಲ್ಲಿ ಅಂದರೆ, 2003-04ರ ವೇಳೆಗೆ  ಆ್ಯಕ್ಟಿವಾ, ಸ್ಕೂಟರ್ ವಿಭಾಗದಲ್ಲಿ ಸರಿಸಾಟಿ ಇಲ್ಲದ ಮುಂಚೂಣಿ ಸ್ಥಾನಕ್ಕೆ ಏರಿಕೆ ಕಂಡಿತ್ತು.  ನಂತರದ 2 ವರ್ಷಗಳಲ್ಲಿ ಆ್ಯಕ್ಟಿವಾ 10 ಲಕ್ಷ ಗ್ರಾಹಕರ ಮೈಲುಗಲ್ಲನ್ನು ಕೂಡ ದಾಟಿತ್ತು.

ತಂತ್ರಜ್ಞಾನ ಬಳಕೆಯಲ್ಲಿ ಮತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದ ಆ್ಯಕ್ಟಿವಾ ಬ್ರ್ಯಾಂಡ್, 15 ವರ್ಷಗಳಲ್ಲಿ ಅಂದರೆ 2015ರ ವೇಳೆಗೆ 1 ಕೋಟಿ ಗ್ರಾಹಕರನ್ನು ಹೊಂದಿದ ಸಾಧನೆ ಮಾಡಿತ್ತು. ದ್ವಿಚಕ್ರ ವಾಹನ ಸವಾರರಲ್ಲಿ ಸ್ಕೂಟರ್‍ನ ಸ್ವೀಕಾರಾರ್ಹತೆಯು ನಿರಂತರವಾಗಿ ಹೆಚ್ಚುತ್ತ ಸಾಗಿದಂತೆ ಆ್ಯಕ್ಟಿವಾ ಬ್ರ್ಯಾಂಡ್, ದೇಶದಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸುವುದನ್ನು ಹೆಚ್ಚಿಸುತ್ತಲೇ   ಭಾರತದ ಕುಟುಂಬಗಳ ಮೊದಲ ಆಯ್ಕೆಯಾಗಿ ಗಮನ ಸೆಳೆಯತೊಡಗಿತು. ಇದರ ಜನಪ್ರಿಯತೆಯು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಇತ್ತೀಚಿನ 1.5 ಕೋಟಿ ಗ್ರಾಹಕರು 3 ಪಟ್ಟು ವೇಗದಲ್ಲಿ ಕೇವಲ 5 ವರ್ಷಗಳ ಅವಧಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

