Asianet Suvarna News Asianet Suvarna News

ಐಪಿಎಲ್‌ಗೆ ಧುಮುಕಿದ ಹೀಲೋ ಎಲೆಕ್ಟ್ರಿಕ್ ವಿಡಾ ಸ್ಕೂಟರ್, ಲಖನೌ ತಂಡದ ಜೊತೆ ಮಹತ್ವದ ಒಪ್ಪಂದ!

ದೇಶದಲ್ಲೆಡೆ ಐಪಿಎಲ್ ಜ್ವರ ಆವರಿಸಿದೆ. ರೋಚಕ ಪಂದ್ಯಗಳು ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದೆ. ಇದರ ನಡುವೆ ಹೀರೋ ಎಲೆಕ್ಟ್ರಿಕ್ ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡದ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. 
 

Hero Electric Vida scooter signs with Lucknow Super Giants Becomes the official Electric Mobility partner of LSG ckm
Author
First Published Apr 11, 2023, 7:43 PM IST

ಲಖನೌ(ಏ.11): ಐಪಿಎಲ್ 2023 ಟೂರ್ನಿಗೆ ಧುಮುಕಿದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡದ ಜೊತೆ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ವಿಡಾ ಒಪ್ಪಂದ ಮಾಡಿಕೊಂಡಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ಜೊತೆ ಅಧಿಕೃತ ಎಲೆಕ್ಟ್ರಿಕ್ ಮೊಬಿಲಿಟಿ ಪಾರ್ಟ್ನರ್ ಪಾಲುದಾರಿಕೆ ಮಾಡಿಕೊಂಡಿದೆ.  ಐಪಿಎಲ್ ಈ ಆವೃತ್ತಿ ಪೂರ್ತಿ ಎಲ್‌ಎಸ್‌ಜಿಯ ಅಧಿಕೃತ ಎಲೆಕ್ಟ್ರಿಕ್‌ ಸಂಚಾರಿ ಪಾಲುದಾರನಾಗಿರಲಿದೆ. ಲಖನೌ ಸೂಪರ್ ಜೈಂಟ್ಸ್ ತಂಡದ ಆಟಗಾರರ ಹೆಲ್ಮೆಟ್, ಕ್ಯಾಪ್ ಮೇಲೆ ವಿಡೋ ಲೋಗೋ ಪ್ರದರ್ಶಿಸಲಾಗುತ್ತಿದೆ.   

ಲಖನೌ ಸೂಪರ್‌ ಜೈಂಟ್ಸ್‌ ಜೊತೆಗೆ ಪಾಲುದಾರಿಕೆ ವಹಿಸಲು ನಮಗೆ ಖುಷಿಯಾಗುತ್ತದೆ. ಈ ತಂಡವು ಐಪಿಎಲ್‌ನ ಹಿಂದಿನ ಸೀಸನ್‌ನಲ್ಲಿ ಎಲ್ಲರನ್ನೂ ಆಕರ್ಷಿಸಿತ್ತು. ಇದೇ ರೀತಿ, ವಿಡಾ ಕೂಡ ಮಾಲೀಕತ್ವ ಮತ್ತು ಬಳಕೆಯ ಅನುಕೂಲವನ್ನು ಒದಗಿಸುವುದರಿಂದ ಗ್ರಾಹಕರಲ್ಲಿ ಆಸಕ್ತಿಯನ್ನು ಮೂಡಿಸಿದೆ ಎಂದು ಹೀರೋ ಮೋಟೋಕಾರ್ಪ್‌ನ  ಮುಖ್ಯಸ್ಥ ಸ್ವದೇಶ್‌ ಶ್ರೀವಾಸ್ತವ ಹೇಳಿದ್ದಾರೆ. ಚಿಂತೆ ರಹಿತ ಇವಿ ಸೌಲಭ್ಯವನ್ನು ಒದಗಿಸುವ ನಮ್ಮ ಬ್ರ್ಯಾಂಡ್‌ ಭರವಸೆಗೆ ಅನುಗುಣವಾಗಿ, ಇವಿಗಳಿಗೆ ಗ್ರಾಹಕರು ಬದಲಾಗುವ ಪ್ರಕ್ರಿಯೆ ಸರಾಗವಾಗಿರಬೇಕು ಮತ್ತು ಕಿರಿಕಿರಿ ರಹಿತವಾಗಿರಬೇಕು ಎಂದು ನಾವು ಖಚಿತಪಡಿಸುತ್ತಿದ್ದೇವೆ. ಸುಸ್ಥಿರತೆಯನ್ನೇ ಮುಖ್ಯವಾಗಿಟ್ಟುಕೊಂಡು ವಿಡಾ ವರ್ಲ್ಡ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ತಂತ್ರಜ್ಞಾನಕ್ಕೆ ಆದ್ಯತೆಯ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಾಗಿದೆ. ಎಲ್‌ಎಸ್‌ಜಿ ಗೆ 2023 ಐಪಿಎಲ್‌ ಸೀಸನ್‌ ಅದ್ಭುತವಾಗಿರಲಿ ಎಂದು ನಾವು ಹಾರೈಸುತ್ತೇವೆ ಮತ್ತು ಅವರಿಗೆ ಚಿಯರ್ ಮಾಡುತ್ತೇವೆ ಎಂದರು. 

ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ ಹೀರೋ ವಿಡಾ ಚಾರ್ಚಿಂಗ್ ಸೌಲಭ್ಯ ಆರಂಭ!

