ಕೈಗೆಟುಕುವ ದರ, ಕೆನೆಕ್ಟಿವಿಟಿ ಫೀಚರ್ಸ್, ಹೊಚ್ಚ ಹೊಸ ಸೂಪರ್ ಸ್ಪ್ಲೆಂಡರ್ XTEC ಬಿಡುಗಡೆ!
ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಅತ್ಯಾಕರ್ಷಕ ಲುಕ್ ಜೊತೆಗೆ ಕನೆಕ್ಟಿವಿಟಿ ಫೀಚರ್ಸ್‌ನೊಂದಿಗೆ ಸೂಪರ್ ಸ್ಪ್ಲೆಂಡರ್ XTEC ಬಿಡುಗಡೆ ಮಾಡಲಾಗಿದೆ.
ಬೆಂಗಳೂರು(ಮಾ.07): ಹೀರೋ ಮೋಟೋಕಾರ್ಪ್ ಕಂಪನಿಯ ಸ್ಪ್ಲೆಂಡರ್ ಬೈಕ್ ಅತ್ಯಂತ ಬೇಡಿಕೆಯ ಬೈಕ್.ಆಕರ್ಷಕ ಲುಕ್ ಮಾತ್ರವಲ್ಲ, ಪ್ರತಿನಿತ್ಯ ಬಳಕಕೆಗೆ ಹೇಳಿ ಮಾಡಿಸಿದ ಬೈಕ್. ಕಾರಣ ಗರಿಷ್ಠ ಮೈಲೇಜ್, ಕೈಗೆಟುಕವ ದರದಲ್ಲಿ ಈ ಬೈಕ್ ಲಭ್ಯವಿದೆ. ಇದೀಗ ಹೀರೋ ಹೊಚ್ಚ ಹೊಸ ಸ್ಪ್ಲೆಂಡರ್ XTEC ಬೈಕ್ ಬಿಡುಗಡೆ ಮಾಡಿದೆ. 125cc ಸೆಗ್ಮೆಂಟ್ ಬೈಕ್ ಇದಾಗಿದೆ. ಆದರೆ ಮೈಲೇಜ್, ಕೈಗೆಟುಕುವ ದರ ಮಾತ್ರವಲ್ಲ, ಇದರ ಜೊತೆಗೆ ಕೆನೆಕ್ಟಿವಿಟಿ ಫೀಚರ್ಸ್ ಕೂಡ ನೀಡಲಾಗಿದೆ.
ಹೀರೋ ಮೋಟೋಕಾರ್ಪ್, ತನ್ನ ಗ್ರಾಹಕರಿಗೆ ಸ್ಟೈಲಿಶ್, ಅತ್ಯಾಕರ್ಷಕ ಮತ್ತು ಅತ್ಯಾಧುನಿಕ ಶ್ರೇಣಿಯನ್ನು ನೀಡುವ ನಿಟ್ಟಿನಲ್ಲಿ ತನ್ನ ಹೆಚ್ಚು ಜನಪ್ರಿಯವಾದ XTEC ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಇಂದು ಸೂಪರ್ ಸ್ಪ್ಲೆಂಡರ್ XTEC ಅನ್ನು ಬಿಡುಗಡೆ ಮಾಡಿದೆ. ಐಕಾನಿಕ್ ಸ್ಪ್ಲೆಂಡರ್ ಕುಟುಂಬದ ನಂಬಿಕೆಯ ಮೇಲಿನ ಸವಾರಿಯಲ್ಲಿ, 125cc ವಿಭಾಗದಲ್ಲಿ ಕಂಪನಿಯ ಸಮಗ್ರ ಶ್ರೇಣಿಯ ಉತ್ಪನ್ನಗಳಲ್ಲಿ ಇದು ಇತ್ತೀಚಿನ ಸೇರ್ಪಡೆಯಾಗಿದೆ. ಡ್ರಮ್ ಹಾಗೂ ಡಿಸ್ಕ್ ಬ್ರೇಕ್ ವೇರಿಯೆಂಟ್ ಬೈಕ್ ಲಭ್ಯವಿದೆ. ಡ್ರಮ್ ಬೈಕ್ ಬೆಲೆ 83,368 ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಡಿಸ್ಕ್ ಬ್ರೇಕ್ ವೇರಿಯೆಂಟ್ ಬೆಲೆ 87,268 ರೂಪಾಯಿ(ಎಕ್ಸ್ ಶೋ ರೂಂ).
ವಾಹನದ ವಿಮೆ ನವೀಕರಿಸಿಲ್ಲವೇ? ದಂಡದ ಜೊತೆಗೆ ಮನೆಗೆ ಬರಲಿದೆ ನೋಟಿಸ್!