2001ರಲ್ಲಿ ಆ್ಯಕ್ಟಿವಾ ಪರಿಚಯಿಸಿದಾಗ ಅದು 100-110ಸಿಸಿ ಎಂಜಿನ್ ಅಥವಾ ಹೊಸ ಹೆಚ್ಚು ಶಕ್ತಿಶಾಲಿ 125ಸಿಸಿ ಎಂಜಿನ್ ಇರಲಿ, ಆ್ಯಕ್ಟಿವಾದ ಯಶೋಗಾಥೆಗೆ ಅದು ಗ್ರಾಹಕರಲ್ಲಿ ಮೂಡಿಸಿರುವ ವಿಶ್ವಾಸವೇ ಮುಖ್ಯ ಕಾರಣ. 20 ವರ್ಷಗಳಿಂದ ಆ್ಯಕ್ಟಿವಾ, ತಾಂತ್ರಿಕ ಆವಿಷ್ಕಾರಗಳ ಅಳವಡಿಕೆಯಲ್ಲಿ ಸದಾ ಕಾಲ ಮುಂಚೂಣಿಯಲ್ಲಿಯೇ ಇದೆ. ಕೆಲವೊಮ್ಮೆ ಉದ್ದಿಮೆಂiÀiಲ್ಲಿ ಬಳಕೆಗೆ ಬರುವ 10 ವರ್ಷಗಳ ಮೊದಲೇ ನಮ್ಮಲ್ಲಿ ಅಂತಹ ತಂತ್ರಜ್ಞಾನವನ್ನು ಬಳಕೆಗೆ ತರಲಾಗಿತ್ತು.  2001ರಲ್ಲಿ ಹೋಂಡಾ ಪೇಟೆಂಟ್ ಪಡೆದ ಟಫ್ ಅಪ್ ಟ್ಯೂಬ್ ಮತ್ತು ಸಿಎಲ್‍ಐಸಿ ಯಾಂತ್ರಿಕ ವ್ಯವಸ್ಥೆ, 2009ರಲ್ಲಿ ಹೋಂಡಾದ ಕಾಂಬಿ-ಬ್ರೇಕ್ ಸಿಸ್ಟಮ್ ವಿತ್ ಇಕ್ವಲೈಸರ್, 2013ರಲ್ಲಿ -ಮೈಲೇಜ್ ಅನ್ನು ಶೇ 10ರಷ್ಟು ಹೆಚ್ಚಿಸುವ ಕ್ರಾಂತಿಕಾರಿ ಸ್ವರೂಪದ ಹೋಂಡಾ ಇಕೊ ಟೆಕ್ನಾಲಜಿ (ಎಚ್‍ಇಟಿ)  ಇಲ್ಲವೆ ಇಎಸ್‍ಪಿ ಬೆಂಬಲಿತ ಹೆಚ್ಚು ಸ್ಮಾರ್ಟ್ ಆಗಿರುವ ಎಚ್‍ಇಟಿ ಪಿಜಿಎಂ-ಎಫ್‍ಐ ಎಂಜಿನ್ ಮತ್ತು ಬಿಎಸ್-6 ಯುಗದಲ್ಲಿ ಅಳವಡಿಸಿಕೊಂಡಿರುವ  ವಿಶ್ವದ ಮೊದಲ ಟಂಬಲ್ ಫ್ಲೋ ವಿಷಯದಲ್ಲಿ ನಾವು ಮೊದಲಿಗರಾಗಿದ್ದೇವೆ. ಆ್ಯಕ್ಟಿವಾ ಬ್ರ್ಯಾಂಡ್‍ನ ಪ್ರತಿಯೊಂದು ತಲೆಮಾರು ನಿರಂತರವಾಗಿ ಹೊಸತನ ಮೈಗೂಡಿಸಿಕೊಳ್ಳುತ್ತಲೇ ಬಂದಿದ್ದು, ಸ್ಕೂಟರ್ ವಿಭಾಗದಲ್ಲಿ ಕ್ರಾಂತಿ ಮೂಡಿಸುತ್ತ ಭಾರತವನ್ನು ಕ್ರಿಯಾಶೀಲಗೊಳಿಸುತ್ತಲೇ ಬಂದಿದೆ. ದಿನೇ ದಿನೇ ಜನಪ್ರಿಯತೆಯ ಹಾದಿಯಲ್ಲಿಯೇ ಸಾಗುತ್ತ ದಂತಕತೆಯಾಗಿರುವ ಆ್ಯಕ್ಟಿವಾ ಕುರಿತ ಭಾರತೀಯರ ಪ್ರೀತಿ ಕಂಡು ನಮಗೆ ಅತೀವ ಸಂತಸವಾಗುತ್ತಿದೆ ಎಂದು  ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಹೇಳಿದ್ದಾರೆ.

