ದೀಪಾವಳಿ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದ ಕಂಪನಿ ಕಂಪನಿ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ನೌಕರರಿಗೆ ಉಪಯೋಗವಾಗುವ ಗಿಫ್ಟ್ ನೀಡಿದ ಕಂಪನಿ ತೈಲ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ
ಸೂರತ್(ನ.05): ದೀಪಾವಳಿ ಹಬ್ಬಕ್ಕೆ(Diwali Festival) ಕಂಪನಿಗಳು ತಮ್ಮ ಉದ್ಯೋಗಿಗಳಿಗೆ, ಸಿಬ್ಬಂದಿಗಳಿಗೆ ಉಡುಗೊರೆ(Gift) ನೀಡುವುದು ಸಾಮಾನ್ಯ. ಹಲವು ಕಂಪನಿಗಳು ನೌಕರರಿಗೆ ದುಬಾರಿ ಉಡುಗೊರೆ ನೀಡಿದ ಹಲವು ಊದಾಹರಣೆಗಳಿವೆ. ಇದೀಗ ಸೂರತ್ ಮೂಲದ ಕಂಪನಿ ದೀಪಾವಳಿ ಹಬ್ಬಕ್ಕೆ ಕಂಪನಿಯ ನೌಕರರಿಗೆ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಉಡುಗೊರೆ ನೀಡಿದೆ.
ಗಡಿಯಂಚಿನಲ್ಲಿ ಸೈನಿಕರೊಂದಿಗೆ ಮೋದಿ ದೀಪಾವಳಿ, ಏನಿದರ ಹಿಂದಿನ ಸೀಕ್ರೆಟ್?
ತೈಲ ಬೆಲೆ(Fuel Price) ಗಗನಕ್ಕೇರಿದೆ. ಹೀಗಾಗಿ ನೌಕರರಿಗೆ ಹೆಚ್ಚು ಉಪಯುಕ್ತವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ನೀಡಲಾಗಿದೆ. ಈ ದೀಪಾವಳಿಗೆ(Deepavali) ಕಂಪನಿ ಪರಿಸರ ಪೂರಕ(environmental protection) ಹೆಜ್ಜೆ ತೆಗೆದುಕೊಂಡಿದೆ ಎಂದು ಅಲಿಯನ್ಸ್ ಗ್ರೂಪ್ ನಿರ್ದೇಶಕ ಸುಭಾಷ್ ದಾವರ್ ಹೇಳಿದ್ದಾರೆ.
ಕಂಪನಿಯ 35 ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ನೀಡಲಾಗಿದೆ. ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ನಿರ್ಧಾರ ಮಾಧ್ಯಮದಲ್ಲಿನ ಪ್ರಚಾರಕ್ಕಾಗಿ ಅಲ್ಲ. 35 ಸ್ಕೂಟರ್ ಬೆಲೆ ಕಂಪನಿ ಆರ್ಥಿಕತೆಗೆ ಹೊರೆಯಾಗಿದೆ. ಆದರೆ ಇದರಿಂದ ಕಂಪನಿಗೂ ಹಲವು ಪ್ರಯೋಜನಗಳಿವೆ. ನೌಕಕರು ತಕ್ಕ ಸಮಯಕ್ಕೆ ಯಾವುದೇ ಅಡೆ ತಡೆ ಇಲ್ಲದೆ ಹಾಜರಾಗಲು ಸಾಧ್ಯವಿದೆ. ಇಷ್ಟೇ ಅಲ್ಲ ಉದ್ಯೋಗಿಗಳು ತೈಲ ಬೆಲೆ ಕುರಿತು ಹೆಚ್ಚು ಚಿಂತಿಸಬೇಕಿಲ್ಲ. ಸಾರಿಗೆಗಾಗಿ ಹೆಚ್ಚಿನ ಹಣ ವ್ಯಯಿಸಬೇಕಿಲ್ಲ ಎಂದು ಸುಭಾಷ್ ದಾವರ್ ಹೇಳಿದ್ದಾರೆ.
