E scooter Fire ಇ-ಸ್ಕೂಟರ್‌ಗೆ ಬೆಂಕಿ, 1,441 ಸ್ಕೂಟರ್ ಹಿಂಪಡೆದ ಓಲಾ!
- ದೇಶಾದ್ಯಂತ ಇ-ಸ್ಕೂಟರ್‌ಗೆ ಬೆಂಕಿ ಪ್ರಕರಣದಿಂದ ಆತಂಕ
- 1,441 ದ್ವಿಚಕ್ರ ವಾಹನಗಳನ್ನು ಹಿಂಪಡೆದ ಓಲಾ
- ವಾಹನಗಳ ಸುರಕ್ಷತೆಯ ಬಗ್ಗೆ ಓಲಾ ಪರಿಶೀಲನೆ
ನವದೆಹಲಿ(ಏ.25): ದೇಶಾದ್ಯಂತ ಇ-ಸ್ಕೂಟರ್‌ಗೆ ಬೆಂಕಿ ತಗುಲಿದ ಘಟನೆಗಳು ಪದೇ ಪದೇ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಓಲಾ ಇಲೆಕ್ಟ್ರಿಕ್ ಕಂಪನಿಯು ತನ್ನ 1,441 ದ್ವಿಚಕ್ರ ವಾಹನಗಳನ್ನು ಹಿಂಪಡೆದುಕೊಂಡಿದೆ.
ಪುಣೆಯಲ್ಲಿ ಮಾಚ್‌ರ್ 26 ರಂದು ಓಲಾ ಇ-ಸ್ಕೂಟರ್‌ಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ವಾಹನಗಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ‘ಹೀಗಾಗಿ ನಿರ್ದಿಷ್ಟಬ್ಯಾಚ್‌ನಲ್ಲಿ ತಯಾರಾದ 1441 ಇ-ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಸ್ವಯಂಪ್ರೇರಿತವಾಗಿ ಹಿಂಪಡೆದುಕೊಳ್ಳಲಾಗುತ್ತಿದೆ. ಈ ಎಲ್ಲ ವಾಹನಗಳನ್ನು ಬ್ಯಾಟರಿ ವ್ಯವಸ್ಥೆ, ಉಷ್ಣ ಹಾಗೂ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಸವೀರ್‍ಸ್ ಎಂಜಿನಿಯರ್ ಮತ್ತೊಮ್ಮೆ ಪರೀಕ್ಷೆ ನಡೆಸಲಿದ್ದಾರೆ’ ಎಂದು ಕಂಪನಿ ಹೇಳಿದೆ.
ಇ-ವಾಹನಗಳಿಗೆ ಬೆಂಕಿ ತಗುಲುತ್ತಿರುವ ಬಗ್ಗೆ ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದರು ಹಾಗೂ ಸಮಗ್ರ ಪರಿಶೀಲನೆಗೆ ತಾಕೀತು ಮಾಡಿದ್ದರು.
ಚಾರ್ಜಿಂಗ್ ವೇಳೆ Pure ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ, ಓರ್ವ ಸಾವು!
ಈ ಮೊದಲು ಇ-ವಾಹನ ತಯಾರಿಕಾ ಕಂಪನಿಗಳಾದ ಓಕಿನಾವಾ ಆಟೋಟೆಕ್ 3,000 ವಾಹನ ಹಾಗೂ ಪ್ಯೂರ್-ಇವಿ ಸುಮಾರು 2000 ಇ-ಸ್ಕೂಟರ್‌ಗಳನ್ನು ಹಿಂಪಡೆದುಕೊಂಡಿದ್ದವು. ಸರ್ಕಾರವು ಇ-ವಾಹನಗಳಿಗೆ ಬೆಂಕಿ ತಗುಲುತ್ತಿರುವ ಬಗ್ಗೆ ವಿವರವಾದ ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಿದ್ದು, ಕಂಪನಿಗಳ ನಿರ್ಲಕ್ಷ್ಯದಿಂದಾಗಿ ಅವಘಡಗಳು ಜರುಗಿದ್ದು ಎಂದು ಸಾಬೀತಾದರೆ ಭಾರೀ ದಂಡ ವಿಧಿಸುವುದಾಗಿ ಕಂಪನಿಗೆ ಎಚ್ಚರಿಕೆ ನೀಡಿದೆ.
ಪುಣೆಯಲ್ಲಿ ಓಲಾ ಇ-ಸ್ಕೂಟರ್‌ಗೆ ಬೆಂಕಿ: ತನಿಖೆಗೆ ಸರ್ಕಾರ ಆದೇಶ
ಪುಣೆಯಲ್ಲಿ ಕಳೆದ ವಾರ ಓಲಾ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ ತಗುಲಿದ ಘಟನೆಯ ಕುರಿತು ತನಿಖೆ ನಡೆಸುವಂತೆ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ಘಟನೆಗೆ ಕಾರಣಗಳನ್ನು ಪತ್ತೆ ಹಚ್ಚಿ, ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೇ ಪರಿಹಾರ ಕ್ರಮಗಳನ್ನು ಸೂಚಿಸಲು ಅಗ್ನಿ ಸ್ಫೋಟಕ ಮತ್ತು ಪರಿಸರ ಸುರಕ್ಷತಾ ಕೇಂದ್ರಕ್ಕೆ ತಿಳಿಸಿದೆ.
ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಅವಘಡ: ನಿರ್ಲಕ್ಷ್ಯ ತೋರಿದ ಕಂಪನಿ ವಿರುದ್ಧ ಕಠಿಣ ಕ್ರಮ: ನಿತಿನ್ ಗಡ್ಕರಿ
ಶನಿವಾರ ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ ತಗುಲಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಾಹನ ಸುರಕ್ಷತಾ ಮಾನದಂಡಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಓಲಾ ಕಂಪನಿಯ ಸಹ ಸಂಸ್ಥಾಪಕ ಭವೀಶ್ ಅರ್ಗವಾಲ್ ‘ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಘಟನೆಗೆ ಸಂಬಂಧಿಸಿದ ಕಾರಣಗಳ ಬಗ್ಗೆ ತನಿಖೆ ನಡೆಸಿ, ಸರಿಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಚಾಜ್‌ರ್‍ಗೆ ಹಾಕಿದ್ದ ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 80 ವರ್ಷದ ವ್ಯಕ್ತಿ ಮೃತಪಟ್ಟಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ಬುಧವಾರ ನಡೆದಿದೆ. ಈ ಘಟನೆಯಲ್ಲಿ ಅದೇ ಕುಟುಂಬದ ನಾಲ್ಕು ಜನರು ಗಾಯಗೊಂಡಿದ್ದಾರೆ. ಓಲಾ ಹಾಗೂ ಒಕಿನಾವಾ ಆಟೋಟೆಕ್ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಇದೀಗ ಇ-ವಾಹನಗಳ ಸುರಕ್ಷತೆಯ ಬಗ್ಗೆ ಶಂಕೆಯನ್ನು ಹುಟ್ಟುಹಾಕಿದೆ.
ಸರ್ಕಾರ ಕೂಡ ಈ ಬೆಂಕಿ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳಿಗೆ ನೋಟೀಸ್ ನೀಡಿದ್ದಾರೆ.