Asianet Suvarna News Asianet Suvarna News

ಹೊಸ ಬಣ್ಣ, ಮತ್ತಷ್ಟು ಫೀಚರ್ಸ್, ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಭಾರಿ ಬೇಡಿಕೆ ಹಾಗೂ ಅತ್ಯುತ್ತಮ ಗುಣಮಟ್ಟ ಕಾಯ್ದುಕೊಂಡಿರುವ ಎಥರ್ ಎನರ್ಜಿ ಇದೀಗ 450X ಎಲೆಕ್ಟ್ರಿಕ್ ಸ್ಕೂಟರ್‌ನ್ನು ಹೊಸ ಬಣ್ಣ ಹಾಗೂ ಮತ್ತಷ್ಟು ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Bengaluru Based Ather Energy launch 450X electric scooter with more features and colours ckm
Author
First Published Jan 7, 2023, 5:20 PM IST

ದೆಹಲಿ(ಜ.07): ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಅತೀ ಹೆಚ್ಚಿನ ಆಯ್ಕೆಗಳಿವೆ. ಅತೀ ಕಡಿಮೆ ಹಾಗೂ ಕೈಗೆಟುಕುವದ ದರದಿಂದ ಆರಂಭಗೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್, ದುಬಾರಿ ಬೆಲೆಯ ಸ್ಕೂಟರ್‌ಗಳು ಲಭ್ಯವಿದೆ. ಭಾರತದಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಎಥರ್ ಎನರ್ಜಿ ಭಾರಿ ಬೇಡಿಕೆ ಉಳಿಸಿಕೊಂಡಿದೆ. ಇದೀ ಎಥರ್ ತನ್ನ ಭಾರಿ ಬೇಡಿಕೆಯ 450X ಎಲೆಕ್ಟ್ರಿಕ್ ಸ್ಕೂಟರನ್ನು ಹೊಸ ಬಣ್ಣ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಕಟ್ಟಿಂಗ್ ಎಡ್ಜ್ ಡಿಸೈನ್ ಹಾಗೂ ಅತ್ಯುತ್ತಮ ಪರ್ಫಾಮೆನ್ಸ್ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಇದು ರೈಡರ್‌ಗಳ ಉತ್ಸಾಹ ಹೆಚ್ಚಿಸಲಿದೆ ಎಂದು ಎಥರ್ ಎನರ್ಜಿ ಹೇಳಿದೆ.

ನೂತನ ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ STACK 5.0 ಟೆಕ್ನಾಲಜಿ ಬಳಸಲಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಇದರಿಂದ ಯೂಸರ್ ಇಂಟರ್ಫೇಸ್, ಸ್ವಾಪ್ ಆ್ಯಕ್ಷನ್ ಸರಳ ಹಾಗೂ ಸುಲಭವಾಗಿದೆ. ಈ ಟೆಕ್ನಾಲಜಿಯಿಂದ ಸ್ಕೂಟರ್‌ನಲ್ಲಿ ಬಳಸಿರುವು ಟಚ್ ಸ್ಕ್ರೀನ್ ಮತ್ತಷ್ಟು ಅಪ್‌ಗ್ರೇಡ್ ಹೊಂದಿದೆ. ಇಲ್ಲಿನ ಐಕಾನ್‌ಗಳನ್ನು ಮೊಬೈಲ್‌ನಲ್ಲಿರುವಂತೆ ಬೇರೆ ಸ್ಥಳಕ್ಕೆ ವರ್ಗಾಯಿಸಬಹುದು. ಇನ್ನು ಬ್ಯಾಟರಿ ಚಾರ್ಜ್, ನೀಡಬಲ್ಲ ಅಂದಾಜು ಮೈಲೇಜ್ ಸೇರಿದಂತೆ ಎಲ್ಲಾ ಮಾಹಿತಿಗಳು ಸ್ಪಷ್ಟವಾಗಿ ಗೋಚರಿಸುತ್ತದೆ.

ಓಲಾ, ಸಿಂಪಲ್ ಒನ್‌ಗೆ ತೀವ್ರ ಸ್ಪರ್ಧೆ ಒಡ್ಡಲಿರುವ ಏಥರ್: 3ನೇ ಘಟಕ ಸ್ಥಾಪನೆಗೆ ಸಿದ್ಧತೆ

ಹೊಸ ಸ್ಕೂಟರ್‌ನಲ್ಲಿ ವೆಕ್ಟರ್ ಮ್ಯಾಪ್ ಬಳಸಲಾಗಿದೆ. ಇದರಿಂದ ನ್ಯಾವಿಗೇಶನ್‌ನಲ್ಲಿ ರೈಡರ್ಸ್‌ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ. ಇದರ ಜೊತೆಗೆ ತಿರುವು, ಲೈವ್ ಟ್ರಾಫಿಕ್ ಮ್ಯಾಪ್ ಕೂಡ ಲಭ್ಯವಾಗಲಿದೆಯ

