EV Battery Fire ಚಾರ್ಜಿಂಗ್ ವೇಳೆ Pure ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ, ಓರ್ವ ಸಾವು!

  • ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ
  • 80 ಹರೆಯದ ವೃದ್ಧ ಸಾವು, ನಾಲ್ವರಿಗೆ ಗಂಭೀರ ಗಾಯ
  • ಹೆಚ್ಚಾಗುತ್ತಿದೆ ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ಅವಘಡ
     
Pure EV battery caught fire 80 year old man died four other family members injured ckm

ಹೈದರಾಬಾದ್(ಏ.23): ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ ಅವಘಡ ಪ್ರಕರಣ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಾಲ್ಕು ಪ್ಯೂರ್ ಇವಿ ಸ್ಕೂಟರ್ ಇದೇ ರೀತಿ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ.  ಚಾರ್ಜ್‌ಗೆ  ಹಾಕಿದ್ದ ಎಲೆಕ್ಟ್ರಿಕ್‌ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡ ಪರಿಣಾಮ 80 ವರ್ಷದ ವ್ಯಕ್ತಿ ಮೃತಪಟ್ಟಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಅದೇ ಕುಟುಂಬದ ನಾಲ್ಕು ಜನರು ಗಾಯಗೊಂಡಿದ್ದಾರೆ. 

ಮಧ್ಯರಾತ್ರಿ ಸುಮಾರು 12.30ರ ಹೊತ್ತಿಗೆ ಸ್ಕೂಟರ್‌ನಿಂದ ಬ್ಯಾಟರಿಯನ್ನು ತೆಗೆದು ಮನೆಯಲ್ಲಿ ಅದನ್ನು ಚಾರ್ಜ್‌ಗೆ ಇಟ್ಟು ಎಲ್ಲರೂ ಮಲಗಿದ್ದಾರೆ. ಸುಮಾರು 4 ಗಂಟೆಯ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡಿದ್ದು ಬೆಂಕಿ ಹೊತ್ತಿಕೊಂಡಿದೆ. ಈ ದುರ್ಘಟನೆಯಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರೆ, ಉಳಿದವರಿಗೆ ಸಣ್ಣಪುಟ್ಟಗಾಯಗಳಾಗಿವೆ. ಹೈದರಾಬಾದ್‌ ಮೂಲದ ಪ್ಯೂರ್‌ ಇವಿ ಸ್ಕೂಟರ್‌ ಸ್ಫೋಟಗೊಂಡಿದ್ದು ಕಂಪನಿಯ ವಿರುದ್ಧ ಐಪಿಸಿ ಸೆಕ್ಷನ್‌ 304ಎ(ನಿರ್ಲಕ್ಷ್ಯದಿಂದಾದ ಸಾವು) ಅಡಿ ಪ್ರಕರಣ ದಾಖಲಿಸಲಾಗಿದೆ.

ಪ್ಯೂರ್ ಇವಿ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಮತ್ತೊಂದು ಬೆಂಕಿ ಅವಘಡ

ಮೃತಪಟ್ಟ 80 ವರ್ಷದ ವಕ್ಯಿ ಬಿ ರಾಮಸ್ವಾಮಿ ಎಂದು ಗರುತಿಸಲಾಗಿದೆ. ಕಳೆದೊಂದು ವರ್ಷದಿಂದ ರಾಮಸ್ವಾಮಿ ಪುತ್ರ ಬಿ ಪ್ರಕಾಶ್ ಪ್ಯೂರ್ ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದರು. ಟೈಲರ್ ಆಗಿ ವೃತ್ತಿ ನಡೆಸುತ್ತಿದ್ದ ಪ್ರಕಾಶ್, ಮಧ್ಯರಾತ್ರಿ 12 ಗಂಟೆಗೆ ಸ್ಕೂಟರ್ ಚಾರ್ಜ್‌ಗೆ ಹಾಕಿದ್ದರು. ಬೆಳಗ್ಗೆ 4 ಗಂಟೆಗೆ ಬ್ಯಾಟರಿ ಸ್ಪೋಟಗೊಂಡಿದೆ. 

ಪ್ರಕಾಶ್ ಸೆಕೆಂಡ್ ಹ್ಯಾಂಡ್ ಪ್ಯೂರ್ ಇವಿ ಖರೀದಿಸಿದ್ದರು. ಹೀಗಾಗಿ ಡೀಲರ್‌ಬಳಿ ಅವರ ದಾಖಲೆಗಳಿಲ್ಲ. ಈ ಘಟನೆಗೆ ತೀವ್ರ ನೋವುಂಟು ಮಾಡಿದೆ. ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದೇವೆ ಎಂದು ಪ್ಯೂರ್ ಇವಿ ಪ್ರತಿಕ್ರಿಯಿಸಿದೆ. ಇದೇ ವೇಳೆ ಸ್ಥಳೀಯ ಪ್ಯೂರ್ ಸಿಬ್ಬಂದಿಗಳು ಪ್ರಕಾಶ್ ಕುಟುಂಬಸ್ಥರನ್ನು ಭೇಟಿ ಮಾಡಿ ಸ್ಕೂಟರ್ ಕುರಿತು ತನಿಖೆ ನಡೆಸಲಿದೆ. ಪ್ರಕಾಶ್ ಕುಟುಂಬಕ್ಕೆ ಅಗತ್ಯ ನೆರವು ನೀಡಲಿದೆ ಎಂದು ಪ್ಯೂರ್ ಇವಿ ಹೇಳಿದೆ.

