Asianet Suvarna News Asianet Suvarna News

ಕೈಗೆಟುಕುವ ದರ, ಆಕರ್ಷಕ ವಿನ್ಯಾಸ, ಹೀರೋ XPulse 200T 4V ಬೈಕ್ ಬಿಡುಗಡೆ!

ನ್ಯಾವಿಗೇಶನ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ LCD ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತು ಹಲವು ವಿಶೇಷತೆ ಹೊಂದಿರುವ ಹೊಚ್ಚ ಹೊಸ ಹೀರೋ XPulse 200T 4V ಬಿಡುಗಡೆಯಾಗಿದೆ. 

Hero Motocorp launch all new stylish XPulse 200T 4Valve with affordable price in India ckm
Author
First Published Dec 22, 2022, 7:47 PM IST

ಬೆಂಗಳೂರು(ಡಿ.22)  ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ ಮತ್ತು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಹೊಚ್ಚ ಹೊಸ ಹೀರೋ XPulse 200T 4V ಬೈಕ್ ಬಿಡುಗಡೆಯಾಗಿದೆ.  ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕೈಗೆಟುಕವ ದರಲ್ಲಿ ನೂತನ ಬೈಕ್ ಬಿಡುಗಡೆ ಮಾಡಲಾಗಿದೆ. XPulse 200T 4V ಬೈಕ್ ಬೆಲೆ 1,25,726 ರೂಪಾಯಿ(ಎಕ್ಸ್ ಶೋ ರೂಂ). 200 ಸಿಸಿ, 4-ವಾಲ್ವ್ ಆಯಿಲ್ ಕೂಲ್ಡ್ ಎಂಜಿನ್‌ನೊಂದಿಗೆ ಸಜ್ಜುಗೊಂಡಿರುವ ಆಧುನಿಕ ಟೂರರ್ 6% ಹೆಚ್ಚಿನ ಶಕ್ತಿ ಮತ್ತು 5% ಹೆಚ್ಚುವರಿ ಟಾರ್ಕ್ ನೀಡುತ್ತದೆ. ಹೆಚ್ಚಿನ ವೇಗದಲ್ಲಿ, ಒತ್ತಡವಿಲ್ಲದೆ ದಿನವಿಡೀ ಆರಾಮವಾಗಿ ಸವಾರಿ ಮಾಡುವ ಸೌಕರ್ಯವನ್ನು ಖಚಿತಪಡಿಸುತ್ತದೆ. ರಿ-ಟ್ಯೂನ್ ಮಾಡಲಾದ ಪವರ್-ಟಾರ್ಕ್ ಕರ್ವ್ ಮತ್ತು ಪರಿಷ್ಕೃತ ಪ್ರಸರಣ ಅನುಪಾತದ ಕಾರಣದಿಂದ ಗ್ರಾಹಕರು ಪ್ರತಿ ಪ್ರಯಾಣವನ್ನೂ ಆನಂದಿಸಬಹುದು. ಬೈಕ್‌ನಲ್ಲಿ ಅತ್ಯುತ್ತಮವಾದ ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ LCD ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಗೇರ್ ಇಂಡಿಕೇಟರ್, ಟ್ರಿಪ್ ಮೀಟರ್ ಮತ್ತು ಸರ್ವಿಸ್ ರಿಮೈಂಡರ್ ಮುಂತಾದ ಚತುರ ಸಹಾಯ ವ್ಯವಸ್ಥೆಗಳೊಂದಿಗೆ ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕವಾಗಿಸುತ್ತದೆ. 