ಆಟೋ ಹೋಲ್ಡ್ ಫೀಚರ್ಸ್ ಈ ಸ್ಕೂಟರ್‌ನ ಮತ್ತೊಂದು ವಿಶೇಷತೆಯಾಗಿದೆ. ಇಳಿಜಾರಿನ ಪ್ರದೇಶದಲ್ಲಿ ಸ್ಕೂಟರ್ ನಿಲ್ಲಿಸಿ ಕೆಲ ಹೊತ್ತು ನಿಲ್ಲಬೇಕಾದ ಪರಿಸ್ಥಿತಿ ಇದ್ದರೆ, ಅಥವಾ ಸಿಗ್ನಲ್ ಇದ್ದರೆ ಆಟೋ ಮೋಡ್ ಆನ್ ಮಾಡಿದರೆ ಸಾಕು. ಬ್ರೇಕ್ ಹಿಡಿಯುವ ಅವಶ್ಯತೆ ಇಲ್ಲ. ಇದರ ಜೊತೆಗೆ ಟ್ರಿಪ್ ಪ್ಲಾನರ್ ಆಯ್ಕೆಯನ್ನು ಸೇರಿಸಲಾಗಿದೆ.  ಟ್ರಿಪ್ ಪ್ಲಾನರ್ ಮೂಲಕ ನೀವು ಉದ್ದೇಶಿರುವ ಸ್ಥಳ, ಮೈಲೇಜ್, ಚಾರ್ಚಿಂಗ್, ಸ್ಟಾಪ್ ಸೇರಿದಂತೆ ಎಲ್ಲಾ ಪ್ಲಾನ್ ಮಾಡಲು ಸಹಕಾರಿಯಾಗಿದೆ.

ಪ್ರಮುಖವಾಗಿ ಎಥರ್ ಎನರ್ಜಿ ಬ್ಯಾಟರಿ ಪ್ರೊಟೆಕ್ಷನ್. ಇದೀಗ ಎಥರ್ 5 ವರ್ಷ ಅಥವಾ 60,000 ಕಿಲೋಮೀಟರ್ ಬ್ಯಾಟರಿ ವಾರೆಂಟ್ ನೀಡುತ್ತಿದೆ. ಈ ಅವಧಿಯಲ್ಲಿ ಯಾವುದೇ ಎಲೆಕ್ಟ್ರಿಕ್ ವೈಫಲ್ಯ ಸಂಪೂರ್ಣ ಕವರೇಜ್ ಸಿಗಲಿದೆ. ಇನ್ನು ಏಥರ್ ಈಗಾಗಲೇ ದೇಶದ ಪ್ರಮುಖ ಸ್ಥಳಗಳಲ್ಲಿ ಚಾರ್ಚಿಂಗ್ ಸ್ಟೇಶನ್ ಅಳವಡಿಸಿದೆ. ಇದೀಗ ಹೆಚ್ಚುವರಿಯಾಗಿ 900 ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಮಾಡುತ್ತಿದೆ. ಇದೀಗ ಏಥರ್  450X ಹೊಸ ಸ್ಕೂಟರ್ ಮತ್ತೆ ನಾಲ್ಕು ಹೆಚ್ಚುವರಿ ಬಣ್ಣದಲ್ಲಿ ಲಭ್ಯವಿದೆ.

ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ, ಟೆಸ್ಟ್ ರೈಡ್ ಮತ್ತಷ್ಟು ಸುಲಭ; ಬೆಂಗಳೂರಿನಲ್ಲಿ 2ನೇ ಸೆಂಟರ್ ಆರಂಭ!

ಇ-ಸ್ಕೂಟರ್‌ ಚಾಜ್‌ರ್‍ ಮಾಡಲು 1000 ಕೇಂದ್ರ ಸ್ಥಾಪನೆಗೆ ಒಪ್ಪಂದ
ರಾಜ್ಯದಲ್ಲಿ ವಿದ್ಯುತ್‌ ದ್ವಿಚಕ್ರ ವಾಹನಗಳಿಗೆ ಒಂದು ಸಾವಿರ ತ್ವರಿತ ಚಾರ್ಜಿಂಗ್‌ ಸೌಲಭ್ಯ ಸ್ಥಾಪಿಸಲು ಎಥರ್‌ ಎನರ್ಜಿ ಮತ್ತು ಎಸ್ಕಾಂಗಳ ನಡುವೆ ಒಪ್ಪಂದ ಮಾಡಲಾಗಿದೆ. ಚಾರ್ಜಿಂಗ್‌ ಸೌಲಭ್ಯಗಳಿಗೆ ಅಗತ್ಯ ತಾಂತ್ರಿಕ ಬೆಂಬಲವನ್ನು ಎಸ್ಕಾಂಗಳು ನೀಡಲಿದ್ದು, ಸರ್ಕಾರಿ ಸಂಸ್ಥೆಗಳು ಈ ಸೌಲಭ್ಯ ಸ್ಥಾಪನೆಗೆ ಸ್ಥಳಾವಕಾಶ ಒದಗಿಸಲು ಎಸ್ಕಾಂಗಳೊಂದಿಗೆ ಸಮನ್ವಯ ವಹಿಸಲಿವೆ. ಎಥರ್‌ ಎನರ್ಜಿ ಕಂಪನಿಯು ವಿದ್ಯುತ್‌ ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲಿದೆ.

Follow Us:
Download App:
  • android
  • ios