ಒಂದು ಲೀಟರ್ ಪೆಟ್ರೋಲ್‌ಗೆ 68 ಕಿಲೋಮೀಟರ್ ಮೈಲೇಜ್ ನೀಡಲಿದೆ. ಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಸರ್ವಿಸ್ ರಿಮೈಂಡರ್ ಮತ್ತು ಮಲ್‌ಫಂಕ್ಷನ್ ಸೂಚಕ ಹೀಗೆ ಹತ್ತು ಹಲವು ಹೊಸ ತಂತ್ರಜ್ಞಾನದ ವೈಶಿಷ್ಟ್ಯದೊಂದಿಗೆ ಭರ್ತಿ ಆಗಿದೆ. ಕರೆ ಮತ್ತು SMS ಸೂಚಕಗಳೊಂದಿಗೆ ಬ್ಲೂಟೂತ್ ಸಂಪರ್ಕವು ಮತ್ತಷ್ಟು ಅನುಕೂಲವನ್ನು ಸೇರಿಸುತ್ತದೆ. ಹೈ ಇಂಟೆನ್ಸಿಟಿ ಪೊಸಿಷನ್ ಲ್ಯಾಂಪ್‌ನೊಂದಿಗೆ ವಿಶಿಷ್ಟ ಶೈಲಿಯ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಹೊಸ ಡ್ಯುಯಲ್ ಟೋನ್ ಸ್ಟ್ರೈಪ್‌ಗಳು ಈ ಬೈಕ್‌ನಲ್ಲಿದೆ.
ಅತ್ಯಾಧುನಿಕ, ತಾಂತ್ರಿಕವಾಗಿ ಸುಧಾರಿತ XTEC ಉತ್ಪನ್ನಗಳನ್ನು ಅತ್ಯುತ್ತಮ ಶ್ರೇಣಿಯನ್ನು ತಂದಿದೆ ಆ ಮೂಲಕ ದೇಶದ ಸವಾರಿ ಉತ್ಸಾಹಿಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಸೃಷ್ಟಿಸಿದೆ. ಮತ್ತು, XTEC ಅವತಾರ್‌ನಲ್ಲಿ ಸೂಪರ್ ಸ್ಪ್ಲೆಂಡರ್‌ನ ಪರಿಚಯದೊಂದಿಗೆ, ನಾವು 125cc ವಿಭಾಗದಲ್ಲಿ ಮತ್ತಷ್ಟು ಹೊಸ ಅನುಭವವನ್ನು ಗ್ರಾಹಕರಿಗೆ ನೀಡಲು ಸಿದ್ಧರಾಗಿದ್ದೇವೆ. ಐಕಾನಿಕ್ ಸೂಪರ್ ಸ್ಪ್ಲೆಂಡರ್ ತನ್ನ ಹೊಸ ಆವೃತ್ತಿಯಲ್ಲಿ ನಮ್ಮ XTEC ಶ್ರೇಣಿಯ ದ್ವಿಚಕ್ರ ವಾಹನಗಳ ಹೆಚ್ಚುತ್ತಿರುವ ಆಕರ್ಷಣೆಯನ್ನು ಹೆಚ್ಚಿಸಲಿದೆ ಎಂದು ನಮಗೆ ವಿಶ್ವಾಸವಿದೆ. ಈ ಉತ್ಪನ್ನದೊಂದಿಗೆ, ನಾವು ಸಂಪರ್ಕ, ಅನುಕೂಲತೆ ಮತ್ತು ವಿನ್ಯಾಸದ ಮೇಲೆ ಅತ್ಯಧಿಕ ಅಂಕ ಪಡೆದಿರುವ, ಸಂಪೂರ್ಣ ಪ್ಯಾಕೇಜ್ ಅನ್ನು ನಮ್ಮ ಗ್ರಾಹಕರಿಗೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಹೀರೋ ಮೋಟೋಕಾರ್ಪ್ CGO ರಂಜಿತ್ ಸಿಂಗ್ ಹೇಳಿದ್ದಾರೆ.
ಸ್ಟೈಲ್
ಹೊಸ ಸೂಪರ್ ಸ್ಪ್ಲೆಂಡರ್ XTEC ವಿನ್ಯಾಸದ ವಿಷಯದಲ್ಲಿ ಒಂದು ಜಿಗಿತವನ್ನು ತೆಗೆದುಕೊಳ್ಳುವ ಮೂಲಕ ದೃಶ್ಯಾತ್ಮಕ ಹೇಳಿಕೆಯನ್ನು ನೀಡುತ್ತಿದೆ. ಹೈ ಇಂಟೆನ್ಸಿಟಿ ಪೊಸಿಷನ್ ಲ್ಯಾಂಪ್‌ನೊಂದಿಗೆ ಆಕರ್ಷಕವಾಗಿ ಪ್ರಕಾಶಿಸಲ್ಪಟ್ಟ LED ಹೆಡ್‌ಲ್ಯಾಂಪ್ ಮೋಟಾರ್‌ಸೈಕಲ್‌ನ ಕಮಾಂಡಿಂಗ್ ಸ್ವಭಾವವನ್ನು ಒತ್ತಿಹೇಳುತ್ತದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಮುಂಭಾಗ, ಹೆಡ್‌ಲ್ಯಾಂಪ್ ಮತ್ತು ರಿಮ್ ಟೇಪ್‌ಗಳು ಈ ಕ್ರಿಯಾತ್ಮಕ ಉತ್ಸಾಹವನ್ನು ಮರು ನಿರ್ಮಿಸುತ್ತವೆ. ಹೊಸ ಡ್ಯುಯಲ್-ಟೋನ್ ಸ್ಟ್ರೈಪ್‌ಗಳು ಸೊಬಗು ಮತ್ತು ಶೈಲಿಯನ್ನು ಹೊರಚೆಲ್ಲುತ್ತವೆ.