ಆ್ಯಕ್ಟಿವಾ ಬ್ರ್ಯಾಂಡ್‍ನ 2 ದಶಕಗಳ ವಿಶಿಷ್ಟ ಸ್ವರೂಪದ ಯಶಸ್ಸಿನ ಪಯಣದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ‘ದ್ವಿಚಕ್ರ ವಾಹನವೊಂದು ಗ್ರಾಹಕರ ಪ್ರಯಾಣ ಬಳಕೆ ಉದ್ದೇಶ ಮೀರಿದ ಭಾವನಾತ್ಮಕ ಸಂಬಂಧ ಹೊಂದಿದ ತುಂಬ ಅಪರೂಪದ ವಿದ್ಯಮಾನ ಇದಾಗಿದೆ. ಆ್ಯಕ್ಟಿವಾ - ಸಮಾಜದ ಆತ್ಮದ ಚೇತನ ಮತ್ತು ಪ್ರತಿಧ್ವನಿಯಾಗಿದೆ. ಈ ಅವಧಿಯ  ಉದ್ದಕ್ಕೂ ನಮ್ಮ ಸುತ್ತಮುತ್ತಲೂ ಸಾಕಷ್ಟು ಬದಲಾವಣೆಗಳಾಗಿದ್ದರೂ, ಸ್ಕೂಟರ್ ಖರೀದಿ ವಿಷಯ ಬಂದಾಗ ಭಾರತದ ಕುಟುಂಬಗಳ ಮೊದಲ ಪ್ರೀತಿ ಮತ್ತು ಆಯ್ಕೆ ಆ್ಯಕ್ಟಿವಾ ಆಗಿದೆ. ಹೊಸ ತಲೆಮಾರಿನವರಲ್ಲಿ ಹಸುಗೂಸಿನಿಂದ ಹಿಡಿದು ಪಿಲಿಯನ್ ಸವಾರ, ಆನಂತರ ಮೊದಲ ಬಾರಿಗೆ ಸ್ಕೂಟರ್ ಓಡಿಸುವವ, ಮಹಿಳೆಯರು ಮೊದಲ ಬಾರಿಗೆ ಸವಾರರಾದಾಗ ಮತ್ತು ಜಾಣ ಅಜ್ಜ-ಅಜ್ಜಿ ಈ ಹಿಂದೆ ಇದರ ಜತೆಗೆ ಸುಂದರ ಕ್ಷಣಗಳನ್ನು ಕಳೆದಿರುವ ಸಂದರ್ಭಗಳಲ್ಲಿ  ಆ್ಯಕ್ಟಿವಾ ಬ್ರ್ಯಾಂಡ್, ಈ ಮಹಾನ್ ದೇಶವನ್ನು ಸಂಭ್ರಮಗೊಳಿಸುವ ಸ್ವಾಭಾವಿಕ ಗುಣವಿಶೇಷಗಳನ್ನು ಒಳಗೊಂಡಿದೆ.  ನಮ್ಮ ಬಹುತೇಕ ಗ್ರಾಹಕರು ಆ್ಯಕ್ಟಿವಾದ ಪ್ರತಿಯೊಂದು ತಲೆಮಾರಿನ ಸವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಆ್ಯಕ್ಟಿವಾವನ್ನು ನಿಮ್ಮ ಪ್ರತಿದಿನದ ಸವಾರಿಯ ಸುವರ್ಣ ಮಾನದಂಡ ಮಾಡಿಕೊಂಡಿರುವುದಕ್ಕೆ ನಾವು ಭಾರತಕ್ಕೆ 2.5 ಕೋಟಿ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದರು. 

ಇಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ಸಂಗತಿ ಏನೆಂದರೆ, ತಂತ್ರಜ್ಞಾನ ಅಳವಡಿಕೆಯಲ್ಲಿ ಹೋಂಡಾ ಮುಂಚೂಣಿಯಲ್ಲಿ ಇರುವ ಕಾರಣಕ್ಕೆ ಈ ವಿಸ್ಮಯಕಾರಿ ಬೆಳವಣಿಗೆಯು ಸಾಧ್ಯವಾಗಿದೆ. ಇದೇ ಕಾರಣಕ್ಕೆ ಆ್ಯಕ್ಟಿವಾ, ದ್ವಿಚಕ್ರ ವಾಹನ ತಯಾರಿಕಾ ಉದ್ದಿಮೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ. 

20 ವರ್ಷಗಳ ಹಿಂದೆ ಜನಿಸಿದ ಈ ಹೋಂಡಾ ಆ್ಯಕ್ಟಿವಾ ದಂತಕತೆಯು ತನ್ನ ಪ್ರತಿಯೊಂದು ಹೊಸ ತಲೆಮಾರಿನ ವಾಹನದಲ್ಲಿ ಎಲ್ಲರಿಗಿಂತ ಮುಂಚೆಯೇ   ಜಾಗತಿಕ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುತ್ತಿತ್ತು. ಅವುಗಳ ಪೈಕಿ- 2009ರಲ್ಲಿ ಕಾಂಬಿ-ಬ್ರೇಕ್ ಸಿಸ್ಟಮ್ (ಉದ್ದಿಮೆಯಲ್ಲಿ ಬಳಕೆಗೆ ಬರುವ ದಶಕದ ಮೊದಲು), 2013ರಲ್ಲಿ- ಹೋಂಡಾ ಇಕೊ ಟೆಕ್ನಾಲಜಿ (ಎಚ್‍ಇಟಿ)  2020ರಲ್ಲಿ ಸುಧಾರಿತ ಸ್ಮಾರ್ಟ್ ಪವರ್ (ಇಎಸ್‍ಪಿ) ತಂತ್ರಜ್ಞಾನ ಮತ್ತು 26 ಹೊಸ ಪೇಟೆಂಟ್ ಅಪ್ಲಿಕೇಷನ್ಸ್‍ಗಳನ್ನು ‘ಆ್ಯಕ್ಟಿವಾ 6ಜಿ’ರಲ್ಲಿ ಅಳವಡಿಸಲಾಗಿದೆ.