XPulse ಭಾರತದಲ್ಲಿ ಮೋಟಾರ್‌ಸೈಕ್ಲಿಂಗ್ ಉತ್ಸಾಹಿಗಳಲ್ಲಿ ಸ್ಥಿರವಾದ ಸ್ಥಾನವನ್ನು ಗಳಿಸಿದೆ. ಹೊಸ Hero XPulse 200T 4V ಬಿಡುಗಡೆಯೊಂದಿಗೆ ಈ ಪ್ರವೃತ್ತಿಯು ಮತ್ತಷ್ಟು ಬಲಗೊಳ್ಳುತ್ತದೆ ಎಂದು ನಮಗೆ ಖಚಿತವಾಗಿದೆ. ಸವಾರರಿಗೆ ವಿಶಿಷ್ಟವಾದ ಅನುಭವವನ್ನು ನೀಡುವ Hero XPulse 200T 4V ಹೆಚ್ಚು ಬೋಲ್ಡ್ ಮತ್ತು ತಾರುಣ್ಯಭರಿತವಾಗಿದ್ದು, ರೆಟ್ರೋ ವಿನ್ಯಾಸದ ಅಂಶಗಳೊಂದಿಗೆ ಹೊಸ ಅವತಾರದಲ್ಲಿ ಬರುತ್ತಿದೆ. ಮುಗಿದಯ ಹೆದ್ದಾರಿಗಳಲ್ಲಿ, ಸ್ವಾತಂತ್ರ್ಯದ ಕನಸು ಕಾಣುವಂತೆ ಮಾಡುವ ಈ ಹೊಸ ಬೈಕ್ ಅನ್ನು ಗರಿಷ್ಠ ಸೌಕರ್ಯ ಮತ್ತು ಕಾರ್ಯಕ್ಷಮತೆಯೊಂದಿಗೆ ಸಾಟಿಯಿಲ್ಲದ ಪ್ರವಾಸದ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಹೀರೋ ಮೋಟೋಕಾರ್ಪ್ ಚೀಫ್  ರಂಜಿವಿತ್ ಸಿಂಗ್ ಹೇಳಿದ್ದಾರೆ.

 

Hero Bike ಹೊಸ ಅವತಾರದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ಬಿಡುಗಡೆ!

XPulse 200 ರೈಡರ್‌ಗಳ ಸಮುದಾಯ XPulse 200T 4V, ಸವಾರಿ ವೇದಿಕೆಯಾದ XCLAN ಅನ್ನು ಹೀರೋ ನಿರಂತರವಾಗಿ ವಿಸ್ತರಿಸುವ ನಿರೀಕ್ಷೆಯಿದೆ. XCLAN ಸದಸ್ಯತ್ವವು ಗ್ರಾಹಕರು ತಮ್ಮ ಮಾಲೀಕತ್ವದ ಅನುಭವದಿಂದ ವಿಶೇಷ ಪ್ರಯೋಜನಗಳನ್ನು ಗರಿಷ್ಠ ಮಟ್ಟದಲ್ಲಿ ಪಡೆಯಲು ಅವಕಾಶ ಕೊಡುತ್ತದೆ.

ಎಂಜಿನ್ ಪರ್ಫಾಮೆನ್ಸ್
BS-VI 200 ಸಿಸಿ 4 ವಾಲ್ವ್ ಆಯಿಲ್ ಕೂಲ್ಡ್ ಎಂಜಿನ್‌ನಿಂದ, XPulse 200T 4V @ 8500 RPM ನಲ್ಲಿ 19.1 PS ಗರಿಷ್ಠ ಶಕ್ತಿಯನ್ನು ಮತ್ತು @ 6500 rpm ನಲ್ಲಿ 17.3 Nm ಟಾರ್ಕ್ ಉತ್ಪಾದಿಸುತ್ತದೆ. ಉತ್ಕೃಷ್ಟವಾದ ಟಾರ್ಕ್ ಆರಾಮದಾಯಕ ಪ್ರವಾಸದ ಅನುಭವವನ್ನು ನೀಡುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌, ಅದಕ್ಕೆ ಜೋಡಿಸಲಾದ ಎಂಜಿನ್ ಡೈನಾಮಿಕ್ ಪ್ರೊಪಲ್ಷನ್ ಕೂಡ ಇದಕ್ಕೆ ಪೂರಕವಾಗಿದೆ. 