ಮಹೀಂದ್ರ ಎಲೆಕ್ಟ್ರಿಕ್ ರಿಕ್ಷಾ ರೈಡ್ ಮಾಡಿದ ಬಿಲ್ ಗೇಟ್ಸ್, ಆಟೋ ಶ್ರೀಮಂತನ ಜಾಲಿ ಸವಾರಿ!
ಸಂಪರ್ಕ
ಕಾರ್ಯಶೀಲತೆ ಮತ್ತು ಸಂಪರ್ಕವನ್ನು ಹೆಚ್ಚಿಸುವ, ಸೂಪರ್ ಸ್ಪ್ಲೆಂಡರ್ XTEC ಕರೆ ಮತ್ತು SMS ಸೂಚನೆಗಳು ಮತ್ತು ಫೋನ್ ಬ್ಯಾಟರಿ ಮಟ್ಟವನ್ನು ತೋರಿಸುವ ಬ್ಲೂಟೂತ್ ಸಂಪರ್ಕವನ್ನು ನೀಡುತ್ತದೆ.
ಅನುಕೂಲತೆ
ಹೊಸ ಸೂಪರ್ ಸ್ಪ್ಲೆಂಡರ್ XTEC ಅನುಕೂಲತೆಯ ದೃಷ್ಟಿಯಿಂದ ಹೊಸ ಮಾನದಂಡವನ್ನು ರೂಪಿಸುತ್ತದೆ. ಪೂರ್ಣ ಡಿಜಿಟಲ್ ಸ್ಪೀಡೋಮೀಟರ್, ಕಡಿಮೆ ಇಂಧನ ಸೂಚಕ ಮತ್ತು ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ (RTMI) ನಂತಹ ವಿಭಾಗದಲ್ಲಿಯೇ-ಅತ್ಯಾಕರ್ಶಕ ವೈಶಿಷ್ಟ್ಯಗಳು ನಿಮ್ಮ ರೈಡ್‌ನ ಸ್ಪಷ್ಟ ನೋಟವನ್ನು ನೀಡುತ್ತದೆ, ಸವಾರಿ ಸಮಯದಲ್ಲಿ ಗರಿಷ್ಠ ದಕ್ಷತೆಯನ್ನು ಖಚಿತಪಡಿಸುತ್ತದೆ. ಇಂಟಿಗ್ರೇಟೆಡ್ ಯುಎಸ್‌ಬಿ ಚಾರ್ಜರ್, ಪ್ರಯಾಣದಲ್ಲಿರುವಾಗ ಚಾರ್ಜ್ ಮಾಡುವಲ್ಲಿ ಸಹಾಯಮಾಡುತ್ತದೆ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ - ಆಫ್ ಒಟ್ಟಾರೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ.
ಇಂಜಿನ್
ಸೂಪರ್ ಸ್ಪ್ಲೆಂಡರ್ XTEC ಮಾದರಿಯು 125cc BS-VI ಎಂಜಿನ್‌ನಿಂದ ಚಾಲಿತವಾಗಿದ್ದು, 10.7 BHP @ 7500 RPM ಮತ್ತು 10.6 Nm @ 6000 RPM ನ ಟಾರ್ಕ್ ಮತ್ತು 68Km/l ಮೈಲೇಜ್ ನೀಡುತ್ತದೆ. Hero MotoCorp ನ ಕ್ರಾಂತಿಕಾರಿ i3S (ಐಡಲ್ ಸ್ಟಾಪ್ - ಸ್ಟಾರ್ಟ್ ಸಿಸ್ಟಮ್), ಮೋಟಾರ್‌ಸೈಕಲ್ ತನ್ನ ಕಾರ್ಯಕ್ಷಮತೆ, ಸೌಕರ್ಯ ಮತ್ತು ಮೈಲೇಜ್‌ನ ಬ್ರಾಂಡ್ ಭರವಸೆಯನ್ನು ನೀಡುತ್ತದೆ.