Diwali 2021:ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ದೀಪಾವಳಿ ಹಬ್ಬ ಆಚರಿಸ್ತಾರೆ
ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯಿಂದ ಕಂಪನಿಗೆ ಪರಿಸರ ಪೂರಕ ನಿರ್ಧಾರವನ್ನು ತೆಗೆದುಕೊಂಡಿದೆ. ಹವಮಾನ ಬದಲಾವಣೆ ಜಾಗತಿಕ ತಾಪಮಾನ ಸೇರದಂತೆ ಹಲವು ಪರಿಸರ ಆಂದೋಲನಗಳು ನಡೆಯತ್ತಿದೆ. ಹೀಗಾಗಿ ನಾವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯೂ ಪರಿಸರಕ್ಕೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಅಲಿಯನ್ಸ್ ಗ್ರೂಪ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ನೀಡುವ ಮೂಲಕ ಸರ್ಕಾರದ ಪ್ರಯತ್ನಕ್ಕೆ ಕೈ ಜೋಡಿಸಿದೆ ಎಂದು ಸುಭಾಷ್ ದಾವರ್ ಹೇಳಿದ್ದಾರೆ.
ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಉತ್ತೇಜನ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಖರೀದಿಯಲ್ಲಿ ಸಬ್ಸಿಡಿ ನೀಡಿದೆ. ಈ ಮೂಲಕ ದೇಶದಲ್ಲಿ ಮಾಲಿನ್ಯ ತಗ್ಗಿಸಲು ಹಾಗೂ ತೈಲ ಬೇಡಿಕೆಯನ್ನು ಇಳಿಸಲು ಮುಂದಾಗಿದೆ. ಇದರ ನಡುವೆ ಕಂಪನಿಯ ಈ ನಿರ್ಧಾರಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
Diwali 2021: ಲಕ್ಷ್ಮೀ ಪೂಜೆ ಸಂಭ್ರಮ, ಪಕ್ಕಾ ಸೌತ್ ಸ್ಟೈಲ್‌ನಲ್ಲಿ ಶ್ರೀದೇವಿ ಪುತ್ರಿಯರು
ಕಂಪನಿ ಉದ್ಯೋಗಿಗಳಿಗೆ ಒಕಿನಾವ ಪ್ರೈಸ್‌ಪ್ರೋ ಸ್ಕೂಟರ್ ಉಡುಗೊರೆ ನೀಡಿದೆ. 2.0 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. 1000 ವ್ಯಾಟ್, BLDC ಮೋಟಾರು ಹೊಂದಿರುವ ಒಕಿನಾವ ಪ್ರೈಸ್‌ಪ್ರೋ ಸ್ಕೂಟರ್, 2500 ವ್ಯಾಟ್ ಪವರ್ ಉತ್ಪಾದಿಸುವ ಶಕ್ತಿ ಹೊಂದಿದೆ. ಸ್ಕೂಟರ್ ಗರಿಷ್ಠ ವೇಗ 58 kmph. ಒಂದು ಬಾರಿ ಚಾರ್ಜ್ ಮಾಡಿದರೆ 88 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಒಕಿನಾವ ಪ್ರೈಸ್‌ಪ್ರೋ ಸ್ಕೂಟರ್ ಬೆಲೆ 79,845 ರೂಪಾಯಿ(ಎಕ್ಸ್ ಶೋ ರೂಂ).
ಗುಜರಾತ್ ಸರ್ಕಾರ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಲು ರಾಜ್ಯ ಸರ್ಕಾರ ಕೂಡ ಕೆಲ ಆಫರ್ ನೀಡಿದೆ. ಸಬ್ಸಡಿ ಮೂಲಕ ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ವಾಹನ ಮೇಲೆ ಭಾರಿ ರಿಯಾಯಿತಿ ಸಿಗಲಿದೆ. ಎಲೆಕ್ಟ್ಕಿ ಸ್ಕೂಟರ್ ಮೇಲೆ ಸುಮಾರು 20,000 ರೂಪಾಯಿ ಸಬ್ಸಿಡಿ ನೀಡುತ್ತಿದೆ.
ಕೇಂದ್ರ ಸರ್ಕಾರ FAME II ಯೋಜನೆಯಡಿ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಬ್ಸಿಡಿ ನೀಡುತ್ತಿದೆ. ಇನ್ನು ಗುಜರಾತ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಕೆಲ ರಾಜ್ಯಗಳು ಮತ್ತಷ್ಟು ಸಬ್ಸಿಡಿ ನೀಡುತ್ತಿದೆ. ಭಾರತದಲ್ಲಿ ಒಕಿನಾವ ಹೆಚ್ಚು ಜನಪ್ರಿಯವಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಸ್ಕೂಟರ್ ಲಭ್ಯವಿದೆ. ಇದರ ಜೊತೆಗೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಲಭ್ಯವಿದೆ.