ಮಧ್ಯಮ-ಶ್ರೇಣಿಯ ಮತ್ತು ಉನ್ನತ-ಮಟ್ಟದ ವೇಗದಲ್ಲಿ ಹೆಚ್ಚಿನ ಶಕ್ತಿಯ ಜೊತೆಗೆ, 4 ವಾಲ್ವ್ ಆಯಿಲ್-ಕೂಲ್ಡ್ ಎಂಜಿನ್ ಹೆಚ್ಚಿನ ವೇಗದಲ್ಲಿಯೂ ಒತ್ತಡವಿಲ್ಲದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. XPulse 200T 4V ಯ ಗಮನಾರ್ಹವಾಗಿ ಸುಧಾರಿತ ಪ್ರಸರಣ ವ್ಯವಸ್ಥೆಯು ಹೆಚ್ಚಿನ ಶಕ್ತಿ ಮತ್ತು ಬಾಳಿಕೆಯನ್ನು ಒದಗಿಸುತ್ತದೆ. ಗೇರ್ ಅನುಪಾತವನ್ನು ಉತ್ತಮವಾದ ಆಕರ್ಷಣೆ ಮತ್ತು ವೇಗವರ್ಧನೆಗಾಗಿ ನವೀಕರಿಸಲಾಗಿದೆ. 

 

Hero Destini 125 XTEC ಹೊಚ್ಚ ಹೊಸ ಹೀರೋ ಡೆಸ್ಟಿನಿ 125 XTEC ಸ್ಕೂಟರ್ ಬಿಡುಗಡೆ!

ಶೈಲಿ ಮತ್ತು ವಿನ್ಯಾಸ
ಹೊಸ XPulse 200T 4V ಯ ನವೀಕರಿಸಲಾದ ವಿನ್ಯಾಸವು ಎರಡು ಚಕ್ರಗಳಲ್ಲಿ ಆರಾಮದಾಯಕ, ಉತ್ಸಾಹಪೂರ್ಣ ಪ್ರಯಾಣಕ್ಕೆ ಪೂರಕವಾಗಿದೆ. ಹೊಸ-ರೆಟ್ರೊ ವಿನ್ಯಾಸ, ಬೋಲ್ಡ್ ಆಗಿರುವ ಗ್ರಾಫಿಕ್ಸ್ ಅನನ್ಯ ಬಣ್ಣಗಳಿಂದ ಸೊಗಸಾಗಿ ಸಂಯೋಜಿತವಾಗಿದ್ದು, ವಿಶೇಷವಾದ ಕ್ಲಾಸಿಕ್ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತದೆ.ಕ್ರೋಮ್ ರಿಂಗ್‌ ಜೊತೆಗೆ ವೃತ್ತಾಕಾರದ ಪೂರ್ಣ-ಎಲ್‌ಇಡಿ ಹೆಡ್‌ ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಪೊಸಿಷನ್ ಲ್ಯಾಂಪ್‌ಗಳಂತಹ ವಿಶಿಷ್ಟ ವೈಶಿಷ್ಟ್ಯಗಳು ವಾಹನವನ್ನು ಇನ್ನಷ್ಟು ಉತ್ಕೃಷ್ಟಗೊಳಿಸಿವೆ.

ಪ್ರೀಮಿಯಂ ಫಿನಿಶ್‌ನಲ್ಲಿ ಸವಾರ ಮತ್ತು ಪ್ರಯಾಣಿಕರಿಗೆ ಆರಾಮದಾಯಕ ಆಸನ ಸ್ಥಾನ ಮತ್ತು ಟ್ಯೂಬ್-ಟೈಪ್ ರೆಟ್ರೊ ಪಿಲಿಯನ್ ಗ್ರ್ಯಾಬ್ ಇರುವ ಕಾರಣಕ್ಕಾಗಿ ಈ ಸವಾರಿಯ ಆರಾಮದಾಯಕ ಅನುಭವಕ್ಕೆ ಸಾಟಿಯೇ ಇಲ್ಲ. ಬಣ್ಣದ ವೈಸರ್, ಮುಂಭಾಗದ ಫೋರ್ಕ್ ಸ್ಲೀವ್‌ಗಳು, ಮತ್ತು ಬಣ್ಣದ ಸಿಲಿಂಡರ್ ಹೆಡ್‌ ಮೂಲಕ ಇದರ ನೋಟವೂ ವಿಭಿನ್ನವಾಗಿದೆ.