 ಚೆನ್ನೈಯಲ್ಲಿ ಇ-ವಾಹನಕ್ಕೆ ಬೆಂಕಿ 
ಹೈದರಾಬಾದ್‌ನ ಸ್ಟಾರ್ಟಪ್‌ ಕಂಪನಿ ಪ್ಯೂರ್‌ ತಯಾರಿಸಿದ ಎಲೆಕ್ಟ್ರಾನಿಕ್‌ ವಾಹನಕ್ಕೆ ಬೆಂಕಿ ತಗುಲಿದ ಘಟನೆ ತಮಿಳುನಾಡಿನ ಚೆನ್ನೈಯಲ್ಲಿ ವರದಿಯಾಗಿದೆ. ಕೆಲ ದಿನಗಳ ಹಿಂದೇ ಓಲಾ ಹಾಗೂ ಒಕಿನಾವಾ ಆಟೋಟೆಕ್‌ ಎಲೆಕ್ಟ್ರಿಕ್‌ ವಾಹನಗಳಿಗೆ ಬೆಂಕಿ ತಗುಲಿದ ಘಟನೆ ವರದಿಯಾದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಇ-ವಾಹನಗಳ ಸುರಕ್ಷತೆಯ ಬಗ್ಗೆ ಶಂಕೆಯನ್ನು ಹುಟ್ಟುಹಾಕಿದೆ.ಚೆನ್ನೈಯ ಉತ್ತರದಲ್ಲಿರುವ ಮಂಜಾಮ್‌ಪಕ್ಕಂನಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಿದ ಇ-ಸ್ಕೂಟರ್‌ನಿಂದ ಹೊಗೆಯು ರಭಸದಿಂದ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಳೆದ 4 ದಿನಗಳಲ್ಲೇ ನಾಲ್ಕನೇ ಬಾರಿ ಇಂತಹ ಘಟನೆ ವರದಿಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬೆಂಕಿ ಅವಘಡ: ನಿರ್ಲಕ್ಷ್ಯ ತೋರಿದ ಕಂಪನಿ ವಿರುದ್ಧ ಕಠಿಣ ಕ್ರಮ: ನಿತಿನ್ ಗಡ್ಕರಿ

ಓವರ್‌ ಚಾರ್ಜ್ ಕಾರಣ ಎಲೆಕ್ಟ್ರಿಕ್‌ ಸ್ಕೂಟರ್‌ ಸ್ಫೋಟ: ತಂದೆ, ಮಗಳು ಬಲಿ
ವಿದ್ಯುತ್‌ ಚಾಲಿತ ಸ್ಕೂಟರ್‌ ಸ್ಫೋಟಗೊಂಡು ತಂದೆ ಮತ್ತು ಮಗಳು ಮೃತಪಟ್ಟಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದಿದೆ. ಮನೆಯಲ್ಲಿ ಸ್ಕೂಟರ್‌ ಚಾಜ್‌ರ್‍ ಮಾಡುವ ವೇಳೆ ಸ್ಫೋಟ ಸಂಭವಿಸಿದೆ. ಮೃತರನ್ನು ದುರೈ ವರ್ಮಾ (49) ಮತ್ತು ಪುತ್ರಿ ಮೋಹನಾ ಪ್ರೀತಿ (13) ಎಂದು ಗುರುತಿಸಲಾಗಿದೆ. ದುರೈ ವರ್ಮಾ 2 ದಿನಗಳ ಹಿಂದೆ ಸ್ಕೂಟರ್‌ ಖರೀದಿ ಮಾಡಿದ್ದರು. ಶುಕ್ರವಾರ ಬ್ಯಾಟರಿಯಲ್ಲಿ ಚಾಜ್‌ರ್‍ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆಯಲ್ಲೇ ಚಾರ್ಜಿಗೆ ಹಾಕಿದ್ದರು. ಈ ವೇಳೆ ಬೈಕ್‌ ಸ್ಫೋಟಗೊಂಡ ಅದರ ಬೆಂಕಿ ಮತ್ತೆ ಎರಡು ವಾಹನಗಳಿಗೆ ಆವರಿಸಿದೆ. ಅವಧಿಗಿಂತ ಹೆಚ್ಚು ಕಾಲ ಚಾಜ್‌ರ್‍ ಮಾಡಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
 

Latest Videos
Follow Us:
Download App:
  • android
  • ios