ಬದಲಾವಣೆ ಮತ್ತು ಪ್ರಗತಿಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ವಿಡಾ ಆಗಿದೆ. ಹೊಸತನ್ನು ಆರಂಭಿಸುವ ತಂಡವಾಗಿ ನಮ್ಮ ಸಿದ್ಧಾಂತಕ್ಕೆ, ಭವಿಷ್ಯಕ್ಕೆ ಉತ್ತಮ ವಿಶ್ವವನ್ನು ರೂಪಿಸಬೇಕು ಎಂಬ ವಿಡಾ ಧ್ಯೇಯವೂ ಹೊಂದಿಕೆಯಾಗುತ್ತದೆ. ಸುಸ್ಥಿರತೆಯೇ ಪ್ರಮುಖವಾಗಿದ್ದು, ಕ್ಷೇತ್ರದ ಹೊರಗೆ ದೊಡ್ಡ ಮಟ್ಟದ ಪರಿಣಾಮವನ್ನು ನಮ್ಮ ಪಾಲುದಾರಿಕೆಯು ಖಂಡಿತವಾಗಿಯೂ ಬೀರುತ್ತದೆ ಎಂದು ವಿಶ್ವಾಸವನ್ನು ಹೊಂದಿದ್ದೇವೆ ಎಂದು ಆರ್‌ಪಿಎಸ್‌ಜಿ ಸ್ಪೋರ್ಟ್ಸ್‌ನ ಸಿಇಒ ಕರ್ನಲ್‌ ವಿನೋದ್‌ ಬಿಶ್ತ್ ಹೇಳಿದ್ದಾರೆ. 

ವಿಡಾ ವಿ1 ನಲ್ಲಿ 2 ರಿಮೂವ್ ಬ್ಯಾಟರಿಗಳಿವೆ. ಕಾರ್ಯಕ್ಷಮತೆ, ರೇಂಜ್‌ ಮತ್ತು ಟಾಪ್‌ ಸ್ಪೀಡ್‌ನಲ್ಲಿ ಶ್ರೇಣಿಯಲ್ಲೇ ಉತ್ತಮ ಸಂಯೋಜನೆಯನ್ನು ಒದಗಿಸುತ್ತದೆ. ಇದು ಓಮ್ನಿಚಾನೆಲ್‌ ಮೂಲಕ ಬೆಂಗಳೂರು, ಜೈಪುರ ಮತ್ತು ದೆಹಲಿಯಲ್ಲಿ ಇದು ಲಭ್ಯವಿದ್ದು, ಎಕ್ಸ್‌ಪೀರಿಯನ್ಸ್‌ ಸೆಂಟರ್‌ಗಳು ಮತ್ತು ಪಾಪ್‌ ಅಪ್‌ ಸ್ಟೋರ್‌ಗಳು ಇಲ್ಲಿವೆ.

Hero VIDA scooter ಹೀರೋದಿಂದ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ!

ಆರಂಭಿಕವಾಗಿ ಮೂರು ನಗರಗಳಲ್ಲಿ 50 ಸ್ಥಳಗಳಲ್ಲಿ ಸುಮಾರು 300 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ವಿಡಾ ಸ್ಥಾಪಿಸಿದೆ. ಚಾರ್ಜಿಂಗ್‌ ನೆಟ್‌ವರ್ಕ್‌ ಪ್ರಮುಖ ಸ್ಥಳಗಳಲ್ಲಿ ಇದ್ದು, ಗ್ರಾಹಕರಿಗೆ ಇವು ಅನುಕೂಲವನ್ನು ಒದಗಿಸುತ್ತವೆ. ನಿಮಿಷಕ್ಕೆ 1.2 ಕಿ.ಮೀ ವೇಗದಲ್ಲಿ ಸ್ಕೂಟರ್‌ ಬ್ಯಾಟರಿಯನ್ನು ಚಾರ್ಜ್‌ ಮಾಡಲು ವಿಡಾದ ಫಾಸ್ಟ್‌ ಚಾರ್ಜಿಂಗ್‌ ನೆಟ್‌ವರ್ಕ್‌ ಅನುವು ಮಾಡುತ್ತದೆ. ಪ್ರತಿ ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ಡಿಸಿ ಮತ್ತು ಎಸಿ ಚಾರ್ಜಿಂಗ್‌ ಸಾಕೆಟ್‌ಗಳಿರುತ್ತವೆ. ಸಮಗ್ರ ಚಾರ್ಜಿಂಗ್ ಪಯಣಕ್ಕಾಗಿ ಮೈ ವಿಡಾ ಮೊಬೈಲ್‌ ಆ್ಯಪ್‌ ಅನ್ನು ಗ್ರಾಹಕರು ಬಳಸಬಹುದಾಗಿದೆ. ಸಮೀಪದ ಚಾರ್ಜಿಂಗ್‌ ಸ್ಟೇಷನ್‌ ಹುಡುಕಬಹುದು, ಲಭ್ಯತೆಯನ್ನು ನೋಡಬಹುದು, ಚಾರ್ಜಿಂಗ್‌ ಸ್ಲಾಟ್‌ ರಿಸರ್ವ್‌ ಮಾಡಬಹುದು ಮತ್ತು ಆ್ಯಪ್‌ನಿಂದ ಚಾರ್ಜಿಂಗ್ ಸ್ಟೇಷನ್‌ಗೆ ನ್ಯಾವಿಗೇಟ್‌ ಮಾಡಬಹುದು.
 

Follow Us:
Download App:
  • android
  • ios