ಟೆಕ್-ಚಾಲಿತ
XPulse 200T 4V ವಿವಿಧ ಚತುರ ತಂತ್ರಜ್ಞಾನಗಳನ್ನು ನೀಡುತ್ತ, ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುರಕ್ಷಿತ ಮತ್ತು ಆರಾಮದಾಯಕವಾಗಿಸುತ್ತದೆ. ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ಕಾಲ್ ಅಲರ್ಟ್‌ಗಳು, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಸೀಟ್ ಅಡಿಯಲ್ಲಿ USB ಚಾರ್ಜರ್, ಪೂರ್ಣ ಡಿಜಿಟಲ್ LCD ಉಪಕರಣದ ಕ್ಲಸ್ಟರ್, ಗೇರ್ ಇಂಡಿಕೇಟರ್ ಮತ್ತು ಸೈಡ್-ಸ್ಟ್ಯಾಂಡ್ ಇಂಜಿನ್ ಹೊಂದಿರುವ ಈ ಬೈಕ್ ತಾಂತ್ರಿಕವಾಗಿ ಮುಂದುವರಿದಿದೆ ಮತ್ತು ಸುರಕ್ಷಿತವಾಗಿದೆ ಎಂದು ಖಚಿತಪಡಿಸುತ್ತದೆ.

ಪರಿಪೂರ್ಣ ಪ್ರವಾಸಿ 
37 ಮಿ.ಮೀ. ಫ್ರಂಟ್ ಫೋರ್ಕ್‌ಗಳು, 7-ಹಂತದ ಹೊಂದಾಣಿಕೆಯ ಮೊನೊ-ಶಾಕ್ ಸಸ್ಪೆನ್ಷನ್, 130 ಮಿ.ಮೀ. ಅಗಲದ ರೇಡಿಯಲ್ ರಿಯರ್ ಟೈರ್ ಉತ್ತಮ ಮತ್ತು ನಿಖರವಾದ ಹಿಡಿತವನ್ನು ಒದಗಿಸುತ್ತದೆ, ಪ್ರತಿ ಪಯಣವನ್ನೂ ಹೆಚ್ಚು ವಿಶ್ರಾಂತಿದಾಯಕ ಮತ್ತು ಶ್ರಮರಹಿತವನ್ನಾಗಿ ಮಾಡುತ್ತದೆ. 

USB ಚಾರ್ಜರ್ ಸವಾರರು ತಮ್ಮ ಸವಾರಿಯ ಸಂದರ್ಭದಲ್ಲಿ ಸದಾ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಮುಂಭಾಗದಲ್ಲಿ 276 ಮಿ.ಮೀ. ಮತ್ತು ಹಿಂಭಾಗದಲ್ಲಿ 220 ಮಿ.ಮೀ. ಪೆಟಲ್ ಡಿಸ್ಕ್ ಬ್ರೇಕ್‌ಗಳು ಸವಾರನು ಸದಾ ಸಂಪೂರ್ಣ ನಿಯಂತ್ರಣದಲ್ಲಿರುವಂತೆ ಮತ್ತು ಬಯಸಿದಲ್ಲಿ ಬೈಕ್ ನಿಲ್ಲಿಸುವ ಶಕ್ತಿಯ ಮೇಲೆ ವಿಶ್ವಾಸವನ್ನಿಡುವಂತೆ ಮಾಡುತ್ತಿವೆ.

ಅತ್ಯಾಕರ್ಷಕ ಬಣ್ಣಗಳ ಆಯ್ಕೆಗಳು 
ಹೊಸ XPulse 200T 4V ಮೂರು ಅತ್ಯಾಕರ್ಷಕ ಹೊಸ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ, ಪ್ರತಿಯೊಂದೂ ಈ ಬೈಕ್‌ನ ವಿವಿಧ ಗುಣಲಕ್ಷಣಗಳನ್ನು ಕೌಶಲ್ಯದಿಂದ ಪ್ರದರ್ಶಿಸುತ್ತದೆ - ಸ್ಪೋರ್ಟ್ಸ್ ರೆಡ್, ಮ್ಯಾಟ್ ಫಂಕ್ ಲೈಮ್ ಯೆಲ್ಲೋ ಮತ್ತು ಮ್ಯಾಟ್ ಶೀಲ್ಡ್ ಗೋಲ್ಡ್.

Follow Us:
Download App:
  • android
  • ios